ನುಡಿಮುತ್ತುಗಳು

March 11, 2013
0

 ಅಜ್ಞಾನದ ಕೆಟ್ಟ ಪರಿಣಾಮಗಳಿಂದ ನೀನು ಪಾರಾಗಲಾರೆ.

March 11, 2013
0

ದೇಹವು ನೀರೊಳಗಿದ್ದು ಫಲವೇನು? ಮನದಲ್ಲಿ ದೃಢಭಕ್ತಿ ಇಲ್ಲದಿದ್ದರೆ.

March 10, 2013
0

ವಿಘ್ನ ಭಯದಿಂದ ನೀಚರು ಕೆಲಸವನ್ನೇ ಆರಂಭ ಮಾಡರು.

ಕೆಲಸ ಆರಂಭಿಸಿ ವಿಘ್ನ ಬಂದಾಗ ಸುಮ್ಮನಾಗುವವರು ಮಧ್ಯಮರು.

ಗಳಿಗೆ ಗಳಿಗೆಗೂ ವಿಘ್ನ ಎದುರಿಸಿದರೂ ಪ್ರಯತ್ನ ಬಿಡದೆ ಸಾಧಿಸುವವರು ಉತ್ತಮರು.

March 10, 2013
0

ಪ್ರಪಂಚವೇ ಯಶಸ್ವಿ ಗುರು; ಆದರೆ ಅದರ ಗುರುದಕ್ಷಿಣೆ ಬಹಳ ಹೆಚ್ಚು.

March 10, 2013
0

ಅನ್ಯಾಯ ಮಾಡುವ ಪಾಪಿಗಳು ಶ್ರೀಮಂತರಾಗಿದ್ದು,

ನ್ಯಾಯದ ದಾರಿಯಲ್ಲಿ ನಡೆಯುತ್ತಿರುವ ನೀನು ತೀರಾ ಬಡವನಾಗಿದ್ದರೂ ಅಧರ್ಮ ಕಾರ್ಯದಲ್ಲಿ ಮನಸ್ಸಿಡಬೇಡ.

March 10, 2013
0

ಗಾಳಿ ಬೀಸುತ್ತಿರುವಾಗ ನೀರು ಅಲೆಗಳಿಂದ ಒಂದು ಕ್ಷಣವೂ ನಿಶ್ಚಲವಾಗಿರುವುದಿಲ್ಲ.

ಮನಸ್ಸೂ ಹಾಗೆಯೇ. ಆದ್ದರಿಂದ ಅದನ್ನು ನಂಬಬಾರದು!

March 10, 2013
0

ನಿಜವಾದ ಗುಣಕ್ಕೆ ತನ್ನದು ಗುಣ ಎಂಬುದೇ ತಿಳಿದಿರುವುದಿಲ್ಲ.

March 09, 2013
0

ಮದುವೆ ಯಶಸ್ವಿ ಆಗುವುದು ಸರಿಯಾದ ಜೀವನ ಸಂಗಾತಿಯನ್ನು ಹುಡುಕುವುದರಿಂದ ಅಲ್ಲ;

ಸರಿಯಾದ ಜೀವನ ಸಂಗಾತಿ ಆಗುವುದರಿಂದ.

March 09, 2013
0

ಪ್ರಸನ್ನತೆ ಎಲ್ಲಾ ಗುಣಗಳ ತಾಯಿ.

March 09, 2013
0

ಸೋಲುವುದನ್ನು ಕಲಿಸಿ, ಅಂತೆಯೇ ಗೆಲುವಿನ ಸಂತಸವನ್ನು ಕಲಿಸಿ.

March 09, 2013
0

ನಮ್ಮ ಸ್ವಭಾವ, ನಮ್ಮ ಸಂದರ್ಭ ಇವೆರಡನ್ನೂ ನಾವು ಕಂಡುಕೊಂಡು ನಮಗೆ ತಕ್ಕ ಗುರಿ ಯಾವುದು,

ದಾರಿ ಯಾವುದು, ಎಂಬುದನ್ನು ನಾವೇ ಗೊತ್ತು ಮಾಡಿಕೊಳ್ಳಬೇಕು.

March 09, 2013
0

 ವಯಸ್ಸಾದ ಬಳಿಕ ಗುಣವಂತರಾಗುವುದು,

ದೆವ್ವ ಉಳಿಸಿಬಿಟ್ಟಿದ್ದನ್ನು ದೇವರಿಗೆ ಕೊಟ್ಟಂತೆ .

March 08, 2013
0

ನಮ್ಮ ಕೆಲಸಗಳನ್ನು ನಾವೇ ಮಾಡಿಕೊಳ್ಳುವ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು.

ಮನುಷ್ಯನಿಗೆ ಅವನ ಕೈಗಳಿಗಿಂತ ಅಮೂಲ್ಯವಾದ ಆಸ್ತಿ ಇಲ್ಲ!

March 08, 2013
0

ಅಂದಂದಿನ ಕೆಲಸವನ್ನು ಅಂದಂದು ಮಾಡಿ , ಅದರ ವಿಷಯವಾಗಿ ಬಹಳವಾಗಿ ಚಿಂತೆ ಮಾಡದೆ ಇರಬೇಕು.

ಅದೇ ಒಳ್ಳೆಯ ಜೀವನ.

March 08, 2013
0

ಚಿಕ್ಕದು ಎನ್ನುವ ಕೆಲಸಗಳನ್ನು ಈಗಲೇ ಚೆನ್ನಾಗಿ ಮಾಡು.

ಆಗ ದೊಡ್ಡ ಕೆಲಸಗಳು ತಾವಾಗಿಯೇ ನಿನ್ನನ್ನು ಹುಡುಕಿಕೊಂಡು ಬರುತ್ತವೆ.

March 08, 2013
0

ಆರಂಭ ಮಾಡಿದವನು ಅರ್ಧ ಕೆಲಸ ಮಾಡಿದಂತೆಯೇ ವಿವೇಕಿ ಆಗು, ಆರಂಭಿಸು.

March 08, 2013
0

ಅವನು ಏನು ಕೆಲಸ ಮಾಡಲಾರ ಎನ್ನುವುದನ್ನು ನಾನು ಯೋಚಿಸುವುದಿಲ್ಲ;

ಅವನು ಏನು ಕೆಲಸ ಮಾಡಬಲ್ಲ ಎನ್ನುವುದನ್ನು ನಾನು ಗಮನಿಸುತ್ತೇನೆ.

March 07, 2013
0

ಅಗಸ ನೀರೊಳಗಿರ್ದು ಬಾಯಾರಿ ಸತ್ತಂತೆ,

ತಮ್ಮೊಳಗಿದ್ದ ಮಹಾಘನವನರಿಯರು ನೋಡಾ ಚೆನ್ನಮಲ್ಲಿಕಾರ್ಜುನ..

March 07, 2013
0

ಎನ್ನಗುಣವೆಂಬ ಕಳೆಯ ಕಿತ್ತು ಸಲಹಯ್ಯ ಲಿಂಗ ತಂದೆ,

ಸುಳಿದೊಗೆದು ಬೆಳೆವೆನು ನೋಡಾ ಕೂಡಲ ಸಂಗಮದೇವಾ..

March 07, 2013
0

ಅನಗತ್ಯವಾದುದನ್ನು ಸಂಗ್ರಹಿಸಿಡುವ ಮನೋವೃತ್ತಿ  ಅಪಾಯಕರವಾದುದು.

ಇದರಿಂದ ಅತಿಯಾದ ಲೋಭ, ದುರಾಸೆಗಳು ಹೆಚ್ಚಿ ವ್ಯಕ್ತಿಯ ಪತನಕ್ಕೆ ಕಾರಣವಾಗುತ್ತವೆ.

March 07, 2013
0

ಮನಸ್ಸು ಮೃದುವಾಗಬೇಕು,ಹೃದಯ ಅರಳುತ್ತಾ ಹೋಗಬೇಕು, ಅದೇ ಸಂಸ್ಕೃತಿ.

March 07, 2013
0

ದಡ್ಡರಿಗಿಂತ ಬುದ್ಧಿವಂತರೇ ಮನೆ ಮುರುಕರು ಮತ್ತು ಮನ ಒಡೆಯುವವರು.

March 06, 2013
0

ಕೆಟ್ಟ ಕೆಲಸಗಳಿಂದ ನೀನು ಪಾರಾಗಬೇಕಾದರೆ-

ಗೌರವಕ್ಕೆ, ಭಗವಂತನಿಗೆ ಹಾಗೂ ಮೃತ್ಯುವಿಗೆ ಹೆದರಬೇಕು.

March 06, 2013
0

ಭಕ್ತಿ ಸುಖಕ್ಕಿಂತ ಇತರ ಸುಖ ಎಲ್ಲಿಯದು?