ನುಡಿಮುತ್ತುಗಳು

March 06, 2013
0

 ಕಷ್ಟಗಳು ಹೆಚ್ಚಾದಂತೆ ಬುದ್ಧಿ ಚುರುಕಾಗಿ ಕೆಲಸ ಮಾಡುತ್ತದೆ.

March 06, 2013
0

ಬರೀ ವಿದ್ಯೆಯಿಂದಾಗಲೀ, ತಪಸ್ಸಿನಿಂದಾಗಲೀ ಯಾರೂ 'ಪಾತ್ರ'ನೆನಿಸುವುದಿಲ್ಲ.

ಯಾರಲ್ಲಿ ನಡತೆ ವಿದ್ಯೆ ಮತ್ತು ತಪಸ್ಸು ಇರುತ್ತದೆಯೋ ಅವನೇ ಸತ್ಪಾತ್ರ.

March 06, 2013
0

ತನುವಿನ ಕೋಪ ತನ್ನ ಹಿರಿತನದ ಕೇಡು, ಮನದ ಕೋಪ ತನ್ನ ಅರಿವಿನ ಕೇಡು.

March 05, 2013
0

ಉಪದೇಶ ಮಾಡುವವನ ದೋಷ ಕೂಡಲೇ ನಮ್ಮನ್ನು ಆಕರ್ಷಿಸುತ್ತದೆ.

March 05, 2013
0

ಒಂದು ಸಾಹಿತ್ಯ ಜೀವಂತ ಇರಬೇಕಾದರೆ,

ಅದಕ್ಕೆ ಮಕ್ಕಳ ಸಾಹಿತ್ಯದ ಒಂದು ಸ್ತರ ಇರಲೇಬೇಕು.

March 05, 2013
0

ಯಾರಿಗೇತರಲಿ ಇಷ್ಟವೋ ಅದುವೇ ಸುಖ.

March 05, 2013
0

ಮನೆ ನಿಂತಿರುವುದು ಮಡದಿಯಿಂದ, ಅದು ಬಿದ್ದರೆ ಗಂಡನ ತಲೆಯ ಮೇಲೆ!

March 05, 2013
0

ಸತ್ಯವಂತಿಕೆ ಅನ್ನೋದು ಇರಲೂ ಬೇಕು; ತೋರಲೂ ಬೇಕು.

March 04, 2013
0

ಸತ್ಯವನ್ನು ಹೇಳಲೇಬೇಕು. ಅದು ಯಾರಿಗೆ ನೋವು ಮಾಡಿದರೂ ಸತ್ಯ ಸತ್ಯವೇ. ಅದನ್ನು ಬರೆಯಬೇಕು.

March 04, 2013
0

ಸತ್ಯಗಳು ಅಶ್ವತ್ಥಾಮನಂತೆ ಚಿರಂಜೀವಿಗಳಲ್ಲ!

March 04, 2013
0

ಸತ್ಯವನ್ನೇ ಹೇಳು; ನಂತರ ತಕ್ಷಣ ಸ್ಥಳ ಬಿಡು!

March 04, 2013
0

ಸತ್ಯಗಳು ಅಶ್ವತ್ಥಾಮನಂತೆ ಚಿರಂಜೀವಿಗಳಲ್ಲ!

March 04, 2013
0

ಸತ್ಯಗಳು ಅಶ್ವತ್ಥಾಮನಂತೆ ಚಿರಂಜೀವಿಗಳಲ್ಲ!

March 04, 2013
0

ಶ್ರೀಮಂತಿಕೆಯ ಸ್ವಾರ್ಥ ಎಂಥಹುದೆಂದರೆ ನಾವು ಹೆಚ್ಚು ಹೆಚ್ಚು ಸಂಪಾದಿಸುವುದಷ್ಟೇ ಅಲ್ಲ,

ಇತರರು ಕಡಿಮೆ ಉಳ್ಳವರಾಗಿರುವಂತೆಯೂ ಯತ್ನಿಸುವುದು.

March 04, 2013
0

ಒಳ್ಳೆಯವನಾರೂ ಇದ್ದಕ್ಕಿದ್ದಂತೆ ಶ್ರೀಮಂತನಾಗಿಲ್ಲ.

March 02, 2013
0

ಯಾವುದನ್ನಾಚರಿಸಿದರೆ ಧರ್ಮವಿಲ್ಲವೋ, ಕೀರ್ತಿ ಇಲ್ಲವೋ, ಒಳ್ಳೆಯ ಹೆಸರಿಲ್ಲವೋ,

ದೇಹಕ್ಕೆ ಆಯಾಸ ಮಾತ್ರ ಆಗುವುದೋ ಅಂಥ ಕಾರ್ಯವನ್ನು ಯಾವನು ಮಾಡಿಯಾನು?

March 02, 2013
0

ಮನಸ್ಸಿಗೆ ಆನಂದ ಉಂಟುಮಾಡುವುದೇ ಸ್ವರ್ಗ, ದು:ಖವೇ ನರಕ,

ಸ್ವರ್ಗ ನರಕಗಳಿಗೆ ಪುಣ್ಯ ಪಾಪಗಳೆಂಬ ಹೆಸರು.

March 02, 2013
0

 ವಯಸ್ಸಾದ  ಮೇಲೆ ಯಾವುದರಿಂದ ಸುಖವಾಗಿರಲು ಸಾಧ್ಯವೋ ಅದನ್ನು ಪೂರ್ವ  ವಯಸ್ಸಿನಲ್ಲಿ ಮಾಡಬೇಕು.

ಪರಲೋಕದಲ್ಲಿ ಯಾವುದರಿಂದ ಸುಖ ಉಂಟೋ ಅಂತಹ ಕೆಲಸವನ್ನು ಬದುಕಿರುವಾಗ ಮಾಡಬೇಕು.

March 02, 2013
0

ಮುಗಿಲಿಗೆ ಯಾವ ಅಪೇಕ್ಷೆಯೂ ಇಲ್ಲ, ಯಾರದೇ ದಾಕ್ಷಿಣ್ಯ ಇಲ್ಲ, ಯಾವುದೇ ಪ್ರೀತಿಯ ಹಂಗಿಲ್ಲ, ಜೊತೆಗಾರನೆಂಬ ಭಾವನೆಯೂ ಇಲ್ಲ.

ಆದರೂ ಮುಗಿಲು ತನ್ನದೇ ಆದ ದೊಡ್ಡಸ್ತಿಕೆಯಿಂದ ಜನಗಳ ಬೇಗುದಿಯನ್ನು ಹೋಗಲಾಡಿಸುತ್ತದೆ.

March 02, 2013
0

ರೋಗಿಗೆ ವೈದ್ಯನು ಮಾಡುವ ಶಸ್ತ್ರ ಚಿಕಿತ್ಸೆಯಿಂದ ರೋಗಿಗೆ ಹಿಂಸೆಯಾದರೂ,

ಗುಣವಾಗಲಿ ಎಂಬ ಭಾವದಿಂದಲೇ ಹೊರತು ಅದೊಂದು ಕ್ರಿಯೆಯಲ್ಲ.

March 01, 2013
0

ವ್ಯಾಪಾರದಲ್ಲಿ ಸತ್ಯ ಹೇಳುವುದು ಸಾಧ್ಯವಿಲ್ಲ ಎಂದು ವರ್ತಕರು ಹೇಳುವುದನ್ನು ಕೇಳಿದ್ದೆ.

'ಅದು ಸರಿ' ಎಂದು ನನಗೆ ಅನ್ನಿಸಲಿಲ್ಲ, ಈಗಲೂ ಅನ್ನಿಸುವುದಿಲ್ಲ.

March 01, 2013
0

ನೀತಿಯ ನೆಲೆಗಟ್ಟಿಲ್ಲದ ವಾದವು ಮಾತಿನ ವ್ಯಭಿಚಾರ.

March 01, 2013
0

ಕೆಲವು ಸನ್ನಿವೇಶಗಳಲ್ಲಿ ಲಾಭಕ್ಕಿಂತ ನಷ್ಟವೇ ಉತ್ತಮ.

March 01, 2013
0

ರೋಗದ ಲಕ್ಷಣ ತಿಳಿಯುವುದೇ ರೋಗ ನಿವಾರಣೆಯ ಮೊದಲ ಹೆಜ್ಜೆ.