‘ಸಂಪದ ‘ ನಗೆಬುಗ್ಗೆ - ಭಾಗ ೧೧೩
1 day 13 hours ago - Ashwin Rao K P
ಕಾಲಿಗಲ್ಲ ತಲೆಗೆ
ಸಾಧು ಸಂತರೆಂದರೆ ನಮ್ಮಜ್ಜಿಗೆ ಎಲ್ಲಿಲ್ಲದ ಅಭಿಮಾನ ಮತ್ತು ಭಕ್ತಿ. ಎಲ್ಲಾದರೂ ಅಂಥವರ ಪ್ರವಚನವಿದೆಯೆಂದಾದರೆ ಸಾಕು ಚಿಕ್ಕವರಿದ್ದ ನಮ್ಮನ್ನು ಎಳೆದುಕೊಂಡೇ ಹೋಗುತ್ತಿದ್ದರು. ತನ್ನ ಕಾವಲಿಗೆ ಒರಲಿ ಎಂಬುದರ ಜೊತೆಗೆ ಮಕ್ಕಳಲ್ಲೂ ಗುರು ಹಿರಿಯರ ಬಗ್ಗೆ ಸ್ವಲ್ಪ ಭಕ್ತಿ ಬೆಳೆಯಲಿ ಎನ್ನುವುದೂ ಇತ್ತು. ಒಂದು ದಿನ ಅಂತಹುದೇ ಸಂತರೊಬ್ಬರ ಪ್ರವಚನ ಕೇಳಿ ಮನೆಗೆ ಹೊರಡುವಾಗ ರಾತ್ರಿಯಾಗಿತ್ತು. ಬೆಳದಿಂಗಳಿರಲಿಲ್ಲ. ಜೊತೆಗೆ ಕೈಯಲ್ಲಿ ಟಾರ್ಚ ಕೂಡಾ ಇಲ್ಲ. ಎಡವುತ್ತ ಸಾಗುತ್ತಿದ್ದ ಅಜ್ಜಿ ಅಷ್ಟೊಂದು ತಡ ಮಾಡಿದ್ದಕ್ಕೆ ಸಂತರನ್ನು ಬೈಯುತ್ತಲೇ ಇದ್ದರು. ಪ್ರವಚನದ ನಂತರ ಪ್ರಸಾದ ಏನಾದರೂ ಸಿಕ್ಕೀತೆಂಬ ಆಸೆಯಿಂದ ಅಲ್ಲಿಯವರೆಗೆ ಬಂದು ಅಲ್ಲಿ ಏನೂ ಸಿಕ್ಕದೆ ನಿರಾಸೆಯಲ್ಲಿದ್ದ ಗುಂಪಿನಲ್ಲೇ ಅತೀ ಕಿರಿಯನಾಗಿದ್ದ ಮೊಮ್ಮಗ ಕೇಳಿಯೇ ಬಿಟ್ಟ. ‘ಅಲ್ಲ ಅಜ್ಜೀ, ಜ್ಞಾನದ ದೀವಿಗೆ ಎಲ್ಲರನ್ನೂ ಎಡವದಂತೆ ಮುನ್ನಡೆಸುತ್ತದೆ ಎಂದರಲ್ಲ ಸಂತರು’ ಎಂದಿದ್ದ. ‘ಅವರು ಹೇಳಿದ್ದು ಕಾಲಿಗಲ್ಲಪ್ಪ… ತಲೆಗೆ. ಇಲ್ಲಿ ಕತ್ತಲಿನಲ್ಲಿ ಎಡವುತ್ತಿರುವುದು ಕಾಲು’ ಎಂದಿತು ಎಡವಿ ಬೀಳುವುದರಲ್ಲಿದ್ದ ಅಜ್ಜಿ ಸಾವರಿಸಿಕೊಳ್ಳುತ್ತ !
***
ಬೇವಿನ ಮರದಲ್ಲಿ ಮಾವು
ತನ್ನನ್ನು ಬಹು ದೊಡ್ಡ ದಾರ್ಶನಿಕನೆಂದುಕೊಂಡಿದ್ದು ಬಹಳ ಕಾಲದಿಂದ ಹುಚ್ಚಾಸ್ಪತ್ರೆಯಲ್ಲಿಯೇ ಇದ್ದ ಒಬ್ಬಾತ ರೌಂಡಿಗೆ ಬಂದ ಡಾಕ್ಟರನ್ನು ಹಿಡಿದು ಕೇಳತೊಡಗಿದ ‘ಅಲ್ಲ ಡಾಕ್ಟರೇ, ಮಾವಿನ ಮರದಲ್ಲಿ ಮಾವು ಬೆಳೆಯುತ್ತದೆ. ಹಾಗೆಯೇ ಬೇವಿನ ಮರದಲ್ಲಿ ಬೇವು. ಮಾವಿನ ಮರದಲ್ಲಿ ಬೇವು, ಬೇವಿನ ಮರದಲ್ಲಿ ಮಾವು ಯಾಕೆ ಬೆಳೆಯಲಾಗದು?’ ಡಾಕ್ಟರು ಕಕ್ಕಾಬಿಕ್ಕಿ. ಉತ್ತರಕ್ಕಾಗಿಯೇ ತಡಕಾಡಿದರು. ಅಷ್ಟರಲ್ಲಿ ಹಾಡು ಹಗಲಿನಲ್ಲಿಯೇ ಆಕಾಶದಲ್ಲಿನ ತಾರೆಗಳನ್ನೆಣಿಸುತ್ತ ಅಲ್ಲಿಯೇ ಪಕ… ಮುಂದೆ ಓದಿ...