ಇದು ಸೊಕ್ಕಿನ ಪರಮಾವಧಿಯಷ್ಟೇ !
2 days 2 hours ago - Ashwin Rao K P
ಕೆಟ್ಟ ಮೇಲೂ ಬುದ್ಧಿ ಬರಲಿಲ್ಲ ಎಂಬುದೊಂದು ಮಾತು ನಮ್ಮ ಜನರ ನಡುವೆ ಚಾಲ್ತಿಯಲ್ಲಿದೆ. ಪಾಕಿಸ್ತಾನದ ಆಳುಗರ ಅಥವಾ ಮಿಲಿಟರಿ ವ್ಯವಸ್ಥೆಯ ಧಾರ್ಷ್ಟ್ಯವನ್ನು ಕಂಡಾಗಲೆಲ್ಲ ಈ ಮಾತು ನೆನಪಾಗುತ್ತದೆ. ಪ್ರಸ್ತುತ, ಪಾಕ್ ನ ಸೇನಾ ಮುಖ್ಯಸ್ಥ ಜನರಲ್ ಆಸಿಮ್ ಮುನೀರ್, ‘೧೩ ಲಕ್ಷ ಯೋಧರಿದ್ದ ಭಾರತೀಯ ಸೇನೆಗೇ ನಮ್ಮನ್ನು ಹೆದರಿಸಲು ಸಾಧ್ಯವಾಗಲಿಲ್ಲ. ಇನ್ನು ಬಲೂಚಿಸ್ಥಾನದ ೧೫೦೦ ಉಗ್ರರು ಏನು ಮಾಡಲು ಸಾಧ್ಯ?’ ಎಂಬ ಆಣಿಮುತ್ತನ್ನು ಉದುರಿಸಿದ್ದಾರೆ. ಬಲೂಚಿಸ್ಥಾನದಲ್ಲಿ ದಂಗೆಯೆದ್ದಿರುವ ಜನರಿಗೆ ‘ಉಗ್ರರು’ ಎಂಬ ಹಣೆಪಟ್ಟಿ ಕಟ್ಟಿಬಿಟ್ಟಿರುವ ಆಸಿಮ್ ಮುನೀರ್, ಇಷ್ಟು ಸಾಲದೆಂಬಂತೆ ‘ಕಾಶ್ಮೀರದ ವಿಷಯದಲ್ಲಿ ಪಾಕಿಸ್ತಾನದ ನಿಲುವು ಸ್ಪಷ್ಟವಾಗಿದೆ. ಕಾಶ್ಮೀರವು ಪಾಕಿಸ್ತಾನದ ಕೊರಳಿನ ರಕ್ತನಾಳವಿದ್ದಂತೆ.’ ಎಂಬ ಬಾಲಂಗೋಚಿಯನ್ನೂ ಸೇರಿಸಿದ್ದಾರೆ. ಗಡಿಭಾಗದಲ್ಲಿ ತನ್ನ ಉಗ್ರರನ್ನು ತೂರಿಸಿ ಭಾರತದ ನೆಲದಲ್ಲಿ ವಿಧ್ವಂಸಕ ಕೃತ್ಯಗಳನ್ನು ಹಾಗೂ ಗಲಭೆಗಳನ್ನು ನಡೆಸಲು ಚಿತಾವಣೆ ನೀಡುತ್ತಿದ್ದ ಪಾಕಿಸ್ತಾನಕ್ಕೆ ಭಾರತವು ಕಾಲಾನುಕಾಲಕ್ಕೆ ತಪರಾಕಿ ನೀಡಿದ್ದುಂಟು.
ಇಷ್ಟಾಗಿಯೂ ಅದಕ್ಕೆ ಇನ್ನೂ ಬುದ್ಧಿ ಬಂದಂತಿಲ್ಲ. ಕಾರ್ಗಿಲ್ ಯುದ್ಧದ ವೇಳೆ ತನಗಾದ ಗಾಯಗಳನ್ನು ನೆಕ್ಕಿಕೊಳ್ಳುವುದಕ್ಕೇ ಪಾಕಿಸ್ತಾನಕ್ಕೆ ಸಾಕಷ್ಟು ಸಮಯ ಹಿಡಿದಿತ್ತು. ಇನ್ನು ಪಾಕ್ - ಬೆಂಬಲಿತ ಉಗ್ರರ ಮೇಲೆ ಭಾರತವು ‘ಸರ್ಜಿಕಲ್ ಸ್ಟ್ರೈಕ್’ ನಡೆಸಿದ ಮೇಲಂತೂ ಅಂತಾರಾಷ್ಟ್ರೀಯ ಸಮುದಾಯದೆದುರು ಪಾಕಿಸ್ತಾನದ ಮರ್ಯಾದೆ ಮೂರಾಬಟ್ಟೆಯಾಗಿದ್ದು ಖರೆ. ಕೊನೆಗೆ ಅದು ಎಲ್ಲಿಯವರೆಗೆ ಹೋಯಿತೆಂದರೆ, ಪಾಕಿಸ್ತಾನವು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಏನನ್ನೇ ಹೇಳಿದರೂ ಜಗದ ಜನರು ಅದನ್ನು ನಂಬದಂಥ ಮತ್ತು ಅನುಮಾನದ ಕಂಗಳಿನಿಂದಲೇ ನೋಡುವಂಥ ಪರಿಸ್ಥಿತಿ ನಿರ್ಮಾಣವ… ಮುಂದೆ ಓದಿ...