September 2012

September 27, 2012
ಬರಹ: Jayanth Ramachar
ನಾನು ನಾನಾಗಿಲ್ಲ!!....ಹೌದು ನಾನು ನಾನಾಗಿಲ್ಲ!!.. ಹಾಗೆಂದುಕೊಳ್ಳುತ್ತಲೇ ಏದುಸಿರು ಬಿಡುತ್ತಾ ಬೆಟ್ಟವನ್ನು ಏರುತ್ತಿದ್ದೆ. ಬಹಳ ದಿನದಿಂದ ಬಾರದ ಮಳೆ ಎಲ್ಲ ಒಟ್ಟಿಗೆ ಸೇರಿ ಇಂದೇ ಸುರಿಯುವುದೇನೋ ಎನ್ನುವಷ್ಟು ಕಡು ಕಪ್ಪಾದ ಮೇಘಗಳು ಆಗಸದಲ್ಲಿ…
September 27, 2012
ಬರಹ: vidyakumargv
ವಿಜ್ಞಾನ, ತರ್ಕ, ಸಿದ್ದಾಂತಗಳು ಕಲಿತಷ್ಟು ಕಠಿಣವಾಗಿ ದಿನೇ ದಿನೇ ಜಟಿಲವಾಗುತ್ತಿವೆ, ಉದಾಹರಣೆಗೆ  ನ್ಯೂಟನ್, ಕೆಪ್ಲರ್ ಸಿದ್ದಾಂತಗಳು ಆಕಾಶಕಾಯಗಳ ಗತಿಯನ್ನು ಗುರುತ್ವದ ತಳಹದಿಯ ಮೇಲೆ ವಿವರಿಸಿದೆ ಆದರೆ ಅದೇ ಸಮಯದಲ್ಲಿ ಗುರುತ್ವಕ್ಕೆ ಏನು ಕಾರಣ…
September 26, 2012
ಬರಹ: Prakash Narasimhaiya
  ನಮಗೆ ಜೀವನದಲ್ಲಿ ಅದೆಷ್ಟೋ ಪರೀಕ್ಷೆಗಳು ಎದುರಾಗುತ್ತವೆ.  ಇವುಗಳನ್ನು ಎದುರಿಸಲು ಎಷ್ಟೋ ತರಹದ ಪ್ರಯತ್ನ ಮಾಡುತ್ತೇವೆ. ಕೆಲವಲ್ಲಿ ಜಯವಾದರೆ, ಮತ್ತೆ ಕೆಲವಲ್ಲಿ ಸೋಲು ಅನುಭವಿಸುತ್ತೇವೆ.  ಈ ಸೋಲನ್ನು ನಾವು ನಮಗಾದ ಶಿಕ್ಷೆಯೆಂದು…
September 26, 2012
ಬರಹ: partha1059
ನನ್ನ ಬಾಲ್ಯದ ನೆನಪುಗಳು -  ನಾನ್ ಸ್ವಾಮಿ ಕಳ್ಳ !!! ಕಳೆದ ವಾರ ಬೆಳೆಗೆರೆ ಕೃಷ್ಣಶಾಸ್ತ್ರಿಗಳ ಅನುಭವ ಸಂಕಲನ ’ ಮರೆಯಲಾದಿತೆ   ’  ಓದುತ್ತಿದ್ದೆ. ಅದರಲ್ಲಿ ಒಂದು ಅಧ್ಯಾಯದಲ್ಲಿ     ಬಿಳಿತಲೆಯ ವೃದ್ದನೊಬ್ಬನನ್ನು ಗುರುತು ಹಿಡಿಯುತ್ತ…
September 26, 2012
ಬರಹ: gopaljsr
ಅರುಣ ಯುರೇಕಾ ಎಂದು ಚೀರುತ್ತಲೇ ಹೊರಗಡೆ ಬಂದ. ಆದರೆ ಪಕ್ಕದ ಮನೆ ಸುರೇಖಾ ಇದನ್ನು ಕೇಳಿ,  ತನ್ನನ್ನೇ ಕರೆಯುತ್ತಿದ್ದಾನೆ ಎಂದು ಅವರ ಅಪ್ಪನಿಗೆ ಕಂಪ್ಲೈಂಟ್ ಮಾಡಿದಳು. ಅದಕ್ಕೆ ಸರಿಯಾದ ಕಾಂಪ್ಲಿಮೆಂಟ್ ಅರುಣನಿಗೆ ಸಿಕ್ಕಿತ್ತು. ಹರಕೆ ಹೊತ್ತರು…
September 26, 2012
ಬರಹ: kavinagaraj
  ನಾನಿಲ್ಲ ಅವನಿಲ್ಲ ಜಗವಿಲ್ಲ ನಿದ್ದೆಯಲಿ ರಾಗ ದ್ವೇಷಗಳಿಲ್ಲ ನೋವು ನಲಿವುಗಳಿಲ್ಲ | ತಮೋತ್ತುಂಗದಲಿ ಪ್ರಶ್ನೋತ್ತರದ ಸೊಲ್ಲಿಲ್ಲ ಮಾಯಾ ಶಕ್ತಿಗೆದುರುಂಟೆ ಮೂಢ || ..327   ನಿದ್ದೆಯಿಂದೆದ್ದೊಡನೆ ನಾನು ಜನಿಸುವುದು ಒಂದಿದ್ದು ಎರಡಾಗಿ ಮೂರಾಗಿ…
September 26, 2012
ಬರಹ: anil.ramesh
ಕಳೆದ ಶತಮಾನದಲ್ಲಿ ಯುರೋಪಿನ ಮೆಡಿಟರೇನಿಯನ್ ಸಾಗರ ತೀರದ ದೇಶಗಳಿಂದ ಪೂರ್ವದ ಹಿಂದೂಮಹಾಸಾಗರ ತೀರದ ದೇಶಗಳಿಗೆ ಸಿದ್ದ ಸರಕುಗಳನ್ನು ಒಯ್ಯುತ್ತಿದ್ದ, ಅಲ್ಲಿಂದ ಕಚ್ಚಾ ಸಾಮಗ್ರಿಗಳನ್ನು ಸಾಗಿಸುತ್ತಿದ್ದ ಹಡಗುಗಳು ಆಫ್ರಿಕಾದ ತುದಿಯಲ್ಲಿರುವ ಗುಡ್‍…
September 26, 2012
ಬರಹ: Chikku123
ಬೇಡ ಬೇಡ ಅನ್ನುತ್ತಲೇ ಬದಲಾವಣೆಗೆ ಅಂಟಿಕೊಂಡಿದ್ದೇವೆ. ಅದು ಬದುಕಿನ ಅನಿವಾರ್ಯವೂ ಆಗಿದೆ. ಇಲ್ಲದಿದ್ದರೆ ಕಾಲ ಮುಂದೆ ಓಡುತ್ತಿದ್ದರೆ ನಾವೆಲ್ಲಿ ಹಿಂದೆಬೀಳುತ್ತೀವೋ ಎನ್ನುವ ಭಯ, ಭಯದ ಜೊತೆಗೆ ನಮ್ಮನ್ನ ದಾಟಿ ಮುಂದೆ ಹೋಗುತ್ತಿರುವವರ ಜೊತೆ…
September 26, 2012
ಬರಹ: ku.sa.madhusudan
ಆಡಿದ ಮಾತುಗಳಿಗಿಂತ ಆಡದೇ ಉಳಿದ ಮಾತುಗಳೇ ಅರ್ಥಪೂರ್ಣ! ನನಸಾದ ಕನಸುಗಳಿಗಿಂತ ಕಣ್ಣೊಳಗೆ ಉಳಿದ ಕನಸುಗಳೇ ಅರ್ಥಪೂರ್ಣ! ಎಲ್ಲ ತೆರೆದುಕೊಂಡ ಹೆಣ್ಣಿಗಿಂತ ನಿಗೂಢವಾಗಿ ಉಳಿದ ಹೆಣ್ಣೇ ಅರ್ಥಪೂರ್ಣ! ಬರೆದ ಕವಿತೆಗಳಿಗಿಂತ ಬರೆಯದೆ ಉಳಿದ ಕವಿತೆಗಳೇ…
September 26, 2012
ಬರಹ: hamsanandi
  ಸಾಗುತಿಹ ವರುಷದಲಿ ಬಂತು ಸೊಗಸಿನ ಕಾಲ ಮಾಗಿ ಕಾಲಕೆ ಮೊದಲಿನೆಲೆಯುದುರುಗಾಲ; ನೀಗಿ ಬಿರುಬೇಸಿಗೆಯ ಕೋಟಲೆಯ ದಿನಗಳ- ನ್ನಾಗಿಸುತ ಮರಗಳನ್ನಿಳೆಯಮಳೆ ಬಿಲ್ಲು!   -ಹಂಸಾನಂದಿ   ಚಿತ್ರಕೃಪೆ: ಪೂರ್ಣಿಮಾ
September 26, 2012
ಬರಹ: Jayanth Ramachar
ಬರ!!! ಇದು ಅಂತಿಂಥ ಬರ ಅಲ್ಲ... ಇಲ್ಲಿ ತಿನ್ನುವ ಅನ್ನಕ್ಕೆ ಬರ...ಕುಡಿಯುವ ನೀರಿಗೆ ಬರ...ಬೀಸುವ ಗಾಳಿಗೆ ಬರ...ಮಗುವಿನ ನಗುವಿಗೆ ಬರ...ಅಪ್ಪ ಅಮ್ಮಂದಿರ ನಗುವಿಗೆ ಬರ...ಸ್ನೇಹಕ್ಕೆ ಬರ..ಸಂಬಂಧಗಳಿಗೆ ಬರ... ಇಂಥಹ ಊರಲ್ಲದ ಊರಿನಲ್ಲಿ ಎಲ್ಲ…
September 25, 2012
ಬರಹ: ಭಾಗ್ವತ
ಹೊಸತನವ ಹೊತ್ತಿರುವ ಸಂಪದದ ಸಾಲು ನಾಡು ನುಡಿ ಜೇನಿನಲಿ ಬೆರೆತಂತೆ ಹಾಲು ಬಣ್ಣಗಳು ಅಲ್ಲಲ್ಲಿ ಅರಳಿದರೆ ಚಂದ ಕಾವ್ಯ ಕುಸುಮಕೆ ಇಡುವ ನವಿರು ಶ್ರೀಗಂಧ ಬರಲಿರುವ ನವಿನತೆಯ ಹೊಸತನಕೆ ಹೊಸೆದು ತಾಯ್ ನುಡಿಗೆ ಮುಡಿಸಲಿಕೆ ಶಬ್ಧಗಳ ಬೆಸೆದು ನುಡಿ…
September 25, 2012
ಬರಹ: harishsharma.k
ಮೊನ್ನೆ ನನ್ನ ಹುಟ್ಟೂರು ಕೋಲಾರಿಗೆ ಹಬ್ಬಕ್ಕೆಂದು ಹೋದಾಗ ಆಕಸ್ಮಿಕವಾಗಿ ನಾ ೧೦ ನೆ ತರಗತಿಯಲ್ಲಿದಾಗ ಬರೆದ ಒಂದು ಪ್ರೇಮ ಕವನ ದೊರೆಯಿತು, ಅದನ್ನೋದಿ ಮನ ಕೆಲಕಾಲ ನಲಿದಾಡಿತು ಅದರ ಸವಿ ತಮಗಾಗಿ ಇಲ್ಲಿ. ವಿನಂತಿ: (ಈ ಕವನವನ್ನೋದುವ ಮುನ್ನ ತಮ್ಮ…
September 25, 2012
ಬರಹ: sathishnasa
  ಭೂಮಿಗಳತೆ ಮಾಡಿ ನನ್ನದಿದೆಂದು ಪತ್ರವನು ಬರೆಸಿ ಅದಕೊಡೆಯ ನಾನೆಂದು ಮೆರೆಯುತಲಿ ಸಂಭ್ರಮಿಸಿ ಹಣವೆನುತ ಲೋಹ,ಕಾಗದದ ಮೇಲೆ ಚಿತ್ತಾರ ಬಿಡಿಸಿ ಕೂಡಿಡುತಲಿಹೆವದನು ಸುಖ ಪಡೆವೆವೆಂದು ಭ್ರಮಿಸಿ   ನಿನ್ನದಲ್ಲದ ಎಲ್ಲವನು ಉಪಯೋಗಿಸುತಿರುವೆ ನೀನಿಲ್ಲಿ…
September 25, 2012
ಬರಹ: kpbolumbu
ನಾನರಿಯೆನು ಇಂದೇಕೋ ಆಯಿತು ಈ ಸರ್ವರ್ ಡೌನುಏಕಾಯಿತೋ ಮುಂದು ಮುಂಜಾವಿನಲಿ ಈ ಪವರು ಕಟ್ಟುಈ ಮೆಮೊರಿಯ ಇಂದೇಕೋ ತುಂಬಿತು ಕೆಡು ಕೆಟ್ಟ ವೈರಸುಹಾರ್ಡು ದಿಸ್ಕನ್ನು ಫಾರ್ಮ್ಯಾಟೇಕೆ ಮಾಡಿಸಿತು, ಮತಿಯನ್ನು ಏತಕೆ ಕೆಡಿಸಿಬಿಟ್ಟಿತುಸುಡುವಂಥ ನೆನಪುಗಳೂ…
September 25, 2012
ಬರಹ: hariharapurasridhar
ಸಂಪದದ ಮಿತ್ರರೇ, ಸಂಪದಿಗರಾದ ಕವಿನಾಗರಾಜ್,ಹೆಚ್.ಎಸ್.ಪ್ರಭಾಕರ್ ಮತ್ತು ನಾನು ಒಟ್ಟಾಗಿ ಹಾಸನದಲ್ಲಿ ಆರಂಭಿಸಿರುವ" ವೇದ ಭಾರತೀ " ಆಶ್ರಯದಲ್ಲಿ ಒಂದು ಉತ್ತಮವಾದ ವೈಚಾರಿಕ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ. ಸ್ಥಳ: ಶ್ರೀ ರಾಮಕೃಷ್ಣ ವಿದ್ಯಾಲಯ…
September 25, 2012
ಬರಹ: ಆರ್ ಕೆ ದಿವಾಕರ
ಇತ್ತೀಚಿನ ದಿನಗಳಲ್ಲಿ ಹದಗೆಟ್ಟು, ಹೊಲಸುಗೊಂಡಿರು ’ಮಠ ವ್ಯವಸ್ಥೆ’ಯಲ್ಲಿದ್ದುಕೊಂಡೂ ಗೌರವಾನ್ವಿರಾಗಿರುವ ತರಳಬಾಳು ಶಿವಾಚಾರ‍್ಯ ಸ್ವಾಮಿಗಳು, ಏಕಾಏಕೀ ಪೀಠತ್ಯಾಗದ ಮಾತನಾಡಿದ್ದಾರೆ; ಕಪಟ ರಾಜಕಾರಣಿಗಳು ಈ ಬಗ್ಗೆ ಕೃತಕ ಕಣ್ಣೀರನ್ನೂ…
September 25, 2012
ಬರಹ: Maalu
ನಲ್ಲ ಇವ ಬಹನೆಂದು ಮೊಲ್ಲೆ ಮುಡಿದಿಹೆ ಇಂದು  ಇಲ್ಲೆ ಈಗಲೇ ಬಂದು ಬೆಲ್ಲವಡಗಿಹ ಸಿಹಿ- ಸೊಲ್ಲ ನುಡಿಯುವನೇ? ಹರಳಿನುಂಗುರವ ಬೆರಳಿಗಿಟ್ಟೆ ಸರಳ ಸರವೊಂದ ಕೊರಳಿಗಿಳೆಬಿಟ್ಟೆ ಹಳದಿ ಸೀರೆಯನುಟ್ಟೆ ಹೊಳೆವ ಬಳೆಗಳನೂ ತೊಟ್ಟೆ; ಬಳಿ ಸೆಳೆದೆದೆಗೆ ಎದೆಯನು…
September 25, 2012
ಬರಹ: hamsanandi
  ಚೆನ್ನೆ ನಿನ್ನಯ ಮನದೊಳೆನ್ನ ಮೇಲಿರೆ ಮುನಿಸು ಇನ್ನು ಮಾಡುವುದೇನು? ಇರಲಿ ನಿನ್ನಿಷ್ಟ; ಮುನ್ನ ಕೊಟ್ಟದ್ದೆಲ್ಲ  ಮರಳಿ ಕೊಟ್ಟುಬಿಡೆನಗೆ     ನನ್ನ ಮುತ್ತನು ಮತ್ತೆ ಬಿಗಿವಪ್ಪುಗೆಯನು!                        ****   ಚಿತ್ತದಲಿ ನಿನಗೆನ್ನ…