June 2021

  • June 03, 2021
    ಬರಹ: Ashwin Rao K P
    ‘ಕೆಫೆ ಕಾಫಿ ಡೇ’ ಎಂಬ ಸಂಸ್ಥೆಯ ಮಾಲೀಕ ಸಿದ್ಧಾರ್ಥ್ ಮಂಗಳೂರಿನ ನೇತ್ರಾವತಿ ನದಿಯ ಸೇತುವೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡದ್ದು ೨೦೧೯ರ ದೊಡ್ದ ಸಂಗತಿ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಸಿದ್ಧಾರ್ಥ ಪುಟ್ಟದಾದ ‘…
  • June 03, 2021
    ಬರಹ: Shreerama Diwana
    ಪ್ರತಿಯೊಂದು ಜೀವಿಗಳಲ್ಲೂ ಭಾವನೆಗಳ ಪ್ರವಾಹ ಸದಾ ಹರಿಯುತ್ತಿರುತ್ತದೆ. ಇನ್ನು ಮನುಷ್ಯರಲ್ಲಂತೂ ಗಂಡು ಹೆಣ್ಣಿನ ಬೇದಗಳಿಲ್ಲದೆ ಭಾವನೆಗಳದೇ ಸಾಮ್ರಾಜ್ಯ. ಹಿಂದೆ ಅಕ್ಷರ ಜ್ಞಾನವಿಲ್ಲದ  ಜನರು ಜಾನಪದ ಹಾಡು ಕಥೆಗಳ ಮೂಲಕ ತಮ್ಮ ಭಾವನೆಗಳನ್ನು…
  • June 03, 2021
    ಬರಹ: addoor
    ೮೫.ಜಗತ್ತಿನ ಪ್ರಪ್ರಥಮ ಕೈಬೆರಳಚ್ಚಿನ ಬ್ಯುರೋ ಭಾರತದಲ್ಲಿದೆ. ಪ್ರತಿಯೊಬ್ಬ ವ್ಯಕ್ತಿಯನ್ನು ಆತನ/ ಆಕೆಯ ಕೈಬೆರಳಚ್ಚು ಮೂಲಕ ಖಡಾಖಂಡಿತವಾಗಿ ಗುರುತಿಸಬಹುದು. ಆದ್ದರಿಂದ, ಅಪರಾಧ ಪತ್ತೆಯಲ್ಲಿ ಕೈಬೆರಳಚ್ಚುಗಳಿಗೆ ಪ್ರಾಮುಖ್ಯತೆ. ಜಗತ್ತಿನ…
  • June 03, 2021
    ಬರಹ: ಬರಹಗಾರರ ಬಳಗ
    ಸಾಮಾನ್ಯವಾಗಿ ವಿವೇಕಿಗಳು ಎಂದರೆ ಎಲ್ಲಾ ಗೊತ್ತಿದ್ದವರು, ವಿವೇಚಿಸದೆ ಯಾವುದೇ ಕೆಲಸಕ್ಕೂ ಕೈ ಹಾಕದವರು ಎನ್ನಬಹುದು. ಯಾವ ವಿಷಯವಾಗಲಿ, ಒಂದು ಕೆಲಸವಾಗಲಿ ಅದರ ಬಗ್ಗೆ ಸರಿಯಾಗಿ ವಿಮರ್ಶಿಸಿ ಮುಂದೆ ಹೋಗುವ ಸ್ವಭಾವದವರು. ಅವರು…
  • June 03, 2021
    ಬರಹ: ಬರಹಗಾರರ ಬಳಗ
    ಗೆಳತಿ, ಆ ನಿನ್ನ ಮೊಗದಲ್ಲಿ ನಕ್ಷತ್ರದ ಹೊಳಪಿತ್ತು ಮಿಂಚಿ ಮರೆಯಾದ ನಗೆಯಲ್ಲಿ ಚಂದಿರನ ಮನಸಿತ್ತು   ನಾ ಕದ್ದು ಎದೆಯ ಗೂಡಲ್ಲಿ ಬಚ್ಚಿಡುವೆನೆಂಬ ಕನಸಿತ್ತು ರಾತ್ರಿ ಕಳೆದು ರಾತ್ರಿ... ಮತ್ತೆ ಮತ್ತೆ ಕಚಗುಳಿಯಿಟ್ಟಾಗ ನಿನ್ನೊಲವೆ…
  • June 02, 2021
    ಬರಹ: ಬರಹಗಾರರ ಬಳಗ
    ಕವಿ, ಸಾಹಿತಿ, ಅಧ್ಯಾಪಕರಾದ ಶ್ರೀ ಹಾ.ಮ.ಸತೀಶ (ಹಾಲುಮಜಲು ಸತೀಶ) ಇವರ ಪುಸ್ತಕ *ಪರಸ್ಪರ* ವೈಚಾರಿಕ ಲೇಖನಗಳನ್ನೊಳಗೊಂಡ ಹೊತ್ತಗೆ. ಒಟ್ಟು *೨೭* ಲೇಖನಗಳು ಶ್ರೀಯುತರ ಕೈಯಿಂದ ಬರೆಯಲ್ಪಟ್ಟಿದೆ. *ಮಾನವ* -ಮೊದಲು ಮಾನವನಾಗು, ಮನಸ್ಸನ್ನು…
  • June 02, 2021
    ಬರಹ: Ashwin Rao K P
    ಕಳೆದ ವಾರ ನಾವು ಆರಿಸಿದ ಕವಿ ಪು.ತಿ.ನರಸಿಂಹಾಚಾರ್. ಅವರ ಎರಡು ಅಪರೂಪದ ಕವನಗಳಿಗೆ ಬಹಳ ಪ್ರಶಂಸೆಗಳು ಬಂದಿವೆ. ‘ಸುವರ್ಣ ಸಂಪುಟ’ ಕೃತಿಯಲ್ಲಿ ಪುತಿನ ಅವರ ಇನ್ನೂ ಹಲವಾರು ಕವನಗಳಿವೆ. ಅವುಗಳ ಶೀರ್ಷಿಕೆಗಳು ಹೀಗಿವೆ- ಬಾನ್ ತಿಳಿದಿತ್ತು, ಮಳೆ…
  • June 02, 2021
    ಬರಹ: Shreerama Diwana
    ಅಯ್ಯ ನಾನಯ್ಯ, ನಿಮ್ಮ ಹಿರಿ ಹಿರಿ ಹಿರಿ ಹಿರಿ ಹಿರಿ ಹಿರಿ ಹಿರಿ ಹಿರಿ ಹಿರಿಯಜ್ಜ......ಹರಪ್ಪ ಮಹೇಂಜೋದಾರೋ ಕಾಲದ ನಿಮ್ಮ ಪೂರ್ವಿಕ. ನಮ್ಮ ವನ ದೇವತೆಯ ಶಾಪದಿಂದ ಈಗಲೂ ಮುಕ್ತನಾಗದೆ, ದೈಹಿಕ, ಮಾನಸಿಕ ಯಾತನೆಯಿಂದ ನರಳುತ್ತಾ ಜೀವಿಸುತ್ತಿದ್ದೇನೆ…
  • June 02, 2021
    ಬರಹ: ಬರಹಗಾರರ ಬಳಗ
    "ನೀನು ಹೆದರಬೇಡ ನಾನಿದ್ದೇನೆ" ಎಂದು ಹೇಳುವುದು ಜೀವನದಲ್ಲಿ ಎಲ್ಲರಿಗೂ ಆದ ಅನುಭವ. ಹೌದು, ಎಷ್ಟು ಸಮಯವಿರಬಹುದು? ಒಂದು ಹಂತಕ್ಕೆ ಬರುವಲ್ಲಿವರೆಗೆ ಮಾತ್ರ. ಒಬ್ಬ ಇದ್ದಾನೆ ಅಂಥ ಕೈಕಟ್ಟಿ ಕುಳಿತರೆ ಹೇಗೆ? ಅವನ ಅನ್ನದ ದಾರಿ ಅವನೇ ಹುಡುಕಬೇಕಲ್ಲ…
  • June 02, 2021
    ಬರಹ: ಬರಹಗಾರರ ಬಳಗ
    ಅಬ್ಬರಿಸಿ ಉಬ್ಬರಿಸಿದೆ.. ಏದುರಿಸಿರು ಬಿಡುತ್ತಾ, ಬುಸುಗುಟ್ಟುವ ಹಾವಿನಂತೆ ಬಿರುಬಿಸಿಲನ್ನು ಸೀಳಿ, ಬರುತ್ತಿದೆ ನೋಡು ಸುಂಟರಗಾಳಿ...!!   ಸಣ್ಣಸಣ್ಣ ಸೂಡಿಗಳು ಆರಿಹೋಗಿವೆ, ಮನೆಮಠಗಳು ಜಖಂಗೊಂಡು, ಬಾಳು ನೆಲಕ್ಕಚ್ಚಿದೆ, ಕಣ್ತೆಗೆದರು,…
  • June 01, 2021
    ಬರಹ: Shreerama Diwana
    *ಬಿ.ಎನ್.ಗುಪ್ತ, ಬಿ.ಎಂ.ಶ್ರೀನಿವಾಸಯ್ಯ, ಬಿ.ಎಸ್.ನಾರಾಯಣ್, ಎಂ.ಡಿ.ನಟರಾಜ್, ಜಿ. ಎಸ್. ನರಸಿಂಹ ಸೋಮಯಾಜಿಯವರ "ಜನವಾಣಿ"* "ಜನವಾಣಿ" ಪತ್ರಿಕೆ ಆರಂಭವಾದುದು ೧೯೩೪ರಲ್ಲಿ. ಆ ಕಾಲದ ಪ್ರಸಿದ್ದ ಪತ್ರಿಕೋದ್ಯಮಿ ಬಿ. ಎನ್. ಗುಪ್ತ ಅವರು…
  • June 01, 2021
    ಬರಹ: Ashwin Rao K P
    ನಾರದ ಮುನಿಗಳ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ. ಪುರಾಣಗಳ ಯಾವುದೇ ಕಥೆಯಾಗಿರಲಿ, ಅಲ್ಲಿ ನಾರದರ ಪ್ರವೇಶ ಇದ್ದೇ ಇರುತ್ತದೆ. ಇವರಿಗೆ ಕಲಹ ಪ್ರಿಯ ಎಂಬ ಹೆಸರೂ ಇದೆ. ಪುರಾಣಗಳ ಪ್ರಕಾರ ನಾರದ ಮುನಿ ಜ್ಞಾನಗಳ ಸಾಗರ. ತ್ರಿಕಾಲ ಜ್ಞಾನಿಗಳು. ಇವರು…
  • June 01, 2021
    ಬರಹ: addoor
    ೬.ಯು.ಎಸ್.ಎ. ದೇಶದ ಚರಿತ್ರೆಯಲ್ಲಿ ಅತ್ಯಂತ ಭೀಕರ ಭೂಕಂಪ ಆದದ್ದು ೧೬ ಡಿಸೆಂಬರ್ ೧೮೧೧ರಂದು. ಎರಡು ವಾರ ಮತ್ತು ಏಳು ವಾರಗಳ ನಂತರ ಇನ್ನೆರಡು ಸಲ ಅಲ್ಲಿ ಭೂಮಿ ಕಂಪಿಸಿತು. ಭೂಕಂಪದ ಕೇಂದ್ರ ಮಿಸ್ಸೋರಿಯ ನ್ಯೂ ಮ್ಯಾಡ್ರಿಡ್ ಆಗಿತ್ತು; ಇದು…
  • June 01, 2021
    ಬರಹ: Ashwin Rao K P
    'ಪಂಚಮಗಳ ನಡುವೆ' ಎಂಬ ಈ ಸತ್ಯಕಾಮರ ಕೃತಿಯ ವಿಷಯ ಬಹು ಚರ್ಚಿತ. ಸತ್ಯಕಾಮರೇ ತಮ್ಮ ಮುನ್ನುಡಿಯಲ್ಲಿ ಬರೆದ ಮಾತುಗಳನ್ನು ಓದಿದರೆ ನಿಮಗೆ ನಿಜಕ್ಕೂ ಕೃತಿಯ ಬಗ್ಗೆ ಕುತೂಹಲ ಮೂಡತೊಡಗುತ್ತದೆ. ‘ಅನುಭವಗಳು ತರಂಗಗಳಂತೆ ಚಲನೆ ನೇರ ನಿಟ್ಟಿನಲ್ಲಲ್ಲ'…
  • June 01, 2021
    ಬರಹ: Shreerama Diwana
    ಪರಿಚಯದ ಚಲನಚಿತ್ರ ಯುವ ನಿರ್ದೇಶಕರೊಬ್ಬರು ಕರೆ ಮಾಡಿ ಅವರ ಮುಂದಿನ ಚಿತ್ರದ ಪಾತ್ರವೊಂದರಲ್ಲಿ ಅಭಿನಯಿಸುವಂತೆ ಕೇಳಿದರು. ಕುತೂಹಲಕ್ಕಾಗಿ ನಾನು ಯಾವ ಪಾತ್ರ ಎಂದು ಕೇಳಿದೆ. " ಪೋಲಿಸ್ ಅಧಿಕಾರಿ " ಎಂದರು. ನಾನು " ಓ ಒಬ್ಬ ನಿಷ್ಠಾವಂತ…
  • June 01, 2021
    ಬರಹ: ಬರಹಗಾರರ ಬಳಗ
    ಬೇಗನೆದ್ದು ಮುಖವ ತೊಳೆದು ಮಾಗಿದಂಥ ಹಿರಿಯರನ್ನು| ಬಾಗಿ ನಮಿಸಿ ಹರಕೆ ಪಡೆದು ಪಾಠ ಕಲಿತುಕೋ ಕೂಗಿ ರಂಪ ಮಾಡಬೇಡ ತೂಗಿ ಬಂದೆ ತೊಟ್ಟಿಲನ್ನು ಹೀಗೆ ಮಲಗಿ ನಿದ್ದೆ ಹೋದ ಮುದ್ದು ಕಂದನು||   ಬುದ್ಧಿ ನಿನಗೆ ಹೇಳುತಿರುವೆ ಸದ್ದುಮಾಡ ಬೇಡಮಗನೆ ಕದ್ದು…
  • June 01, 2021
    ಬರಹ: ಬರಹಗಾರರ ಬಳಗ
    *ಅಧ್ಯಾಯ ೧೫* *ನ ರೂಪಮಸ್ಯೇಹ ತಥೋಪಲಭ್ಯತೇ ನಾಂತೋ ನ ಚಾದಿರ್ನ ಚ ಸಂಪ್ರತಿಷ್ಠಾ/* *ಅಶ್ವತ್ಥಮೇನಂ ಸುವಿರೂಢಮೂಲಮಸಂಗಶಸ್ತ್ರೇಣ ದೃಢೇನ ಛಿತ್ತ್ವಾ//೩//*  ಈ ಜಗದ್ರೂಪೀ ವೃಕ್ಷದ ಸ್ವರೂಪವು ಹೇಗೆ ಹೇಳಿದೆಯೋ ಹಾಗೆ ಇಲ್ಲಿ ವಿಚಾರಕಾಲದಲ್ಲಿ…
  • June 01, 2021
    ಬರಹ: Kavitha Mahesh
    ಶ್ರೀ ರಮೇಶ್ ಬೇಗಾರ್ ಇವರು ಬರೆದ ದಿ.ಕಾಳಿಂಗ ನಾವಡರ ಕುರಿತಾದ ಈ ಲೇಖನವೊಂದು ವಾಟ್ಸಾಪ್ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಕಾಳಿಂಗ ನಾವಡರ ಜೊತೆ ಒಡನಾಟವಿದ್ದ ಲೇಖಕರು, ನಾವಡರ ಸೊಗಸಾದ ಪರಿಚಯವನ್ನು ತಮ್ಮದೇ ಮಾತುಗಳಲ್ಲಿ ವರ್ಣಿಸಿದ್ದಾರೆ.…