" ಒಂದು ನದಿ ಹುಟ್ಟುವ ಸ್ಥಳದಿಂದ ಅದು ಹರಿಯುತ್ತಾ ನದಿ ಸೇರುವವರೆಗಿನ ಹಾದಿಯಲ್ಲಿ ಆ ನದಿಯ ಹುಟ್ಟು ಮತ್ತು ಹರಿವಿಗೆ ಹತ್ತಿರದ ಪ್ರದೇಶಗಳಿಗೆ ಆ ನದಿಯ ನೀರನ್ನು ಉಪಯೋಗಿಸಿಕೊಳ್ಳುವ ಹಕ್ಕು ಹೆಚ್ಚಾಗಿರುತ್ತದೆ. ಅದು ಪ್ರಥಮ ಆಧ್ಯತೆ. ನಂತರ…
ಬೇಸಿಗೆಯ ಗದ್ದೆ ಕೊಯ್ಲಿನ ಸಮಯದಲ್ಲಿ ಅನತಿ ದೂರದಲ್ಲಿ ಕಣ್ಣು ಹಾಯಿಸಿದ್ದರು ಗಿಡದ ತುಂಬಾ ಬಿಟ್ಟ ಕೆಂಪು ಬಣ್ಣದ ಮುತ್ತುಗ (ಫಲಾಶ)ದ ಗಿಡ ನೋಡಲು ತುಂಬಾ ಸುಂದರ. ಬತ್ತದ ರಾಶಿ ಪೂಜೆಯಲ್ಲಿ ಈ ಹೂವೇ ಶ್ರೇಷ್ಠ. ಬೇಸಿಗೆಯಲ್ಲಿ ಈ ಹೂವು ಬಿಟ್ಟಷ್ಟು…
ಸಾಧಕನಾಗಲು ಸುಲಭವಿಲ್ಲ, ಆದರೂ ಅಸಾಧ್ಯವಲ್ಲ. ಸ್ಪರ್ಧಾತ್ಮಕ ಜಗತ್ತಿನಲ್ಲಿ, ಯಶಸ್ಸುಗಳಿಸಲು ಅಪ್ರತಿಮ ಶ್ರಮದ ಅಗತ್ಯವಿದೆ. ನಮ್ಮ ಮಕ್ಕಳ ಮನಸ್ಸು ಕಡಿವಾಣವಿಲ್ಲದ ಕುದುರೆಯಂತೆ ದಿಕ್ಕಿಲ್ಲದೆ ಓಡುತ್ತಿದೆ. ಕಲಿಕೆಯತ್ತ ಗಮನ ನೀಡುವುದು ಅವರ ಪಾಲಿಗೆ…
೧.
ಪ್ರೀತಿಯಿರದ ಬಾಳಿಗಿಂದು ಪ್ರೇಮಿಯಾಗಲಿ ಹೇಗೆ
ನೀತಿಯಿರದ ಹೃದಯಕಿಂದು ಸ್ನೇಹಿಯಾಗಲಿ ಹೇಗೆ
ಕಡಲ ತೀರಕೆ ಹೊಡೆವ ನೀರಿಗಿಂದು ಪೆಟ್ಟಾಗದೆ ಹೇಳು
ತಡೆಯೊ ಹೇಳುವ ಮಿಲನಕಿಂದು ಜೊತೆಯಾಗಲಿ ಹೇಗೆ
ಮಿಡಿವ ಮನಸ್ಸಿಲ್ಲದಲ್ಲಿ ಬದುಕಿಂದು…
ಕೆನಡಾದಲ್ಲಿ ಕೆಲವು ತಿಂಗಳ ಹಿಂದೆ ಸಾವಿಗೀಡಾದ ಖಲಿಸ್ಥಾನವಾದಿ ಮುಖಂಡ ಹರ್ದೀಪ್ ಸಿಂಗ್ ನಿಜ್ಜರ್ ನನ್ನು ಭಾರತ ಸರಕಾರವೇ ಹತ್ಯೆ ಮಾಡಿಸಿದೆ ಎಂಬಂತಹ ಗುರುತರ ಆಪಾದನೆಯೊಂದನ್ನು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೋ ಮಾಡಿದ್ದಾರೆ. ಒಂದು ಸರಕಾರದ…
ಏನು ಯೋಚಿಸಬೇಕು ಎಂಬುದು ಅವರವರ ವಿವೇಚನೆಗೆ ಬಿಟ್ಟದ್ದು. ಆದರೆ ಹೇಗೆ ಯೋಚಿಸಬೇಕು ಎಂಬುದು ಅಧ್ಯಯನ ಚಿಂತನೆ ವಿಶಾಲತೆ ಒಳ್ಳೆಯತನಗಳ ಸಮ್ಮಿಲನವಾಗಿದ್ದರೆ ಅದು ಹೆಚ್ಚು ಪ್ರಬುದ್ದವಾಗಿರುತ್ತದೆ ಎಂದು ಅನುಭವದ ಆಧಾರದ ಮೇಲೆ ರೂಪಿತವಾದ ಸತ್ಯ ಮತ್ತು…
ನೋವಾಗುವುದು ಸಹಜವೇನೋ ಅನಿಸ್ತಾ ಇದೆ. ಎರಡು ದಿನಗಳ ಹಿಂದೆ ನಮ್ಮ ಅಂಗಳಕ್ಕೆ ಬಂದು ನಿಂತ ಗಣಪನಿಗೆ ಇಂದು ವಿದಾಯದ ಸಮಯ. ಮುದ್ದಿನಿಂದ ನೋಡಿಕೊಂಡ ಆ ಮೊಗದ ಸುಂದರ ಚೆಲುವನ ವಿಸರ್ಜಿಸಲೇಬೇಕು. ಆತ ನಮ್ಮ ಅಂಗಳದಲ್ಲಿ ನಿಂತಿರೋದು ಎಲ್ಲ ಮನಸ್ಸುಗಳು…
ಮತ್ತಷ್ಟು ಮಳೆಹನಿಗಳು ಬಾನಿಂದ ಬುವಿಯ ಒಡಲನ್ನು ಸೇರುತ್ತಾ ವಾತಾವರಣವನ್ನು ಒಂದಿಷ್ಟು ತಂಪು ಗೊಳಿಸುತ್ತಿವೆಯಲ್ಲವೇ...? ಕೊಟ್ಟೆ ಹಣ್ಣಿನ ಪರಿಚಯವನ್ನು ಮಾಡಿಕೊಂಡಿರಾ? ನಾವೆಲ್ಲ ಸಣ್ಣವರಿದ್ದಾಗ ಆಗಾಗ ಮೈ ತುರಿಸಿಕೊಂಡು ಚರ್ಮದಲ್ಲಿ ದಪ್ಪ ದಪ್ಪ…
ಕನ್ನಡ ಸಾಹಿತ್ಯಕ್ಕೊಂದು ಅಪೂರ್ವ ಕೊಡುಗೆ ಈ ಪುಸ್ತಕ. ತಮಿಳಿನ ಅಗ್ರ ಸಾಹಿತಿ ಡಾ. ಸ್ವಾಮಿನಾಥ ಅಯ್ಯರ್ ಅವರ ಆಯ್ದ ಪ್ರಬಂಧಗಳ ಈ ಸಂಕಲನವನ್ನು ಕನ್ನಡಕ್ಕೆ ಅನುವಾದಿಸಿದವರು ಬಿ.ಜಿ.ಎಲ್. ಸ್ವಾಮಿ ಅವರು.
ಮುನ್ನುಡಿಯಲ್ಲಿ ಮೂಲ ಲೇಖಕರನ್ನು ಬಿ.ಜಿ.…
ತೀ ನಂ ಶ್ರೀಕಂಠಯ್ಯ ಇವರು ಎಂ ಎ ಪದವೀಧರರು. ಇವರು ೧೯೨೭ರಿಂದಲೂ ಕಾವ್ಯ ಪ್ರಪಂಚದಲ್ಲಿ ಗಣನೀಯವಾಗಿ ಬರೆಯುತ್ತಾ ಬಂದವರು. ಇವರು ಅಂದಿನ ಮೈಸೂರು ಶಿಕ್ಷಣ ಇಲಾಖೆಯಲ್ಲಿ ದೊಡ್ದ ಅಧಿಕಾರದಲ್ಲಿದ್ದು, ತರುವಾಯ ಧಾರವಾಡ ಕರ್ನಾಟಕ ವಿಶ್ವವಿದ್ಯಾನಿಲಯದ…
‘ಯಾಬ್ಲಿ’ ಎಚ್.ಆರ್. ರಮೇಶ ಅವರ ಕಥಾಸಂಕಲನವಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; ಬದುಕಿನ ಅನೇಕ ಸಂಗತಿ ಮತ್ತು ಅನುಭವಗಳಿಗೆ ಮುಖಾಮುಖಿಯಾಗಿ ಅದನ್ನೆಲ್ಲ ಕತೆಯಲ್ಲಿ ಹಿಡಿದಿಡುವುದು ಅಸಾಧ್ಯದ ಮಾತು. ಹಿಡಿದಿಡಲು ಪ್ರಯತ್ನಪಟ್ಟರೂ…
ಕಾನೂನಾತ್ಮಕ ಮಹಿಳಾ ಸಮಾನತೆಯತ್ತ ಮತ್ತೊಂದು ಹೆಜ್ಜೆ. 12 ನೆಯ ಶತಮಾನದಲ್ಲಿ ಕರ್ನಾಟಕದ ವಚನಕಾರರ ಅನುಭವ ಮಂಟಪದ ಲಿಂಗ ಸಮಾನತೆ ಆಧಾರಿತ ಪ್ರಜಾಪ್ರಭುತ್ವದಾಶಯದ ಮುಂದುವರಿದ ಭಾಗ. ಈ ಮಸೂದೆಯ ಎರಡು ಮುಖಗಳು...
ಮಹಿಳಾ ಮೀಸಲಾತಿ ಮಸೂದೆ…
ಅದೇನು ಮುದ್ದುಮುಖ, ಪಿಳಿಪಿಳಿ ಕಣ್ಣುಗಳು, ಅಲ್ಲೇ ಕುಳಿತು ವೀಕ್ಷಿಸುತ್ತಿರಲೇಬೇಕು ಎಂದು ಬಯಸುವ ಸುಂದರವಾದ ವದನ. ಮನಸ್ಸನ್ನ ಹಾಗೆ ಸೂರೆಗೊಳಿಸುತ್ತಿದ್ದಾನೆ. ಇಷ್ಟು ಪ್ರೀತಿಯಿಂದ ಗಮನಿಸಲೇ ಇಲ್ಲ. ಕಾಲೇಜಿನ ಒಳಗೆ ಆತನ ಪ್ರತಿಷ್ಟಾಪನೆಯಾದ ಮೇಲೆ…
* ಜಗತ್ತನ್ನೇ ಗೆಲ್ಲಲು ಬೇಕಾಗಿರುವ ಏಕೈಕ ಗುಣ: ಸಚ್ಚಾರಿತ್ರ್ಯ
* ಎಲ್ಲಾ ದುರ್ದೈವಕ್ಕೆ ಕಾರಣ: ಆಲಸ್ಯ
* ನಮ್ಮ ದುರವಸ್ಥೆಗಳಿಗೆಲ್ಲಾ ಕಾರಣ: ಭೀತಿ / ಭಯ
* ಎಲ್ಲರಿಗೂ ಸಮಾನವಾಗಿ ಕೊಟ್ಟ ಸಂಪತ್ತು: ಸಮಯ
* ಸಾವಿರ ಯಜ್ಞಗಳಿಗಿಂತ ಶ್ರೇಷ್ಠ ಕರ್ಮ…
ತಾಯಿ ಕಮಲಮ್ಮ ಅಕ್ಕರೆ
ನನಗೆ ಅದು ಸವಿ ಸಕ್ಕರೆ
ಪ್ರೀತಿ ಬೆಳೆಸಿತು ಮುಗಿಲೆತ್ತರ
ಕರುಣೆ ಕಡಲು ನಿನ್ನ ಹತ್ತಿರ
ಅಪ್ಪ ನೀಡಿದ ಆಸರೆ
ವಿದ್ಯೆ ನೀಡಿದ ಸಾಗರ
ಆತನೇ ಸಹನೆ ಆಗರ
ಪ್ರೋತ್ಸಾಹದ ಉಡುಗೊರೆ
ಬಲ ಹೀನತೆಯಲ್ಲಿ ಇದ್ದಳು
ಬಲವಾಗಿ ನನಗೆ…
‘ದೇವರ ಭಯವೇ ಜ್ಞಾನದ ಆರಂಭ' ಎಂದು ನಮ್ಮ ಬಾಲ್ಯದಲ್ಲಿ ಹಿರಿಯರು ಹೇಳುತಿದ್ದ ಮಾತು. ಆದರೆ ನಮ್ಮ ಮನೆಯಲ್ಲಿ ಪರಿಸ್ಥಿತಿ ವಿಭಿನ್ನವಾಗಿತ್ತು. 'ದೇವರೆಂದರೆ ಭಯಪಡುವಂಥದ್ದೇನಿಲ್ಲ, ನಾವು ಒಳಿತಿನೆಡೆಗೆ ಹೆಜ್ಜೆಹಾಕುವಾಗ ನಮ್ಮೊಂದಿಗಿರುವ, ಸೋಲದಂತೆ…
ಎಂದಿನಂತೆ ಬೆಳಗಿನ 4 ಗಂಟೆಗೆ ಎದ್ದವನು ಅಂದಿನ ಬರಹಗಳನ್ನು ಬರೆದು Post ಮಾಡಿ 5.30 ಕ್ಕೆ ಸರಿಯಾಗಿ ಮನೆಯಿಂದ ಹೊರಟೆ. ತುಂತುರು ಹನಿಗಳ ನಡುವೆ ತೂರಿಬಂದ ತಣ್ಣನೆಯ ಗಾಳಿ ಮೈಸೋಕಿಸಿ ರೋಮಾಂಚನ ಉಂಟುಮಾಡಿತು. ಆಹ್ಲಾದಕರ ವಾತಾವರಣ ಗಿಡಮರಗಳ…