ಮಕ್ಕಳನ್ನೇ ಕೊಲ್ಲುವ ಮರ್ಯಾದೆ ಹತ್ಯೆಗಳು, ಪ್ರೀತಿಸಿ ಮದುವೆಯಾಗುವ ಬೇರೆ ಬೇರೆ ಜಾತಿಯ ಪ್ರೇಮಿಗಳನ್ನು ಕೊಂದು ಜೈಲಿಗೆ ಹೋಗುವ ಸಂಬಂಧಿಗಳೇ ಧೀರರು - ಗೌರವಸ್ತರು - ಮರ್ಯಾದಸ್ತರು, ಮದುವೆ ಮಂಟಪದಲ್ಲಿ ದುಬಾರಿ ಕಾರನ್ನು ಬಹಿರಂಗವಾಗಿ ಪ್ರದರ್ಶಿಸಿ…
ಬ್ರೆಡ್ ಹಾಳೆಗಳ ಬದಿಯನ್ನು ಕತ್ತರಿಸಿ ತೆಗೆದು ಬದಿಗಿಡಿ. ಬಿಳಿ ಭಾಗದ ಮೇಲೆ ಅರ್ಧ ಕಪ್ ನೀರು ಚಿಮುಕಿಸಿ ಬದಿಗಿಡಿ. ರವೆ, ಮೊಸರು, ಶುಂಠಿ, ಹಸಿರು ಮೆಣಸಿನಕಾಯಿ, ಕರಿಬೇವಿನ ಸೊಪ್ಪು ಮತ್ತು ಅಕ್ಕಿಹಿಟ್ಟು ಸೇರಿಸಿ ರುಬ್ಬಿ. ಬಳಿಕ ಅದಕ್ಕೆ ನೆನೆದ…
ನಮ್ಮ ಮನೆಯ ಮುಂದೆ ಬೆಳೆದ ಮರಕ್ಕೆ ಅದರ ನಾಳಿನ ಬಗ್ಗೆ ಏನೂ ಯೋಚನೆಯಿರಲಿಲ್ಲ. ಸಣ್ಣ ಬೀಜವನ್ನು ನೆಲದೊಳಗೆ ಇಟ್ಟಾಗ ತನಗೆ ಸಿಕ್ಕ ನೀರು, ಗಾಳಿಯನ್ನು ಪಡೆದುಕೊಂಡು ಬೇರುಗಳನ್ನು ಬಿಡುವುದಕ್ಕೆ ಆರಂಭ ಮಾಡಿತು. ಅದರೊಳಗೆ ಚಿಗುರು ಮೂಡಿತು. ಹಾಗೆ…
ಸಂಶೋಧನೆಗಳು ಹೇಗೆ ಘಟಿಸುತ್ತವೆ ಎಂಬುದೇ ಕೌತುಕ. ಅನೇಕ ಬಾರಿ ಅವಶ್ಯಕತೆಗಳು ಅನ್ವೇಷಣೆಗೆ ಅನಿವಾರ್ಯವಾಗುತ್ತವೆ. ಅಮೋನಿಯಂ ತಯಾರಿಕೆಯನ್ನು ಹೇಬರ್ ಕಂಡುಹಿಡಿಯಲು ಅದೇ ಕಾರಣ. ಇನ್ನೊಮ್ಮೆ ಕುತೂಹಲಗಳೇ ಅನ್ವೇಷಣೆಗೆ ಕಾರಣವಾಗುತ್ತವೆ. ಜೇಮ್ಸ್…
ಕ್ಕಷಿ ಯೋಗ್ಯ ಮಣ್ಣು ಎಂದರೆ ಅದು ಸಾವಯವ ವಸ್ತುಗಳ ಸೇರಿಕೆಯಿಂದ ಉಂಟಾದ ಮಣ್ಣು. ಎಲ್ಲಾ ಮಣ್ಣಿನಲ್ಲೂ ಸಾವಯವ ಅಂಶ ಇರುವುದಿಲ್ಲ. ನೆಲದ ಆಡಿ ಭಾಗದ ಜೇಡಿ( ಶೇಡಿ) ಮಣ್ಣಿನಲ್ಲಿ ಯಾವುದೇ ಸಾವಯವ ಅಂಶ ಇಲ್ಲದ ಕಾರಣ ಅದು ಕೃಷಿ ಬಳಕೆಗೆ…
ನಿವೃತ್ತ ಮುಖ್ಯ ಶಿಕ್ಷಕಿ ಹಾಗೂ ಲೇಖಕಿಯಾಗಿರುವ ರತ್ನಾ ಕೆ ಭಟ್ ಅವರು ‘ಸೂರ್ಯೋದಯ’ ಎನ್ನುವ ನೂತನ ಕೃತಿಯನ್ನು ಹೊರತಂದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪ್ರತೀ ದಿನ ಬರೆಯುತ್ತಿದ್ದ ಸುವಿಚಾರಗಳನ್ನು ಸಂಗ್ರಹಿಸಿ ಈ ಅಮೂಲ್ಯವಾದ ಸಂಕಲನವನ್ನು…
ಕಷ್ಟಪಟ್ಟು ದುಡಿದ ದುಡ್ಡಿನಲ್ಲಿ ಜೀವನ ಸಾಗಿಸಲು ಸಾಧ್ಯವಾಗುತ್ತಿಲ್ಲ. ಒಳ್ಳೆಯ ರೀತಿಯಲ್ಲಿ ಸಂಪಾದನೆ ಮಾಡಿದ, ಪ್ರಾಮಾಣಿಕ ಹಣ ಯಾವುದಕ್ಕೂ ಸಾಲುತ್ತಿಲ್ಲ. ಹೀಗೊಂದು ವಾಸ್ತವ ಬದುಕು ಮತ್ತು ಚಿಂತನೆ ಹಲವರ ಗೊಣಗಾಟಕ್ಕೆ ಕಾರಣವಾಗಿದೆ. ಆಧ್ಯಾತ್ಮಿಕ…
ಇದು ಸುಮಾರು 650 ಪುಟಗಳ ಕಾದಂಬರಿ. archive.org ತಾಣದಲ್ಲಿ ಇದೆ. https://archive.org/details/unset0000unse_b4c3 ಈ ಕೊಂಡಿಯನ್ನು ಕ್ಲಿಕ್ಕಿಸಿ ಇಳಿಸಿಕೊಳ್ಳಬಹುದು ಮತ್ತು ಓದಬಹುದು. ಅವರು ಜ್ಞಾನಗಂಗೋತ್ರಿ ಸಂಪುಟಗಳ…
ನೀನ್ಯಾಕೆ ನನ್ನ ಮುಂದೆ ಬಂದು ನಿಂತಿದ್ದೀಯಾ? ಪ್ರತಿದಿನವೂ ನಾನು ನಿನಗೆ ಹೂವನ್ನ ನೀಡಬೇಕು? ನೀನು ಅದನ್ನು ತೆಗೆದುಕೊಂಡು ಹೋಗಿ ನಿನಗೆ ಬೇಕಾದಲ್ಲಿ ಅಲಂಕಾರವನ್ನು ಮಾಡಬೇಕು. ಅದರಿಂದ ನೀನು ಸಂಭ್ರಮ ಪಡಬೇಕು. ಒಂದು ದಿನವೂ ನೀನು ನೀರು ಹಾಕುವ…
ಫ್ಯಾಶನ್ ಫ್ರುಟ್‌ನ ರಸ ತೆಗೆದು ನೀರು, ಸಕ್ಕರೆ ಸೇರಿಸಿ ಕದಡಿ. ಕಾಳುಮೆಣಸಿನ ಪುಡಿ, ಏಲಕ್ಕಿ ಪುಡಿ, ಶುಂಠಿ ರಸ ಸೇರಿಸಿ ಕುಡಿಯಿರಿ. ಪ್ಯಾಶನ್ ಫ್ರುಟ್ `ಎ' ಮತ್ತು `ಸಿ' ಜೀವಸತ್ವ ಹೊಂದಿದೆ.
- ಸಹನಾ ಕಾಂತಬೈಲು, ಮಡಿಕೇರಿ
ಇಂದು ಪಾತಂಜಲ ಯೋಗ ಸೂತ್ರದ ಮೂರನೇ ಪಾದದಲ್ಲಿ ಸಂಯಮ ಎನ್ನುವ ಪದ ಬರುತ್ತದೆ. ಸಂಯಮ ಎಂದರೆ ನಾವು ತಿಳಿದ ಸಂಯಮ ಅಲ್ಲ. ಧ್ಯಾನ, ಧಾರಣ ಮತ್ತು ಸಮಾಧಿಯನ್ನು ಒಟ್ಟಿಗೆ ಸಂಯಮ ಎಂದು ಕರೆದನು. ಯಾವುದೇ ಜೀವಂತ ವಸ್ತು ಇರಲಿ, ಅದು ವಿಕಾಸವಾಗುವ ಸಾಮರ್ಥ್ಯ…
ಗಂಡು -- ಓ ಸಖಿಯೆ ನಿನ್ನ ಒಲವಿಗಾಗಿ ಹಂಬಲಿಸುತ್ತಿರುವೆ
ಬಳಿ ಬಂದು ಕೈಹಿಡಿದು ಪ್ರೀತಿ ಕೊಡಲಾರೆಯಾ ||ಪ||
ತೇಲಿ ಬಿಡೇ ತೇಲಿ ಬಿಡೇ ತೇಲಿ ಬಿಡೇ
ಒಲವಿನಲ್ಲಿ ನನ್ನನೆಂದು ತೇಲಿಬಿಡೇ
ಬಾಳ ದೋಣಿ ಜೀವದಲೆಲಿ ಸಾಗುತಿದೆ
ನೀನು ಬಂದು ನನಗೆಯಿಂದು…
ಇಂದಿನ ಬೆಳಗು ಎಂದಿನಂತೆ ಇಲ್ಲ, ಏನೋ ಉತ್ಸಾಹ ಏನೋ ಉಲ್ಲಾಸ. ಅಲಾರಾಂ ಶಬ್ದವೇ ತುಂಬಾ ತುಂಬಾ ನಾದಮಯವಾಗಿದೆ. ಹೊರಗಿನ ಹಕ್ಕಿಗಳ ಚಿಲಿಪಿಲಿ ಗಾನ, ಕೋಳಿಯ ಕೂಗು ಸಹ ಚೇತೋಹಾರಿಯಾಗಿದೆ. ದೇವಸ್ಥಾನದ ಸುಪ್ರಭಾತ, ಮಸೀದಿಯ ಅಜಾನ್, ಚರ್ಚಿನ ಪ್ರಾರ್ಥನೆ…
ಎಂದಿನಂತೆ ಪ್ರೇಮಿಗಳ ದಿನ ಬಂದಿದೆ. ಪ್ರೇಮಿಗಳಿಗೆ ಉಲ್ಲಾಸಭರಿತ ಸಮಯ. ಕೆಲವರಿಗೆ ಆಚರಿಸುವ ಮನಸ್ಸಿಲ್ಲದಿದ್ದರೂ ತಮ್ಮ ಪ್ರೇಮಿಯನ್ನು ಮೆಚ್ಚಿಸುವ ಅನಿವಾರ್ಯತೆ. ಪ್ರೇಮವ್ಯಕ್ತತೆಗೆ ಒಂದು ದಿನ. ಇದು ಫೆಬ್ರವರಿ 7ರಂದು ಪ್ರಾರಂಭವಾಗಿ ಫೆಬ್ರವರಿ…
ಬೆಕ್ಕೊಂದು ದಾರಿ ಕಾಣದೆ ಅತ್ತಿಂದಿತ್ತ ಓಡಾಡ್ತಾ ಇತ್ತು. ಎಲ್ಲರನ್ನೂ ಕಂಡರೆ ಭಯ, ಮನೆಯಿಂದ ಹೊರಗೆ ಬಂದಾಗಿತ್ತು. ಭಯದಲ್ಲಿ ಕಣ್ಣು ಮುಚ್ಚಿ ದಿಕ್ಕು ಕಾಣದೆ ಓಡುತ್ತಾ ಅಪರಿಚಿತ ಸ್ಥಳಕ್ಕೆ ಬಂದು ನಿಂತುಬಿಟ್ಟಿತ್ತು. ಯಾರನ್ನು ನಂಬೋದು, ಯಾರ…
ಒಂಟೆ ಬೇಕಾ?
ಒಬ್ಬ ಅರಬನೊಂದಿಗೆ ಸೂರಿ ಬರಿಗಾಲಿನಲ್ಲಿ ಮರುಭೂಮಿಯ ಮೇಲೆ ಹೋಗುತ್ತಿದ್ದ. ಅರಬ್ಬಿ ‘ಕುಳಿತುಕೊಳ್ಳಲು ಒಂಟೆ ಬೇಕಾ?’ ಕೇಳಿದ. ಅವನು ಬೇಡವೆಂದ. ಅರಬ್ಬಿಗೆ ಕೋಪ ಬಂತು. ಒಂಟೆಯಿಂದ ಕೆಳಗಿಳಿದು ಸೂರಿಗೆ ಹೊಡೆಯಲು ಹೋದ. ಅವನು ಅರಬ್ಬಿಯ…
ಬೆಂಗಳೂರಿನಲ್ಲಿ ಮೂರು ದಿನಗಳ ಕಾಲ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶ ‘ಇನ್ ವೆಸ್ಟ್ ಕರ್ನಾಟಕ’ ಯಶಸ್ವಿಯಾಗಿ ಸಂಪನ್ನಗೊಂಡಿದ್ದು, ೧೦.೨೭ ಲಕ್ಷ ಕೋಟಿ ರೂ. ಹೂಡಿಕೆಗೆ ಸಂಬಂಧಿಸಿದ ಒಡಂಬಡಿಕೆಗಳು ಆಗಿರುವುದು ರಾಜ್ಯದ ಕೈಗಾರಿಕಾ ಅಬಿವೃದ್ಧಿ…
ಸಿ ಆರ್ ನವೀನ್ ಸಂಪಾದಕತ್ವದ ‘ಜನಮಿತ್ರ’
ಚಿಕ್ಕಮಗಳೂರು ಜಿಲ್ಲೆಯಿಂದ ಕಳೆದ ಹತ್ತು ವರ್ಷಗಳಿಂದ ಪ್ರಾದೇಶಿಕ ದಿನ ಪತ್ರಿಕೆಯಾಗಿ ಪ್ರಕಟವಾಗುತ್ತಿರುವ ಜನಮಿತ್ರ. ಪತ್ರಿಕೆಯ ಪ್ರಧಾನ ಸಂಪಾದಕರು, ಮುದ್ರಕರು ಮತ್ತು ಪ್ರಕಾಶಕರಾಗಿ ಎಚ್ ಬಿ ಮದನಗೌಡ…