ಸಂಧ್ಯಾಕಾಲದಲ್ಲಿ ಮರೆಗೆ ಸರಿಯುತ್ತಿರುವ ಅಪ್ಪ !
1 day ago - ಬರಹಗಾರರ ಬಳಗಅಪ್ಪನಿಗೆ ಹಸಿವಾಗುತ್ತಿದೆ. ಹೊತ್ತು ದಾಟಿದೆ. ಕೇಳೋಣವೆಂದರೆ ಸೊಸೆಯ ಭಯ. ಅಡುಗೆ ಕೋಣೆಯಲ್ಲಿ ಸೊಸೆಯ ಗೊಣಗಾಟ ಬೇರೆ. ಕಡೆಗೂ ತಟ್ಟೆಯಲ್ಲಿ ಅನ್ನ ಸಾರು ತಂದು ಅಪ್ಪನ ಮುಂದೆ ಜೋರಾಗಿ ಕುಕ್ಕಿದಳಾಕೆ. ಸ್ವಲ್ಪ ಸಾರು ಮೈಮೇಲೆ ಚೆಲ್ಲಿದರೂ, ವಿರೋಧಿಸುವ ಶಕ್ತಿ ಅವರಲ್ಲಿರಲಿಲ್ಲ. ಮಗನ ಕಣ್ಣೆದುರೇ ಇವೆಲ್ಲಾ ನಡೆಯುತ್ತಿದ್ದರೂ ಅಸಹಾಯಕನಾಗಿದ್ದ. ಬಳಿ ಬಂದು ಅಪ್ಪನನ್ನು ಅಪ್ಪಿಕೊಂಡು ಕಣ್ಣೀರು ಸುರಿಸಿದ. ಅಪ್ಪನಿಗೂ ಆತನ ಅಸಹಾಯಕತೆಯ ಅರಿವಿತ್ತು. ಮಗನ ಬೆನ್ನು ಸವರಿ ಸಮಾಧಾನ ಪಡಿಸುತ್ತಿದ್ದರು ಅಪ್ಪ.
ಸೊಸೆ ಮನಗೆ ಕಾಲಿಟ್ಟು ವರ್ಷವಿನ್ನೂ ಪೂರ್ತಿಯಾಗಿರಲಿಲ್ಲ. ಅದಾಗಲೇ ತನ್ನ ಜೀವನಾಡಿಯಾಗಿದ್ದ ಮಡದಿ ಇಹಲೋಕ ತ್ಯಜಿಸಿದ್ದಳು. ಅಲ್ಲಿ ತನಕ ಯಾವುದೇ ಸಮಸ್ಯೆಯಿಲ್ಲದೆ ಸುಖವಾಗಿದ್ದ ಅಪ್ಪನಿಗೆ ಬದುಕಿನ ಕರಾಳ ಮುಖ ಗೋಚರಿಸತೊಡಗಿತು. ಸೊಸೆಯ ದಿನನಿತ್ಯದ ಮಾನಸಿಕ ಹಾಗೂ ದೈಹಿಕ ಹಿಂಸೆಯಿಂದ ಆ ಮುದಿ ಜೀವ ಮುದುಡಿ ಹೋಗಿತ್ತು. ಅಂದು ತನ್ನ ಒಂದಷ್ಟು ಬಟ್ಟೆ ಚೀಲದಲ್ಲಿ ತುಂಬಿಸಿ ಮಗನ ಮುಂದೆ ನಿಂತು "ಮಗ ನನ್ನ ಸಂಬಂಧಿಯೊಬ್ಬರು ನನ್ನನ್ನು ಮನೆಗೆ ಕರೆಯುತ್ತಿದ್ದಾರೆ, ಸ್ವಲ್ಪ ದಿನ ಹೋಗಿ ಬರುತ್ತೇನೆ" ಎಂದವರೇ ಮಗನನ್ನು ಅಪ್ಪಿಕೊಂಡರು. ಮಗನೂ ಅಪ್ಪನಿಗೆ ಹೆಂಡತಿಯಿಂದಾಗುತ್ತಿದ್ದ ಕಿರುಕುಳದಿಂದ ಬೇಸತ್ತಿದ್ದ. "ಆಗಲಿ ಅಪ್ಪಾ, ಹೋಗಿ ಬನ್ನಿ" ಅಂದ. ಸೊಸೆ ದೂರದಲ್ಲಿ ನೋಡುತ್ತಾ ಮನಸ್ಸಲ್ಲೇ ಖುಷಿಪಡುತ್ತಿದ್ದಳು.
ಸಂಬಂಧಿಕರ ಮನೆಗೆಂದು ಹೊರಟ ಅಪ್ಪ ಯಾವುದೋ ಪೇಟೆಯ ಬೀದಿಯಲ್ಲಿ ಭಿಕ್ಷೆ ಬೇಡಿ ಬದುಕುತ್ತಿದ್ದ ವಿಷಯ ಮಗನಿಗೆ ತಿಳಿಯಲೇ ಇಲ್ಲ. ಇದೊಂದು ಕತೆಯಾಗಿ ಕಂಡರೂ ವಾಸ್ತವವಾಗಿ ಅಪ್ಪಂದಿರ ಪರಿಸ್ಥಿತಿ ಬಿಗಡಾಯಿಸುತ್ತಿರುವು ದಂತೂ ಸತ್ಯ. ಇತ್ತೀಚೆಗೆ ಆಸ್ತಿ ವಿಷಯಕ್ಕೆ ಸಂಬಂಧಿಸಿ ಮಗ ಅಪ್ಪನನ್ನು ಕೈಯಿಂದಲೇ ಹೊಡ… ಮುಂದೆ ಓದಿ...