ಪ್ರಜಾಪ್ರಭುತ್ವ ವ್ಯವಸ್ಥೆ ಎಂದರೆ ಪ್ರಜೆಗಳಿಗೆ ಪರಮಾಧಿಕಾರ. ಇಲ್ಲಿ ರಚನೆಯಾಗುವುದು ಜನರದ್ದೇ ಸರಕಾರ. ಜನರು ಆರಿಸಿಕೊಳ್ಳುವ ಪ್ರತಿನಿಧಿಗಳು ಜನರ ಪರವಾಗಿ ಕಾನೂನುಗಳನ್ನು ರಚಿಸುತ್ತಾರೆ. ಶಿಸ್ತುಪಾಲನೆ ಪ್ರಜಾಪ್ರಭುತ್ವದ ಜೀವಾಳ. ನೈತಿಕ ಹಕ್ಕಿನ ತಳಹದಿ, ಸಾಮಾಜಿಕ ಬದ್ಧತೆ, ಸಮಾನತೆ ಇಲ್ಲದೆ ಜಗತ್ತಿನ ಯಾವುದೇ ದೇಶದ ಪ್ರಜಾಪ್ರಭುತ್ವವೂ ಬದುಕಿರಲಾರದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಿಗದಿತ ಕಾಲಕ್ಕೆ ನಿಷ್ಪಕ್ಷಪಾತ, ಮುಕ್ತ ಚುನಾವಣೆಗಳು ನಡೆಯಬೇಕು. ಹೀಗೆ ನಡೆಯುವ ಚುನಾವಣೆಗಳಲ್ಲಿ ಬಹುಮತ ಪಡೆದ ಪಕ್ಷಗಳು ಸಹಜವಾಗಿ ಅಧಿಕಾರ ಹಿಡಿಯುತ್ತವೆ.
ಭಾರತದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಮಾತ್ರವಲ್ಲದೆ ಆಡಳಿತವನ್ನು ಸುಗಮಗೊಳಿಸಲು ಮೂರು ಹಂತದ ಪಂಚಾಯತ್ ರಾಜ್ ವ್ಯವಸ್ಥೆ ಜಾರಿಯಲ್ಲಿದೆ. ಗ್ರಾಮ, ತಾಲೂಕು ಮತ್ತು ಜಿಲ್ಲ ಪಂಚಾಯತಿ, ಪಟ್ಟಣ ಪಂಚಾಯತಿ, ಪುರಸಭೆ, ನಗರ ಸಭೆ, ಮಹಾನಗರ ಪಾಲಿಕೆಗಳ ಮುಖಾಂತರ ಅಧಿಕಾರ ವಿಕೇಂದ್ರಿಕರಣ ಮಾಡಲಾಗಿದೆ. ಈ ವಿಕೇಂದ್ರೀಕರಣ ವ್ಯವಸ್ಥೆಯಲ್ಲೂ ಅಧಿಕಾರ ಬರೀ ಉಳ್ಳವರ ಪಾಲಾಗದೆ ಎಲ್ಲ ಜಾತಿಗಳಿಗೂ ಅವಕಾಶ ಸಿಗಬೇಕು ಎಂಬ ಕಾರಣಕ್ಕೆ ಮೀಸಲಾತಿ ವ್ಯವಸ್ಥೆಯೂ ಇದೆ. ಆದರೆ, ಎಲ್ಲ ಪಕ್ಷಗಳಲ್ಲೂ ಆವರಿಸಿಕೊಂಡಿರುವ ಅಧಿಕಾರದ ಹಪಹಪಿ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನೇ ಅಣಕಿಸುವಂತಿದೆ.
ಕೇಂದ್ರ ಮತ್ತು ರಾಜ್ಯಗಳಲ್ಲಿ ಒಂದೇ ಪಕ್ಷ ಬಹುಮತ ಗಳಿಸಿ ಅಧಿಕಾರ ಹಿಡಿಯುವ ದಿನಗಳು ದೂರವಾದಾಗ ಸಮ್ಮಿಶ್ರ ಸರಕಾರದ ಪರಿಕಲ್ಪನೆ ಹಲವು ಅಪಸವ್ಯಗಳಿಗೆ ಕಾರಣವಾಗಿದೆ. ಅಧಿಕಾರ ಹಿಡಿಯುವ ಏಕೈಕ ಕಾರಣಕ್ಕೆ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗಾಳಿಗೆ ತೂರಿ ಆಮಿಷಗಳನ್ನು ಒಡ್ಡಿ ಸಂಸದರು, ಶಾಸಕರ ಖರೀದಿ, ಕುದುರೆ ವ್ಯಾಪಾರ, ರೆಸಾರ್ಟ್ ರಾಜಕೀಯ, ಸಣ್ಣಪುಟ್ಟ ಪಕ್ಷಗಳಿಗೆ ಬೆದರಿಕೆ, ತನ…
ಮುಂದೆ ಓದಿ...