June 2021

 • June 28, 2021
  ಬರಹ: ಬರಹಗಾರರ ಬಳಗ
  ತಂದಾನಿ ತಾನೋ ತಂದಾನೋ/ ತಾನಿ ತಂದಾನೋ ತಂದಾನೋ/ ತಂದನ್ನ ತಾನನ ತಂದಾನೋ........//   ಮೂಡಣ ದಿಕ್ಕಲ್ಲಿ ರಂಗು ಚೆಲ್ಯಾನ/ ಸೂರ್ಯ ದ್ಯಾವ್ರು ಮ್ಯಾಲೆ ಬಂದಾನ/ ಅಣ್ಣಯ್ಯಾ/ಚುಮುಚುಮು ಚಳಿಯ ದೂರಮಾಡ್ಯಾನ//   ಹಕ್ಕಿಗಳ ಚಿಲಿಪಿಲಿ ಸುತ್ತಲು ಕೇಳೈತೆ…
 • June 27, 2021
  ಬರಹ: ಬರಹಗಾರರ ಬಳಗ
  ಮಳೆ,ಗಾಳಿ,ಚಳಿ, ಬಿಸಿಲು ಮರದ ರಂಬೆ,ಕೊಂಬೆ ಬೀಸಲು ಭುವಿಗೆ ಚಾಮರ ಹಿಡಿದು ನಿಂತವು ಭುವಿಯಡಿಯಲ್ಲಿ ಬೇರಿನಲ್ಲಿ ಕುಂತವು.   ಬೀಜದಿಂದ ಚಿಮ್ಮಿ ಚಿಗುರಿ ಬೆಳೆದು ಭುವಿಯ ಸಾರ ಹೀರಿ ಹೀರಿ ನಲಿದು ಜಿಗುರು ಕಾಂಡ,ಕುಡಿಗಳಿಗೆ ಹಂಚಿತು ಸಾರ್ಥಕತೆಯಲ್ಲಿ…
 • June 27, 2021
  ಬರಹ: Shreerama Diwana
  ಸಹಜವಾಗುತ್ತಿರುವ ಕೊರೋನಾ ಆತಂಕ, ಅಸಹಜವಾಗುತ್ತಿರುವ ಬದುಕಿನ ಪಯಣ. ಸಂಪೂರ್ಣ ವ್ಯಾಪಾರ ವಹಿವಾಟುಗಳು ಮುಕ್ತವಾದ ಬೆನ್ನಲ್ಲೇ ನಿಧಾನವಾಗಿ ಆರ್ಥಿಕ ಸಂಕಷ್ಟಗಳು ಭುಗಿಲೇಳುತ್ತಿವೆ. ಲಾಕ್ ಡೌನ್ ಇದ್ದ ಕಾರಣದಿಂದಾಗಿ ಅಷ್ಟಾಗಿ ಕಾಡದಿದ್ದ ಸಮಸ್ಯೆಗಳು…
 • June 26, 2021
  ಬರಹ: addoor
  ಹಂಗೆರಿ ದೇಶದಲ್ಲಿ ಫ್ರಾಂಜ್ ಎಂಬ ಬಡ ರೈತ ಪತ್ನಿ ಮರಿಯಾಳೊಂದಿಗೆ ವಾಸ ಮಾಡುತ್ತಿದ್ದ. ಅವರ ಪುಟ್ಟ ಮನೆ ಕಾಡಿನ ಅಂಚಿನಲ್ಲಿತ್ತು. ಅವರ ಬಳಿ ಹಣವೇ ಇರಲಿಲ್ಲ. ತಮ್ಮ ಪುಟ್ಟ ತೋಟದಲ್ಲಿ ಬೆಳೆಸಿದ ಧಾನ್ಯತರಕಾರಿಗಳೇ ಅವರ ಆಹಾರ. ಅವರು ಸಂತೋಷದಿಂದಲೇ…
 • June 26, 2021
  ಬರಹ: Ashwin Rao K P
  ಆಕಾಶ ಬುಟ್ಟಿ ದೀಪಾವಳಿ ಹಬ್ಬದ ಹಿಂದಿನ ದಿನ ನನ್ನ ತಮ್ಮ ಪೇಟೆಯಿಂದ ಆಕಾಶ ಬುಟ್ಟಿಯನ್ನು ತಂದು ಮನೆಯ ಮುಂದೆ ಹಾಕಿ ‘ಆಕಾಶ ಬುಟ್ಟಿ ನೋಡಲು ಎಲ್ಲ ಬನ್ನಿ' ಎಂದಾಗ ನಾವೆಲ್ಲ ಹೊರಗೆ ಬಂದು ನೋಡಿ ಚೆನ್ನಾಗಿದೆ ಎಂದೆವು. ಆಗ ತಮ್ಮನ ಮಗಳು ಆವಂತಿ…
 • June 26, 2021
  ಬರಹ: Ashwin Rao K P
  ಮಧುಮಿತಾ ಶುಕ್ಲಾ ಹತ್ಯೆ-ದಿ ಮರ್ಡರ್ ಮಿಸ್ಟ್ರಿ ಎಂದು ಮುಖಪುಟದಲ್ಲೇ ಮುದ್ರಿಸುವ ಮೂಲಕ ರವಿ ಬೆಳಗೆರೆಯವರು ಪುಸ್ತಕದ ಹೂರಣವನ್ನು ತೆರೆದಿಡುವ ಪ್ರಯತ್ನ ಮಾಡಿ ಕುತೂಹಲ ಕೆರಳಿಸಿದ್ದಾರೆ. ತಮ್ಮ ಬೆನ್ನುಡಿಯಲ್ಲಿ ಅವರೇ ಬರೆದಿರುವಂತೆ ‘…
 • June 26, 2021
  ಬರಹ: Shreerama Diwana
  ಊಟ, ಬಟ್ಟೆ, ವಸತಿ ಸಾಮಾನ್ಯ ಅವಶ್ಯಕತೆಗಳು. ಶಿಕ್ಷಣ, ಉದ್ಯೋಗ, ಕುಟುಂಬ ಮತ್ತಷ್ಟು ಪೂರಕ ನಿರೀಕ್ಷೆಗಳು, ಪ್ರೀತಿ, ಪ್ರಣಯ, ರುಚಿ ಸಾಮಾನ್ಯ ದೈಹಿಕ ಬೇಡಿಕೆಗಳು. ಹಣ ಅಧಿಕಾರ ಪ್ರಚಾರ ಮತ್ತಷ್ಟು ಪೂರಕ ನಿರೀಕ್ಷೆಗಳು. ಈ ಅಂಶಗಳ ಮೇಲೆ ಮನುಷ್ಯ…
 • June 26, 2021
  ಬರಹ: ಬರಹಗಾರರ ಬಳಗ
  ಸಾಹಿತ್ಯ ಪ್ರಪಂಚ ಬಹಳ ವಿಶಾಲವಾದ ಬಯಲು. ಅಲ್ಲಿ ಗಿಡಮರ, ಬೆಟ್ಟ ಗುಡ್ಡ, ನದಿ ಸಮುದ್ರ, ಆಕಾಶ, ಭೂಮಿ, ಗಾಳಿ, ನೀರು ಎಲ್ಲವೂ ಇದೆ.ಎಲ್ಲವನ್ನೂ ಅರಿತು,ಕಲೆತು, ಕಲಿತು  ಬರೆಯುವ ಸಾಹಿತಿಗಳು ಎಷ್ಟಿದ್ದಾರೆ ಎಂಬುದೇ ಪ್ರಶ್ನೆ. ಕೀರ್ತಿ ಮತ್ತು ಹಣ…
 • June 26, 2021
  ಬರಹ: ಬರಹಗಾರರ ಬಳಗ
  ಕಳೆದ ಜೂನ್ ೨೪ರಂದು ಕಾರ ಹುಣ್ಣಿಮೆಯ ಆಚರಣೆ ಕೋವಿಡ್ ಕಾರಣದಿಂದಾಗಿ ಸರಳವಾಗಿ ರಾಜ್ಯದ ವಿವಿದೆಡೆ ನಡೆದಿದೆ. ರಾಜ್ಯದ ಉತ್ತರ ಭಾಗದಲ್ಲಿ "ಕಾರ ಹುಣ್ಣಿಮೆ" ಮಹೋತ್ಸವ ಹಲವು ವಿಶಿಷ್ಟ ಹಾಗೂ ವೈಶಿಷ್ಟ್ಯಪೂರ್ಣ ಇತಿಹಾಸ ಹೊಂದಿದೆ.⁣ ಯುಗಾದಿಯ ನಂತರ…
 • June 26, 2021
  ಬರಹ: ಬರಹಗಾರರ ಬಳಗ
  ಬದುಕು ಭಾವದ ಬಂಧ ಕಳಚುತ ದೂರ ತೀರವ ಸೇರು ನೀ ಕಂಡ ಕನಸಿನ ಬೆನ್ನು ಹತ್ತಿ ಸುಕೃತ ಫಲವನು ಕಾಣು ನೀ   ಅಂಧಕಾರದ ಹಾದಿ ತುಂಬಿದೆ ಜ್ಞಾನ ಕರ್ಣದ ಬೆಳಕಲಿ ಪರಮ ಸುಜ್ಞಾನ ಫಲಿಸಿದೆ ಎದೆಯ ಮಿಡಿತದ ನುಡಿಯಲಿ   ಆತ್ಮವೆಲ್ಲಿದೆ ಜೀವವೆಲ್ಲಿದೆ…
 • June 25, 2021
  ಬರಹ: Ashwin Rao K P
  ನೀವು ಹಳೆಯ ಕನ್ನಡ ಚಿತ್ರಗಳ ಅಭಿಮಾನಿಯಾಗಿದ್ದರೆ ನಿಮಗೆ ಖಂಡಿತವಾಗಿಯೂ ಆರ್.ನಾಗೇಂದ್ರ ರಾವ್ (ಆರ್ ಎನ್ ಆರ್) ಅವರ ಪರಿಚಯವಿದ್ದೇ ಇರುತ್ತದೆ. ಕನ್ನಡದ ಮೊದಲ ವಾಕ್ಚಿತ್ರ ‘ಸತಿ ಸುಲೋಚನ' ದಲ್ಲಿ ರಾವಣನ ಪಾತ್ರ ಮಾಡಿದ ವ್ಯಕ್ತಿಯೇ ಇವರು. ಆ…
 • June 25, 2021
  ಬರಹ: Ashwin Rao K P
  ಆಸ್ತ್ಮಾ ಅಥವಾ ಅಸ್ತಮಾ ಒಂದು ಭೀಕರ ತೊಂದರೆ. ಈ ಸಮಸ್ಯೆಯಿಂದ ನಮಗೆ ಸರಾಗವಾಗಿ ಉಸಿರಾಡಲು ಬಹಳ ಸಮಸ್ಯೆಯಾಗುತ್ತದೆ. ಆಸ್ತ್ಮಾ ನಿವಾರಣೆಗೆ ಸರಳ ಯೋಗ ಚಿಕಿತ್ಸಾ ಮಾರ್ಗದರ್ಶಿಯೇ-ಗುಡ್ ಬೈ ಆಸ್ತ್ಮಾ. “ ಸ್ವಚ್ಚಂದವಾಗಿ, ನಿರಾತಂಕವಾಗಿ…
 • June 25, 2021
  ಬರಹ: Shreerama Diwana
  ಮನಸುಗಳ, ಗುಣ ನಡತೆಗಳ, ವ್ಯವಹಾರಗಳ, ಸಂಬಂಧಗಳ ಮತ್ತು ಆಶಯಗಳ ಶುದ್ದತೆಗೆ ಮನಸ್ಸುಗಳ ಅಂತರಂಗದ ಚಳವಳಿಯ ಕಳಕಳಿಯ ಮನವಿ ಮತ್ತು ಪ್ರೀತಿಯ ಕರೆ........ ಆತ್ಮೀಯರೆ,  ನೀವು ಯಾರೇ ಆಗಿರಿ, ಎಲ್ಲೇ ಇರಿ, ಯಾವ ವಯಸ್ಸು, ಲಿಂಗ, ಧರ್ಮ ಭಾಷೆಯವರೇ ಆಗಿರಿ…
 • June 25, 2021
  ಬರಹ: ಬರಹಗಾರರ ಬಳಗ
  ನಮ್ಮ ಕಣ್ಣ ಮುಂದೆ ಘಟಿಸಿದಂಥ ಹಲವಾರು ಘಟನೆಗಳೋ, ವಿಷಯಗಳೋ ಇರಬಹುದು. ಓರ್ವ ಮನೆಯ ಯಜಮಾನ ಅನಿಸಿಕೊಂಡವನು ಹಗಲಿರುಳು ತನ್ನವರಿಗಾಗಿ ಹೋರಾಟ ಮಾಡ್ತಾನೆ. ಪತ್ನಿಗಾಗಿ, ಮಕ್ಕಳಿಗಾಗಿ, ಹೆತ್ತವರಿಗಾಗಿ ಕಷ್ಟಪಡುವನು. ಧಾರಾಳ ಇದ್ದವನಿಗೆ ತೊಂದರೆಯಿಲ್ಲ…
 • June 25, 2021
  ಬರಹ: ಬರಹಗಾರರ ಬಳಗ
  ಮನ ಮನದ ಒಳಗೆ ಕನ ಕನಸು ಮೂಡಿ ಮಿರ ಮಿರನೆ ಮಿಂಚಿ ಮಿನುಗೆ ಗುಡಿ ಗುಡಿಯಲಿಂದು ಗಣ ಗಣನೆ ಗಂಟೆ ಹೊಡೆ ಹೊಡೆದು ಶಬ್ದ ಮೊಳಗೆ   ಮತ ಮತದ ಜೊತೆಗೆ ಮನ ಮನವನಿಟ್ಟು ಖುಷಿ ಖುಷಿಯಲೆಂದು ಸಾಗಿ ಕತೆ ಕತೆಯ ಹಾಡು ಸವಿ ಸವಿಯ ನಡೆಗೆ ನನ ನನಸು ಬಂತು ಕೂಗಿ  
 • June 25, 2021
  ಬರಹ: Kavitha Mahesh
  1. ಯಾರಿಗಾದರೂ 2ಕ್ಕಿಂತ ಹೆಚ್ಚು ಬಾರಿ ಫೋನ್ ಕರೆ ಮಾಡಬೇಡಿ. ನಿಮ್ಮ ಕರೆಯನ್ನು ಅವರು ಸ್ವೀಕರಿಸುತ್ತಿಲ್ಲವೆಂದರೆ, ಅವರಿಗೆ ಯಾವುದೋ ಅಗತ್ಯ ಕೆಲಸವಿದೆ ಎಂದು ತಿಳಿಯಿರಿ. 2.   ಯಾರಿಂದಲಾದರೂ ಹಣ ಪಡೆದಿದ್ದರೆ ಅವರು ನೆನಪಿಸುವ ಅಥವಾ ಕೇಳುವ…
 • June 24, 2021
  ಬರಹ: Ashwin Rao K P
  ನೋಬೆಲ್ ಪುರಸ್ಕೃತ ಖ್ಯಾತ ಕವಿ ರವೀಂದ್ರನಾಥ ಠಾಕೂರ್ (ಟಾಗೋರ್) ಇವರು ಹಲವಾರು ಸಣ್ಣ ಕಥೆಗಳನ್ನೂ ಬರೆದಿದ್ದಾರೆ ಎಂಬ ವಿಚಾರ ಬಹುತೇಕರಿಗೆ ತಿಳಿದಿಲ್ಲ. ಇವರ ಹನ್ನೆರಡು ಕಥೆಗಳನ್ನು ಸಂಗ್ರಹಿಸಿ ‘ಹಸಿದ ಕಲ್ಲು ಮತ್ತು ಇತರ ಕಥೆಗಳು' ಎಂಬ…
 • June 24, 2021
  ಬರಹ: addoor
  ೮೯.ಶ್ರವಣಬೆಳಗೊಳದ ಜಗತ್ಪ್ರಸಿದ್ಧ ಗೊಮ್ಮಟೇಶ್ವರ ಕರ್ನಾಟಕದ ಹಾಸನ ಜಿಲ್ಲೆಯ ಶ್ರವಣಬೆಳಗೊಳ ಜೈನರ ಪ್ರಖ್ಯಾತ ಯಾತ್ರಾಸ್ಥಳ. ಇಲ್ಲಿನ ೩,೫೦೦ ಅಡಿ ಎತ್ತರದ ವಿಂಧ್ಯಾಗಿರಿ ಬೆಟ್ಟದ ಮೇಲಿದೆ ಏಕಶಿಲೆಯ ಬೃಹತ್ ಗೊಮ್ಮಟೇಶ್ವರ ವಿಗ್ರಹ (ಎತ್ತರ ೫೭ ಅಡಿ;…
 • June 24, 2021
  ಬರಹ: Shreerama Diwana
  ಧ್ಯಾನದ ಸಾಮಾನ್ಯ ಅರ್ಥ, ಧ್ಯಾನದ ಸಹಜ ಸರಳ ಅಭ್ಯಾಸ, ಧ್ಯಾನದಿಂದ ದಿನನಿತ್ಯದ ಬದುಕಿನಲ್ಲಿ ಆಗುವ ಒಂದಷ್ಟು ಉಪಯೋಗ, ಧ್ಯಾನದಿಂದ ದೇಹ ಮತ್ತು ಮನಸ್ಸನ್ನು ಎಷ್ಟರಮಟ್ಟಿಗೆ ನಿಯಂತ್ರಿಸಬಹುದು, ಒಂದು ಸಣ್ಣ ವಿವರಣೆ...... ಇದು ಆಧ್ಯಾತ್ಮಿಕ…
 • June 24, 2021
  ಬರಹ: ಬರಹಗಾರರ ಬಳಗ
  ಗಝಲ್-೧  (ಮುರದ್ದಫ್) ನೋವು ನಲಿವಿನಲಿ ಏನು ಅಡಗುತಿದೆಯೊ ಹೇಳಲಾರೆ ಗೆಳೆಯಾ ಭಾವ ಚೇತನದಿ ಪ್ರೀತಿ ಮುಳುಗುತಿದೆಯೊ ಹೇಳಲಾರೆ ಗೆಳೆಯಾ   ಮಧುರ ವಾತ್ಸಲ್ಯ ಸೃಷ್ಟಿಯೊಳಗಿನ್ನು ಸಿಗದೆ ಹೋದಿತೇನೊ ತನನ ತನುವಿದು ನೀರ ಮೇಲೆಯೆ ತೇಲುತಿದೆಯೊ ಹೇಳಲಾರೆ…