ನಾವೆಲ್ಲ ನೋಡಿರದ ಊರಿದು. ಇಲ್ಲಿಯ ಒಂದೆರಡು ಮಾಹಿತಿಯನ್ನ ಬಲ್ಲಮೂಲಗಳಿಂದ ಪಡೆದು ನಿಮಗೆ ದಾಟಿಸುತ್ತಿದ್ದೇನೆ. ಅಲ್ಲೊಂದು ಮಂದಬೆಳಕಿನ ಕೋಣೆಯೊಂದರಲ್ಲಿ ಚರ್ಚೆ ಆರಂಭವಾಗಿದೆ. ಅದರೊಳಗೆ ಊಟ ತಿಂಡಿಗೆ ವ್ಯವಸ್ಥೆಯೂ ಇದೆ. ಇದು ಮುಂದಿನ ಹಾದಿಯನ್ನು …
ಒಂದಾನೊಂದು ಕಾಲದಲ್ಲಿ ಉತ್ತರ ಇಟೆಲಿಯಲ್ಲಿ ಕಾರ್ಲೋ ಎಂಬ ರಾಜ ರಾಜ್ಯವಾಳುತ್ತಿದ್ದ. ಅವನ ಪ್ರಜೆಗಳು ಎಲ್ಲರಿಗೂ ಅವನೆಂದರೆ ಅಚ್ಚುಮೆಚ್ಚು. ಯಾಕೆಂದರೆ ಆತ ಕಠಿಣ ಆಡಳಿತಗಾರನಾದರೂ ಉಲ್ಲಾಸದ ವ್ಯಕ್ತಿ. ಅವನನ್ನು ನಗುವಂತೆ ಮಾಡಿದ ಯಾರೊಂದಿಗೂ ಅವನು…
ಅಡುಗೆಯವನನ್ನು ಕಳಿಸಿ
ಅಡುಗೆ ಮಾಡುವುದು ನನ್ನ ಹವ್ಯಾಸ. ನೌಕರಿಯಲ್ಲಿದ್ದಾಗಲೂ ಅಡುಗೆ ಮಾಡಿ ಊಟ ಮಾಡಿಕೊಂಡೇ ಆಫೀಸಿಗೆ ಹೋಗುತ್ತಿದ್ದೆ. ಬೆಂಗಳೂರಿನ ಅಪಾರ್ಟ್ ಮೆಂಟ್ ನಲ್ಲಿ ವಾಸವಿರುವ ನನ್ನ ಮಗಳ ಮನೆಗೆ ಬಂದಾಗಲೂ ಅಡುಗೆ ಕೆಲಸ ನನ್ನದೇ. ಹೀಗೊಂದು…
ಇದು 45 ಪುಟದ ಕತೆಯಾಗಿದ್ದು ಮರಾಠಿ ಕತೆಯ ಆಧಾರಿತವಂತೆ. ಮೊದಲ ಅರ್ಧದಲ್ಲಿ ಬಡವರಾದ ಗಂಡ ಹೆಂಡತಿಯು ಇದ್ದದ್ದರಲ್ಲಿ ಹೇಗೆ ತೃಪ್ತಿಯಿಂದ ಪ್ರೀತಿಯಿಂದ ಇದ್ದರು ಎಂಬ ಸಂಗತಿ ಇದೆ. ನಂತರವಷ್ಟೇ ಮುಖ್ಯಕತೆ ಇದೆ.
ವಿಜಯನಗರದ…
ಚೆನ್ನಭೈರಾದೇವಿ ಈಕೆ ಕರಿಮೆಣಸಿನ ರಾಣಿ ಎಂಬ ಖ್ಯಾತಿ ಹೊತ್ತವಳು. ನಮ್ಮ ಇತಿಹಾಸಕಾರರು ಈಕೆಯನ್ನು ಗುರುತಿಸಿ ಪರಿಚಯಿಸಿದ್ದು ಕಡಿಮೆ. ಆ ಕರಿಮೆಣಸಿನ ರಾಣಿಯ ಅಕಳಂಕ ಚರಿತ್ರೆಯನ್ನು ನಿಮ್ಮ ಮುಂದೆ ಇಟ್ಟಿದ್ದಾರೆ ಲೇಖಕರಾದ ಡಾ. ಗಜಾನನ ಶರ್ಮ ಇವರು…
‘ಕ್ಷಮಾಯಾಚನೆ’ ಮಾಡಿದರೆ ನಾವು ಸಣ್ಣವರಾಗೆವು. ಮತ್ತೂ ತಲೆಯೆತ್ತಿ ನಿಲ್ಲಬಲ್ಲೆವು. ಆತ್ಮವಿಶ್ವಾಸ ಬೆಳೆಯಬಲ್ಲುದು. ತಪ್ಪು ನಡೆದಾಗ ಕ್ಷಮಾಯಾಚನೆ ಮಾಡದವರು ಉದ್ಧಟತನದವರು, ಅಹಂಕಾರಿಗಳು. ತಾವು ಎಸಗಿದ್ದು ಮಹಾ ಅಪರಾಧ ಎಂದು ಗೊತ್ತಿದ್ದರೂ, ಏನು…
ಬಾಳು ಕವಿತೆಯಾಗಲಿಲ್ಲ
ಕವಿತೆ ಜೊತೆಗೆ ಸಾಗಲಿಲ್ಲ
ಕವನವೆನುವ ಗೂಡಿನಲ್ಲಿ ಹೊಗೆಯ ಕಂಡೆನೆ
ಕ್ರಾಂತಿ ಆಗಲೆಂದು ಬರೆದೆ
ಬ್ರಾಂತಿಯೊಳಗೆ ಸೇರಿ ಹೋದೆ
ಶಾಂತಿ ಇರದ ಮನಸ್ಸನಿಂದ ಕರಗಿ ಹೋದೆನೆ
ಚಿತ್ರ ನೋಡಿ ಚಿತ್ತ ಕಲಕಿ
ಅತ್ತ ಇತ್ತ ಸೆಳೆಯುವಾಗ…
ಅವಳು ಜೀವ ನೀಡುವವಳು. ಜೀವವೊಂದನ್ನು ಉದರದೊಳಗೆ ಪೋಷಿಸಲಾರಂಬಿಸುವಾಗ ನಾನು ಜೊತೆಗಿರಬೇಕು. ಅವಳ ಬಯಕೆಗಳು ಏನು ಎಂಬುದು ನನಗೆ ತಿಳಿಯಬೇಕಾದರೆ ನಾನು ಅವಳ ಕೈ ಹಿಡಿದಾಗಿನಿಂದ ಅವಳನ್ನ ಅರ್ಥೈಸಿಕೊಂಡಿರಬೇಕು. ಅವಳ ಮನಸ್ಸಿನ ಆಳ ಸಿಗುವುದು…
ನವೆಂಬರ್ ೧೮ ಪ್ರಕೃತಿ ಚಿಕಿತ್ಸಾ ದಿನ. ನಮ್ಮ ಆರೋಗ್ಯಕ್ಕೆ ಅಗತ್ಯವಾದ ಎಲ್ಲಾ ವಸ್ತುಗಳು ಈ ಪ್ರಕೃತಿಯಲ್ಲಿ ಹೇರಳವಾಗಿದೆ. ಆದರೂ ನಾವು ನಮ್ಮ ಸುತ್ತ ಮುತ್ತಲಿರುವ ಗಿಡಮೂಲಿಕೆ, ಹಣ್ಣು ಹಂಪಲು, ತರಕಾರಿಗಳನ್ನು ಉಪಯೋಗಿಸುವುದನ್ನು ಬಿಟ್ಟು ಬೇರೆ…
ಪಡೆದ ಉಪಕಾರ ಸಾರ್ಥಕವಾಯ್ತು!
ಉರ್ವಾಸ್ಟೋರ್ಸ್ ಎಂಬ ಊರು ನಮಗೆ ಅಪರಿಚಿತ ಅನ್ನಿಸಲಿಲ್ಲ. ಕಾರಣ ಅಪ್ಪನ ಶಿಕ್ಷಕ ವೃತ್ತಿ. ಯಾವ ಕಡೆ ತಿರುಗಿದರೂ ಶಿಷ್ಯ, ಶಿಷ್ಯೆಯವರು, ಇಷ್ಟೇ ಅಲ್ಲ ಸರಕಾರಿ ವಸತಿಗೃಹಗಳಲ್ಲಿ ಇರುವವರು ಕೂಡಾ ಯಾವ ಯಾವುದೋ…
ಎದುರಿನಿಂದ ಹಾಲಿನ ಬಿಳುಪಿನಂತೆ ಚಂದಕ್ಕೆ ನಗುತ್ತಾ ಮಾತನಾಡಿ, ಹಿಂದಿನಿಂದ ಬೆನ್ನಿಗೆ ಚೂರಿಯಲ್ಲಿ ಇರಿದಂತೆ ಮಾತನಾಡುವವರನ್ನು ನೋಡುತ್ತೇವೆ. ಅವರು ಯಾವತ್ತೂ ಅಪಾಯದ ಮನುಜರು. ಅಂತಹ ಮನುಷ್ಯರನ್ನು, ಅವರ ಮನಸ್ಸನ್ನು ನಂಬಲೇಬಾರದು. ಯಾರು ಯಾರ…
ಮಾತನಾಡದೆ ಮಲಗಿದ ಶವದ ಬಾಯಿಯಿಂದ ಪಿಸುಮಾತು ಕೇಳಿಸುತ್ತದೆ
ಸ್ಮಶಾನದ ಮೂಲೆಯ ಗೋರಿಯೊಳಗಿಂದ ಪಿಸುಮಾತು ಕೇಳಿಸುತ್ತಿದೆ
ರಾತ್ರಿ ಹನ್ನೆರಡರ ಸಮಯ ಸ್ವಾತಂತ್ರ್ಯ ಸಿಕ್ಕಿತೆಂದು ಕೇಕೆಯ ಹಾಕಿ ನಲಿದ ನೆನಪು
ಸ್ವಾತಂತ್ರ್ಯ ಹರಣವಾದದ್ದೂ ಬಹುತೇಕ…
ಅಲ್ಲಿ ಘೋಷಣೆಯಾಗಿದೆ ."ಎಲ್ಲರನ್ನು ಮುಂದಿನ ಮೆಟ್ಟಿಲಿಗೆ ವರ್ಗಾಯಿಸಿ" ಶಾಲೆಯ ಅಧ್ಯಾಪಕರು ದಾಟಿಸಿದರು. ಈಗ ಶಿಕ್ಷಕರು ಮಾತನಾಡುತ್ತಿದ್ದಾರೆ "ಅಲ್ಲಾ ನೀವು ಹೇಳಿದ್ದಕ್ಕೆ ನಾವು ದಾಟಿಸಿದ್ದೇವೆ. ಹೀಗೆ ದಾಟಿದವರಲ್ಲಿ ಎಷ್ಟು ಜನ ಅಲ್ಲಿ ನಿಲ್ಲಲು…
ಐವತ್ತು ವರ್ಷಗಳ ಹಿಂದೆ ಪ್ರಕಟವಾದ ಖ್ಯಾತ ಕಾದಂಬರಿಕಾರ ಶರಶ್ಚಂದ್ರ ಚಟರ್ಜಿಯವರ ನೀಳ್ಗತೆಯೇ ಮಂಗಲಸೂತ್ರ. ಈ ಕತೆಯನ್ನು ಗುರುನಾಥ ಜೋಶಿಯವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಬಹಳ ಸರಳವಾದ ಕಥೆಯಾದರೂ ಮಹತ್ವದ ಅರ್ಥವನ್ನು ಹೊಂದಿದೆ. ಐದು ದಶಕಗಳ…
ಮಕ್ಕಳಿಗೆ ಕಥೆಗಳ ಮೂಲಕ ನೀತಿಯನ್ನು ಬೋಧಿಸುವ ಪುಸ್ತಕ ಇದು. ಇದನ್ನು ಎಂ ಎಸ್ ಪುಟ್ಟಣ್ಣನವರು 135 ವರ್ಷಗಳ ಹಿಂದೆ ಬರೆದರು.ಈ ಪುಸ್ತಕ ಈತನಕ 33 ಮುದ್ರಣಗಳನ್ನು ಕಂಡಿದೆ.ಈ ಪುಸ್ತಕದ ಭಾಷೆಯನ್ನು ಇಂದಿನ ಕನ್ನಡ ತಕ್ಕಂತೆ ಪರಿವರ್ತಿಸಿ ಕಥೆಗಾರ ಎಸ್…
ಮಹಾಭಾರತದಲ್ಲಿ ಅತ್ಯಂತ ಅದೃಷ್ಟಹೀನ ವ್ಯಕ್ತಿ ಎಂದರೆ ಕರ್ಣ. ನಿಮಗೆ ತಿಳಿದೇ ಇರುವ ಹಾಗೆ ಕುಂತಿಗೆ ಮದುವೆಯಾಗುವ ಮೊದಲು ಸೂರ್ಯ ದೇವನ ಕೃಪೆಯಿಂದ ಜನಿಸಿದ ಮಗುವೇ ಕರ್ಣ. ಹುಟ್ಟುವಾಗಲೇ ಕವಚ-ಕುಂಡಲದೊಂದಿಗೆ ಹುಟ್ಟಿದ ತೇಜಸ್ವಿ ಮಗು ಈತ. ಆದರೆ…
ಅಮೆರಿಕ ಕನ್ನಡ ಕೂಟಗಳ ಆಗರ (“ಅಕ್ಕ”) ೮ನೇ ವಿಶ್ವ ಕನ್ನಡ ಸಮ್ಮೇಳನದ ಸಂದರ್ಭದಲ್ಲಿ ಪ್ರಕಟಿಸಿದ ಒಂಬತ್ತು ಆಹ್ವಾನಿತ ಕತೆಗಳ ಸಂಕಲನ ಇದು.
ಇದರ ಬಗ್ಗೆ ಸಂಪಾದಕ ಮಂಡಲಿಯ ಪರವಾಗಿ ಪ್ರಧಾನ ಸಂಪಾದಕರು ಬರೆದ ಕೆಲವು ಮಾತುಗಳು: “ಈ ಕಥಾಸಂಕಲನಕ್ಕಾಗಿ…
ಮಾನವ ಜನ್ಮ ಎಷ್ಟೋ ವರ್ಷಗಳ ಪುಣ್ಯದಫಲದಿಂದ ಸಿಗುವುದಂತೆ. ಆದರೆ ನಾವೇನು ಮಾಡುತ್ತೇವೆ? ಇರುವ ಈ ಜನ್ಮದಲ್ಲಿ ನಾನೇ ಎಂಬ ಅಹಂನ್ನು ತುಂಬಿಕೊಳ್ಳುತ್ತೇವೆ. ಇದ್ದಾಗ ಸ್ವಲ್ಪವೂ ನೀಡಲು ಮನಸ್ಸೇ ಮಾಡುವುದಿಲ್ಲ. ನಮಗೆ ಸಮಾಜ ಏನು ಕೊಟ್ಟಿದೆ? ಎಂಬ…
ಧರಣಿಯೇ ನಾಚಿದಂತಿದೆ
ಕರುಳ ಬಂಧದ ಚೆಲುವಿಗೆ
ಮುತ್ತುಗಳೇ ಚೆಲ್ಲಾಡಿದಂತಿದೆ
ಮುಖದ ಮೇಲಿನ ಹೂ ನಗೆ
ಪ್ರಕೃತಿಯೊಡನೆ ಬೆರೆತ ಹಾಗಿದೆ
ಜೀವಗಳ ಒಡನಾಟವು
ಕೈಯ ಹಿಡಿದು ಹೆಜ್ಜೆ ಇಡುವ
ನೋಟವೆಂಥಾ ಚೆಂದವೂ
ಸಾಟಿ ಬೇರೆ ಇಹುದೆ ಜಗದಲಿ