ಎಲ್ಲ ಪುಟಗಳು

ಲೇಖಕರು: kavinagaraj
ವಿಧ: ಲೇಖನ
August 21, 2018 9
    ಅಂತರ್ಜಾಲ ತಾಣಗಳಲ್ಲಿ ಹರಿದಾಡಿದ, ಹರಿದಾಡುತ್ತಿರುವ 'ಐ ಲವ್ ಯು ಅಪ್ಪಾ' ಎಂಬ ಚಿತ್ರಗೀತೆ ಜನಪ್ರಿಯವಾಗಿದ್ದು, ಭಾವನಾತ್ಮಕವಾಗಿ ಮಕ್ಕಳಿಗೆ ಅಪ್ಪನ ಬಗ್ಗೆ ಪ್ರೀತಿ ಮೂಡಿಸುವಲ್ಲಿ ಯಶಸ್ವಿಯಾಗಿದೆ. ಹಾಡುವರಿಗೆ, ಕೇಳುವವರಿಗೆ ಅಪ್ಪನ ಕುರಿತ ನೆನಪುಗಳು ಉಮ್ಮಳಿಸಿ ಬರುವಂತೆ ಮಾಡುವಲ್ಲಿ ಗೀತೆಯ ಸಾಹಿತ್ಯ ಯಶಸ್ವಿಯಾಗಿದೆ. ಈ ಲೇಖನದ ವಿಷಯಕ್ಕೂ ಇದೇ ಪ್ರೇರಣೆ. ಭೋಗವಾದ, ಕೊಳ್ಳುಬಾಕತನ, ಸ್ವಾರ್ಥಪರತೆಯೇ ಆದ್ಯತೆಯಾಗಿ ಕಂಡುಬರುತ್ತಿರುವ ಇಂದಿನ ದಿನಗಳಲ್ಲಿ ಪರಸ್ಪರರಲ್ಲಿ ಬಾಂಧವ್ಯಗಳನ್ನು...
0
ಲೇಖಕರು: addoor
ವಿಧ: ಲೇಖನ
August 21, 2018 18
ಮಳೆಯ ರೌದ್ರನರ್ತನದಿಂದಾಗಿ ಕೊಡಗು ಕಂಗಾಲು. ಗುರುವಾರ, ೧೬ ಆಗಸ್ಟ್ ೨೦೧೮ರಿಂದ ಕೇವಲ ೨೪ ಗಂಟೆ ಅವಧಿಯಲ್ಲಿ  ಅಲ್ಲಿ ಧುಮ್ಮಿಕ್ಕಿದ ಮಳೆ ೧೧೯.೪ ಮಿ.ಮೀ. ಇದರಿಂದಾಗಿ ಹಲವು ಹಳ್ಳಿಗಳ ಮುಳುಗಡೆ. ಅಲ್ಲಲ್ಲಿ ಭೂಕುಸಿತ, ಗುಡ್ಡೆ ಜರಿತದಿಂದಾಗಿ ಸಂಪರ್ಕ ಮತ್ತು ವಿದ್ಯುತ್ ಸರಬರಾಜು ವ್ಯವಸ್ಥೆ ಧ್ವಂಸವಾಗಿ ಜನಜೀವನ ತತ್ತರ. ೨೦ ಆಗಸ್ಟ್ ೨೦೧೮ರ ಭಾನುವಾರದ ತನಕ ಎಂಟು ಜನರ ಸಾವು ವರದಿಯಾಗಿದ್ದು, ೪,೩೨೦ ಜನರನ್ನು ಜಲಾವೃತವಾದ ಹಳ್ಳಿಗಳಿಂದ ರಕ್ಷಿಸಲಾಗಿದೆ. ಅವರೀಗ ೪೧ ನಿರಾಶ್ರಿತರ ಶಿಬಿರಗಳಲ್ಲಿ...
5
ಲೇಖಕರು: Jayanth Ramachar
ವಿಧ: ಬ್ಲಾಗ್ ಬರಹ
August 20, 2018 1 ಪ್ರತಿಕ್ರಿಯೆಗಳು 55
ಅಬ್ಬಬ್ಬಾ ಅಂತೂ ಇಷ್ಟು ದಿವಸ ಕಾಯುವಿಕೆಗೆ ಮುಕ್ತಾಯ ಬಂದಿದೆ. ಇನ್ನು ಕೇವಲ ೩೬ ಗಂಟೆಗಳಲ್ಲಿ ನನ್ನ ಕನಸಿನ ಅಮೆರಿಕಕ್ಕೆ ಹಾರುತ್ತಿದ್ದೇನೆ. ಸದ್ಯಕ್ಕಿರುವ ಪರಿಸ್ಥಿತಿಯಲ್ಲಿ ಎರಡು ವರ್ಷ ಅಲ್ಲಿ ಕೆಲಸ ಮಾಡಲು ಪರ್ಮಿಟ್ ಸಿಕ್ಕಿದೆ. ಆಮೇಲೆ ಹೇಗೋ ಮಾಡಿ ಅಲ್ಲೇ ಇನ್ನೊಂದು ಕಂಪನಿಯಲ್ಲಿ ಕೆಲಸ ಹುಡುಕಿಕೊಂಡರೆ ಅಲ್ಲೇ ಖಾಯಂ ಆಗಿ ಸೆಟಲ್ ಆಗಿಬಿಡಬಹುದು... ಕೈ ತುಂಬಾ ಸಂಬಳ, ಒಳ್ಳೆಯ ವಾತಾವರಣ ಜೀವನ ಸೂಪರ್ ಆಗಿರತ್ತೆ ಎಂದು ನನ್ನದೇ ಆದ ಯೋಜನೆಗಳನ್ನು ಹಮ್ಮಿಕೊಂಡು ಊರಿನಲ್ಲಿ ಎಲ್ಲರಿಗೂ ಹೇಳಿ...
4
ಲೇಖಕರು: kavinagaraj
ವಿಧ: ಬ್ಲಾಗ್ ಬರಹ
August 20, 2018 42
ನಡೆನುಡಿಗಳೊಂದಾಗಿ ಚಿತ್ತ ನಿರ್ಮಲವಿದ್ದು ಸಜ್ಜನಿಕೆಯೊಡಗೂಡಿ ಧರ್ಮಮಾರ್ಗದಿ ಸಾಗಿ | ಕುಟಿಲತೆಯ ಹೊರದೂಡಿ ಮುಂದೆ ಸಾಗುವರವರು ಮನುಕುಲಕೆ ಮಾನ್ಯರವರಲ್ತೆ ಮೂಢ ||
5
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
August 20, 2018 53
ನಾನು ಚಿಕ್ಕಂದಿನಿಂದ ಅಂದರೆ ಕಳೆದ 45 ವರ್ಷದಿಂದ ಭಾವಗೀತೆ , ಭಕ್ತಿಗೀತೆ, ಚಿತ್ರಗೀತೆಗಳನ್ನು ಕೇಳಿಕೊಂಡು ಇದ್ದವನು. ಹೆಚ್ಚು ಕಡಿಮೆ ಕನ್ನಡದ ಎಲ್ಲ ಹಾಡುಗಳು ಗೊತ್ತು . ನನಗೆ ನಾನಾ ಕಾರಣಗಳಿಂದ ಇಷ್ಟವಾದವನ್ನು ಸಂಗ್ರಹಿಸಿಕೊಂಡು ಇದ್ದೇನೆ. ಕನ್ನಡ ಚಲನಚಿತ್ರಗೀತೆಗಳಿಗೆ ಸಂಬಂಧಿಸಿದಂತೆ ಹಿಂದಕ್ಕೆ ತಿರುಗಿ ನೋಡಿದಾಗ ಅಂದು ಆರ್. ಎನ್. ಜಯಗೋಪಾಲ್ ಕಾವ್ಯಮಯವಾದ ಹಾಡುಗಳನ್ನು ಬರೆಯುತ್ತಿದ್ದರು. ಚಿ.ಉದಯಶಂಕರ್ ಅವರ ಸರಳವಾದ ರೀತಿಯಲ್ಲಿ ಇರುತ್ತಿದ್ದವು. ಏಕತಾನತೆಯನ್ನು ಮುರಿದು ಹಂಸಲೇಖಾ ಅವರ...
0
ಲೇಖಕರು: kavinagaraj
ವಿಧ: ಲೇಖನ
August 19, 2018 35
     ಇಂದಿನ ವಿದ್ಯಮಾನಗಳನ್ನು ಗಮನಿಸಿದಾಗ, ಮಾನವೀಯ ಭಾವನೆಗಳು ಬರಡಾಗಿ ಬೆಲೆಯೇ ಇಲ್ಲವಾಗಿರುವಾಗ, ಇದು ಎಂಥಾ ಲೋಕವಯ್ಯಾ ಎಂದು ಅನ್ನಿಸದೇ ಇರದು. ನಿಜಕ್ಕೂ ಇದೊಂದು ವಿಚಿತ್ರ ಲೋಕ. ಇಲ್ಲಿ ಕರುಣಾಮಯಿಗಳಿದ್ದಾರೆ, ಕರುಣೆಯ ಲವಲೇಶವೂ ಕಾಣಸಿಗದ ಕಟುಕರಿದ್ದಾರೆ, ನಯವಂಚಕರಿದ್ದಾರೆ, ಮುಖವಾಡಧಾರಿಗಳಿದ್ದಾರೆ, ಜಾತಿವಾದಿಗಳಿದ್ದಾರೆ, ವಿಚಾರವಾದಿಗಳಿದ್ದಾರೆ, ಕಾನೂನು-ಕಟ್ಟಳೆಗಳಿಗೆ ಬೆಲೆ ಕೊಡುವವರಿದ್ದಾರೆ, ಅದನ್ನು ಕಾಲಕಸವಾಗಿ ಕಾಣುವವರಿದ್ದಾರೆ. ಒಳ್ಳೆಯವರೂ ಇದ್ದಾರೆ, ಕೆಟ್ಟವರೂ ಇದ್ದಾರೆ,...
4.75
ಲೇಖಕರು: addoor
ವಿಧ: ಲೇಖನ
August 19, 2018 31
ನೀರು ಮೂರ್ ಬಾನಿಂದ ಮಳೆ ನೆಲದಿನೂಟೆ ಇವು ಸೇರಿ ಕೆರೆ ಹಳೆಯುಳಿಕೆ ಊರಿಗುಪಯೋಗ ಮೂರುಣಿಸು ನಿನಗಂ ನಿಜಾರ್ಜಿತಂ ಸೃಷ್ಟ್ಯಂಶ ಪ್ರಾರಬ್ದವೀ ತ್ರಿತಯ – ಮರುಳ ಮುನಿಯ ಈ ಭೂಮಿಯ ಸಕಲ ಜೀವಸಂಕುಲಕ್ಕೆ ನೀರು ಎಲ್ಲಿಂದ ಸಿಗುತ್ತದೆ? ಎಂಬ ಪ್ರಶ್ನೆಗೆ ಈ ಮುಕ್ತಕದಲ್ಲಿ ಮಾನ್ಯ ಡಿ.ವಿ.ಜಿ.ಯವರ ಉತ್ತರ ಮಾರ್ಮಿಕ. ಭೂಮಿಯ ಜೀವಿಗಳಿಗೆ ಮೂರು ರೀತಿಯಲ್ಲಿ ನೀರು ಸಿಗುತ್ತದೆ ಎನ್ನುತ್ತಾರೆ ಅವರು. ಆಕಾಶದಿಂದ ಬೀಳುವ ಮಳೆ ಮತ್ತು ನೆಲದಾಳದಿಂದ ಜಿನುಗುವ ಒಸರು ಅಥವಾ ಚಿಲುಮೆ (ಊಟೆ). ಇವೆರಡು ಜೊತೆಯಾಗಿ...
5
ಲೇಖಕರು: ಸಂಜಯ್ ದೇವಾಂಗ
ವಿಧ: ಲೇಖನ
August 18, 2018 33
ಈ ಜೀವನವೆ ಹಾಗೆ ಒಂದು ತರ ಪ್ರವಾಸಿ ತಾಣದಂತೆ ಹಲವಾರು ಮಂದಿ ಬಂದು ನೋಡಿ ಸಂತೋಷ ಪಟ್ಟು ಹೋದಂತೆ ಈ ಜೀವನದಲ್ಲಿಯೂ ಹಲವಾರು ಮಂದಿ ಬಂದು ಹೋಗ್ತಾರೆ. ಅದರಲ್ಲಿ ಯಾರು ನಮ್ಮವರು ಎಂದು ತಿಳಿಯುವುದರಲ್ಲಿ ಒಂದಷ್ಟು ಎಡವಟ್ಟು ಮಾಡಿಕೊಂಡು ಜೀವನ ಸರಿ ಇಲ್ಲ ಎಂಬ ಮಾತನ್ನು ಪದೆ ಪದೆ ಹೇಳ್ತಿವಿ. ಇನ್ನು ಕೆಲವರು ಪ್ರವಾಸಕ್ಕೆ ಬಂದವರು ಅಲ್ಲಿಯೇ ಉಳಿದು ಅದರ ಅನ್ವೇಷಣೆಯಲ್ಲಿ ತೊಡಗುವರು ಹಾಗೆ ಜೀವನದಲ್ಲೂ ಕೆಲವರು ಕೊನೆಯವರೆಗೂ ಜೊತೆಯಾಗಿ ಬಿಡ್ತಾರೆ.. ಈ ಜೀವನ ಎಷ್ಟು ವಿಚಿತ್ರ ಅಲ್ವಾ ಅಂತೆಯೇ ಇವತ್ತು...
0

Pages