ಬದುಕೊಂದು ದೂರದ ಪಯಣ. ತುಂಬಾ ತುಂಬಾ ದೂರ ನಿರಂತರವಾಗಿ ನಡೆಯಬೇಕು ಮರೆಯಾಗುವ ಮುನ್ನ… Life is Short, Make it Sweet. ಈ ಎರಡು ವಿಭಿನ್ನ ಹೇಳಿಕೆಗಳನ್ನು ಗಮನಿಸಿ. ಒಂದು ಬದುಕನ್ನು ದೀರ್ಘ ಅವಧಿಯ ಹೋರಾಟ ಎಂದು ಹೇಳಿದರೆ ಮತ್ತೊಂದು ಬದುಕು ತುಂಬಾ ಚಿಕ್ಕ ಸಮಯದ್ದು ಎಂಬ ಅರ್ಥ ಕೊಡುತ್ತದೆ. ಹಾಗಾದರೆ ಬದುಕು ದೀರ್ಘವೇ ಅಥವಾ ಕಡಿಮೆ ಸಮಯವೇ ?
ಭಾರತದ ಈಗಿನ ಸರಾಸರಿ ಆಯಸ್ಸು ಅಧಿಕೃತವಾಗಿ ಸುಮಾರು 63-65 ರ ಆಸುಪಾಸಿನಲ್ಲಿ ಇದೆ. ಅದನ್ನು ಸುಮಾರು 75 ಎಂದು ಭಾವಿಸಿಕೊಳ್ಳೋಣ. 75 ವಯಸ್ಸು ಕೆಲವರಿಗೆ ದೀರ್ಘ ಮತ್ತೆ ಕೆಲವರಿಗೆ ಕಡಿಮೆ ಅದು ಅವರವರ ಜೀವನ ಶೈಲಿ ಮತ್ತು ಮನೋಭಾವ ಅವಲಂಬಿಸಿರುತ್ತದೆ ಎಂದು ಲೋಕಾಭಿರಾಮವಾಗಿ ಹೇಳಬಹುದು. ಆದರೆ ವಾಸ್ತವ ಏನು. ನಾವು ಬದುಕನ್ನು ದೀರ್ಘವೆಂದು ಪರಿಗಣಿಸಬೇಕೆ ಅಥವಾ ಸಣ್ಣ ಅವಧಿ ಎಂದು ಭಾವಿಸಬೇಕೆ?
ನನ್ನ ದೃಷ್ಟಿಯಲ್ಲಿ ಬದುಕೊಂದು ದೀರ್ಘ ಪಯಣ. ಜೀವನದಲ್ಲಿ ನಮ್ಮ ಬಳಿ ತುಂಬಾ ತುಂಬಾ ಸಮಯವಿದೆ. ಹುಟ್ಟಿನಿಂದ ಸಾಯುವವರೆಗೆ ಸುಮಾರು ಮುಕ್ಕಾಲು ಶತಮಾನದಷ್ಟು ದೂರದ ಹಾದಿ ಇದೆ. ನಮ್ಮ ಆಸೆ ಆಕಾಂಕ್ಷೆಗಳು, ಕನಸುಗಳು, ಸವಾಲುಗಳು, ಪ್ರಯೋಗಗಳು, ಸೋಲಿನ ಕುಸಿತ, ಗೆಲುವಿನ ಮೆಟ್ಟಿಲು. ಎಲ್ಲವನ್ನೂ ನಿಭಾಯಿಸಲು ಸಾಕಷ್ಟು ಸಮಯವಿರುತ್ತದೆ. ಹಣದ ಕೊರತೆ, ಪ್ರೇಮ ವೈಫಲ್ಯ, ಕೌಟುಂಬಿಕ ವಿಭಜನೆ, ನೈಸರ್ಗಿಕ ವಿಕೋಪ, ವ್ಯವಸ್ಥೆಯ ಶೋಷಣೆ, ನಿರಂತರ ಸೋಲು ಎಲ್ಲವನ್ನು ಎದುರಿಸಲು, ಅನುಭವಿಸಲು ಮತ್ತೆ ಕಟ್ಟಲು ನಮ್ಮ ಬಳಿ ಕಾಲವಿದೆ.
ಇದಕ್ಕೆ ಪ್ರತಿಯಾಗಿ, ಜೀವನದ ಕಾಲ ತುಂಬಾ ಕಡಿಮೆ ಇದೆ ಎಂದು ಭಾವಿಸಿದಲ್ಲಿ ನಮ್ಮ ಮೇಲೆ ಒತ್ತಡ ಹೆಚ್ಚಾಗುತ್ತದೆ. ಇರುವ ಸ್ವಲ್ಪ ಸಮಯದಲ್ಲಿ ಎಲ್ಲವನ್ನೂ ಮಾಡಲು ಹೋಗಿ ಬದುಕಿನ ಸ್ವಾರಸ್ಯವನ್ನೇ ಕಳೆದುಕೊಳ್ಳುತ್ತೇವೆ. ಬೆಳಗಿನಿಂದ ರಾತ್ರಿಯ…
ಮುಂದೆ ಓದಿ...