ಪಾಳು ಬಾವಿಯಲ್ಲಿ ಸಿಕ್ಕಿದ ಜೇನು (ಭಾಗ 1)
1 day 23 hours ago - ಬರಹಗಾರರ ಬಳಗನನಗೆ ಜೇನು ಕೀಳುತಿದ್ದುದರಿಂದ ಅನೇಕ ತೆರನಾದ ಜೀವಕ್ಕೆ ಅಪಾಯ ಇತ್ತು. ಜೇನುನೊಣಗಳು ಕಚ್ಚುವುದು, ಕಾಡುಹಂದಿಗಳು ತಿವಿಯುವುದು, ಹಾಗೂ ಪೊದೆಗಳಲ್ಲಿ ಹಾವುಗಳು..! ಮತ್ತು ಮರಹತ್ತಿ ಜೇನು ತೆಗೆಯುವಾಗ ಜೇನಿನಧಾಳಿಗೆ ಬಂದೊದಗಬಹುದಾದ ಅಪಾಯದ ಸಾದ್ಯತೆ, ಇಳಿಯಲು ಹತ್ತಲು ಮೆಟ್ಟಿಲು ಇಲ್ಲದ ಪಾಳು ಬಾವಿಗಳಲ್ಲಿ ಇಳಿಯುತ್ತಿದ್ದು.. ಹೀಗೆ ಈ ಮೇಲೆ ತಿಳಿಸಿದವುಗಳಿಂದ ಅಪಾಯ ಇದ್ದೇ ಇತ್ತು. ಏನೆಲ್ಲಾ ಆದರೂ ಜೇನು ತಿನ್ನುವುದು, ಜೇನು ಹುಡುಕುವುದು ಕಡಿಮೆ ಆಗಲಿಲ್ಲ. ವರ್ಷಗಳು ಕಳೆದಂತೆ ನಾನು ಜೇನಿನ ವಿಷಯದಲ್ಲಿ ಬಹಳ ಪರಿಣಿತನಾದೆ. ನನ್ನ ಜೇನು ಕೃಷಿ ನಿರಂತರವಾಗಿ ಮುಂದುವರೆದಿತ್ತು. ಈ ಹಿಂದೆ ಜೇನು ಹುಡುಕಲು, ಜೇನು ಕೀಳಲು ಪಡುತಿದ್ದ ಪ್ರಯಾಸ ಬಹಳಮಟ್ಟಿಗೆ ಸುಧಾರಿಸಿತು. ಅನುಭವದಿಂದ ಅನೇಕ ಪಾಠಗಳನ್ನು ಕಲಿತ ನಾನು ಈ ದಿನಗಳಲ್ಲಿ ಬಹುತೇಕ Smart techniques ಬಳಸಿದೆ ಎಂದೆನ್ನಬಹುದು. ದೈಹಿಕವಾಗಿ ಮಾನಸಿಕವಾಗಿ ಒಂದಷ್ಟು ವಿಕಸನ ನನ್ನಲ್ಲೂ ಆಗಿತ್ತು. ಸಾಧ್ಯಾಸಾಧ್ಯತೆ ಗಳನ್ನು ಬಹುಬೇಗ ಗುರುತಿಸುವ ಹಂತಕ್ಕೆ ಬಂದಿದ್ದೆ. ಅದೇನೆಂದರೆ ನಾನು ಜೇನು ಬೇಕೆಂದರೇ ಗಿಡಗಂಟೆಗಳು, ಪೊದರುಗಳಲ್ಲಿ ಹುಡುಕುವ ಬದಲು ನೀರು ಇರುವ ಜಾಗಕ್ಕೆ ಮೊದಲು ಭೇಟಿಕೊಡುತ್ತಿದ್ದೆ. ಬೇಸಿಗೆಯಲ್ಲಿ ನೀರುಕುಡಿಯಲು ದಾಂಗುಡಿ ಇಡುತಿದ್ದ ನೂರಾರು ಜೇನು ಹುಳುಗಳು ನೀರಲ್ಲಿ ಮುಳುಗದ, ನೀರು ನೇರವಾಗಿ ಹುಳುಗಳ ಮೇಲೆ ಬೀಳದ ಸುರಕ್ಷಿತ ಸ್ಥಳದಲ್ಲಿ ಜೇನುಹುಳುಗಳು ನೀರು ಕುಡಿಯುತ್ತವೆ. ನಾನು ಮೊದಲು ಇಂತಹ ಜೇನುಹುಳುಗಳು ನೀರು ಕುಡಿಯುವ ಸ್ಥಳಗಳಲ್ಲಿ ನಿಂತು ಒಂದೆರಡು ನಿಮಿಷ ಆ ಹುಳುಗಳು ಯಾವ ದಿಕ್ಕಿನಿಂದ ಹಾರಿ ಬರುತ್ತವೆ ಮತ್ತು ಯಾವ ದಿಕ್ಕಿನೆಡೆಗೆ ಹಾರಿ ಹೋಗುವವು ಎಂದು ಸೂಕ್ಷ್ಮವಾಗಿ ಅವಲೋಕಿಸಿ ನೋಡುತ್ತಿದ್ದೆ. ಆ ಹುಳುಗಳು ನೀರ… ಮುಂದೆ ಓದಿ...