ನುಡಿಮುತ್ತುಗಳು

March 20, 2013
0

ಪ್ರಜಾ ರಕ್ಷಣೆಗಾಗಿ ಮಾಡುವ ಕಾರ್ಯವು ಕ್ರೂರವಾಗಿರಲಿ ಇಲ್ಲದಿರಲಿ,

ಪಾಪಹೇತುವಾಗಿರಲಿ ದೋಷಮುಕ್ತವಾಗಿರಲಿ,

ಪ್ರಜಾಪಾಲನೆಯ ಹೊಣೆ  ಹೊತ್ತವನು ಅದನ್ನು ಮಾಡಲೇಬೇಕು.

March 20, 2013
0

ಮದುವೆ ಹಾಗೂ ಸ್ನೇಹಗಳಲ್ಲಿ 'ಆಕಸ್ಮಿಕ'ದ ಪಾತ್ರ ಮಹತ್ವದ್ದು.

March 20, 2013
0

ಕಾನೂನುಗಳಿಂದಾಗುವ ಅನ್ಯಾಯಗಳ ಪಾಲುದಾರರಾಗದಿದ್ದಲ್ಲಿ ನಾವೇ ಅನ್ಯಾಯಗಳಿಗೆ ಗುರಿ ಆಗಬೇಕಾಗುತ್ತದೆ.

ಪ್ರಾಪಂಚಿಕ ಕಾನೂನುಗಳ ರೀತಿಯೇ ಹೀಗೆ.

March 20, 2013
0

ನಮಗೆ ಅವಶ್ಯಕತೆ ಇಲ್ಲದುದನ್ನು ಪಡೆದಿದ್ದರೂ ಕಳ್ಳತನ ಮಾಡಿದಂತೆ.

March 20, 2013
0

ಎಲ್ಲರೂ ತಮ್ಮದೇ ಅತೀ ದೊಡ್ಡ ಕಷ್ಟ ಎಂದುಕೊಳ್ಳುತ್ತಾರೆ!

March 19, 2013
0

 ಓದಿ ಮರುಳಾಗಬಾರದು; ಓದದೆಯೂ ಮರುಳಾಗಬಾರದು; ಓದಿ ಹುರುಳಾಗಬೇಕು.

March 19, 2013
0

ಆತನೊಲಿದ ಮ್ಯಾಲೆ ಯಾತರ ಕುಲವಯ್ಯಾ?

March 19, 2013
0

ಇಂದಿನ ಕನಸು, ನಾಳೆಯ ಮನಸು, ನಾಡಿದ್ದಿನ ಉಣಿಸು.

March 19, 2013
0

ಯಾವ ಕನ್ನಡಿಗನ ಮನೆಯಲ್ಲಿ ಕೆಲವಾದರೂ ಕನ್ನಡ ಕೃತಿಗಳಿಲ್ಲವೋ,

ಅದು ಕನ್ನಡಿಗನ ಮನೆಯೇ ಎಂದು ಪ್ರಶ್ನಿಸುವಂತಾಗಬೇಕು.

March 19, 2013
0

ಸೋಹಂ ಎಂದೆನಿಸದೇ ದಾಸೋಹಂ ಎಂದೆನಿಸಯ್ಯಾ .

March 13, 2013
0

ಒಂದು ಮಟ್ಟದ ಬುದ್ಧಿ ವಿಕಾಸ ಇಲ್ಲದೆ, ಅಧ್ಯಯನ ಇಲ್ಲದೆ ಯಾರೂ ಕವಿಯಾಗಲಾರರು;

ಕಾವ್ಯವನ್ನು ಓದಿ ಆನಂದಿಸಲಾರರು.

March 13, 2013
0

ಮೌನದ ಮಹತ್ವ ಮನಗಂಡಾಗ ಜಗತ್ತಿನ ಅನೇಕಾನೇಕ ವಿವಾದ -ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯ.

March 13, 2013
0

 ಈ ಮಂದ ಮುಂದಾಳುಗಳಿಗೆ ಮತ ಕೊಟ್ಟರೆ ಸ್ವರಾಜ್ಯದಾಣೆಯಾಗಿಯೂ ಮತವಧೆಯಾಗುವುದು;

ಯಾರಿಗೂ ಕೊಡದೆ ಬಿಟ್ಟರೆ ಪ್ರಜಾಪ್ರಭುತ್ವ ಗ್ಲಾನಿಯಾಗುವುದು.

March 13, 2013
0

ಸಂಶೋಧನೆ ಎನ್ನುವುದು ವಿಶ್ಲೇಷಣಾತ್ಮಕ ವಿಮರ್ಶೆ.

ವಿಮರ್ಶೆ ಎನ್ನುವುದು ವ್ಯಾಖ್ಯಾನಾತ್ಮಕ ಸಂಶೋಧನೆ.

March 13, 2013
0

ಒಳ್ಳೆಯದನ್ನು ವರ್ಣಿಸುವಾಗ ಮಾತು ಹೆಚ್ಚಾಗಲಿ. ಅಲ್ಲದ್ದನ್ನು ಕಂಡಾಗ ಮಾತು ಕೊಂಚಾಗಲಿ.

March 12, 2013
0

ಎಲ್ಲಿಯವರೆಗೆ ದಾನ ಕೊಡುತ್ತಾ ಇರುವನೋ ಅಲ್ಲಿಯವರೆಗೆ ಲೋಕದಲ್ಲಿ ಪ್ರೀತಿ ಇರುತ್ತದೆ.

ಹಾಲು ಬತ್ತಿದುದನ್ನು ನೋಡಿ ಕರು ತಾಯಿಯನ್ನು ದೂರ ಮಾಡುತ್ತದೆ.

March 12, 2013
0

ಸಂಯಮ ಮತ್ತು ತ್ಯಾಗದ ಹಾದಿಯಿಂದ ಆನಂದ ಮತ್ತು ಶಾಂತಿ ಸ್ಥಾಪನೆ ಸಾಧ್ಯ.

March 12, 2013
0

ಪ್ರತಿಯೊಂದು  ಧರ್ಮ ಬೇರೆ ಧರ್ಮದಷ್ಟೇ ಸತ್ಯವಾದದ್ದು.

March 12, 2013
0

ಬೆಳಕು ಎಲ್ಲಿಂದ ಬಂದರೂ ಅದಕ್ಕೆ ಸ್ವಾಗತ.

March 11, 2013
0

ಜಿಪುಣ ಮತ್ತು ಉದಾರಿ ಇವರಿಬ್ಬರಿಗೂ ತಾನು ಅನುಭವಿಬೇಕು ಎಂಬ ಇಚ್ಚೆ ಇಲ್ಲ;

ಇಬ್ಬರೂ ಮತ್ತೊಬ್ಬರಿಗಾಗಿಯೇ ಹಣ ಕೂಡಿಡುತ್ತಾರೆ!

ಆದರೂ ಇಬ್ಬರಲ್ಲೂ ಇರುವ ವ್ಯತ್ಯಾಸ ಅಪಾರ.

March 11, 2013
0

ಘೋರ ತಪಸ್ಸಿನಲ್ಲಿ ಕೋಪ ಕೆಟ್ಟದ್ದು, ಅದು ತಪಸ್ಸಿನ ಕೇಡು.

March 11, 2013
0

ಘೋರ ತಪಸ್ಸಿನಲ್ಲಿ ಕೋಪ ಕೆಟ್ಟದ್ದು, ಅದು ತಪಸ್ಸಿನ ಕೇಡು.

March 11, 2013
0

ಘೋರ ತಪಸ್ಸಿನಲ್ಲಿ ಕೋಪ ಕೆಟ್ಟದ್ದು, ಅದು ತಪಸ್ಸಿನ ಕೇಡು.

March 11, 2013
0

ಕಾಲವನ್ನು ಸರಿಯಾಗಿ ನಿರ್ವಹಣೆ ಮಾಡಿದರೆ ಬದುಕನ್ನು ಚೆನ್ನಾಗಿ ನಿರ್ವಹಿಸಿದಂತೆ.