ಪ್ಲಾಸ್ಟಿಕ್ ಕಸ ತಂದರೆ ಶಾಲಾ ಶುಲ್ಕ ಮನ್ನಾ!
Ashwin Rao K P - 1 day 8 hours agoಪ್ಲಾಸ್ಟಿಕ್ ಸರ್ವವ್ಯಾಪಿಯಾಗಿರುವ ಭೂತ. ಇದರ ಬಳಕೆಯನ್ನು ಸಂಪೂರ್ಣವಾಗಿ ನಾವು ತ್ಯಜಿಸಲಂತೂ ಸಾಧ್ಯವಿಲ್ಲ. ಆದರೆ ಬಹುತೇಕ ಕಡೆ ಇದರ ಬಳಕೆಯನ್ನು ಕಮ್ಮಿ ಮಾಡಬಹುದು. ಒಮ್ಮೆ ಬಳಸಿ ಬಿಸಾಕುವ ಪ್ಲಾಸ್ಟಿಕ್ ತೊಟ್ಟೆಗಳು (Carry Bags), ನೀರಿನ ಬಾಟಲಿಗಳು, ಆಹಾರದ ಪೊಟ್ಟಣಗಳು ಇವೇ ದೊಡ್ಡ ಸಮಸ್ಯೆಗಳು. ಹೀಗೆ ಬಿಸಾಕುವ ಪ್ಲಾಸ್ಟಿಕ್ ಎಲ್ಲೆಡೆ ಹರಡುತ್ತದೆ. ನಗರದ ಸೌಂದರ್ಯ ಹಾಳು ಮಾಡುತ್ತದೆ. ಮಣ್ಣಿನಲ್ಲಿ ಕರಗದೇ ಇರುವ ಕಾರಣ ನೂರಾರು ವರ್ಷ ಹಾಗೇ ಇರುತ್ತದೆ. ಇದರಿಂದ ವಾತಾವರಣವೂ ಹಾಳಾಗುತ್ತದೆ. ಒಮ್ಮೆ ಬಳಸಿ ಬಿಸಾಕುವ ಪ್ಲಾಸ್ಟಿಕ್ ಬಳಕೆಯನ್ನು ಈಗಾಗಲೇ ನಿಷೇಧ ಮಾಡಲಾಗಿದೆ. ಆದರೂ ಅದು ಮಾರುಕಟ್ಟೆಯಲ್ಲಿ ಲಭ್ಯವಿದೆ. ನಮ್ಮಲ್ಲಿ ಇದೇ ದೊಡ್ದ ಸಮಸ್ಯೆ. ಆದರೆ ಈ ಬಳಸಿ ಬಿಸಾಕಿದ ಪ್ಲಾಸ್ಟಿಕ್ ನಿಂದ ಉಪಯುಕ್ತವಾದದ್ದು ಏನಾದರೂ ಮಾಡಬಹುದೇ ಎಂದು ಯೋಚಿಸಿದಾಗ ಈ ದಂಪತಿಗಳಿಗೆ ಹೊಳೆದದ್ದು ಈ ಉಪಾಯ…2 ಪ್ರತಿಕ್ರಿಯೆಗಳು
ಒಮ್ಮೆ ಬಳಸಿ ಬಿಸಾಕುವ ಪ್ಲಾಸ್ಟಿಕ್ ಚೀಲ, ನೀರಿನ ಬಾಟಲಿಯನ್ನು ಎಲ್ಲೆಲ್ಲಿ ಬಿಸಾಕದೇ ಈ ಶಾಲೆಗೆ ತಂದು ಕೊಟ್ಟರೆ ನಿಮ್ಮ ಶಾಲಾ ಶುಲ್ಕ ಮನ್ನಾ, ನೀವು ಉಚಿತ ಶಿಕ್ಷಣವನ್ನು ಪಡೆಯಬಹುದು. ಇಲ್ಲಿ ಶಿಕ್ಷಣ ಶುಲ್ಕವೆಂದರೆ ಉಪಯೋಗಿಸಿ ಬಿಸಾಡಿದ ಪ್ಲಾಸ್ಟಿಕ್ ಮಾತ್ರ. ನೀವು ಮನೆಯಿಂದ ಬರುವಾಗ ಟಿಫಿನ್ ಮರೆತರೂ ತೊಂದರೆಯಿಲ್ಲ, ಪ್ಲಾಸ್ಟಿಕ್ ಕಸವನ್ನು ಮರೆಯುವಂತಿಲ್ಲ. ಯಾವುದಪ್ಪಾ ಈ ಶಾಲೆ ಎನ್ನುತ್ತೀರಾ? ಇದು ಅಸ್ಸಾಂ ರಾಜ್ಯದ ಪಾಮೋಹಿ ಎಂಬಲ್ಲಿ ಇರುವ ಅಕ್ಷರ್ ಶಾಲೆ. ಮಜಿನ್ ಮುಖ್ತಾರ್ ಎಂಬವರೇ ಇದರ ಸಂಸ್ಥಾಪಕರು ಮತ್ತು ಈ ಯೋಜನೆಯ ರೂವಾರಿ. ಇವರಿಗೆ ಬೆಂಬಲ ಕೊಟ್ಟದ್ದು ಇವರ ಪತ್ನಿ ಪರ್ಮಿತಾ ಶರ್ಮ. ಮುಖ್ತಾರ್ ಪ್ರಕಾರ “ಇಲ್ಲಿ ಮಕ್ಕಳೇ ಶಾಲೆಯನ್ನು ನಡೆಸುತ್ತಾರೆ. ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥ… ಮುಂದೆ ಓದಿ...