ಅಮ್ಮ ಬದುಕಿಗೆ ಅರ್ಥವೇನು? ಹುಟ್ಟುತ್ತೇವೆ ಸ್ವಚ್ಛಂದವಾಗಿ ಜೀವಿಸ್ತೇವೆ. ಕೆಲವು ದಿನಗಳಲ್ಲಿ ಮಾಯವಾಗಿ ಬಿಡುತ್ತೇವೆ. ಹಾಗೆಯೇ ನಾನು ನನ್ನ ಗೆಳೆಯರನ್ನ ಗುರುಗಳನ್ನ ಸಂಬಂಧಿಕರನ್ನ ಆತ್ಮೀಯರನ್ನ ಅಕ್ಕಪಕ್ಕದ ಮನೆಯವರನ್ನ ಹೀಗೆ ಹಲವು ಜನರನ್ನ…
ಅದೊಂದು ಆಹ್ಲಾದಕರ ಸಂಜೆ. ದೆಹಲಿಯ ವೈಭವೋಪೇತ ಕನ್ವೆನ್ಷನ್ ಸೆಂಟರ್. ಕ್ಯಾಮರಾಗಳ ಜಗಮಗಿಸುವ ಬೆಳಕು ಎಲ್ಲೆಡೆ ಬೀಳುತ್ತಿತ್ತು. ಭದ್ರತಾ ಅಧಿಕಾರಿಗಳು ತಮ್ಮ ವಾಕಿ-ಟಾಕಿಯಲ್ಲಿ ಮಾತನಾಡುತ್ತಿದ್ದರು. ಸೂಟು ಧರಿಸಿದ ಜನರ ಸಂಭ್ರಮವೋ ಸಂಭ್ರಮ.…
ಸಸ್ಯಗಳು ಏಕೆ ಹಸುರಾಗಿವೆ...? ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತಾ ಹೊರಟವರು ನಾವು ಎಲ್ಲಿಯೋ ಅಲೆಯುತ್ತ ಅಲೆಯುತ್ತ ಹೊರಟಿದ್ದೀರಿ ಎಂದು ಅನೇಕರು ಆಕ್ಷೇಪಿಸಿದ್ದಾರೆ. ಆದರೆ ನಾನು ಹಾಗೆ ಅಂದುಕೊಂಡಿಲ್ಲ. ಒಂದು ಕಾಲದಲ್ಲಿ ನಮ್ಮ ಜ್ಞಾನ…
ಬಾವನೆ ಇರುವಲ್ಲಿ ಪ್ರೀತಿ ತಾನ್ ಬರುವುದು
ಖುಷಿಯ ವಿಚಾರಗಳು ನಮ್ಮೊಳಗೆ ಇರುವುದು
ಏನನ್ನು ಸಾಧಿಸಬಹುದು ದ್ವೇಷ ಅಸೂಯೆಯಿಂದ
ಕೈಹಿಡಿದು ಸಾಗುತಿರೆ ಒಲವಿಂದು ಸೇರುವುದು
*
ಉಪ್ಪು ಖಾರ ಹುಳಿ ತಿಂದ ದೇಹವು
ತಪ್ಪು ಮಾಡಿದರೂ ಒಳ ಮರೆವು
ಮಾಡುತ್ತಾ…
“ಎರಡು ಸಾವಿರ ರೂಪಾಯಿ ಕೊಟ್ಟು ಇದರ ಒಂದು ಗಿಡ ತಂದಿದ್ದೆ” ಎಂದು ಗಿಡವೊಂದನ್ನು ತೋರಿಸುತ್ತಾ ನಮ್ಮ “ಸಾವಯವ ಕೃಷಿಕ ಗ್ರಾಹಕ ಬಳಗ”ದ ಕೃಷಿಕರೊಬ್ಬರು ಹೇಳಿದ್ದರು! ಅದು ಚಾಯಾ ಮಾನ್ಸಾ ಗಿಡ.
ಅನಂತರ ಅದರ ಬಗ್ಗೆ ಸಂಗ್ರಹಿಸಿದ ಮಾಹಿತಿ: ಅದು…
ನಮಗೆ ಟಾಟಾ ಗೊತ್ತು ಫರೀದ್ ಬದರ್ ಗೊತ್ತೇ ಇಲ್ಲವಲ್ಲ ಎಂದು ಹೇಳುವಿರಾ? ಈ ಫರೀದ್ ಬದರ್ ಬಹ್ರೈನ್ ದೇಶದ ದೊಡ್ಡ ಉದ್ಯಮಿ. ಟಾಟಾ ಕುಟುಂಬದ ಬಗ್ಗೆ ನಮಗೆ ಗೊತ್ತಿಲ್ಲದ ಒಂದು ಅಪರೂಪದ ವಿಷಯವನ್ನು ಅವರು ಬಲ್ಲರು. ಈ ಬರಹವನ್ನು ಬರೆದದ್ದು ಆತ್ಮೀಯರಾದ…
ಯುದ್ಧ, ಅಣು ಬಾಂಬು, ಕ್ಷಿಪಣಿ, ಸಾವು! ಜಗತ್ತಿಗೂ ಕೇಳಿ ಕೇಳಿ ಸಾಕಾಗಿ ಹೋಗಿತ್ತು. ಮನುಕುಲವನ್ನು ಆಪತ್ತಿಗೆ ತಳ್ಳುವ, ವಿಧ್ವಂಸಕ ವಿದ್ಯಮಾನಗಳ ವಿಚಾರಗಳೇ ಮೇಲುಗೈ ಸಾಧಿ ಸುತ್ತಿದ್ದ ಹೊತ್ತಿನಲ್ಲಿ ಭಾರತೀಯ ಗಗನಯಾನಿ ಶುಭಾಂಶು ಶುಕ್ಲಾ ಅವರು…
ಜೂನ್ 25 - 1975 - ಜೂನ್ 25 - 2025. ಸರಿಯಾಗಿ 50 ವರ್ಷಗಳ ಹಿಂದೆ. ತುರ್ತು ಪರಿಸ್ಥಿತಿ ( ಎಮರ್ಜೆನ್ಸಿ ) ಜಾರಿಯಾದ ದಿನ. ಸ್ವತಂತ್ರ ಭಾರತದ, ಸಂಸದೀಯ ಪ್ರಜಾಪ್ರಭುತ್ವದ ಗಣರಾಜ್ಯಗಳ ಒಕ್ಕೂಟ ವ್ಯವಸ್ಥೆಯ ರಾಜಕೀಯ ಇತಿಹಾಸದಲ್ಲಿ ಕೆಲವೇ…
ಪರೋಕ್ಷ ಸಾವು ಹೆಚ್ಚು ನೋವು ನೀಡುತ್ತದೆ. ಅವನು ಕೆಲವು ದಿನ ಕಳೆದರೂ ದುಃಖ ಕಡಿಮೆ ಮಾಡಿಕೊಳ್ತಿಲ್ಲ. ಕಳೆದುಕೊಂಡದ್ದು ಅವನು ತುಂಬ ಪ್ರೀತಿಸುವ ಅಜ್ಜನನ್ನು. ಅವರು ವಯಸ್ಸಾದ ಕಾರಣ ದೇವರ ಪಾದ ಸೇರಿದ್ದಾರೆ. ಇದನ್ನ ಒಪ್ಪಿಕೊಂಡು ದಿನ ಕಳೆಯೋಕೆ…
ಪ್ರೀತಿಯ ಮಕ್ಕಳೇ ಹೇಗಿದ್ದೀರಿ..? ಬಿರುಸಾಗಿ ಸುರಿಯುತ್ತಿದ್ದ ಮಳೆ ಕೆಲದಿನಗಳ ವಿರಾಮದಲ್ಲಿದೆ. ಇಂದು ಮೂರ್ತಿ ಸರ್ ಮನೆಯಲ್ಲಿ ವೀಳ್ಯದೆಲೆ ಬಳ್ಳಿ ನೆಡುವ ಕೆಲಸ ನಡೆಯುತ್ತಿದೆ.. ನಾವೆಲ್ಲರೂ ಅವರ ಮನೆಗೆ ಹೋಗೋಣವೇ?
ಕಾರ್ತಿಕ್ : ಸರಿ ಗುರುಗಳೇ,…
ತಂದೆ ಜೀವದುಸಿರಿರುವಂಥ ದೇವನು ತಿಳಿಯು
ಬಂದು ಕಾಲನು ಹಿಡಿಯು ಅವನ ದಿನವಿಂದು |
ತಂದೆಗಿಂತಲು ಬಳಗ ಬೇಕೆ ನಿನಗೆಂದೆಂದು
ತಂದೆ ಒಲುಮೆಯ ಗಳಿಸೊ --- ಛಲವಾದಿಯೆ||
*
ಬರದಿರುವ ಕನಸುಗಳ ಬಗೆಗೆ ಚಿಂತೆಯು ಬೇಕೆ
ಬರುವಂಥ ಕನಸುಗಳ ಬಳಸಿ ನೀ ಬೆಳೆಯು…
ಕೆ.ಪಿ.ಭಟ್ಟರ ‘ನನ್ನ ಮಾತು’ ಕೊನೆಯ ಭಾಗ
ಇಲ್ಲಿ ಇನ್ನೊಂದು ಮಾತು ಹೇಳದಿದ್ದರೆ ನನ್ನ ಮನಸ್ಸಿಗೆ ವೇದನೆಯಾಗುತ್ತದೆ. ಶ್ರೀ ಸನದಿಯವರು ತಮ್ಮ ಸಮಗ್ರ ಕಾವ್ಯವನ್ನು ನನ್ನಲ್ಲಿ ಮುದ್ರಣಕ್ಕೆ ಕೊಟ್ಟಾಗ ನನ್ನಲ್ಲಿಗೆ ಹಲವಾರು ಸಲ ಭೆಟ್ಟಿ ಕೊಟ್ಟಿದ್ದರು…
ಮುದ್ದಣ ಮನೋರಮೆಯ ಕ್ಷಮೆಕೋರಿ ಶಾಲಿನಿ ಹೂಲಿ ಪ್ರದೀಪ್ ಅವರು ತಮ್ಮ ಮೊದಲ ಪುಸ್ತಕ ‘ಪದ್ದಣ ಮನೋರಮೆ’ ಹೊರತಂದಿದ್ದಾರೆ. ಇದು ಲಘು ಪ್ರಸಂಗಗಳು ಮತ್ತು ಕಥೆಗಳನ್ನು ಒಳಗೊಂಡಿದೆ. ಈ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಡಾ. ಗಿರಿಜಾ ಶಾಸ್ತ್ರಿ.…
ಇಂದಿಗೆ ಸರಿಯಾಗಿ ನಾನು ಕೂಲಿ ಕೆಲಸ ಮಾಡಲು ಆರಂಭಿಸಿ ೭೦ ವರ್ಷವಾಯಿತು. ೭ ನೇ ವಯಸ್ಸಿನಲ್ಲಿ ಪ್ರಾರಂಭವಾದ ನನ್ನ ಕೂಲಿ ಕೆಲಸ ಈಗಿನ ನನ್ನ ೭೭ ನೆಯ ಈ ವಯಸ್ಸಿನಲ್ಲೂ ನಿರಂತರವಾಗಿ ನಡೆಯುತ್ತಿದೆ. ಕೂಲಿ ಎಂದರೆ ಪೇಟೆ ಅಂಗಡಿಗಳಲ್ಲಿ ತರಕಾರಿ ಮೂಟೆ…
ಭಾಷೆ ಕಲಿಯಬೇಕಿತ್ತು. ಮತ್ತೆ ಮತ್ತೆ ಅನಿಸುತ್ತಿದೆ. ಇಷ್ಟು ದಿನ ಕಾಡದ ವಿಷಯ ಮನಸಿನೊಳಗೆ ಮತ್ತೆ ಮತ್ತೆ ಕೊರೆಯುತ್ತಿದೆ. ನಾನು ಬೆಕ್ಕಿನ ಭಾಷೆ ಕಲಿಯಬೇಕಿತ್ತು. ಮನೆಯೊಳಗೆ ಒಬ್ಬನಾಗಿ ಬದುಕುತ್ತಿರುವ ನಮ್ಮ ಮನೆಯ ಬೆಕ್ಕು ಕೆಲವು ದಿನದಿಂದ…
“ಪುಸ್ತಕಸ್ಥಾ ತು ಯಾ ವಿದ್ಯಾ , ಪರಹಸ್ತಗತ ಧನಂ
ಕಾರ್ಯಕಾಲೇ ಸಮುತ್ಪನ್ನೇ ನ ಸಾ ವಿದ್ಯಾ ನ ತದ್ಧನಂ”
ಹೀಗೊಂದು ಸುಭಾಷಿತವಿದೆ. ಸುಭಾಷಿತ ಎಂದರೆ ಚೆನ್ನುಡಿ ಅಥವಾ ಒಳ್ಳೆಯ ಮಾತು ಎಂದರ್ಥ. ಪುಸ್ತಕದಲ್ಲಿರುವ ವಿದ್ಯೆ, ಪರರ ಕೈಗೆ ಸೇರಿದ ಹಣ ಇವೆರಡೂ…
ಕುಂಜೂರು ಮಂಜುನಾಥ ಆಚಾರ್ಯರ "ಆತ್ಮೀಯ ಬೋಧಕ"
ಉಡುಪಿ ಜಿಲ್ಲೆ ಕಾಪು ತಾಲೂಕು ಪಣಿಯೂರು ಕುಂಜೂರುವಿನ ಲೇಖಕರಾದ ಮಂಜುನಾಥ ಆಚಾರ್ಯರು ಕಳೆದ ಹನ್ನೆರಡು ವರ್ಷಗಳಿಂದ ನಿರಂತರವಾಗಿ ಸಂಪಾದಕರು, ಪ್ರಕಾಶಕರು, ಮುದ್ರಕರು ಮತ್ತು ಮಾಲಕರಾಗಿ ನಡೆಸಿಕೊಂಡು…
ಪ್ರತೀ ದಿನ ಎರಡೆರಡು ಬಾರಿ ಹಲ್ಲುಜ್ಜಿದರೂ ಬಾಯಿಯ ದುರ್ವಾಸನೆ ಕಡಿಮೆಯಾಗುತ್ತಿಲ್ಲ ಎಂಬ ಸಂದೇಹ ಬಹಳಷ್ಟು ಮಂದಿಯನ್ನು ಕಾಡುತ್ತಿರಬಹುದು. ಜಾಹೀರಾತುಗಳಲ್ಲಿ ಬಾಯಿಯ ದುರ್ವಾಸನೆಯನ್ನು ಹೋಗಲಾಡಿಸಲು ಈ ಪೇಸ್ಟ್ ಬಳಸಿ, ಆ ಮೌತ್ ವಾಷ್ ಒಳ್ಳೆಯದು…
ಹನ್ನೆರಡನೇ ತರಗತಿಯಲ್ಲಿ ಕಡಿಮೆ ಅಂಕ ಗಳಿಸಿದಳು ಎಂಬ ಕಾರಣಕ್ಕೆ ತಂದೆಯೇ ಮಗಳನ್ನು ಅಮಾನುಷವಾಗಿ ಕೊಂದಿರುವ ದಾರುಣ ಘಟನೆ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ನೆಲಕರಂಜಿ ಗ್ರಾಮದಲ್ಲಿ ನಡೆದಿದೆ. ಮಗಳ ಭವಿಷ್ಯಕ್ಕೆ ದಿಕ್ಕೂಚಿಯಾಗಬೇಕಿದ್ದ ತಂದೆಯೇ…