ಅಸ್ಮಿತ ಕ್ಲೇಶ
1 day 9 hours ago - ಬರಹಗಾರರ ಬಳಗಕಳೆದ ಲೇಖನದಲ್ಲಿ ಅವಿದ್ಯಾಕ್ಲೇಶದ ಬಗ್ಗೆ ತಿಳಿದುಕೊಂಡಿದ್ದೇವೆ. ಈ ದಿನ ಅಸ್ಮಿತ ಕ್ಲೇಶದ ಬಗ್ಗೆ ತಿಳಿದುಕೊಳ್ಳೋಣ. ಅಸ್ಮಿತ ಎಂದರೆ ನಾ, ನಾನು. ಈ ಸೂತ್ರದಲ್ಲಿ ಮೂರು ಪದಗಳು ಬರುತ್ತವೆ. ದೃಕ್, ದರ್ಶನ ಮತ್ತು ಏಕಾತ್ಮಕ. ಈ 'ನಾನು' ಅನ್ನುವುದೇ ಎಲ್ಲಾ ಸಾಧನೆ ಮತ್ತು ಹೋರಾಟಕ್ಕೆ ಕಾರಣ. ನಾನು ಈ ಮನೆಯಲ್ಲಿ ಇದ್ದೇನೆ. ಇದರಲ್ಲಿ ನಾನು ಅನ್ನುವುದು ಮಧುರವಾಗಿದೆ. ನಾನೇ ಮಾಡಿದ್ದು, ಇಲ್ಲಿ ನಾನು ಅನ್ನೋದು ಪ್ರತಿಫಲಿತವಾಗಿದೆ.
ದೃಕ್ ಶಕ್ತಿ ಅಂದರೆ ಚೇತನ. ಅರಿವು, ಜ್ಞಾನ ಅಥವಾ ಪ್ರಜ್ಞೆ ಎಂದರ್ಥ. ನಾನು ಇದ್ದೇನೆ ಎನ್ನುವ ಅರಿವೇ ದೃಕ್ ಶಕ್ತಿ. ಇದನ್ನೇ ಆತ್ಮ ಎನ್ನುವರು. ನಾನು ಅಂದರೆ ಅರಿಯುವವ, ತಿಳಿಯುವವ ಎಂದರ್ಥ. ದರ್ಶನ ಶಕ್ತಿ ಎಂದರೆ ಯಾವುದರ ಸಹಾಯದಿಂದ ಜ್ಞಾನ ಮಾಡಿಕೊಳ್ಳುತ್ತೇವೆಯೋ ಅದು. ಮನಸ್ಸು, ಬುದ್ಧಿ ಒಳಗೆ ತಿಳಿದುಕೊಳ್ಳುವ ಸಾಧನಕ್ಕೆ ದರ್ಶನ ಎನ್ನುವರು. ಮನಸೇ ಇಲ್ಲದಿದ್ದರೆ ತಿಳಿದುಕೊಳ್ಳಲು ಸಾಧ್ಯವಿಲ್ಲ. ತಿಳಿದುಕೊಳ್ಳುವ ಮಾನಸಿಕ ಅಂಶವೇ ಬುದ್ದಿ. ಮನಸ್ಸು ಸ್ವಂತತ್ರವಾಗಿ ಕೆಲಸ ಮಾಡುವುದಿಲ್ಲ. ಅದಕ್ಕೆ ಬೆಳಕು ನೀಡುವುದೇ ದೃಕ್ ಶಕ್ತಿ. ದೃಕ್ ಎಂದರೆ ಅರಿವಿನ ತತ್ವ, ಪ್ರಜ್ಞಾತತ್ವ. ಇದು ನಮ್ಮ ಒಳಗೆ ಹೊಳೆಯುತ್ತದೆ. ದೃಕ್, ದರ್ಶನ ಬೇರೆ ಬೇರೆ. ಅರಿವಿನ ವಸ್ತು ಎಲ್ಲರಲ್ಲೂ ಇರುತ್ತದೆ. ಇದೇ ಪ್ರಮುಖ. ನಾನು ಅನ್ನುವುದು ಅರಿವೇ ಹೊರತು ಬೇರೆನಿಲ್ಲ. ಮನಸ್ಸಿನಲ್ಲಿ ಮೂಡಿದ ಎಲ್ಲಾ ಚಿತ್ರಗಳ ಅರಿವು, ಅದನ್ನು ಬೆಳಗಿಸುವ, ಅನುಭವಿಸುವ ಅರಿವು. ಆ ಅರಿವು ಮನಸ್ಸು ತುಂಬಿದಾಗ ಮಾನಸಿಕ ಅರಿವು ಒಂದಾಗುತ್ತದೆ. ಆ ತಕ್ಷಣ ನಾನು ಅನ್ನುವುದು ಶುರುವಾಗುತ್ತದೆ. ಇದಕ್ಕೆ ಅಸ್ಮಿತ ಎನ್ನುವರು. ಬೇರ್ಪಡಿಸಿ ನೋಡಿದರೆ ಅಸ್ಮಿತ ಇರುವುದಿಲ್ಲ. ಅರಿವೇ ಇಲ್ಲದೆ ದೇಹ ಮನಸು ಇದ್ದರೆ, ಮನುಷ್ಯ ಅ… ಮುಂದೆ ಓದಿ...