ಕಿಡ್ನಿಯಲ್ಲಿ ಕಲ್ಲು ಆಗದಂತೆ ನಿರ್ವಹಣೆ ಹೇಗೆ?
1 day 20 hours ago - Ashwin Rao K Pಕಿಡ್ನಿ ಸ್ಟೋನ್ ಅಥವಾ ಮೂತ್ರಪಿಂಡದಲ್ಲಿ ಕಲ್ಲಾಗುವುದು ಈಗ ಬಹಳ ಸಾಮಾನ್ಯ ಮಾತು. ಇಂದಿನ ಯಾಂತ್ರಿಕ ಜಗತ್ತಿನಲ್ಲಿ ಯಾರಿಗೂ ತಮ್ಮ ಆರೋಗ್ಯವನ್ನು ಗಮನಿಸುವುದಕ್ಕೆ ಪುರುಸೊತ್ತೇ ಇಲ್ಲ. ಯುವಕರಾಗಿರುವಾಗ ಬಿಡುವಿಲ್ಲ, ವಯಸ್ಸು ಕಳೆದು ಆರೋಗ್ಯ ಸಮಸ್ಯೆ ಪ್ರಾರಂಭವಾದಾಗ ಮೊದಲೇ ಜಾಗೃತೆ ಮಾಡಬೇಕಿತ್ತು ಅನ್ನೋ ಯೋಚನೆ ಸಾಮಾನ್ಯ. ಕಿಡ್ನಿ (ಮೂತ್ರ ಕೋಶ) ನಮ್ಮ ದೇಹದ ಬಹುಮುಖ್ಯ ಅಂಗ. ನಮ್ಮ ಆಹಾರ ಸೇವನೆಯ ಹಾಗೂ ಕೆಲವೊಂದು ಕೆಟ್ಟ ಅಭ್ಯಾಸಗಳಿಂದ ಕಿಡ್ನಿಯಲ್ಲಿ ಕಲ್ಲಿನಂತಹ ರಚನೆಯುಂಟಾಗುತ್ತದೆ. ಇದು ಬಹಳ ಸಣ್ಣದಾಗಿದ್ದರೆ ಮೂತ್ರ ನಾಳದಲ್ಲಿ ಮೂತ್ರ ಚಲಿಸಲು ಅಷ್ಟೊಂದು ಸಮಸ್ಯೆಯಾಗುವುದಿಲ್ಲ. ಅದೇ ಗಾತ್ರವು ದೊಡ್ಡದಾದರೆ ಬಹಳ ತೀವ್ರವಾದ ಸಹಿಸಲಾಗದ ನೋವು ಕಂಡು ಬರುತ್ತದೆ.
ವಿಪರೀತ ದೇಹದ ತೂಕ, ಅಧಿಕ ರಕ್ತದೊತ್ತಡ, ಕೆಲವೊಂದು ಮಾತ್ರೆಗಳ ಅಡ್ಡ ಪರಿಣಾಮ, ನೀರನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸದೇ ಇರುವುದು ಎಲ್ಲವೂ ಕಿಡ್ನಿಯಲ್ಲಿ ಕಲ್ಲು ಬೆಳೆಯಲು ಕಾರಣವಾಗುತ್ತದೆ. ಈಗ ಈ ಕಲ್ಲುಗಳನ್ನು ನಿವಾರಿಸಲು ರಕ್ತರಹಿತ ಶಸ್ತ್ರ ಚಿಕಿತ್ಸೆಗಳು ಲಭ್ಯ ಇವೆ. ಆದರೆ ಅದಕ್ಕೆ ತಗಲುವ ವೆಚ್ಚ, ರೋಗಿ ಅನುಭವಿಸಬೇಕಾದ ನೋವು ಇವುಗಳಿಗಿಂತ ಕಲ್ಲು ಉತ್ಪತ್ತಿ ಆಗದೇ ಇರುವಂತೆ ನೋಡಿಕೊಳ್ಳುವುದೇ ಸೂಕ್ತ ವಿಧಾನ. ಕೆಲವು ನೈಸರ್ಗಿಕ ವಿಧಾನಗಳಿಂದ ಕಿಡ್ನಿಯಲ್ಲು ಕಲ್ಲು ಬೆಳೆಯದಂತೆ ನೋಡಿಕೊಳ್ಳಬಹುದು.
ನೀರು: ನೀರು ಕಿಡ್ನಿಯಲ್ಲಿ ಕಲ್ಲಾಗದಂತೆ ತಡೆಯ ಬಲ್ಲ ಅತ್ಯಂತ ಮುಖ್ಯ ವಸ್ತು. ನಮ್ಮ ದೇಹಕ್ಕೆ ಎಷ್ಟು ಪ್ರಮಾಣದಲ್ಲಿ ನೀರು ಬೇಕೋ ಅಷ್ಟನ್ನು ನಿಯಮಿತವಾಗಿ ಸೇವನೆ ಮಾಡುತ್ತಾ ಬರಬೇಕು. ಬೇಸಿಗೆಯಲ್ಲಿ ನೀರಿನ ಸೇವನೆ ಹೆಚ್ಚಿರಲಿ. ಏಕೆಂದರೆ ಬಿಸಿಲಿನ ತಾಪಕ್ಕೆ ಬೆವರು ಹೊರಬಂದು ದೇಹದಲ್ಲಿ ನೀರಿನ ಕೊರತೆಯುಂಟಾಗುವುದು ಸಹಜ.… ಮುಂದೆ ಓದಿ...