ಅಧ್ಯಾತ್ಮವನು ಅರಿತು
ಜೀವನವ ಕಲಿತು
ನಾನು ನನ್ನದು ಎನ್ನುವದನ್ನು ಮರೆತು
ಬದುಕು ಇತರರೊಂದಿಗೆ ಬೆರೆತು
ಅದೇ ನಿನಗೆ ಒಳಿತು.
ಶಿವ
ನುಡಿಮುತ್ತುಗಳು
ಹಂಗಿನರಮನೆಗಿಂತ | ಇಂಗಡದ ಗುಡಿ ಲೇಸು |
ಭಂಗಬಟ್ಟುಂಬ ಬಿಸಿಯನ್ನಕ್ಕಿಂತಲೂ |
ತಂಗುಳವೆ ಲೇಸು ಸರ್ವಜ್ಞ ||
* ನಡೆಯುವಾಗ ಎಡವುವುದು ಸಹಜ
ಆದರೆ ಎಡವಿದ ಕಲ್ಲಿಗೆ ಮತ್ತೆ ಮತ್ತೆ ಎಡವುವುದು ದಡ್ಡತನ.
* ಸೋಲದೆ ಗೆಲ್ಲುವುದು ಸಾದ್ಯವಿಲ್ಲ.
ಸೋತು ಗೆದ್ದವನಿಗೆ ನೂರು ಸೋಲು ಎದುರಾದರೂ
ಹೆದರುವುದಿಲ್ಲ
ನಮ್ಮ ಜೀವನಕ್ಕೆ ಬಹುಮುಖ್ಯವಾಗಿ ಬೇಕಾಗಿರುವ, ಬೆಳಕಿನ ಕಿರಣಗಳು, ದಿನ ನಿತ್ಯ ಕುಡಿಯುವ ನೀರು, ಸೇವಿಸುವ ಗಾಳಿ,
ತಿನ್ನುವ ಆಹಾರ, ವ್ಯವಹಾರ ಮಾಡುವ ಹಣ, ದೇಹದಲ್ಲಿ ಹರಿಯುವ ರಕ್ತ ಎಂದಾದರೂ ನಿಮಗೆ ಜಾತಿಮತ, ಭೇದಭಾವ ಮಾಡೀವಿಯೇ ?
ಇಲ್ಲತಾನೇ.....
ಇವುಗಳಿಗೆ ಇಲ್ಲದ ಭೇದಭಾವ ನಿನಗೇಕೆ ಮಾನವ?
ಸರ್ಕಾರಿ ಆಸ್ಪತ್ರೆಗಳ ಮತ್ತು ಶಾಲೆಗಳ ಕಳಪೆ ಸೇವೆಯೇ
ಖಾಸಗೀ ಆಸ್ಪತ್ರೆಗಳನ್ನು ಮತ್ತು ಶಾಲೆಗಳನ್ನು ತೆರೆಯುವಂತೆ, ಕೊಬ್ಬುವಂತೆ ಮಾಡಿವೆ.
ಸರ್ಕಾರಿ ಆಸ್ಪತ್ರೆಗಳನ್ನು ಮತ್ತು ಶಾಲೆಗಳನ್ನು ನೆಟ್ಟಗೆ ಮಾಡಿದರೆ
ಖಾಸಗೀ ಆಸ್ಪತ್ರೆಗಳು ಮತ್ತು ಶಾಲೆಗಳು ಬಾಗಿಲು ಮುಚ್ಚುತ್ತವೆ.
ವೇದಿಕೆಯ ಮೇಲೆ ಸನ್ಮಾನ ಮಾಡಿಕೊಳ್ಳುವವರಿಗೆ ಚಪ್ಪಾಳೆ ತಟ್ಟುತ್ತ ಕಾಲಕಳೆಯಬೇಡಿ . ನೀವು ಸನ್ಮಾನ ಮಾಡಿಕೊಳ್ಳುವ , ಚಪ್ಪಾಳೆ ಗಿಟ್ಟಿಸುವ ಮಹತಕಾರ್ಯ ಮಾಡಿ.
- ನಾಗೇಶ್ ತಳೇಕರ್
"ಗೀತಾ ಸಾರ " ಪಾಠ ಹೇಳಿ ಕ್ಲಾಸ್ ಮುಗಿಸುವ ತರಾತುರಿಯಲ್ಲಿ ಇದ್ದ ಟ್ಯೂಷನ್ ಟೀಚರ್ ... "ಯಾಕ್ಲೆ ಬಸ್ಯಾ , ಎರಡು ತಿಂಗಳ್ ಟ್ಯೂಷನ್ ಫೀ ಯಾವಾಗ್ ಕೊಡತ್ಯೋ ? " ಎಂದು ಕೇಳಿದಕ್ಕೆ ಬಸ್ಯಾ ."ಏನ್ರಿ ಸಾರ್ ಇಗಾ ಅಷ್ಟೇ ಗೀತಾಸಾರ ಪಾಠ ಹೇಳಿ , ರೊಕ್ಕ ಕೇಳ್ಯಾಕ್ ಹತ್ತೀರಲ್ರಿ . ಸರ್ "ರೋದಿಸಲು ನೀನೇನು ಕಳೆದುಕೊಂಡಿರುವೆ. ಕಳೆದುಕೊಳ್ಳಲು ನೀನು ತಂದಿರುವುದಾದರು ಏನು?... ನೀನು ಪಡೆದಿದ್ದರೂ ಅದನ್ನೂ ಇಲ್ಲಿಂದಲೇ ಪಡೆದಿರುವೆ ಏನನ್ನೂ ನೀಡಿದರೂ ಅದನ್ನು ಇಲ್ಲಿಗೆ ನೀಡಿರುವೆ............" ಇದನ್ನು ಕೇಳಿಸಿಕೊಂಡು ಟ್ಯೂಷನ್ ಟೀಚರ್ ಸುಮ್ಮನಾದರು. .......ನಾ.ತಳೇಕರ್.
ನೀವು ಸುಂದರವಾಗಿರುವರನ್ನು ಆಯ್ಕೆ ಮಾಡಿಕೋಳ್ಳುವುದಕ್ಕಿಂತ.
ನಿಮ್ಮ ಜೀವನವನ್ನು ಸುಂದರವನಾಗಿ ಮಾಡುವವರನ್ನು ಆಯ್ಕೆ ಮಾಡಿ.
ಯಾವುದು ವ್ಯಕ್ತಿಯನ್ನು ಮುಂದೆ ಬರುವ ಸಂಕಷ್ಟಗಳನ್ನು ಮೆಟ್ಟಿನಿಲ್ಲುವಂತೆ ಮಾಡುತೆ ಅದೇ ಶಿಕ್ಷಣ
ಉತ್ತಮ ಜೀವನಕ್ಕಾಗಿ ಬಸವಣ್ಣನವರ ಸಪ್ತಸೂತ್ರಗಳು (For a better life Basava's seven principles)
ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ,
ಮುನಿಯ ಬೇಡ, ಅನ್ಯರಿಗೆ ಅಸಹ್ಯಪಡಬೇಡ,
ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ,
ಇದೇ ಅಂತರಂಗ ಶುದ್ಧಿ! ಇದೆ ಬಹಿರಂಗ ಶುದ್ಧಿ!
ಇದೆ ನಮ್ಮ ಕೂಡಲಸಂಗಮದೇವರನೊಲಿಸುವ ಪರಿ. -ವಿಶ್ವಗುರು ಬಸವಣ್ಣ
ಅಸಹ್ಯ = disgust, ಹೇಸಿಗೆ ಹಳಿ = ದೂಸಿಸು, ನಿಂದಿಸು, scold, reprehend,
ಸಾಮಾಜಿಕ ಸಮಾನತೆ (Social equality)
ಇವನಾರವ ಇವನಾರವ ಇವನಾರವ ನೆಂದಿನಸದಿರಯ್ಯಾ
ಇವನಮ್ಮವ ಇವನಮ್ಮವ ಇವನಮ್ಮವ ನೆಂದಿನಸಯ್ಯಾ
ಕೂಡಲಸಂಗಮದೇವಾ ನಿಮ್ಮ ಮಹಾಮನೆಯ ಮಗನೆಂದನಿಸಯ್ಯ. -ವಿಶ್ವಗುರು ಬಸವಣ್ಣ
ಮಹಾಮನೆ = world, universe, ಪ್ರಪಂಚ, ಭೂಮಿ, ಭೂಲೋಕ
ಬೇರೆಯವರಿಂದ ಸದಾ ಸಿಹಿಯನ್ನೆ ಬಯಸುವ ನಾವು ಬೇರೆಯವರಿಗೂ ಸಿಹಿಯನ್ನೆ ತಾನೆ ಕೊಡಬೇಕು, ಸಿಹಿಯನ್ನು ಪಡೆದು ಕಹಿಯನ್ನು ನೀಡುವುದು ಯಾವ ನ್ಯಾಯ ?
ನಾವು ಈಗ ಪರಿಸರವನ್ನು ನಮ್ಮ ಸ್ವರ್ಥಕ್ಕಾಗಿ ಬಳಸಿದರೆ ಮು೦ದೆ ಪರಿಸರ ನಮ್ಮನ್ನು ಉಳಿಸುವುದಿಲ್ಲ
ಇರುವಾಗ ಕಡೆಗಣಿಸಿ
ಸತ್ತಾಗ ಅತ್ತು ಕರೆದರೆ
ಮತ್ತೆ ಹುಟ್ಟಿ ಬರುವರೆನು
ಹೆತ್ತ ತಂದೆ ತಾಯಿ.
ಪ್ರೀತಿ ಒಂದು ರೀತಿಯ ವಿಷ!
ಕುಡಿದು ಬದುಕಿದವರು ಬಹಳ ಕಡಿಮೆ
ಕೆಲವರು ಬದುಕಿದ್ದು ಸತ್ತಂತೆಯೇ
ಕೆಲವರು ಮಾತ್ರ ಸತ್ತಮೆಲು ಬದುಕುತ್ತಾರೆ
ಇನ್ನೂ ಕೆಲವರು ಸತ್ತಂತೆಯೇ ಬದುಕುತ್ತಾರೆ.
ಒಂದು ದಿನ ನಾವು ಈ ಕೆಳಗಿನ ಮಾತುಗಳನ್ನು ಆಡುವುದರಲ್ಲಿ ಸಂದೇಹವೇ ಇಲ್ಲ...
"ನಾವು ಅಂದು ನಮ್ಮ ತಂದೆ-ತಾಯಿಗಳನ್ನು ಚೆನ್ನಾಗಿ ನೋಡಿಕೊಂಡಿದ್ದರೆ , ಇಂದು ನಮ್ಮ ಮಕ್ಕಳು ನಮ್ಮನ್ನು ನೋಡಿಕೊಳ್ಳುತಿದ್ದರು"
#ಕರ್ಮ
ರಾಬರ್ಟ್ ಹೈನ್ಲೈನ್ ಅಮೇರಿಕದ ವೈಙಾನಿಕ ಕತೆಗಾರ.
ಆತನ ಕೆಲವು ನುಡಿಮುತ್ತುಗಳು.
- ಪ್ರತಿ ಕಾಯಿದೆ ಕೂಡ, ಅದನ್ನು ಮುರಿಯುವ ಬಗೆಯನ್ನು ಯೋಚಿಸಲು ಪ್ರೇರೇಪಿಸುತ್ತದೆ.
- ಮಶೀನು ಓಡುತ್ತಿರುವವರೆಗೆ, ಅದರ ಸಿದ್ಧಾಂತದ ಬಗ್ಗೆ ತಲೆ ಕೆಡಿಸಿಕೊಳ್ಳೋ ಅಗತ್ಯ ಇಲ್ಲ.
- ಅಪದ್ಧ ಮಾತಾಡೋದು ಮತ್ತು ಅದನ್ನ ಭೀಕರವಾಗಿ ವ್ಯಕ್ತ ಪಡಿಸೋಕೆ ಮನುಷೈರಿಗೆ ಅಪರಿಮಿತವಾದ ಸಾಮರ್ಥ್ಯವಿದೆ.
- ಸ್ವಯಂಸ್ಪೂರ್ತಿಯಿಂದ ಪ್ರಜೆಗಳು ತಮ್ಮ ದೇಶ ಉಳಿಸಿಕೊಳ್ಳದಿದ್ರೆ, ಆ ದೇಶ ಉಳಿಯೋದು ಸಂಶಯ.
- ನಂಬಿಕಸ್ತ ಕುಶಲಕರ್ಮಿಗಳ ಸಾಮರ್ಥ್ಯದಲ್ಲಿ ನಂಬಿಕೆ ಇಡಿ.
- ಬಹುತೇಕ ರಾಜಕಾರಣಿಗಳು ನಂಬಿಕಸ್ತರು. ಇಲ್ಲದಿದ್ರೆ, (ಇಲ್ಲದಿದ್ರೆ 13 ರಾಜ್ಯಗಳ ಅಮೇರಿಕಾ, 52 ರಾಜ್ಯಗಳ ದೇಶವಾಗ್ತಾ ಇರ್ಲಿಲ್ಲ) .
- ವಯಸ್ಸಾಗೋದೇ ಸಾಧನೆಯಲ್ಲ, ಸದಾ ಚಿರಯವ್ವನಿಗನಾಗಿರೋದು ಪಾಪ ಅಲ್ಲ.
- ಯಾವ ಕಕ್ಶ್ಹಿದಾರ ಕೂಡಾ ಯಾವ ಖಟ್ಲೆ ಕೇಸುಗಳ್ನ ಗೆದ್ದಿಲ್ಲ. ವಕೀಲರು ಮಾತ್ರ ಗೆದ್ದು ಹಣ ಮಾಡ್ಕೊಳ್ಳೋದು.
- ಯಾವುದಾದ್ರೂ ಒಂದು ಪಕ್ಶ್ಹ ಸೇರಿಕೊಳ್ಳಿ. ಒಂದೋ ನೀವು ಸರಿಯಾಗಿರಬಹುದು ಅಥವಾ ಕೆಲವೊಮ್ಮೆ ತಪ್ಪಾಗಿರಬಹುದು. ನಿರ್ಲಿಪ್ತನಾಗಿರೋದು, ಅಲಿಪ್ತನಾಗಿರೋದು ಸದಾ ತಪ್ಪು.
- ಬದುಕು ತುಂಬಾ ಚಿಕ್ಕದು, ಆದ್ರೆ ವರ್ಶ್ಹಗಳು ತುಂಬಾ ಉದ್ದ
- ಹೆಂಗಸರನ್ನ ಮತ್ತು ಚಿಕ್ಕ ಮಕ್ಕಳನ್ನ ಉಳಿಸೋದು ಮಾತ್ರ ಒಳ್ಳೆ ನಿಯಮ. ಮಿಕ್ಕ ಎಲ್ಲಾ ನಿಯಮಗಳ್ನೂ ಮುರೀಬಹುದು.. ದೇಶಭಕ್ತಿ ಅಂದ್ರೆ ಹೆಂಗಸರನ್ನ ಮತ್ತು ಚಿಕ್ಕ ಮಕ್ಕಳನ್ನ ಉಳಿಸಿಕೊಂಡು, ಮಿಕ್ಕ ಎಲ್ಲರೂ ಪ್ರಾಣ ಕೊಡೋಕೆ ಸಿದ್ಧರಾಗಿರೋದು.
- ಪ್ರಗತಿ ಬೆಳಗ್ಗೆ ಬೇಗ ಎದ್ದು, ಮೈ ಮುರಿದು ದುಡಿಯೋ ಮಂದಿಯಿಂದ ಆಗೋದಿಲ್ಲ. ಸುಲಭದ ದಾರಿ ಹುಡುಕೋ ಸೋಮಾರಿಗಳಿಂದ...
- ಎಲ್ಲಾ ಮನುಶ್ಹ್ಯರೂ ಮೇಲುಕೀಳಾಗಿಯೇ ಹುಟ್ಟೋದು.
- ಇತಿಹಾಸವನ್ನ ನಿರ್ಲಕ್ಶ್ಹ್ಯ ಮಾಡೋ ಜನಾಂಗ, ಉದ್ಧಾರ ಆಗೋಲ್ಲ. (ನಮ್ಮ ಸ್ಮಾರಕಗಳನ್ನ ನೋಡಿ)
- ಸತ್ತಿರೋ ಸಿಂಹ ಅಗೋಕಿಂತ ಬದುಕಿರೋ ನರಿಯಾಗೋದು ವಾಸಿ. ಆದ್ರೆ, ಬದುಕಿರೋ ನರಿಗಿಂತ್ಲು ಬದುಕಿರೋ ಸಿಂಹ ಆಗೋದು ಸುಲಭ ಮತ್ತು ಒಳ್ಳೇದು ಕೂಡ.
- ಮುಠ್ಠಾಳತನದ ಶಕ್ತಿ ತುಂಬಾ ಜಾಸ್ತಿ. ಅದನ್ನ ಎಂದೂ ಕಡೆಗಣಿಸಬೇಡಿ.
- ಒಂದೋ ಶಾಂತಿ ಪಡೀಬಹುದು, ಅಥವಾ ಸ್ವಾತಂತ್ರ್ಯ ಪಡಿಬಹುದು. ಎರಡು ಕೂಡಾ ಜೊತೆಗೆ ಸಿಗೋಲ್ಲ.
- ನಮ್ಮನ್ನ ನಾವೇ ಸಾಯಿಸಿಕೊಂಡ್ರೆ, ಅದು ಸೈನ್ಸ್ ನ ತಪ್ಪು ಬಳಕೆಯಿಂದ. ನಮ್ಮನ್ನ ನಾವೇ ಸಾಯಿಸಿಕೊಳ್ಳೋದರಿಂದ ಬಚಾವ್ ಮಾಡಿಕೊಂಡ್ವಿ ಅಂದ್ರೆ, ಅದು ಸೈನ್ಸ್ ನ ಸದ್ಬಳಕೆಯಿಂದ.
- ನನಗೆ ಗೊತ್ತಿಲ್ಲ ಅಂತ ಒಪ್ಪಿಕೊಂಡ್ರೆ, ಗೊತ್ತು ಮಾಡಿಕೊಳ್ಳೋಕೆ ಸಾಧ್ಯ.
- ಶಿಷ್ಟಾಚಾರ ಸದಾ ಪಾಲಿಸಬೇಕು ಅಂತ ಅನ್ನೋವನು ಬೆಕ್ಕಿನ ಜೊತೆ ಆಟವಾಡಿಲ್ಲ.
ಶಿವಪೂಜೆ ನಡುವೆ ಕರಡಿ ಬಿಟ್ಟ ಹಾಗೆ ... ಇದು ತಪ್ಪಾದ ಉಚ್ಚಾರಣೆ .
"ಶಿವಪೂಜೆ ನಡುವೆ ಕರಡಿಗೆ(ಲಿಂಗವೊತ್ತಿಗೆ - ಲಿಂಗವನ್ನು ಇಟ್ಟುಕೊಳ್ಳುವ ಒಂದು ಪುಟ್ಟ ಪೆಟ್ಟಿಗೆ ) ಬಿಟ್ಟ ಹಾಗೆ " - ಇದು ಸರಿಯಾದ ಉಚ್ಚಾರಣೆ
ಕರಡಿಗೆ ಅನ್ನುವುದು ಬಹಳ ಜನಕ್ಕೆ ಪರಿಚಯವಿಲ್ಲದಿರುವುದು(ವೀರಶೈವದವರನ್ನು ಹೊರತುಪಡಿಸಿ) ಮತ್ತು ಕಾಲಕ್ರಮೇಣ ಇದು ಕರಡಿಗೆಯಿಂದ ಕರಡಿ ಅಯಿತು.
ವಿವರಣೆ : ಶಿವಪೂಜೆಗೆ ಮುಖ್ಯವಾಗಿ ಬೇಕಾಗಿರುವುದು ಶಿವಲಿಂಗ, ಇದನ್ನು ಕರಡಿಗೆಯೆಂಬ ಪುಟ್ಟ ಪೆಟ್ಟಿಗೆಯಲ್ಲಿ ಇಟ್ಟು ಅದನ್ನು ಶಿವದಾರದಿಂದ ಪೋಣಿಸಿ ಅದನ್ನು ಸದಾಕಾಲ ಕೊರಳಲ್ಲಿ ಧರಿಸುತ್ತಾರೆ.
ಶರಣರು ಶಿವಪೂಜೆ ಮಾಡಬೇಕೆಂದಾಗಲೆಲ್ಲ, ತಮ್ಮ ಕೊರಳಲ್ಲಿಯೇಯಿರುವ ಕರಡಿಗೆಯಿಂದ ಶಿವಲಿಂಗವನ್ನು(ಇಷ್ಟಲಿಂಗ) ತೆಗೆದು ಪೂಜೆ ಮಾಡಿಕೊಳ್ಳುತ್ತಾರೆ. ಇದರಿಂದ ತಿಳಿಯುತ್ತೆ - ಶಿವಪೂಜೆ ಮಾಡಿಕೊಳ್ಳಲು ಕರಡಿಗೆ ಮುಖ್ಯ ಕರಡಿ ಅಲ್ಲಾ.
ಈ ಗಾದೆಯ ಮೂಲ ಉಚ್ಚಾರಣೆ ನನಗೆ ತಿಳಿದಿದ್ದು - ರಾಜಕುಮಾರ್ ಅವರ ಒಂದು ಹಳೆಯ ಚಿತ್ರ ನೋಡುವಾಗ, ಅಲ್ಲಿಯ ತನಕ ನಾನು ಕೂಡ ಎಲ್ಲರಂತೆ ಶಿವಪೂಜೆ ನಡುವೆ ಕರಡಿ ಬಿಟ್ಟ ಹಾಗೆ ಎಂದು ತಿಳಿದಿದ್ದೆ!
#ಸರಿಯಾದಅರ್ಥ
ಯೋಗ ಮಾಂತ್ರಿಕ ವಿದ್ಯೆಯಲ್ಲ.
ಅದರಲ್ಲಿ ರಹಸ್ಯವೇನಿಲ್ಲ !
ಮನುಷ್ಯನನ್ನು ಪೂರ್ಣ ಸ್ವಸ್ಥನನ್ನಾಗಿಸುವ್ುದೇ
ಯೋಗದ ಮುಖ್ಯ ಉದ್ಯೇಶ !
-ನಾನಾ ,ಕೊಳ್ಳೇಗಾಲ !
.