ನುಡಿಮುತ್ತುಗಳು

March 01, 2013
0

ವಿಸ್ತಾರವೊಂದೇ ರಾಜ್ಯವನ್ನು ಕಟ್ಟಲಾರದು.

February 28, 2013
0

ಆಧುನಿಕ ರಾಜಕೀಯ ಮನುಷ್ಯರ ನಡುವಿನ ತಿಕ್ಕಾಟವಲ್ಲ;

ಶಕ್ತಿ ಕೂಟಗಳ ನಡುವಿನ ಹೋರಾಟ.

February 28, 2013
0

ಸಾವಿರ ಅಶ್ವಮೇಧ ಯಾಗಗಳನ್ನೂ, ಸತ್ಯವನ್ನೂ ತಕ್ಕಡಿಯಲ್ಲಿ ತೂಗಿದಾಗ -

ಸಹಸ್ರ ಅಶ್ವಮೇಧಗಳಿಗಿಂತ ಸತ್ಯವೇ ಹೆಚ್ಚು ತೂಗುತ್ತದೆ.

February 28, 2013
0

ಯಾರು ಈ ಲೋಕದಲ್ಲಿ ಅತ್ಯಂತ ಮೂಢರೋ, ಯಾರು ಅತ್ಯಂತ ಬುದ್ಧಿಶಾಲಿಗಳೋ-

ಅವರೇ ಸುಖವಾಗಿರುವವರು. ಮಧ್ಯಮ ವರ್ಗದವರು ಕ್ಲೇಶ ಪಡುತ್ತಾರೆ.

February 28, 2013
0

ಕುರುಡನ ಹೆಗಲ ಮೇಲೆ ಹೆಳವ ಕುಳಿತು ಒಂದು ಗಾವುದ  ದೂರ ನಡೆದ ಮಾತ್ರಕ್ಕೆ,

ಅದು ಒಬ್ಬ ಬಲಿಷ್ಠನು ದಾರಿ ನಡೆದಂತೆ ಆದೀತೆ?

February 28, 2013
0

ಮಲ್ಲಿಗೆಯ ಪರಿಮಳವನ್ನು ಬಲ್ಲ ದುಂಬಿಯು ದರ್ಭೆಯನ್ನು ಮೋಹಿಸುವುದಿಲ್ಲ.

February 27, 2013
0

ಕೀರ್ತಿ ವಿಸ್ತರಿಸುತ್ತಾ ಹೋಗುವ ಅಲೆಯಂತೆ. ಒಮ್ಮೆಲೇ ಇಲ್ಲವಾಗಿ ಬಿಡಬಹುದು!

February 27, 2013
0

ಒಂದೊಂದು ಹನಿಯಾಗಿಯೇ ಬಿದ್ದರೂ ಕಾಲಾಂತರದಲ್ಲಿ ಕೊಡವು ನೀರಿನಿಂದ ತುಂಬುವುದು.

ಅದೇ ರೀತಿ ವಿದ್ಯೆ ಮತ್ತು ಹಣವೂ ಸಹ ಹನಿ ಹನಿಯಂತೆ ಸ್ವಲ್ಪ ಸ್ವಲ್ಪ ವಾಗಿಯೇ ಸಂಗ್ರಹವಾಗುವುದು.

February 27, 2013
0

ಹಿಂದೆ ಹೆಜ್ಜೆ ಇಡದಿದ್ದರೆ ಒಂದು ರೀತಿಯಲ್ಲಿ ಮುಂದೆ ಹೋದಂತೆಯೇ .

February 27, 2013
0

ಎಲ್ಲರ ಆಸೆಗಳನ್ನೂ ಪೂರೈಸುವ ತಾಕತ್ತು ನಮ್ಮ ನಿಸರ್ಗಕ್ಕಿದೆ, ಎಲ್ಲರ ದುರಾಸೆಗಳನ್ನಲ್ಲ.

February 27, 2013
0

ಎಲ್ಲರಿಗೂ ಸ್ವಲ್ಪ ಕಾಲ ಮೋಸ ಮಾಡಬಹುದು; ಕೆಲವರಿಗೆ ಸದಾ ಮೋಸ ಮಾಡಬಹುದು;

ಆದರೆ ಎಲ್ಲರನ್ನೂ ಎಲ್ಲ ಕಾಲವೂ ಮೋಸಪಡಿಸಲು ಸಾಧ್ಯವಿಲ್ಲ.

February 26, 2013
0

ಒಬ್ಬನಿಗೆ ಗೊತ್ತಿರುವ  ಗುಟ್ಟು, ಯಾರಿಗೂ ಗೊತ್ತಿರದ ಗುಟ್ಟು;

ಇಬ್ಬರಿಗೆ ಗೊತ್ತಾದ ಗುಟ್ಟು ರಟ್ಟಾದ ಗುಟ್ಟೇ.

February 26, 2013
0

ಹರ ಕೊಲ್ಲಲ್ ಪರ ಕಾವನೇ.

February 26, 2013
0

ಅಜೀರ್ಣವಾದ ಸಮಯದಲ್ಲಿ ಹಿತಕರವಾಗಿರುವ ಅನ್ನವೂ ಕೂಡಾ

ವ್ಯಾಧಿಗೆ ಅಥವಾ ಮರಣಕ್ಕೆ ಕಾರಣವಾಗುತ್ತದೆ.

February 26, 2013
0

ನನಗೆ ಗುಲಾಬಿ ಹೂವು ಎಷ್ಟು ಪ್ರಿಯವೋ, ಕಳ್ಳಿಯ ಪೊದೆ ಕೂಡ ಅಷ್ಟೇ ಪ್ರಿಯ.

February 26, 2013
0

ಯುದ್ಧ ಮಾಡುವವನು ತಾನು ಯಾಕೆ ಯುದ್ಧ ಮಾಡುತ್ತಿದ್ದೇನೆ ಎನ್ನುವ ಕಾರಣವನ್ನು ಸ್ಪಷ್ಟವಾಗಿ ಪ್ರಾಮಾಣಿಕವಾಗಿ ತಿಳಿದಿರಬೇಕು.

ಅಂತರಂಗದ ನಿಷ್ಠೆ ಇಲ್ಲದಿದ್ದರೆ ಸೇಹ ಧೈರ್ಯ ಎಲ್ಲಿಂದ ಬರುತ್ತದೆ?

February 25, 2013
0

ಯುದ್ಧ ಮಾಡುವವು ಶಸ್ತ್ರಗಳಲ್ಲ. ಶಸ್ತ್ರಗಳ ಹಿಂದಿನ ಶಕ್ತಿಗಳು;

ಅದಕ್ಕಿಂತ ಖಚಿತವಾಗಿ ಹೇಳುವುದಾದರೆ-ನಾವು ಒಪ್ಪಿಕೊಂಡ ಜೀವನ ಕ್ರಮ.

February 25, 2013
0

ದಡ್ಡನಾದರೂ ನಾಲಿಗೆ ಬಿಗಿ ಹಿಡಿದರೆ ಅವನೂ ವಿವೇಕಿ ಎನ್ನಿಸಿಕೊಳ್ಳುತ್ತಾನೆ.

February 25, 2013
0

ಅರಸನಾದವನು ಆಳಬೇಕು. ಅಳಬಾರದು.

ಅಳೋ ಸಮಯ ಬಂದರೂ ಅದು ಮನಸ್ಸಿನಲ್ಲೇ ಇರಬೇಕು.

ಕಣ್ಣಲ್ಲಿ ಮುಖದಲ್ಲಿ ಕಾಣಿಸಬಾರದು.

February 25, 2013
0

 ಮಾತನಾಡುವ ಸಾಮರ್ಥ್ಯವಿದ್ದರೂ ವ್ಯರ್ಥವಾದ ಯಾವ ಮಾತನ್ನೂ ಆಡದಿರುವವನು ಮೌನಿ.

February 25, 2013
0

ಸಾಹಿತ್ಯ, ಸಂಗೀತ, ಕಲೆಗಳನ್ನು ಕಲಿಯದವನು ಬಾಲ, ಕೊಂಬುಗಳಿಲ್ಲದ ಸಾಕ್ಷಾತ್ ಪಶು.

ಹುಲ್ಲು ತಿನ್ನದೆಯೇ ಅವನು ಜೀವಿಸುವುದು ಪಶುಗಳ ಪರಮ ಭಾಗ್ಯ.

February 24, 2013
0

 ಎಡವಿದವನು ಒಬ್ಬೊಬ್ಬನೂ ವಧ್ಯನೆಂಬುದೇ ನಿಶ್ಚಯನಾಗಿಬಿಟ್ಟರೆ ಲೋಕದಲ್ಲಿ ಇಬ್ಬರು ಅಥವಾ ಮೂರು ಜನ ಉಳಿದಾರು !

ಮನುಷ್ಯರೆಲ್ಲಾ ಎಷ್ಟಾದರೂ ಹೆಚ್ಚು ದೋಷಗಳುಳ್ಳವರೆ!

February 24, 2013
0

ಜನರನ್ನು ನೀತಿ ಮಾರ್ಗದಲ್ಲಿ ಬೆಳೆಸಿ ತಂದಿರುವುದು ಭಗವಂತನ ಬಗೆಗೆ ಭಯ ಮತ್ತು ಪ್ರೀತಿ.

ಆದ್ದರಿಂದ ದೇವರಿಲ್ಲದೆ ಮನುಷ್ಯ ಬದುಕಲಾರನೆನಿಸುತ್ತದೆ.

February 24, 2013
0

ತಪ್ಪನ್ನು ಮಾಡುವ ಮೊದಲೇ ಮುಖಂಡನನ್ನು ಆಕ್ಷೇಪಿಸುತ್ತಾರೆ!

ಒಳ್ಳೆಯದನ್ನು ಮಾಡುವ ಮೊದಲೇ ಹೊಗಳುತ್ತಾರೆ!.