ಮನೋ ನಿಯಂತ್ರಣ ಮತ್ತು ಮನಸ್ಸಿನ ವಿಶಾಲತೆ
1 day ago - Shreerama Diwana"ನೀವು ಹೆಚ್ಚು ತಿಳಿದುಕೊಳ್ಳುತ್ತಾ ಹೋದಂತೆ, ಗೊತ್ತಿಲ್ಲದಿರುವುದು ಬಹಳಷ್ಟಿದೆ ಎಂಬುದು ನಿಮ್ಮ ಅರಿವಿಗೆ ಬರುತ್ತದೆ” - ಅರಿಸ್ಟಾಟಲ್. " ಜ್ಞಾನದ ಬಲದಿಂದ ಅಜ್ಞಾನದ ಕೇಡ ನೋಡಾ " ವಚನ ಸಂಸ್ಕೃತಿ. ಮನೋ ನಿಯಂತ್ರಣ ಮತ್ತು ಮನಸ್ಸಿನ ವಿಶಾಲತೆ.
ಮನಸ್ಸಿಗೆ ಏನೋ ಕಿರಿಕಿರಿಯಾಗುತ್ತಿದೆಯೇ ? ಒಳಗೊಳಗೆ ಹೇಳಿಕೊಳ್ಳಲಾಗದ ಅಸಹನೆ ಉಂಟಾಗುತ್ತಿದೆಯೇ ? ಕೌಟುಂಬಿಕ ಸಂಬಂಧಗಳಲ್ಲಿ ಸಹಿಸಲಾಗದ ಮಾನಸಿಕ ಹಿಂಸೆಯಾಗುತ್ತಿದೆಯೇ ? ಹೊರ ಜಗತ್ತಿನ ನಮ್ಮ ಸುತ್ತಮುತ್ತಲಿನ ಅನೇಕ ಘಟನೆಗಳು ನಮ್ಮ ಇಚ್ಚೆಗೆ ವಿರುದ್ಧವಾಗಿ ಘಟಿಸುತ್ತಿದೆಯೇ ? ಮಾಧ್ಯಮ, ಗೆಳೆತನ, ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ನಂಬಿಕೆಗೆ ವಿರೋಧ ವ್ಯಕ್ತವಾಗುತ್ತಿದೆಯೇ ? ಧರ್ಮ, ಜಾತಿ, ಭಾಷೆ, ಹಣಕಾಸು, ಪಕ್ಷ, ಸಂಪ್ರದಾಯ, ಸಿದ್ದಾಂತಗಳ ವಿಷಯದಲ್ಲಿ ಏನೋ ಒಂತರಾ ಕಸಿವಿಸಿ ಎನಿಸುವಂತೆ ಮನಸ್ಸಿಗೆ ತಳಮಳವಾಗುತ್ತಿದೆಯೇ? ಕೆಲವು ವಿಷಯಗಳ ಬಗ್ಗೆ ಬೇಗ ಕೋಪ ಬಂದು ಪ್ರತಿಕ್ರಿಯಿಸಿ ವಿರೋಧಿಗಳ ಸದ್ದಡಗಿಸಬೇಕು ಎಂಬ ಅಭಿಪ್ರಾಯ ಉಂಟಾಗಿ ಬಿಪಿ ಏರಿಕೆಯಾಗುತ್ತದೆಯೇ ? ಈ ರೀತಿಯ ಕೆಲವು ಅಥವಾ ಎಲ್ಲವೂ ನಿಮ್ಮಲ್ಲಿ ಉಂಟಾಗುತ್ತಿದ್ದರೆ ಅದನ್ನು ನಿಯಂತ್ರಿಸಿಕೊಳ್ಳಲು ಕೆಲವು ಸಲಹೆ ರೂಪದ ಕಿವಿಮಾತುಗಳು ನಿಮಗಾಗಿ…
ನಿಮ್ಮ ಮನಸ್ಸನ್ನು ವಿಶಾಲಗೊಳಿಸಿಕೊಂಡರೆ ಖಂಡಿತವಾಗಿ ಈ ಸಮಸ್ಯೆಗಳಿಗೆ ಸಹಜ ಸ್ವಾಭಾವಿಕವಾಗಿ ಪರಿಹಾರ ಕಂಡುಕೊಳ್ಳಬಹುದು ಮತ್ತು ನೆಮ್ಮದಿಯಿಂದ ಬದುಕಿನ ಸಾರ್ಥಕತೆಯತ್ತ ಹೆಜ್ಜೆ ಹಾಕಬಹುದು. ಹೇಗೆ ಮನಸ್ಸನ್ನು ವಿಶಾಲ ಮಾಡಿಕೊಳ್ಳುವುದು ?
1) ನಮ್ಮ ಮೂಲ ನಿಷ್ಠೆಯನ್ನು ಪ್ರಕೃತಿಗೆ ವರ್ಗಾಯಿಸುವುದು. ನಮ್ಮನ್ನು ಹುಟ್ಟಿಸಿರುವ ಅಪ್ಪ ಅಮ್ಮ, ನಾವು ಹುಟ್ಟಿಸುವ ಮಕ್ಕಳು ಸೇರಿ ಎಲ್ಲಾ ಸಂಬಂಧಗಳು ಒಂದು ಸಾಮಾಜಿಕ ವ್ಯವಸ್ಥೆಯೇ ಹೊರತು ಅದೇ ಅಂತಿಮವಲ್ಲ… ಮುಂದೆ ಓದಿ...