ನಿಷ್ಪಾಪಿ ಸಸ್ಯಗಳು (ಭಾಗ ೭೩) - ತುರಿಕೆ ಬಳ್ಳಿ
2 days ago - ಬರಹಗಾರರ ಬಳಗಇಂದು ನಾವು ವಿಶಿಷ್ಠವಾದ ಸಸ್ಯವೊಂದರ ಪರಿಚಯವನ್ನು ಮಾಡಿಕೊಳ್ಳೋಣ. ಇದು ಒಮ್ಮೆ ನಿಮಗೆ ಕಾಣ ಸಿಕ್ಕರೆ, ನೀವದನ್ನು ಮುಟ್ಡಿದಿರೆಂದಾದರೆ ಖಂಡಿತ ಮರೆಯಲಾರಿರಿ! ತನ್ನ ಪರಿಚಯವನ್ನು ಸ್ವತಃ ಮಾಡಿಕೊಂಡು ಮಾತಿಗಿಳಿಯುವ ವಾಚಾಳಿಯಂತೆ ಈ ಸಸ್ಯದ ಎಲೆಗಳನ್ನು ಸೋಕಿದರೆ ಸಾಕು... ತುರಿಕೆ ಉರಿಯ ಅನುಭವ ಇಡೀ ದಿನವನ್ನೇ ಹಾಳುಮಾಡಬಲ್ಲದು.
ನಾನೊಮ್ಮೆ ಮಾರ್ಗದ ಬದಿಯಿದ್ದ ಉರ್ಕಿ ಎಂಬ ಗಿಡದ ಎಲೆಗಳು ಚಂದ ಕಂಡವೆಂದು ಒಂದೆರಡು ಎಲೆಗಳನ್ನೂ ಕೀಳಲು ಕೈ ಹಾಕಿದ್ದೇ ತಡ, ಒಮ್ಮೆಲೆ ಚೇಳು ಕುಟುಕಿದಂತಾಗಿತ್ತು. ಹಸಿರು ಎಲೆಗಳ ನಡುವೆ ಏನೂ ಕಾಣಿಸಲಿಲ್ಲ. ಕಂಬಳಿಹುಳವೇನಾದರೂ ಇದೆಯೇ ಎಂದು ಮತ್ತೆ ಪರೀಕ್ಷಿಸಲೆಂದು ಎಲೆಗಳನ್ನು ಪರೀಕ್ಷಿಸಿಸಿದೆ. ಪುನ: ಕೈ ಬೆರಳಗಳ ಮೇಲ್ಬಾಗ ತೀಕ್ಷ್ಣ ವಾಗಿ ಉರಿಯತೊಡಗಿ ತುರಿಸತೊಡಗಿತು. ನನಗಾಗಲೇ ನಾನು ತುರಿಕೆ ಬಳ್ಳಿಯ ಸ್ನೇಹ ಮಾಡಿದೆನೆಂಬ ಅರಿವಾಯಿತು. ನೋಡಿದರೆ ಅದೊಂದು ತೆಳ್ಳನೆಯ ಬಳ್ಳಿ. ಚಂದದ ಹೊಳೆಯುವ ಹಸಿರು ಎಲೆಗಳು. ಕುಟುಕುವ ಕೂದಲಿನೊಂದಿಗೆ 6ರಿಂದ 10 cm ಉದ್ದನೆಯ ಅಂಡಾಕಾರದ ಎಲೆಗಳು. ಎಲೆಗಳಲ್ಲಿ ಮಾತ್ರವಲ್ಲದೆ ಮೃದುವಾದ ಕಾಂಡದ ಸುತ್ತಲೂ ಸೂಕ್ಷ್ಮಬಿಳಿ ರೋಮಗಳಿರುತ್ತವೆ. ಇದರ ತುರಿಕೆಗೆ ಸೆಗಣಿ ಹಚ್ಚಿದರೆ ಉಪಶಮನವಾಗುವುದೆನ್ನುತ್ತಾರೆ. ದುಂಡಾದ ಬುಡ, ತುದಿ ಚೂಪು. ಎಲೆಗಳ ಮೇಲ್ಭಾಗ ಹಸಿರಿದ್ದರೆ ಕೆಳಭಾಗ ಮಾಸಲು ಬಿಳಿ. ಎಲೆಗಳ ಅಂಚು ಗರಗಸದ ಹಲ್ಲಿನಂತೆ ಇರುತ್ತದೆ. ಎಲೆಗಳ ಬುಡದಲ್ಲಿ ವಿಶೇಷ ರೀತಿಯ ಪುಷ್ಪಗಳು ಅರಳುತ್ತವೆ. ಇವು ಚರ್ಮರೋಗ, ಸುಟ್ಟಗಾಯ, ಕೂದಲಿನ ಮರುಹುಟ್ಟಿಗೆ ಸಹಾಯಕವಾಗಿವೆ. ಫೆಬ್ರವರಿಯಿಂದ ಜೂನ್ ವರೆಗೂ ಹೂಹಣ್ಣುಗಳಾಗುತ್ತವೆ. ಬೂದು ಮಿಶ್ರಿತ ಕಂದು ಬೀಜ ನಯವಾಗಿದ್ದು 8mm ವ್ಯಾಸ ಹೊಂದಿರುತ್ತದೆ. ಸಂಪೂರ್ಣ ಸಸ್ಯದ ಮೇಲೆ ಕಂಡುಬರುವ ಚೂಪಾದ ಸಿಲಿಸ… ಮುಂದೆ ಓದಿ...