ನಿಷ್ಪಾಪಿ ಸಸ್ಯಗಳು (ಭಾಗ ೬೯) - ಭಾರಂಗಿ ಗಿಡ
18 hours 41 minutes ago - ಬರಹಗಾರರ ಬಳಗನೀವು ಶಾಲೆಗೆ ಹೋಗುವಾಗ ಅಥವಾ ಗದ್ದೆ, ಗುಡ್ಡದ ಬದಿಗಳಲ್ಲಿ ಕಡು ನೀಲಿಯಿಂದ ಕಡು ನೇರಳೆ ವರ್ಣದ ಹೂಗೊಂಚಲೊಂದು ರಾರಾಜಿಸುತ್ತಿರುವುದನ್ನು ಎಂದಾದರೂ ಗಮನಿಸಿದ್ದೀರಾ...? ಮೊಂಡಾದ ಚತುರ್ಭುಜದ ಕಾಂಡದುದ್ದಕ್ಕೂ ಮೂರು ದಿಕ್ಕಿಗೆ ಮೂರು ಒಂದಿಷ್ಟು ದಪ್ಪನೆ ಒರಟಾದ ಅಂಡಾಕಾರದ ರೋಮರಹಿತ ಎಲೆಗಳು. 3 ರಿಂದ 8 ಇಂಚುಗಳಷ್ಟು ಉದ್ದ, 5 ರಿಂದ 6 ಸೆ.ಮೀ. ತೊಟ್ಟು ಗಟ್ಟಿಯಾಗಿರುವ ಎಲೆಗಳ ತುದಿ ಚೂಪಾಗಿರುತ್ತದೆ. ಎಲೆಗಳ ಅಂಚು ಗರಗಸದ ಚೂಪಾದ ಹಲ್ಲುಗಳಂತಹ ಚೂಪಿನ ರಚನೆ ಹೊಂದಿದೆ.
ಪ್ರತಿ ಶಾಖೆಯ ತುದಿಯಲ್ಲಿ ಹೂ ಗೊಂಚಲು. ಮೂರು ಪುಟಾಣಿ ಎಲೆಗಳ ಮೇಲೆ ಮೇಲೇರುತ್ತಾ ಈ ಹೂಗೊಂಚಲು ಬೆಳೆಯತೊಡಗುತ್ತದೆ. ಗೊಂಚಲುದ್ದಕ್ಕೂ ಮೂರು ಮೂರು ಪುಟ್ಟ ಎಲೆಗಳ ಮೇಲೆ ಮೂರು ಕೆಲವೊಮ್ಮೆ ಎರಡು ಪುಟ್ಟ ಹೂಗೊಂಚಲು. ಒಂದೊಂದು ಪುಟ್ಟ ಗೊಂಚಲಲ್ಲಿ ಆರೇಳು ಮೊಗ್ಗುಗಳು. ಇವುಗಳ ಬೆಳವಣಿಗೆ ಒಮ್ಮೆಲೇ ಆಗದು. 15 ರಿಂದ 20 ಸೆಂ.ಮೀ ಉದ್ದನೆಯ ಪುಷ್ಪಮಂಜರಿಯ ನಡುನಡುವೆ ಅಲ್ಲಲ್ಲಿ ಅರಳುವ ಹೂಗಳು ಸೊಗಸನ್ನು ಹೆಚ್ಚಿಸುತ್ತವೆ.
ಹೂಗಳು ನಸು ನೇರಳೆ ವರ್ಣದ ಪುಷ್ಪಪಾತ್ರೆಯೊಳಗೆ ಐದು ಎಸಳುಗಳ ಜೊತೆ ಐದು ಕೇಸರಗಳು ಶಲಾಕಾಗ್ರದ ಜೊತೆಗರಳುತ್ತವೆ. ಅತ್ತ ಇತ್ತ ಎರಡೆರಡು ದಳಗಳು. ಈ ಅಭಿಮುಖ ದಳಗಳ ನಡುವೆ ಕಡು ನೇರಳೆ ಬಣ್ಣದೊಳದ್ದಿಕೊಂಡು ಉಳಿದ ದಳಗಳಿಗಿಂತ ವಿನ್ಯಾಸ ಬದಲಿಸಿ ನಸು ಬಾಗಿ ಮದುವಣಗಿತ್ತಿಯಂತೆ ನಿಂತ ಮತ್ತೊಂದು ದಳ! ಈ ಹೂಗಳ ಚೆಲುವಿಕೆಗೆ ನೀವತ್ತ ಕಣ್ಣರಳಿಸಲೇ ಬೇಕು! ಇದು ಯಾವ ಗಿಡವೆಂದು ಎಲೆಗಳತ್ತ ಖಂಡಿತ ನೋಡುವಿರಿ. ಇದರ ಹಣ್ಣುಗಳು ಅಂಡಾಕಾರವಾಗಿ ಹಸಿರಾಗಿದ್ದು ಮಾಗಿದಾಗ ರಸವತ್ತಾಗಿ ಕಡು ನೇರಳೆ ಬಣ್ಣ ಹೊಂದಿ ಒಂಟಿ ಬೀಜವಿರುತ್ತದೆ.
ಸುವಾಸನೆ ತುಂಬಿದ ಎಲೆಗಳಿರುವ ಈ ಗಿಡ 6-7 ಅಡಿಗಳೆತ್ತರ ಬೆಳೆದು ಎಲ್ಲಾದರೂ ಪೊದರುಗಳ ನಡು… ಮುಂದೆ ಓದಿ...