ಚೇತನ್ ಭಗತ್ ಬರೆದ 'ದ ತ್ರಿ ಮಿಸ್ಟೇಕ್ಸ್ ಆಫ್ ಮೈ ಲೈಫ್' ನಿಜಕ್ಕೂ ಆಸಕ್ತಿ ಮೂಡಿಸುವಂತಹ ಪುಸ್ತಕ. ಮೇಲ್ನೋಟಕ್ಕೆ ಅಹಮದಾಬಾದ್ ನ ಮೂರು ಗೆಳೆಯರ ಜೀವನದ ಭಿನ್ನ ಆಸಕ್ತಿ, ದ್ವಂದ್ವ, ನೋವು-ನಲಿವುಗಳ ಕಥೆಯಂತೆ ಕಂಡರೂ, ಕಥೆಯೊಳಗೆ ಇಳಿದಾಗ ಭಾರತೀಯ…
ಕೊಡಗಲಿ ಮೊಳಗಿದ ಕನ್ನಡ ದುಂದುಭಿ
ಕಡುಗಲಿ ಕೊಡವರ ಕನ್ನಡ ಕಲರವ
ಕೋವಿಯ ಗುಡುಗಿಸಿ ವೈರಿಯ ನಡುಗಿಸಿ
ಕದನದಿ ದಣಿಯದ ಕಡುಗಲಿ ಕೊಡವರ
ಸಿಂಹದ ನಾದದ ವಿಜಯದ ಘೋಷದಿ
ಕನ್ನಡ ಕಾವ್ಯದ ಕಹಳೆಯ ಮೊರೆತ
ಕಾವೇರಿ ಕಣಿವೆಯ ಪುಣ್ಯದ ಮಕ್ಕಳು
ಭಾರತ ಮಾತೆಯ…
ಇಂದ್ರನಿಗೊಂದು ವಾಯುವಿಗೆರೆಡು
ಯಮನಿಗೆ ಮೂರು ನೈರುತ್ಯಗೆನಾಲ್ಕು
ಮಧ್ಯಕೆ ಐದು ಈಶಾನ್ಯನಿಗಾರು
ಕುಬೇರನಿಗೇಳು ಅಗ್ನಿಗೆ ಎಂಟು
ವರುಣನಿಗೊಂಭತ್ತು ಗಣಿತದ ಗಮ್ಮತ್ತು
ಮಾಯಾಚೌಕದ ಮೋಜಿನಮೊತ್ತದ
ಲೆಕ್ಕದ ಆಟವೆ ಮುಗಿದಿತ್ತು.
ಎಲ್ಲರೂ ಕಷ್ಟ ಪಡುವುದೇ ಮುಂದಿನ ಸುಖದ ಜೀವನಕ್ಕಾಗಿ- ಎಂಬುದು ಸಾಮಾನ್ಯ ಅಭಿಪ್ರಾಯ. ನೀನು ಹೇಗಿದ್ದೀಯಾ? ಎಂದು ಕೇಳಿದರೆ, ಸಂತೋಷವಾಗಿದ್ದೀನಿ, ಎನ್ನುವವರು ಎಷ್ಟು ಮಂದಿ? ಆತ್ಮೀಯರು ಯಾರಾದರೂ ಎದುರಿಗೆ ಸಿಕ್ಕಿದರೆ ಸಾಕು ತಮ್ಮ ಜೀವನದ…
ಜೀವನ ದರ್ಶನ
==========
ಊರಿಗೆ ಬಂದು ಇಪ್ಪತ್ತು ವರ್ಷಗಳೆ ಕಳೆದಿತ್ತು. ಮೊದಲಿಗೆ ಅಪ್ಪ ಅಮ್ಮನಿರುವವರೆಗೂ ಇದ್ದ ಆಕರ್ಷಣೆ ಈಗೇನು ಇರಲಿಲ್ಲ. ಅಲ್ಲದೆ ನಾನು ಊರು ಬಿಟ್ಟು ಊರೂರು ಸುತ್ತತ್ತ ಹೆಂಡತಿ ಮಕ್ಕಳೊಡನೆ ಓಡಾಡಿದ್ದೆ ಆಯಿತು, ಸರಕಾರಿ…
ಅದೊಂದು ಹಳೆಯ ಕಟ್ಟಡದಲ್ಲಿರುವ ಶಾಲೆ. ಆ ಶಾಲೆಯ ಮುಂದಿದ್ದ ಪುಟ್ಟ ಅಂಗಳದಲ್ಲಿ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಸಾಲು-ಸಾಲಲ್ಲಿ ನಿಂತು ಪ್ರಾರ್ಥನೆಯನ್ನು ಹಾಡುತ್ತಿದ್ದರು.ಸ್ವಲ್ಪ ಜನ ಹೊಸ ಸಮವಸ್ತ್ರ ಧರಿಸಿದ್ದರೆ, ಸುಮಾರು ಜನ…
ಮುಂಬಯಿಯ ಅವಸರದ ಬದುಕಿನ ಒಳಸುಳಿಗಳನ್ನು ಬಿಚ್ಚುವ ಕಾಯ್ಕಿಣಿಯವರ ಕಥೆ ತೆರೆದಷ್ಟೆ ಬಾಗಿಲು. ಇವರ ಕಥೆಗಳಲ್ಲಿ ಪಾತ್ರಗಳಷ್ಟೇ ಅಲ್ಲ, ಪಾತ್ರಗಳ ಮನಸ್ಸುಗಳು, ಹಾಗೆಯೇ ಪಾತ್ರದ ಪರಿಸರವೂ ಮಾತನಾಡುತ್ತವೆ ಎಂದು ಇತ್ತೀಚೆಗೆ ಸಂಧ್ಯಾರಾಣಿಯವರು…
ಅನೇಕ ಸಂಗಮ ಸ್ಥಳಗಳನ್ನು ನಾವು
ನೋಡಿರುತ್ತೇವೆ
ತಂಗೆ ಭದ್ರೆಯರ ‘ಕೂಡಲಿಯ ಸಂಗಮ’
ಭೀಮೆ ಕೃಷ್ಣೆಯರ ‘ ಕೂಡಲ ಸಂಗಮ’
ಗಂಗಾ ಯಮುನಾ ಸರಸ್ವತಿಯರ
'ತ್ರಿವೇಣಿ ಸಂಗಮ'
ಈ ಸಂಗಮಗಳು ಬಹು ಮಾರ್ಮಿಕ
ಜೊತೆಗೆ ಬಾಳಿನ ಎಲ್ಲ ಸಾರ್ಥಕತೆ
ಮತ್ತು ನಿರರ್ಥಕತೆಗಳ…
ಸುಮ್ಮನಿರಲಾರದೆ ತೀಡಿದ ಪದಗಳು ಗೀಚಿದ ಸಾಲಾದಾಗ ಬಂದ ಲಹರಿಯ ತುಣುಕುಗಳು. ಚುಟುಕವೊ, ಮಿನಿಗವನವೊ, ಹನಿಗವನವೊ ಎಂದೆಲ್ಲ ತಲೆ ಕೆಡಿಸಿಕೊಳ್ಳದೆ ಇಲ್ಲಿ ಡಾಕ್ಟರು ಕೊಟ್ಟ ಮಾತ್ರೆಯ ಹಾಗೆ ಒಟ್ಟಿಗೆ ಗುಂಪಿನಲ್ಲಿ ಹಾಕಿದ್ದೇನೆ, ಲಘು ಹಾಸ್ಯ…
ಎಲ್ಲ ಯೋಚನೆಗಳು ಎಲ್ಲರಲಿ ಬಂದು ಹೋಗುವುದು
ಬರುವ ಸಮಯವದು ಮಾತ್ರವೆ ಬದಲು ಆಗುವುದು
ಸಾಗರದಲಿ ರೌದ್ರ, ಶಾಂತತೆಯ ಅಲೆಗಳಿರುವಂತೆ
ಮನದೊಳೇಳುವ ಕೆಟ್ಟ,ಒಳ್ಳೆಯ ಯೋಚನೆಗಳಂತೆ
ಮನದಿ ಬರುವ ಯೋಚನೆಗಳಂತೆ ನೀ ನಡೆಯದಿರು
ಅರಿಯದೆ ಅದರೊಳಿತು,ಕೆಡುಕ…
ನಾನು ಸ್ವಾಮಿ ವಿವೇಕಾನಂದರ ಹಾಗೆ ಸನ್ಯಾಸಿಯಾಗಬೇಕೆಂದುಕೊಂಡೆ,
ಆದರೆ ಸಂಸಾರಿಯಾದೆ,
ನಾನು ಮಹಾತ್ಮಾ ಗಾಂಧೀಜಿಯ ಹಾಗೆ ಸತ್ಯ ಹೇಳಲು ಹೊರಟೆ,
ಆದರೆ ಸುಳ್ಳಿನ ಸುಳಿಯಲ್ಲಿ ಸಿಲುಕಿಕೊಂಡೆ,
ನಾನು ಎಲ್ಲೋ ಹೋಗಬೇಕೆಂದು ಹೊರಟೆ ,
ಆದರೆ ದಾರಿ ಕಾಣದೆ…
ಅದು ಇ೦ಗ್ಲೆ೦ಡಿನ ಒ೦ದು ತೋಟ.ಒ೦ದು ದಿನ ಅಲ್ಲಿನ ಹಿರಿಯ ಹ೦ದಿಯೊ೦ದು ತೋಟದಲ್ಲಿನ ಎಲ್ಲಾ ಪ್ರಾಣಿಗಳನ್ನು ಸೇರಿಸಿ ಗುಪ್ತ ಸಭೆಯೊ೦ದನ್ನು ಆಯೋಜಿಸುತ್ತದೆ.ಪ್ರಾಣಿಗಳ ಮೇಲೆ ಮನುಷ್ಯನ ದೌರ್ಜನ್ಯ, ದಬ್ಬಾಳಿಕೆಗಳನ್ನು ಪರಿಪರಿಯಾಗಿ ವರ್ಣಿಸುತ್ತಾ,ತಮ್ಮ…
ಮೊನ್ನೆ ದೆಹಲಿ ಕರ್ನಾಟಕ ಸಂಘದ ಕಾರ್ಯಕ್ರಮವೊಂದಕ್ಕೆ ಹೋಗಿದ್ದೆ.
'ಈಗ ಶ್ರೀಮತಿ ರಾಣಿ ಭಟ್ ಅವರಿಂದ ಸ್ವಾಗತ ಗೀತೆ' ಎಂಬುದನ್ನು ಕೇಳಿದಾಗ ಥಟ್ಟನೆ ನನ್ನ ಹೈ ಸ್ಕೂಲ್ ಸಹಪಾಠಿ ರಾಣಿ ಭಟ್ ಎಂಬವಳ ನೆನಪಾಯಿತು; ಏಕೆಂದರೆ, ಅವಳೂ ಒಳ್ಳೆಯ …