ಮೊದಲಿಗೆ ಎಳೆ ಬಿದಿರ ತುದಿಯನ್ನು ಸಣ್ಣದಾಗಿ ಹುಡಿ ಹುಡಿಯಾಗುವಂತೆ ಕತ್ತರಿಸಿ. ಈ ಕತ್ತರಿಸಿದ ಸಣ್ಣ ಚೂರುಗಳನ್ನು ಬಟ್ಟೆಯಲ್ಲಿ ಕಟ್ಟಿ ಒಂದು ದಿನ ನೀರಿನಲ್ಲಿ ಮುಳುಗಿಸಿ ಇಡಿ. ನೀರನ್ನು ಆಗಾಗ ಬದಲಿಸಿ. ಆಗ ಇದರ ಕಹಿ ಚೊಗರಾದ ರುಚಿ…
* ಅಪ್ಪ*
ಮೂವತ್ತೇಳು ವರುಷಗಳ ಹಿಂದಿನ ಒಂದು ಘಟನೆ. ನನ್ನವರು ಪೇಟೆಯಿಂದ ಬಂದವರೇ ನಿನ್ನ ಅಪ್ಪನಿಗೆ ತುಂಬಾ ಹುಶಾರಿಲ್ಲವಂತೆ ತಕ್ಷಣ ಹೊರಡೋಣ ಎಂದರು. ಪುಟ್ಟ ಮಗನನ್ನು ಹೆಗಲಿಗೆ ಹಾಕಿಕೊಂಡು, ಅಪ್ಪನ ಮನೆಗೆ ತಲುಪಿದಾಗ, ಕಂಡದ್ದು ಉದ್ದಕ್ಕೆ, ಬಿಳಿ…
ಗುರು ಸೆನ್ಗೈಯ ಆಶ್ರಮದಲ್ಲಿ ಧ್ಯಾನ ಕಲಿಯಲು ಸೇರಿಕೊಂಡಿದ್ದರು ಹಲವು ಶಿಷ್ಯರು. ಯೌವನದ ಸಹಜ ಪ್ರವೃತ್ತಿಗಳ ಸೆಳೆತ ಅವರಲ್ಲಿ ಕೆಲವರಿಗೆ. ಒಬ್ಬನಿಗಂತೂ ಪೇಟೆಗೆ ಹೋಗಿ ಸುತ್ತಾಡುವ ಚಾಳಿ. ರಾತ್ರಿ ಎಲ್ಲರೂ ಮಲಗಿದ ನಂತರ ಆಶ್ರಮದ ಗೋಡೆ ಹಾರಿ…
ನೀವು ಈಗಾಗಲೇ ವಿದ್ಯುತ್ ಮೀನು ಬಗ್ಗೆ ಓದಿರುತ್ತೀರಿ. ಸಮುದ್ರದಾಳದಲ್ಲಿ ಸಾವಿರಾರು ಬಗೆಯ ಅಪರೂಪದ ಜಲಚರಗಳಿವೆ. ಅವುಗಳನ್ನು ಕೆಲವೊಂದನ್ನು ನಿಮಗೆ ಪರಿಚಯ ಮಾಡಿಕೊಡಲಿದ್ದೇನೆ. ಓದುವ ಕೌತುಕ ನಿಮ್ಮದಾಗಲಿ.
ಎಕ್ಸ್ ರೇ ಮೀನು: ನಾವು ಎಕ್ಸ್ ರೇ ಅಥವಾ…
ತೆರೆಯಿತು ತೆರೆಯಿತು
ಬಾಗಿಲು ತೆರೆಯಿತು
ನಮ್ಮೆದೆಯೊಳಗೊಂದು!
ಸರಿಯಿತು ಸರಿಯಿತು
ಕತ್ತಲು ಸರಿಯಿತು
ಬಾಳಿನ ಬೆಳಗಿಂದು!
ಹಿಗ್ಗುತ ಕುಣಿಯುತ
ಹಾಡುತ ನಲಿಯುವ
ಹೊಸ ಬದುಕಿನ ಹಾಡು!
ನೋಡುತ ಕ್ಷಣ ಕ್ಷಣ
ತೆರೆ ತೆರೆಯುವ ಹೊಸ
…
ಗಿರಿಮನೆ ಶ್ಯಾಮರಾವ್ ಮಲೆನಾಡಿನಲ್ಲೇ ಹುಟ್ಟಿ ಬೆಳೆದವರು. ಅಲ್ಲಿಯ ರೋಚಕತೆಯನ್ನು ಇಂಚು ಇಂಚಾಗಿ ಅನುಭವಿಸಿದವರು. ಅವರ ಅನುಭವದ ರೋಚಕ ಘಟನೆಗಳಿಗೇ ಕೃತಿರೂಪ ನೀಡಿ ‘ಕಾಫಿ ನಾಡಿನ ಕಿತ್ತಳೆ’ ಎಂಬ ಹೆಸರಿನಲ್ಲಿ ಸುಧಾ ವಾರಪತ್ರಿಕೆಯಲ್ಲಿ ಧಾರಾವಾಹಿ…
ಹಾಲು ನೀರು ನಮಗೆಲ್ಲ ತಿಳಿದ ವಿಷಯ, ಅದಿಲ್ಲದೆ ನಾವುಗಳಿಲ್ಲ. ಹಾಲಿನೊಂದಿಗೆ ನೀರು ಸೇರಿದಾಗ ಇಲ್ಲಿ ಬೆಲೆ ನೀರಿಗೂ ಬರುತ್ತದೆ. ಇದು ನಿತ್ಯ ಸತ್ಯ. ಅದೇ ಹಾಲನ್ನು ಕಾಯಿಸುವಾಗ ನೀರೆಲ್ಲಾ ಆವಿಯಾಗಿ, ಹಾಲು ಉಕ್ಕಲು ಪ್ರಾರಂಭಿಸುತ್ತದೆ. ಆಗ ಸ್ವಲ್ಪ…
* ಒಳ್ಳೆತನ*
ಕಬ್ಬಿನ ಗಿಡದ ಸುತ್ತ
ಅದೆಷ್ಟು ಬಾರಿ
ಸುಳಿದಾಡಿತ್ತೋ
ಜೇನ್ನೊಣ!
ಕಡಿದು ಜಜ್ಜಿದ
ಕೂಡಲೇ ಹುಟ್ಟಿಕೊಂಡಿತು
ಗೆಳತನ!
*ಸೋಲು*
ಹಿತ್ತಿಲ ಬೇಲಿಯ
ಹಿಂದೆ
ಮನುಷ್ಯ ಮನಸಿನ
ಹಗೆ!
ಒಂದೊಮ್ಮೆ
ಎಲ್ಲವನ್ನೂ ಸೋಲಿಸಿ
…
ಭಾವಜೀವಿ
ಧರೆಯಿಂದ ಕಳಚಿತು ಗಾಯನ ಕೊಂಡಿ
ಮರೆಯಲಿ ಇಣುಕುವ ಸಪ್ತಸ್ವರವು
ನೆರೆಹೊರೆ ರಾಜ್ಯದ ಹೃನ್ಮನ ಹೊನ್ನಕಳಶ
ತೆರೆಮರೆ ಶೋಭಿತ ಸ್ವರಗಾನವು||
ಸಹೃದಯ ಪಂಡಿತ ಜ್ಞಾನ ವಿಶಾರದ
ಬಹಳದಿ ಮೆಚ್ಚುಗೆ ಪಡೆದಿಹರು
ಮಹಲಿನ ರಾಜರು ಸಂಗೀತ ಸಾಮ್ರಾಟ
ಕಹಳೆಯ…
ಅದ್ರೋಹಃ ಸರ್ವಭೂತೇಷು ಕರ್ಮಣಾ ಮನಸಾ ಶಿರಾ/
ಅನುಗ್ರಹಶ್ಚ ದಾನಂತ ಶೀಲವೇತದ್ವಿದುರ್ಬುದಃ//
ಯಾರಿಗೂ ನೋವಾಗದಂತೆ ಬದುಕಿರಿ ಮಕ್ಕಳೇ --ಇದು ಹೆತ್ತಮ್ಮನ ಮಾತು. ಈ ಮಾತಿನಲ್ಲಿ ಎಷ್ಟು ಶಕ್ತಿ ಅಡಕವಾಗಿದೆ ಎಂದು ಅಳೆಯಲು ಸಾಧ್ಯವಿಲ್ಲ. ಹೆತ್ತವರ…
ಕೊರೊನಾ ವೈರಸ್ ಧಾಳಿಯಿಂದಾಗಿ ಮಾರ್ಚ್ ೨೦೨೦ರಿಂದ ತೊಡಗಿ ಜಗತ್ತಿನಲ್ಲೆಲ್ಲ ಅಲ್ಲೋಲಕಲ್ಲೋಲ. ಭಾರತದಲ್ಲೇ ೫೦ ಲಕ್ಷಕ್ಕಿಂತ ಅಧಿಕ ಜನರಿಗೆ ಈ ವರೆಗೆ ಇದರ ಸೋಂಕು ತಗಲಿದೆ. ಇಂತಹ ಪರಿಸ್ಥಿತಿಯಲ್ಲಿ, ನಗರಗಳಿಂದ ನೂರಾರು ಕಿಲೋಮೀಟರುಗಳ ದೂರದಲ್ಲಿ,…
ರೋಹಿತ್ ಚಕ್ರತೀರ್ಥ ಗಣಿತ ಉಪನ್ಯಾಸಕರು. ಕನ್ನಡದಲ್ಲಿ ವಿಜ್ಞಾನ ಹಾಗೂ ಗಣಿತದ ವಿಷಯದಲ್ಲಿ ಸರಳವಾಗಿ ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಲೇಖನಗಳನ್ನು ಬರೆಯುತ್ತಾರೆ. ಪತ್ರಿಕೆಗಳಲ್ಲಿ ಅಂಕಣಗಳನ್ನೂ ಬರೆಯುತ್ತಾರೆ. ಅಜ್ಜಿ ಹೇಳಿದ ಕಥೆಗಳು…
ಅಹಂ
ಅಹಂ ಎಂಬುದು ನಮ್ಮಿಂದ ಏನನ್ನೆಲ್ಲ ಮಾಡಿಸುವುದಕ್ಕು, ಮಾಡುವುದಕ್ಕೂ ಹೇಸುವುದಿಲ್ಲ. ಓರ್ವ ಎಷ್ಟು ಒಳ್ಳೆಯ ವ್ಯಕ್ತಿಯಾಗಿದ್ದರೂ ಅಹಂಕಾರ ಅವನ ಶರೀರಕ್ಕೆ ಆವರಿಸಿತು ಎಂದಾದರೆ, ಅವ ಪಾತಾಳಕ್ಕೆ ಕುಸಿದ ಅಂತಲೇ ಲೆಕ್ಕ. ಎದುರಿನಿಂದ ಯಾರೂ…
ಕುಮುದ ಮರದ ನೆರಳಿನಲ್ಲಿ ಮಲಗಿದ್ದಾಗ ಅವಳ ಗೊಂಬೆ ಕಾಳು ಕರಡಿ ಕಾಡಿನೊಳಗೆ ಸುತ್ತಾಟಕ್ಕೆ ಹೋಗಿ ದಾರಿ ತಪ್ಪಿತು. ಅದಕ್ಕೆ ವಾಪಾಸು ಬರುವ ದಾರಿ ಗೊತ್ತಾಗಲೇ ಇಲ್ಲ. ಹಾಗಾಗಿ ಅದು ಒಂದು ಮರದ ಕೆಳಗೆ ಕುಳಿತು, “ಈಗ ಏನಪ್ಪಾ ಮಾಡೋದು" ಎಂದು ಯೋಚಿಸ…
ಅಂದು ಆಗಸ್ಟ್ ೭, ೨೦೦೬ರಂದು ಕೊಲಂಬೋದಲ್ಲಿ ಶ್ರೀಲಂಕಾ ಹಾಗೂ ಪ್ರವಾಸೀ ದಕ್ಷಿಣ ಆಫ್ರಿಕಾ ನಡುವೆ ಆಡಲಾಗುತ್ತಿದ್ದ ಟೆಸ್ಟ್ ಪಂದ್ಯದ ನಾಲ್ಕನೇ ದಿನ. ಫೀಲ್ಡಿಂಗ್ ಮಾಡುತ್ತಿದ್ದ ದಕ್ಷಿಣ ಆಫ್ರಿಕಾದ ಆಟಗಾರ ಹಾಶಿಂ ಆಮ್ಲಾ ಒಂದು ಕ್ಯಾಚ್…
ಮಾ(ದಾ)ನವ
ಮಾನವ ಮತ್ತು ದಾನವ ಇಲ್ಲಿ 'ಮಾ'ಮತ್ತು 'ದಾ'ಮಾತ್ರ ಅಕ್ಷರ ವ್ಯತ್ಯಾಸಗಳನ್ನು ನಾವು ಕಾಣಬಹುದು.
ಮಾ--ಮಾರ್ದವತೆ, ಮಧುರತೆ, ಒಳ್ಳೆಯ ಗುಣಗಳು, ಅಮರತ್ವದ ಸಂಕೇತ.
ದ ಅಥವಾ ದಾ--ದಯಾಹೀನತೆ, ಧರ್ಮಭೃಷ್ಟತೆ, ದೌರ್ಜನ್ಯ, ಕೆಟ್ಟ ಕೆಲಸಗಳ…