October 2020

  • October 15, 2020
    ಬರಹ: Shreerama Diwana
    *ಸುಂದರ ಬಾರಡ್ಕರ "ಪೊಲದ್ಯೆ": ತುಳುವರ ಜನಪದೀಯ ಚಿಕಿತ್ಸಾ ಕ್ರಮಗಳ ಉನ್ನತ ಅಧ್ಯಯನಕ್ಕೆ ಅಡಿಗಲ್ಲು* "ಪೊಲದ್ಯೆ", ಸುಂದರ ಬಾರಡ್ಕ ಅವರ ಮೂರನೇ ಪ್ರಕಟಿತ ಸಂಕಲನ. ತುಳು ಜನಪದ ಚಿಕಿತ್ಸೆ, ಆಚರಣೆ ಮತ್ತು ನಂಬಿಕೆಗಳ ಕುರಿತಾದ ಈ ಕೃತಿಯನ್ನು…
  • October 15, 2020
    ಬರಹ: Shreerama Diwana
    ಕಾಲಗೆಜ್ಜೆಯ ಧರಿಸಿ ಬಂದಳು ಬಾಲೆ ಮೊಗದಲಿ ನಗುವ ತಂದಳು ಲೀಲೆ ಪಾಡಲು ವೇಣು ನಾದವು ಕೇಳಿ ಬರುತಿರಲು| ಮೇಲೆ ನಿಂತಳು ಗೆಜ್ಜೆ ಕಟ್ಟುತ ಕೋಲ ಹಿಡಿದಳು ಜೊತೆಗೆ ಕುಣಿಯುತ ಹಾಲ ಕಡಲಿನ ಕೃಷ್ಣನೊಂದಿಗೆ ನಾಟ್ಯಮಾಡುತಲಿ||   ವದನದಂದದಿ ಶಶಿಯ ಕಳೆಯದು…
  • October 15, 2020
    ಬರಹ: Shreerama Diwana
    ನಮ್ಮ ಹಿರಿಯರು ಆಗಾಗ ಪಾಶ್ಚಾತ್ಯ ಸಂಸ್ಕೃತಿಯ ಬಗ್ಗೆ ಮಾತನಾಡುತ್ತಿರುತ್ತಾರೆ. ನಾವು ಹಾಳಾಗುತ್ತಿರುವುದೇ ಆ ಸಂಸ್ಕೃತಿ ಪ್ರಭಾವದಿಂದ ಅದರಲ್ಲೂ ನಮ್ಮ ಯುವ ಜನಾಂಗ ದಾರಿತಪ್ಪಲು ಅದೇ ಮುಖ್ಯ ಕಾರಣ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ. ಹಾಗಾದರೆ…
  • October 14, 2020
    ಬರಹ: Ashwin Rao K P
    ಅಯೋಧ್ಯಾ ಪ್ರಕಾಶನದವರು ತಮ್ಮ ೧೧ನೆಯ ಪುಸ್ತಕವಾಗಿ ರೋಹಿತ್ ಚಕ್ರತೀರ್ಥ ಇವರು ಪರದೇಶದಿಂದ ಹೆಕ್ಕಿ ಕನ್ನಡಕ್ಕೆ ತಂದ ಕಥಾ ಸಂಕಲನ ‘ಮನ ಮೆಚ್ಚಿದ ಹುಡುಗಿ’ ಹೊರ ತಂದಿದ್ದಾರೆ. ರೋಹಿತ್ ಚಕ್ರತೀರ್ಥ ಇವರ ಬಗ್ಗೆ ನಿಮಗೆ ಈಗಾಗಲೇ ತಿಳಿದಿದೆ. ಸುಮಾರು…
  • October 14, 2020
    ಬರಹ: Shreerama Diwana
    ಕಾಳನುದಯದಿ ಬಿತ್ತೆ ಸಂಜೆಗದು ಪೈರಹುದೆ? ಪಾಲುಂಟು ಕಾಲಂಗೆ ನಮ್ಮ ಕೃಷಿಗಳಲಿ//  ವೇಳೆ ಗಡು ಮರೆತಾತುರದಿನ್ ಅಡುಗೆ ಪಕ್ಕಹುದೆ?  ತಾಳುಮೆಯ ಪರಿಪಾಕ--ಮಂಕುತಿಮ್ಮ// ಬೆಳಗಿನ ಹೊತ್ತು ಹೊಲದಲ್ಲಿ ಕಾಳನ್ನು ಬಿತ್ತಿ, ಸಂಜೆಯೇ ಫಲ ನೀಡು ಎಂದರೆ ಹೇಗೆ?…
  • October 14, 2020
    ಬರಹ: Shreerama Diwana
    ಭಾವನೆಗಳ ಪಲ್ಲಕ್ಕಿ ಭಾವನೆಗಳ ಪಲ್ಲಕ್ಕಿಯಲಿ ನವ್ಯ ಕವನಗಳ ಮೆರವಣಿಗೆ ಸಾಗುತಿಹೆ ಬಿಳಿ ಹಾಳೆಯಲಿ ಭವ್ಯ ವಿಚಾರಗಳ ಬರವಣಿಗೆ...   ತಂಬೆಲರ ಅಭಿಷೇಕದಿ ಹೊಳೆದಿವೆ ಪ್ರತಿಪುಟದ ಸಾಲು ಹೊಸತನದ ಹೊಂಬೆಳಕಲಿ ಹೊಮ್ಮುತಿವೆ ಸ್ವರಗಳ ಮಾಲು...   ಹೃದಯದ…
  • October 13, 2020
    ಬರಹ: Shreerama Diwana
    ರಾಯ ಬಾರೋ ನಮ್ಮ ಮನೆಗೆ ಶಿರಬಾಗಿ ಕರಮುಗಿವ ಭಕುತರಿಗೆ ಒಲಿದು ಬಾರಯ್ಯ ಶ್ರೀ ಗುರು ರಾಘವೇಂದ್ರ//   ಭೃತ್ಯಗೆ ಬಂದ ಅಪಮೃತ್ಯುವ ತಡೆದ ಎಲ್ಲರ ಸಲಹುವ ಪುರುಷೋತ್ತಮನೇ ಅನಾಥರಕ್ಷಕ ಓಡೋಡಿ ಬಾರಯ್ಯ ನೀ//   ಭೂತಳನಾಥನ ಭೀತಿಯ ಬಿಡಿಸಿದೆ ವಿಮಲ…
  • October 13, 2020
    ಬರಹ: Ashwin Rao K P
    ಹಿಂದೊಮ್ಮೆ ನಾನು ‘ಮಕ್ಕಳನ್ನು ಆಟವಾಡಲು ಬಿಡಿ, ಪ್ಲೀಸ್’ ಎಂಬ ಲೇಖನ ಬರೆದಿದ್ದೆ. ಓದಿದ ಹಲವಾರು ಮಂದಿ ಈ ಲೇಖನವನ್ನು ಬಹಳಷ್ಟು ಮೆಚ್ಚಿಕೊಂಡಿದ್ದರು. ಆ ಲೇಖನದಲ್ಲಿ ಬಿಟ್ಟು ಹೋದ ಕೆಲವಷ್ಟು ಅಂಶಗಳನ್ನು ನಾನಿಲ್ಲಿ ಸೇರಿಸಬಯಸಿದ್ದೇನೆ. ೨೦೨೦ ರ…
  • October 13, 2020
    ಬರಹ: Sharada N.
    ಮೊದಲಿಗೆ ಕುಕ್ಕರ್ ನಲ್ಲಿ ಆಲೂಗಡ್ಡೆಯನ್ನು ಬೇಯಿಸಿ. ನಂತರ ಕಾರ್ನ್ ಅನ್ನು ಸ್ವಲ್ಪ ಬಿಸಿ ಮಾಡಿ.(ಓವನ್ ಇದ್ದರೆ ಅದರಲ್ಲಿ ಬಿಸಿ ಮಾಡಬಹುದು). ಕಾರ್ನ್ ಹುರಿಯಬೇಡಿ. ಬೇಯಿಸಿದ ಬಟಾಟೆಯನ್ನು ಹುಡಿ ಮಾಡಿ, ಅದಕ್ಕೆ ಹಸಿಮೆಣಸು ಕತ್ತರಿಸಿ ಮಿಕ್ಸ್…
  • October 13, 2020
    ಬರಹ: Shreerama Diwana
    ೧. ಬಾನಿನ      ಒಳಗಿನ      ವಿಚಿತ್ರ      ಗಳಿಗೆ      ಬುವಿಯು      ಸಾಕ್ಷಿಯಾಯಿತು !    ೨. ಹಾಯ್ಕು    ವಿಚಿತ್ರವಾದ    ಆಚಾರಗಳಲ್ಲಿಯೂ    ತಜ್ಞರಿದ್ದಾರೆ !   ೩. ರುಬಾಯಿ ಹೊಲಿದು ಬಿಡು ಹಳೆಯ ಸಂಗತಿಗಳ ಹರಿದು ಒಗೆಯು ಕೆಟ್ಟ…
  • October 13, 2020
    ಬರಹ: Shreerama Diwana
    ಅಧ್ಯಾಯ ೨      ಕರ್ಮಜಂ ಬುದ್ಧಿಯುಕ್ತಾ ಹಿ ಫಲಂ ತ್ಯಕ್ತ್ವಾ ಮನೀಷಿಣ:/ ಜನ್ಮಬಂಧವಿನಿರ್ಮುಕ್ತಾ: ಪದಂ ಗಚ್ಛಂತ್ಯನಾಮಯಮ್//೫೧//    ಏಕೆಂದರೆ, ಸಮಬುದ್ಧಿಯಿಂದ ಯುಕ್ತರಾದ ಜ್ಞಾನಿಗಳು ಕರ್ಮಗಳಿಂದ ಉಂಟಾಗುವ ಫಲವನ್ನು ತ್ಯಾಗಮಾಡಿ ಜನ್ಮರೂಪೀ…
  • October 12, 2020
    ಬರಹ: addoor
    ಜ್ನಾನದಾಹಿಯೊಬ್ಬ ಝೆನ್ ಮಠವೊಂದಕ್ಕೆ ಬಂದು ಗುರುವಿಗೆ ನಮಸ್ಕರಿಸಿದ. ಗುರುವಿನ ಪ್ರಶ್ನೆ: ಎಲ್ಲಿಂದ ಬಂದೆ? ಜ್ನಾನದಾಹಿಯ ಉತ್ತರ: ದೂರದ ಹಳ್ಳಿಯಿಂದ. ಗುರುವಿನ ಪ್ರಶ್ನೆ: ಬೇಸಗೆಯಲ್ಲಿ ಯಾವ ಮಠದಲ್ಲಿದ್ದೆ? ಜ್ನಾಹದಾಹಿಯ ಉತ್ತರ: ಪಕ್ಕದ ರಾಜ್ಯದ…
  • October 12, 2020
    ಬರಹ: Shreerama Diwana
    ಅರಳಿದೆ ಪಟದಲಿ ಕುಂಚದ ಕಲೆಯದು ತಳೆದಿದೆ ನೂತನ ಭಾವವದು| ಕರೆದಿದೆ ಸಹೃದಯ ಮನವನು ತಣಿಸುತ ವೃದ್ದೆಯ ಬಿಡಿಸಿದ ಚಿತ್ರವದು||   ಹಾಳೆಯ ಮೇಲೆಯೆ ರಂಗಿನ ಕುಂಚವು ಬಿಡಿಸಿದೆ ಚಿತ್ರದ ಪುಷ್ಪವಿದು| ನಾಳೆಯ ಜೀವನ ನೋಡುವ ವಯಸದು ತೋರಿಸಿ ನಿಂತಿದೆ…
  • October 12, 2020
    ಬರಹ: venkatesh
    ಶ್ರೀ. ಆರ್. ವಿ. ಮೂರ್ತಿ, "ಪತ್ರಿಕೋದ್ಯಮದ ಮೇರು ಪ್ರತಿಭೆ"-ಕೃತಿ ಕಿರು  ಪರಿಚಯ :  40 ರ ದಶಕದಲ್ಲಿ ಮೈಸೂರು ರಾಜ್ಯದಿಂದ ಅಂದಿನ ವಿದ್ಯಾವಂತರು ಮುಂಬೈಗೆ ವಲಸೆ ಬರುತ್ತಿದ್ದದ್ದು  ಒಳ್ಳೆಯ ನೌಕರಿ ಪಡೆಯಲು; ಹಾಗೆಯೇ ಸ್ವಭಾವತಃ  …
  • October 12, 2020
    ಬರಹ: Ashwin Rao K P
    ಸಮಯ ಕಳೆದಂತೆ ಮಾನವ ಹೊಸ ಹೊಸ ಅನ್ವೇಷಣೆಗಳನ್ನು ಮಾಡುತ್ತಾ ಇರುತ್ತಾನೆ. ಕಳೆದ ಶತಮಾನಕ್ಕೂ ಈಗಿನ ಶತಮಾನಕ್ಕೂ ಬಹಳಷ್ಟು ಸುಧಾರಣೆಗಳು ಎಲ್ಲಾ ಕ್ಷೇತ್ರದಲ್ಲಿ ಆಗಿವೆ. ಹಾಗೆಯೇ ವೈದ್ಯಕೀಯ ಕ್ಷೇತ್ರದಲ್ಲೂ ಆಗಿರುವ, ಆಗುತ್ತಿರುವ ಸಂಶೋಧನೆಗಳು…
  • October 12, 2020
    ಬರಹ: Shreerama Diwana
    ನೋಡು ಪಡುವಣ  ಕಡಲ ತೆರೆಯಲಿ ಸೂರ್ಯ ಕಿರಣವು ಹೊಳೆದಿದೆ  ನೀರ ಉಬ್ಬರ ದಲೆಯ ಸೊಬಗಲಿ ತೀರ ನಾಚುತ ಮಲಗಿದೆ   ಪ್ರೀತಿ ಕಂಗಳು ಮರದ ಮರೆಯಲಿ  ಮೊದಲ ಮುತ್ತನು ಸವಿದಿದೆ ಬೆಸುಗೆ ಬಂಧನ ಉಸಿರ ಶಬ್ದಕೆ ಒಲವು ಕಚಗುಳಿ ನೀಡಿದೆ    ಅಲ್ಲೆ ಚಿಗುರಿನ ನಡುವೆ…
  • October 12, 2020
    ಬರಹ: Ashwin Rao K P
    ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಇದು ಮಲೆನಾಡಿನ ರೋಚಕ ಕತೆಗಳು ಸರಣಿಯ ಮೂರನೇ ಭಾಗದ ಪುಸ್ತಕ. ಎಂದಿನಂತೆ ಲೇಖಕರಾದ ಗಿರಿಮನೆ ಶ್ಯಾಮರಾವ್ ಅವರು ತಾವು ಮಲೆನಾಡಿನ ಪರಿಸರದಲ್ಲಿ ಅನುಭವಿಸಿದ ರೋಚಕತೆಗಳನ್ನು ಬರಹದಲ್ಲಿ ಕಟ್ಟಿಕೊಡುವ ಪ್ರಯತ್ನ…
  • October 12, 2020
    ಬರಹ: Shreerama Diwana
    ಬದುಕಿನೀ ಕ್ಷೇತ್ರದಲಿ ಕರ್ತವ್ಯ ಹಲವುಂಟು ಮೊದಲು ಋಣಸಂದಾಯ ಮರೆಯದಿರಬೇಕು/ ಮಮತೆಯೊಲುಮೆಯ ಸಾಲ ಇತ್ತವರ,ಹೆತ್ತವರ ಅಮ್ಮ--ಅಪ್ಪ ಎಂಬ ಪ್ರೀತಿಯಲಿ ಸಾಕು/ ಈ ಸಂಸಾರ ಎಂಬುದು ಒಂದು ದೊಡ್ಡ ಆಲದ ಮರದಂತೆ ಎಂಬ ಕಟು ಸತ್ಯವನ್ನು ನಾವೆಲ್ಲ…
  • October 12, 2020
    ಬರಹ: Shreerama Diwana
    ಮಣ್ಣಾಗ ಆಡ್ತಿದ್ವಿ ಮುಳ್ಳಾಗ ತಿರಗತಿದ್ವಿ ಬಿಸಲಾಗ ಸುತ್ತಾಡ್ತಿದ್ವಿ ಉಣ್ಣೂದು ಮರಿತಿದ್ವಿ ಆದ್ರೂ ಏನೂ ಆಗ್ತಿರ್ಲಿಲ್ಲ ಎಲ್ರೂ ಚನ್ನಾಗಿರ್ತಿದ್ವಿ   ಎಷ್ಟೊಂದು ಚೆಂದಿತ್ತು........   ಬಾವ್ಯಾಗ ಈಜಾಡ್ತಿದ್ವಿ ಕೆಸರಾಗ ಉಳ್ಳಾಡ್ತಿದ್ವಿ…
  • October 11, 2020
    ಬರಹ: venkatesh
    ಇದಲ್ಲದೆ ಅನೇಕ ವಿಷಯಗಳ ಮೇಲೂ ಅವರು ಬೆಳಕು ಚೆಲ್ಲಿದ ಪಾಡ್ಕಾಸ್ಟ್ ಗಳು ಜನಪ್ರಿಯ.  https://www.udayavani.com/sandhyavani/god-faith-grace