October 2020

 • October 10, 2020
  ಬರಹ: addoor
  ಪುಟ್ಟಣ್ಣ ದಂಪತಿಯ ಗೊಂಬೆ ಮಳಿಗೆಯಲ್ಲಿ ಹತ್ತುಹಲವು ಬಗೆಯ ಬೊಂಬೆಗಳು. ಮಳಿಗೆಯ ಹಿಂಭಾಗದ ಕೋಣೆಯಲ್ಲಿ ಅವರು ಕೈಯಿಂದಲೇ ಗೊಂಬೆಗಳನ್ನು ಮಾಡುತ್ತಿದ್ದರು. ಅವರಿಗೆ ವಯಸ್ಸಾಗಿದ್ದು ಇತ್ತೀಚೆಗೆ ಕಣ್ಣು ಸರಿಯಾಗಿ ಕಾಣಿಸುತ್ತಿರಲಿಲ್ಲ. ಪುಟ್ಟಣ್ಣನ…
 • October 10, 2020
  ಬರಹ: Shreerama Diwana
  ಹೃದಯವ ಪ್ರೀತಿಸಿದವನ ಹೆಸರನ್ನು ಮರೆವೆಯಾ ಗೆಳತಿ| ಮನಸಿನಲ್ಲಿ ಪ್ರೇಮದ ಭಾವವನು ತೊರೆವೆಯಾ ಗೆಳತಿ||   ಆಂತರ್ಯದ ನಾದವನು ವೀಣೆಯಲಿ ನುಡಿಸದಿರು ನೀನು| ಕಂಗಳಲಿ‌ ಅಂತರಾಳದ ದುಃಖವನು ಹೇಳುವೆಯಾ ಗೆಳತಿ||   ಚಂದದಲಿ ‌ನಲ್ನುಡಿಯ ಅರುಹುವೆ ಮೂಕಳಾಗಿ…
 • October 10, 2020
  ಬರಹ: Ashwin Rao K P
  ನಾನು ಈಗಾಗಲೇ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಹಲ್ದಾರ್ ನಾಗ್, ಜಾಧವ್ ಪಯಾಂಗ್, ಲಕ್ಷ್ಮಿ ಕುಟ್ಟಿ ಬಗ್ಗೆ ಲೇಖನ ಬರೆದೆ. ನನ್ನ ಲೇಖನ ಓದಿದ ಹಲವಾರು ಮಂದಿ ನೀವು ಬರೆದ ಮಹನೀಯರು ಎಲ್ಲರೂ ಕರ್ನಾಟಕ ರಾಜ್ಯದ ಹೊರಗಿನವರು. ನಮ್ಮ ಕರ್ನಾಟಕ…
 • October 10, 2020
  ಬರಹ: Kavitha Mahesh
  ಮೊಬೈಲ್ ಹೀಗೇ ನೋಡುತ್ತಿರುವಾಗ ವಾಟ್ಸಾಪ್ ನಲ್ಲಿ ಬಂದ ಈ ಕೆಳಗಿನ ಕೆಲವು ವಿಷಯಗಳನ್ನು ಓದುವಾಗ ‘ಹೌದಲ್ವಾ’ ಮೊದಲು ಹೀಗೇ ಇತ್ತಲ್ವಾ ಎಂದು ಅನಿಸಿದ್ದು ಸುಳ್ಳಲ್ಲ. ನೀವೂ ಒಮ್ಮೆ ಓದಿ ಬಿಡಿ. ಮಜಾ ಕೊಡುತ್ತೆ. ನಿಮ್ಮ ಬಾಲ್ಯದ ನೆನಪು ಕಾಡಿದರೂ…
 • October 10, 2020
  ಬರಹ: Shreerama Diwana
  ಇಲ್ಲಿ ನೋವು ಅಂದಾಕ್ಷಣ ನಮಗೆ ಕಣ್ಣೆದುರು ಬರುವುದು ಯಾತನೆ ಅಥವಾ ಗಾಯ, ಅನಾರೋಗ್ಯದ ಬೇನೆಗಳು. ಇದು ಆ ನೋವಲ್ಲ. ಶಾಶ್ವತವಾಗಿ ಮನಸ್ಸಿನಲ್ಲಿ ಮನೆ ಮಾಡುವ, ಎಷ್ಟು ಮರೆಯಬೇಕೆಂದರೂ ಮರೆಯಲು ಸಾಧ್ಯವಾಗದ ನೋವು. ಮಾತಿನ ನೋವು ಅಷ್ಟೂ ಆಳಕ್ಕೆ…
 • October 09, 2020
  ಬರಹ: venkatesh
  'ಅನುಭವಾಮೃತ' ನಮ್ಮ ತಂದೆ, ಸುಂಕದ ರಂಗರಾಯರಿಗೆ ಅತ್ಯಂತ ಪ್ರೀತಿಯ ಪುಸ್ತಕ. ಅದನ್ನು ರಚಿಸಿದವರು ಶ್ರೀ. ಮಹಾಲಿಂಗ ರಂಗ. ಅವರು  ಕ್ರಿ.ಶ.೧೬೭೫ ರಲ್ಲಿ ಇದ್ದಿರ ಬಹುದು. ಭಾಮಿನಿ ಷಟ್ಪದಿಯಲ್ಲಿ ರಚಿಸಿದ ಅನುಭವಾಮೃತ ಪದ್ಯ ಗುಚ್ಛದಲ್ಲಿ…
 • October 09, 2020
  ಬರಹ: venkatesh
  ಈ ಬಾರಿ ೨೦೨೦ ರ ಅಕ್ಟೊಬರ್ ೩ ಶನಿವಾರದಂದು ಘಾಟ್ಕೋಪರ್ (ಪ) ದ ಅಸಲ್ಫಾ  ನಿವಾಸಿ, 'ಶ್ರೀಮತಿ ದಾಮಾ ಶೀತಲ್' ಎಂಬ ಹೆಸರಿನ ೩೨ ವರ್ಷದ ಗೃಹಿಣಿ,  'ಮ್ಯಾನ್ ಹೋಲ್' ನಲ್ಲಿ ಆಯತಪ್ಪಿ ಬಿದ್ದು ಮರಣಹೊಂದಿದ್ದಾರೆ. ಮಳೆಹನಿ ಹಾಕುತ್ತಿತ್ತು.ತಮ್ಮ ಮನೆಯ…
 • October 09, 2020
  ಬರಹ: Shreerama Diwana
  *ಕ* ನ್ನಡದ ವರ್ಣವದು ಸುಂದರವು ಬರೆಯಲ್ಕೆ ತನ್ನನದು ಹೋಲುತಿರೆ ಸುಲಭದಲ್ಲಿ| ಕನ್ನಡಕ ಧರಿಸದೆಯೆ ನೋಡುತ್ತ ಲಿಪಿಯನ್ನು ರನ್ನವೆನ್ನುವರಲ್ಲಿ - ರುಕ್ಮಿಣಿಸುತ||   *ಕಾ* ದಿಹರು ಮೋಕ್ಷಕ್ಕೆ ಪೋಗುವಾ ದಾರಿಯಂ ಮೋದದಲಿ ಹಾಡುವರು ಗೀತೆಯನ್ನು| ನಾದವಂ…
 • October 09, 2020
  ಬರಹ: Ashwin Rao K P
  ಮೇರಿ ಶೆಲ್ಲಿ ಹತ್ತೊಂಬತ್ತನೆಯ ಶತಮಾನದಲ್ಲಿ ಬಹುಮಟ್ಟಿಗೆ ಚಾಲ್ತಿಯಲ್ಲಿದ್ದ ಕಾದಂಬರಿಕಾರ್ತಿ. ಅವಳು ತನ್ನ ಹತ್ತೊಂಬತ್ತನೆಯ ವಯಸ್ಸಿನಲ್ಲೇ ಬರೆದ ‘ಫ್ರಾಂಕನ್ ಸ್ಟೈನ್’ ಎಂಬ ಕಾದಂಬರಿ ಅವಳನ್ನು ಜನಪ್ರಿಯತೆಯ ಉತ್ತುಂಗಕ್ಕೆ ಏರಿಸಿಬಿಟ್ಟಿತು. ಮೇರಿ…
 • October 09, 2020
  ಬರಹ: Kavitha Mahesh
  ಕರಿಬೇವು ಈ ಹೆಸರಿನಲ್ಲಿಯೇ ಒಂದು ಘಮವಿದೆ. ಅಡುಗೆ ರುಚಿ ಹೆಚ್ಚಾಗಬೇಕಾದರೆ ಕರಿಬೇವು ಬೇಕೇ ಬೇಕು. ದಕ್ಷಿಣ ಭಾರತದ ಕಡೆಗೆ ಇದನ್ನು ಹೆಚ್ಚಾಗಿ ಬಳಸುತ್ತಾರೆ. ಆಯುರ್ವೇದದಲ್ಲಿ ಇದನ್ನು ನಾನಾ ಔಷಧಿಗಳಲ್ಲಿ ಬಳಸುತ್ತಾರೆ. ಬರೀ ಅಡಿಗೆಯೊಂದೇ ಅಲ್ಲದೆ…
 • October 09, 2020
  ಬರಹ: Shreerama Diwana
  ಸ್ಥಿತಪ್ರಜ್ಜ ಎಂದಾಕ್ಷಣ ಎಲ್ಲವನ್ನೂ ಬಿಟ್ಟವನು, ಇವನಿಗೆ ಏನೂ ಬೇಡ, ಸರ್ವ ಸಂಗ ಪರಿತ್ಯಾಗಿ, ಇವ ತಪಸ್ಸಿಗೆ ಲಾಯಕ್ ಎಂದು ಭಾವಿಸುವುದು ತಪ್ಪು. ಹೊರನೋಟವನ್ನು ನೋಡಿ ಯಾರನ್ನು, ಯಾವುದನ್ನು ಅಳೆಯಲಾಗದು. ಸ್ಥಿತ ಅಂದರೆ ಸ್ಥಿರ, ಗಟ್ಟಿ , ಅಚಲ…
 • October 09, 2020
  ಬರಹ: shreekant.mishrikoti
  ಯಾವುದೋ ಒಂದು ಹಳೆಯ ಕಾದಂಬರಿ. ಸುಮಾರು ಮುನ್ನೂರು ಪುಟಗಳದು .  ಅದರ ಹೆಸರು ಬೇಡ . ಬರೆದವರ ಹೆಸರು ಬೇಡ.  ವಿಷಯ ಎರಡನೇ ಸಂಬಂಧದ ಕುರಿತು. ಅಂದರೆ ವೈವಾಹಿಕ ಜೀವನಕ್ಕೆ ಸಂಬಂಧಪಟ್ಟ ಕತೆ.  ಇದು ಹಳೆಯ ಕಾಲದ ಕಾದಂಬರಿ.  ಮೊದಲ ಐವತ್ತು-ಅರವತ್ತು…
 • October 08, 2020
  ಬರಹ: Shreerama Diwana
  ಅನ್ಯಾಯ ಪ್ರತಿಭಟಿಸೊ ಕೈಗಳಿಗೆ ಕೋಳವಿದೆ ನಡುವೆ ಅನ್ಯಾಯ ಗಹಗಹಿಸಿ ನಗುವುದಿಂದು...!   ಕಣ್ಣ ಮುಂದೆಯೆ ನರರು ನರಕವನು ಕಾಣುತಿರೆ ತುಟಿ ತೆರೆಯಲಾರದೆಯೆ ಮೂಕನಾಗಿರುವೆ...!   ಕಂಬಿಗಳ ನಡುವಿನಲಿ ಬಲವುಳ್ಳ ತೋಳಿಹುದು ಬಲವೆಲ್ಲ ಹುದುಗಿಹುದು ಬಂಧನದ…
 • October 08, 2020
  ಬರಹ: Ashwin Rao K P
  ಆಧುನಿಕ ಜಗತ್ತಿನ ಅದ್ಭುತಗಳಲ್ಲಿ ಒಂದಾದ ಐಫೆಲ್ ಟವರ್ ಫ್ರಾನ್ಸ್ ದೇಶದ ಪ್ಯಾರಿಸ್ ನಗರದಲ್ಲಿದೆ. ನಮ್ಮ ಆಧುನಿಕ ಜಗತ್ತಿನಲ್ಲಿ ಅಮೇರಿಕಾದ ‘ಸ್ವಾತಂತ್ರ್ಯ ದೇವಿಯ ಪ್ರತಿಮೆ' (Statue of Liberty), ಭಾರತ ದೇಶದಲ್ಲಿ ಆಗ್ರಾ ನಗರದಲ್ಲಿರುವ ತಾಜ್…
 • October 08, 2020
  ಬರಹ: addoor
  ೧೭.ಜಗತ್ತಿನಲ್ಲಿ ಅತ್ಯಂತ ಜಾಸ್ತಿ ಹಣ ಒಳರವಾನೆ (ರೆಮಿಟೆನ್ಸ್) ಆಗುವ ದೇಶ ಭಾರತ ಒಬ್ಬ ವ್ಯಕ್ತಿ ವಿದೇಶದಲ್ಲಿ ಉದ್ಯೋಗ ಮಾಡುತ್ತಾ, ತಾನು ಗಳಿಸಿದ ಹಣವನ್ನು ತನ್ನ ಮಾತೃದೇಶಕ್ಕೆ ರವಾನಿಸಿದಾಗ, ಹಾಗೆ ರವಾನಿಸಿದ ಹಣವನ್ನು “ಒಳರವಾನೆ" (…
 • October 08, 2020
  ಬರಹ: Shreerama Diwana
  ಅಧ್ಯಾಯ ೨    ತ್ರೈಗುಣ್ಯವಿಷಯಾ ವೇದಾ ನಿಸ್ತ್ರೈ ಗುಣ್ಯೋ ಭವಾರ್ಜುನ/ ನಿರ್ದ್ವಂದೋ ನಿತ್ಯ ಸತ್ವಸ್ಥೋ ನಿರ್ಯೋಗಕ್ಷೇಮ ಆತ್ಮವಾನ್//೪೫//       ಹೇ ಅರ್ಜುನನೇ! ವೇದಗಳು ಮೇಲೆ ಹೇಳಿದ ಪ್ರಕಾರ ಮೂರೂ ಗುಣಗಳ ಕಾರ್ಯರೂಪವಾದ ಸಮಸ್ತ ಭೋಗಗಳನ್ನು…
 • October 08, 2020
  ಬರಹ: Shreerama Diwana
  ಎಲ್ಲಿ ಹೋದವು ನಮ್ಮ ಬಾಲ್ಯದ ಆಟಗಳು? ಕುಂಟಾ ಬಿಲ್ಲೆ ಮರಕೋತಿ ಆಟ ಬುಗರಿ, ಗಾಳಿಪಟ, ಕಣ್ಣಾ ಮುಚ್ಚಾಲೆ  ಲಗೋರಿ, ಚಿನ್ನಿದಾಂಡು ಕಳ್ಳ-ಪೋಲೀಸ್ ಚೌಕಬಾರ... ಎಂಥ ಸೊಗಸು!! ಈಗೇನಿದ್ದರೂ ಬರೀ  ಮೊಬೈಲ್..ಮೊಬೈಲ್ ಮೊಬೈಲ್!!! *** ನಾನಂತೂ ನೀನು…
 • October 07, 2020
  ಬರಹ: Shreerama Diwana
  ಮನದಲಿ ಭಾವವು ಉದಯಿಸಿ ಬರಹದಿ ಕವನವ ಬರೆಸಿತ್ತು| ವನದಲಿ ಕೋಗಿಲೆ ಇಂಚರ ಸ್ವರದಲಿ ನಲ್ಲನ ಕರೆದಿತ್ತು||   ಪರಿಮಳ ಸೂಸುವ ಸುಮವದು ಒಲವಲಿ ದುಂಬಿಯ ನೆನೆಸಿತ್ತು| ಹರಿಯುವ ನದಿಯದು ಜುಳುಜುಳು ನಾದದಿ ಕಲರವ ಮಾಡಿತ್ತು||   ಅರುಣನ ಉದಯವು ಕವಿಗಳ…
 • October 07, 2020
  ಬರಹ: Ashwin Rao K P
  ಕಲ್ಲಾರ್ ಎನ್ನುವುದು ಕೇರಳದ ತಿರುವನಂತಪುರಂ ಜಿಲ್ಲೆಯ ಒಂದು ಸಣ್ಣ ಗ್ರಾಮ. ಜೀವನಕ್ಕೆ ಬೇಕಾಗುವ ಪ್ರಾಥಮಿಕ ಸೌಲಭ್ಯಗಳ ಕೊರತೆಗಳು ಈ ಗ್ರಾಮದಲ್ಲಿ ಬಹಳಷ್ಟಿದೆ. ಆದರೆ ಇಲ್ಲಿನ ಗ್ರಾಮಸ್ಥರು ಯಾರಿಗಾದರೂ ಆರೋಗ್ಯದ ಸಮಸ್ಯೆ ಅಥವಾ ವಿಷಪೂರಿತ ಹಾವು…
 • October 07, 2020
  ಬರಹ: Shreerama Diwana
  *ಹಾ. ಮ. ಸತೀಶರ "ಆಸರೆ" : ಪ್ರಕೃತಿಪ್ರೀತಿ, ಪ್ರೇಮದುಯ್ಯಾಲೆ, ಬದುಕಿನ ಕನ್ನಡಿ*  "ಆಸರೆ", ಹಾ. ಮ. ಸತೀಶ ಅವರ ಮೊದಲ ಕವನ ಸಂಕಲನ. 1997ರಲ್ಲಿ ಮಂಗಳ ಕಲಾ ಸಾಹಿತ್ಯ ವೇದಿಕೆ ಗೂಡಿನಬಳಿ (ಬಂಟ್ವಾಳ ತಾಲೂಕು) ಪ್ರಕಟಿಸಿದ ಆಸರೆಗೆ ಪ್ರೊ. ಡಾ.…