ಊರು ಬಿಡಿಸಿದವರು ನೀವು. ನನಗೆ ಅಲ್ಲಿ ಬದುಕೋಕೆ ಸಾಧ್ಯವಾಗದೆ ಇರುವ ಪರಿಸ್ಥಿತಿ ನಿರ್ಮಿಸಿ ನಮ್ಮ ಹಲವು ಜನರ ಸಾವಿಗೆ ಕಾರಣವಾದವರು ನೀವು. ನಾವು ನಿಮ್ಮ ಸಹವಾಸವೇ ಬೇಡ ಅಂತ ಊರುಬಿಟ್ಟು ಇಲ್ಲಿ ನೆಮ್ಮದಿಯಾಗಿ ಬದುಕೋಕೆ ಆರಂಭ ಮಾಡಿದ್ರೆ ಇಲ್ಲಿಗೂ…
"ಅಧರ್ಮವನ್ನು ಅಧರ್ಮದಿಂದಲೇ ಗೆಲ್ಲಿ, ನಿಶ್ಚಿತವಾಗಿ ಧರ್ಮ ಸ್ಥಾಪನೆಯಾಗುತ್ತದೆ"
ಮೊನ್ನೆ ಹಳೆಯ ದಾಖಲೆಗಳನ್ನು ಕೆದರುತ್ತಾ, ಕೆದಕುತ್ತಾ ಕುಳಿತಿದ್ದಾಗ ಇದ್ದಕ್ಕಿದ್ದಂತೆ ಜೆ.ಹೆಚ್.ಪಟೇಲರ ನೆನಪು ಬಂತು. ಬಹಳ ಅದ್ಭುತ ನಾಯಕ. ಅವರು…
ನಮಗೆ ಹೊಯ್ಸಳ ಸಾಮ್ರಾಜ್ಯ ಎಂದೊಡನೆಯೇ ಮೊದಲಿಗೆ ನೆನಪಿಗೆ ಬರುವುದು ಬೇಲೂರು-ಹಳೇಬೀಡು ಇಲ್ಲಿನ ಅದ್ಭುತ ಶಿಲ್ಪಕಲಾ ವೈಭವ. ಪ್ರತೀ ವರ್ಷ ಲಕ್ಷಾಂತರ ಮಂದಿ ಈ ಎರಡು ಪ್ರದೇಶಗಳಿಗೆ ಭೇಟಿ ನೀಡುತ್ತಾರೆ. ಈ ಸ್ಥಳ ಬಹಳಷ್ಟು ಜನಪ್ರಿಯತೆಯನ್ನೂ…
ನವಕರ್ನಾಟಕ ಪ್ರಕಾಶನ ಸಂಸ್ಥೆಯು ಹೊರತಂದಿರುವ ನವಕರ್ನಾಟಕ ಕಿರಿಯರ ಕಥಾ ಮಾಲೆಯ ಸರಣಿಯ ಪುಸ್ತಕವೇ 'ವಿನೋದ ಕಥೆಗಳು'. ಈ ಪುಸ್ತಕದಲ್ಲಿ ವಿವಿಧ ಲೇಖಕರ ಆಯ್ದ ಉತ್ತಮ ಕಥೆಗಳನ್ನು ಆರಿಸಿ ಪ್ರಕಟ ಮಾಡಿದ್ದಾರೆ. ಮಕ್ಕಳಿಗೆ ಓದಲು ಹಾಗೂ ಓದಿ ಹೇಳಲು…
ಸುಮಾರು 6 ಗಂಟೆ. ಮೋಡ ಮುಸುಕಿದ ವಾತಾವರಣ. ಇನ್ನೂ ಸ್ವಲ್ಪ ಬೆಳಕಿತ್ತು. ನಗರದ ಅಪಾರ್ಟ್ ಮೆಂಟ್ ಕಟ್ಟಡ ನಿರ್ಮಾಣ ಕಾರ್ಯದ ಅಂದಿನ ಕೆಲಸ ಮುಗಿದು ಕೂಲಿ ಹಣದ ಬಟವಾಡೆ ನಡೆಯುತ್ತಿತ್ತು. ಮೇಸ್ತ್ರಿ ಒಬ್ಬರು ಕುರ್ಚಿ ಟೇಬಲ್ ಹಾಕಿಕೊಂಡು ಕುಳಿತು ನಗದು…
ಕೊರಗು ಯಾರಿಗಿಲ್ಲ ಹೇಳಿ? ಪ್ರತಿಯೊಬ್ಬರಿಗೂ ಒಂದೊಂದು ತರಹದ ಕೊರಗು ಇದ್ದೇ ಇರುತ್ತೆ. ರಾಜೇಶನದ್ದು ಅಷ್ಟೊಂದು ದೊಡ್ಡ ಕೊರಗೇನಲ್ಲ. ರಾಜೇಶ ಸದ್ಯಕ್ಕೆ ಇರುವ ಊರು ಅವನು ಹುಟ್ಟಿದೂರಲ್ಲ, ಬೆಳೆದ ಊರಲ್ಲ. ಸದ್ಯಕ್ಕೆ ದುಡಿದು ಬದುಕುವ ಊರಿದು.…
ನನ್ನೂರಿನ ನನ್ನ ಯುವಕನಿಗೆ
ಉದ್ಯೋಗ ಸಿಗದಿದ್ದಾಗ
ಚಿಂತೆಯಾಗಿ ಮೂಡಿ ಬಂತು
ನನ್ನ ಕವನ
ನನ್ನೂರಿನ ನನ್ನ ಯುವತಿಗೆ
ಮುಂದೇನು ಎಂಬ ಪ್ರಶ್ನೆ ಮೂಡಿದಾಗ
ಬೇಸರವಾಗಿ ಮೂಡಿ ಬಂತು ಕವನ
ನನ್ನೂರಿನ ನನ್ನ ಅಣ್ಣ
ಕೆಲಸ ಕಳೆದುಕೊಂಡಾಗ
ಆತನ ಭವಿಷ್ಯದ
ಚದುರಂಗ ಅಥವಾ ಚೆಸ್ ಎನ್ನುವುದು ಬಹಳ ಪ್ರಾಚೀನವಾದ ಆಟ. ನಮ್ಮ ಬುದ್ದಿಮತ್ತೆಗೆ ಸವಾಲಾದ ಆಟವಿದು. ಇದರಲ್ಲಿ ದೈಹಿಕ ಚಟುವಟಿಕೆಗಳಿಲ್ಲದೇ ಹೋದರೂ ಮಾನಸಿಕವಾಗಿ ಬಹಳ ಗಟ್ಟಿಯಾಗಿರಬೇಕಾಗುವುದು ಅತ್ಯಗತ್ಯ. ಆಟದಲ್ಲಿ ನಮ್ಮ ಪ್ರತಿಯೊಂದು ನಡೆಯು…
ಭಾರತದಲ್ಲಿ ಅತ್ಯಧಿಕ ಸಂಖ್ಯೆಯ ಆನೆಗಳು ಇರುವುದು ನಮ್ಮ ಕರ್ನಾಟಕದಲ್ಲಿ (2017ರಲ್ಲಿ ನಡೆದ ಆನೆಗಣತಿಯ ಅನುಸಾರ ಕರ್ನಾಟಕದ ಆನೆಗಳ ಸಂಖ್ಯೆ 6,049). 2021ರಲ್ಲಿ ಇಲ್ಲಿ ಸಾವಿಗೀಡಾದ 79 ಆನೆಗಳಲ್ಲಿ ಅಸಹಜ ಕಾರಣದಿಂದ ಸತ್ತ ಆನೆಗಳ ಸಂಖ್ಯೆ 17.…
'ಸುಜನಾ' ಎಂಬ ಕಾವ್ಯನಾಮದ ಮೂಲಕ ತಮ್ಮ ಬರಹಗಳನ್ನು ರಚಿಸುತ್ತಿದ್ದ ಎಸ್ ನಾರಾಯಣ ಶೆಟ್ಟಿಯವರು ಹುಟ್ಟಿದ್ದು ಎಪ್ರಿಲ್ ೧೩, ೧೯೩೦ರಲ್ಲಿ ಮಂಡ್ಯ ಜಿಲ್ಲೆಯ ಕೃಷ್ಣರಾಜ ಪೇಟೆ (ಕೆ ಆರ್ ಪೇಟೆ) ತಾಲೂಕಿನ ಹೊಸಹೊಳಲು ಗ್ರಾಮದಲ್ಲಿ. ಇವರ ತಂದೆ ಸುಬ್ಬ…
ಸರಕಾರಿ ಶಾಲೆಗಳ ಮುಖ್ಯ ಶಿಕ್ಷಕರು ಮತ್ತು ಶಿಕ್ಷಕರು ಬೋಧನೆ ಕಾರ್ಯ ಜತೆಗೇ ಇನ್ನೂ ಅನೇಕ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ. ಅವರಿಗೆ ಒಂದಲ್ಲ ಒಂದು ಹೆಚ್ಚುವರಿ ಹೊಣೆಗಾರಿಕೆಯನ್ನು ಸರಕಾರ ವಹಿಸುತ್ತಲೇ ಬಂದಿದೆ. ಬಿಸಿಯೂಟದಿಂದ ಹಿಡಿದು,…
ವಿಶ್ವಸಂಸ್ಥೆ ಪ್ರಕಟಿಸಿರುವ ಅಧೀಕೃತ ವರದಿಯಲ್ಲಿ ಇದನ್ನು ಹೇಳಲಾಗಿದೆ. ಕೆಲವು ಮಾನದಂಡಗಳ ಆಧಾರದಲ್ಲಿ ವಿಶ್ವದ ಎಲ್ಲಾ ದೇಶಗಳಲ್ಲಿ ಸಂಶೋಧನೆ ಮಾಡಿ ಈ ವರದಿ ತಯಾರಿಸಲಾಗಿದೆ. ಎಲ್ಲಾ ವರದಿಗಳನ್ನು ಸಂಪೂರ್ಣವಾಗಿ ಒಪ್ಪಲು ಸಾಧ್ಯವಿಲ್ಲ. ಆದರೆ…
“That's one small step for man, one giant leap for mankind" -ನೀಲ್ ಆರ್ಮ್ ಸ್ಟ್ರಾಂಗ್
ಹುಣ್ಣಿಮೆಯಂದು ಪೂರ್ಣಚಂದಿರದಿಂದ ಧುಮ್ಮಿಕುವ ರಜತ ಬೆಳದಿಂಗಳಿನ ಜಲಪಾತದ ದೃಶ್ಯ ನಯನ ಮನೋಹರವಾಗಿದ್ದು; ಈ ಸ್ವರ್ಗೀಯ ವಿಲಾಸದ ಸೊಬಗು ಹೇಳತೀರದು…
ಅವತ್ತು ಯಾರೋ ಹೇಳ್ತಾಯಿದ್ರು ಈ ಕ್ರಷ್ ಮತ್ತು ಪ್ರೀತಿ ನಡುವೆ ವ್ಯತ್ಯಾಸ ಗೊತ್ತಿಲ್ದೆ ನಾವು ತಪ್ಪು ಮಾಡ್ತಾ ಇದ್ದೇವೆ ಅಂತ. ನಾನು ಅವತ್ತಿಂದ ಯಾರ ಮೇಲಾದರೂ ಕ್ರಷ್ ಆದರೆ ಅದು ಪ್ರೀತಿಯೋ? ಅಂತ ಪರೀಕ್ಷೆ ಮಾಡೋದಕ್ಕೆ ಒಂದೆರಡು ತಿಂಗಳು…
ಶ್ರದ್ಧೆ ಭಕ್ತಿ ಭಾವದಲಿ ಕೈ ಮುಗಿವೆ ಓ ಚೈತನ್ಯ
ಈ ಲೋಕದಲಿ ನಿನ್ನ ವೈಭವವೆನಿತು ಅನನ್ಯ!
ನಿನ್ನನೆನಿತೋ ಕರೆವರು ಹಲವು ಭಾವದಲಿ
ನೀನೋ ರಾಮ ರಹೀಮ ಏಸು ರೂಪದಲೀ
ಯಾರಾದರೂ ಆಗಿರು ನಿನ್ನ ಸಮನಾರಿಹರು
ಅಗಣಿತ ಅಸಾಮಾನ್ಯ ಗುಣಗಳ ಸರದಾರ!
ಸೃಷ್ಟಿಯ…
ನಮ್ಮ ಮನೆಗಳಲ್ಲಿ ನಾವು ಮಾಡುವ ಯಾವುದೇ ತಿಂಡಿ ತಿನಸುಗಳಿಗೆ ಉದ್ದು ಹಾಗೂ ಹೆಸರು ಅನಿವಾರ್ಯವೇ ಆಗಿರುತ್ತದೆ. ಉದ್ದು ಇಲ್ಲವೇ ಉದ್ದಿನ ಬೇಳೆಯನ್ನು ನಾವು ಬಹುತೇಕ ದೋಸೆಗಳಿಗೆ, ಇಡ್ಲಿ ತಯಾರಿಕೆಗೆ ಬಳಸುತ್ತೇವೆ. ಈ ಧಾನ್ಯಗಳಿಗೆ ಉತ್ತಮ ಮಾರುಕಟ್ಟೆ…
ಭತ್ತದ ಥ್ರೆಷರ್, ಕೇವಲ 500 ರೂಪಾಯಿಗಳಿಗೆ! ಬಲಕ್‌ಥಿ ಹಳ್ಳಿಯ ಧರಣಿದರ್ ಮಹತೋ ಅವರ ಆವಿಷ್ಕಾರ ಇದು. ಇದರ ದಕ್ಷತೆ ಹೇಗಿದೆ? ಮಾರುಕಟ್ಟೆಯಲ್ಲಿ ಲಭ್ಯವಿರುವ ಇತರ ಥ್ರೆಷರುಗಳ ದಕ್ಷತೆಯ ಇಮ್ಮಡಿ! ಅಂದರೆ, ಇದನ್ನು ಚಲಾಯಿಸಿ ಕೆಲಸಗಾರನೊಬ್ಬ ಒಂದು…
ದನಗಳ ಪಾಲನೆ, ರೋಗಗಳು, ಮುಂಜಾಗ್ರತೆ ಹಾಗೂ ಪ್ರಾಥಮಿಕ ಚಿಕಿತ್ಸೆ ಕುರಿತು ಜನಪ್ರಿಯ ಪಶುವೈದ್ಯಕೀಯ ಲೇಖನಗಳ ಸಂಗ್ರಹವೇ ‘ಪಶುವೈದ್ಯ ಸಮಾಲೋಕನ' ಎಂಬ ಪುಸ್ತಕ. ಧಾರವಾಡದ ಕೃಷಿ ವಿಶ್ವವಿದ್ಯಾನಿಲಯದ ಪಶು ವೈದ್ಯಕೀಯ ಆಸ್ಪತ್ರೆಯ ಮುಖ್ಯಸ್ಥರಾದ ಡಾ. ಕೆ…
ಬಹುಶಃ ಕೇಂದ್ರ ಸರ್ಕಾರ ಯಾವುದೋ ಭಯದಿಂದ ಆತುರಕ್ಕೆ ಬಿದ್ದು ದುರಾಸೆಯಿಂದ ಸಿಕ್ಕ ಸಿಕ್ಕ ವಸ್ತುಗಳಿಗೆ ಜಿಎಸ್ಟಿ ವಿಧಿಸುತ್ತಿದೆ. ವಿಶ್ವದ ಆರ್ಥಿಕ ಕುಸಿತದ ಮುನ್ಸೂಚನೆ ದೊರೆತ ಕಾರಣದಿಂದಾಗಿ ಎಷ್ಟು ಸಾಧ್ಯವೋ ಅಷ್ಟು ವಿದೇಶಿ ವಿನಿಮಯ ಹಣ ಸಂಗ್ರಹ…