ಚಿನ್ನದ ಗಿರವಿ ಜಾಹೀರಾತು ಮತ್ತು ನಮ್ಮ ಸಮಾಜ....

" ನೀವು ನಿಮ್ಮ ಒಡವೆಗಳನ್ನು ಅಡವಿಟ್ಟಿರುವಿರಾ. (ಗಿರವಿ) ಹಾಗಾದರೆ ಚಿಂತೆ ಬಿಡಿ. ನಾವು ಅದನ್ನು ಬಿಡಿಸಿ ಇಂದಿನ ಮಾರುಕಟ್ಟೆ ಬೆಲೆಗಿಂತ ಹೆಚ್ಚು ದರದಲ್ಲಿ ಕೊಂಡು ಉಳಿದ ಹಣವನ್ನು ನಿಮಗೆ ಕೂಡಲೇ ಕೊಡುತ್ತೇವೆ " ಹೀಗೆ ದಿನದ 24 ಗಂಟೆಯೂ ಟಿವಿಗಳಲ್ಲಿ ಪ್ರಖ್ಯಾತ ನಟನಟಿಯರು ವಿವಿಧ ಕಂಪನಿಗಳ ಹೆಸರಿನಲ್ಲಿ ಜಾಹೀರಾತು ನೀಡುತ್ತಾರೆ.

Image

ಸ್ಟೇಟಸ್ ಕತೆಗಳು (ಭಾಗ ೯೪೯)- ಹನಿ 2

ಇವತ್ತಿನ ಕಥೆ ಓದುವವರು ನಿನ್ನೆಯ ಕಥೆಯನ್ನು ಒಮ್ಮೆ ಓದ್ಕೊಂಡು ಬನ್ನಿ. ಅದರ ಮುಂದುವರಿದ ಭಾಗ ನಿಮಗೆ ಹೇಳ್ತಾ ಹೋಗ್ತೇನೆ. ನೆನ್ನೆ ಮಳೆರಾಯನಲ್ಲಿ ಒಂದು ಬೇಡಿಕೆ ಇಟ್ಟಿದ್ದೆ. ನಾನು ಒಡಂಬಡಿಕೆಯ ಪತ್ರ ರವಾನಿಸಿದ್ದೆ. ಅದನ್ನ ದೊಡ್ಡವರು ಯಾರೋ ನೋಡಿ ಮಳೆರಾಯನಲ್ಲಿ ಒಂದಷ್ಟು ಮಾತುಕತೆ ನಡೆಸಿದ್ದರು.

Image

ಜೇನು ತೆಗೆಯಲು ಅಪ್ಪ ಹೇಳಿಕೊಟ್ಟ ಟ್ರಿಕ್ (ಭಾಗ 2)

ಒಂದು ಬೇಸಿಗೆಯಲ್ಲಿ ನನ್ನ ವ್ಯಾಪ್ತಿಯ ಜೇನು ಹುಡುಕಾಟ ಮುಗಿಸಿ ಎಲ್ಲೂ ತುಪ್ಪ ರೆಡಿ ಇರುವ ಜೇನು ಇಲ್ಲವೆಂದಾಗ  ಈ ಬಂಡೆ ಸಮೀಪ  ಜೇನು ಹುಡುಕಲು ಹೋಗಿದ್ದೆ. ಹಲವು ವರ್ಷಗಳ ಹಿಂದೆ ಕಾಲ ಕಳೆದ ಸವಿನೆನಪುಗಳ ಸ್ಮರಿಸುತ್ತಾ  ಆ ಸಾಲಿನಲ್ಲಿ ಹಾಗೆ ಹೋಗುತ್ತಿದ್ದಾಗ ಆ ಕತ್ತಾಳೆ ಗುಮ್ಮಿಯಲ್ಲಿ ನೆಲಕ್ಕೆ ಬಿಲ್ಲಿನಂತೆ ಬಾಗಿರುವ ಒಣಗಿದ ಕತ್ತಾಳಿಗರಿಯಲ್ಲಿ ಒಂದು ಅಡಿ ಉದ್ಧದ ಎರಡು ಅಡಿ ಅಗಲದ ಜೇನು ನೋಡಿದೆ.

Image

ಇವಿಎಂ ಕುರಿತ ಗೊಂದಲ, ಶಂಕೆ ಇನ್ನಾದರೂ ನಿಲ್ಲಲಿ

ಎಲೆಕ್ಟ್ರಾನಿಕ್ ಮತಯಂತ್ರಗಳ ಪಾರದರ್ಶಕತೆ ಹಾಗೂ ಪ್ರಾಮಾಣಿಕತೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿ ಕೆಲ ಸಂಸ್ಥೆಗಳು, ವ್ಯಕ್ತಿಗಳು ಸಲ್ಲಿಸಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ವಿವಿಪ್ಯಾಟ್ ಸ್ಲಿಪ್ ಹಾಗೂ ಇವಿಎಂ ನ ಮತಗಳನ್ನು ತಾಳೆ ಹಾಕುವ ಅಗತ್ಯವಿಲ್ಲ ಎಂದು ಇದೇ ವೇಳೆ ನ್ಯಾಯಪೀಠ ಹೇಳಿದೆ.

Image

ಒಂದು ಪೆನ್ ಡ್ರೈವ್ ಸುತ್ತಾ...

ಮತ್ತೆ ಬೆತ್ತಲಾದ ಕೆಲವು ಕನ್ನಡ ಟೆಲಿವಿಷನ್ ಸುದ್ದಿ ಮಾಧ್ಯಮಗಳು. ಸಾಮಾನ್ಯವಾಗಿ ಇತ್ತೀಚಿನ ಟೆಲಿವಿಷನ್ ನ್ಯೂಸ್ ಚಾನೆಲ್ ಗಳು ಇನ್ನೂ ಘಟನೆಗಳು ಘಟಿಸುವುದಕ್ಕೆ ಮುನ್ನವೇ ಊಹಾಪೋಹ, ಗಾಳಿ ಮಾತುಗಳ ಆಧಾರದ ಮೇಲೆ ಬ್ರೇಕಿಂಗ್ ನ್ಯೂಸ್ ಮಾಡುವುದನ್ನು ಗಮನಿಸಿದ್ದೇವೆ.

Image

ಸ್ಟೇಟಸ್ ಕತೆಗಳು (ಭಾಗ ೯೪೮)- ಹನಿ

ನಿಮಗೆಷ್ಟು ಸಲ ಹೇಳೋದು, ಕಣ್ಣಾ ಮುಚ್ಚಾಲೆ ಆಡಬೇಡಾ ಅಂತ. ಮೋಡದೆಡೆಯಲ್ಲಿ  ಕುಳಿತು ಭೂಮಿಗೆ ಬರುವುದ್ದಕ್ಕೆ ಕಾಯುತ್ತಿರುವ ಮಳೆಯ ಹನಿಗಳೇ ಯಾಕೆ ನಮ್ಮ ಮೇಲೆ ಕನಿಕರವಿಲ್ಲವೆ ಅಥವಾ ಸಮಯ ಬರಲೀ ಎಂದೇ. ನೀವು ನೆಲಕ್ಕಿಳಿಯದೇ ಸಮಯ ತುಂಬಾ ಆಯಿತು.‌ ಅವತ್ತು ಕಣ್ಣಾ ಮುಚ್ಚಾಲೆ ಆಟ ಆಡುತ್ತಾ ಓಡಿದವರು ಕೈಗೆ ಸಿಗುವ ಲಕ್ಷಣವೇ ಇಲ್ಲ.ನಾನು ಸೋತಿದ್ದೇನೆ. ನೀವೇ ಸರ್ವ ಶ್ರೇಷ್ಠ.

Image

ಹಳದಿ ಟಿಟ್ಟಿಭದ ಕಥೆ ಗೊತ್ತೇ?

ನಾನು ವಾಸವಾಗಿರುವ ಬಾಡಿಗೆ ಮನೆಯ ಹಿಂದೆ ಒಂದು ಗದ್ದೆ ಇತ್ತು. ಹಲವಾರು ವರ್ಷಗಳಿಂದ ಅದರಲ್ಲಿ ಬೇಸಾಯ ಮಾಡಿರಲಿಲ್ಲ. ಅದರಲ್ಲಿ ಗಿಡಗಂಟಿಗಳು, ಮುಳ್ಳು ಮತ್ತು ಹುಲ್ಲು ಬೆಳೆದಿತ್ತು. ಜನವರಿ ತಿಂಗಳಿನಲ್ಲಿ ಪೂರ್ತಿ ಒಣಗಿದ‌ ಆ ಜಾಗ ಮರಳುಗಾಡಿನಂತೆ ಕಂದು ಬಣ್ಣ ಕಾಣುತ್ತಿತ್ತು. ಆ ಗದ್ದೆಯ ಬದಿಯಲ್ಲೇ ನಾನು ದಿನವೂ ಹಾಲು ತರಲು ಹೋಗುತ್ತಿದ್ದೆ.

Image