December 2009

  • December 29, 2009
    ಬರಹ: manjunathsinge
    ಹಿಂದೆ ಎಲ್ಲೋ ಓದಿದ ನೆನಪು. ನಾಗಮಂಡಲ ಚಿತ್ರದ "ಈ ಹಸಿರು ಸಿರಿಯಲಿ" ಹಾಡನ್ನು ಸಂಗೀತ ಕಟ್ಟಿಯವರು ಮೊದಲ ಸಲ ಹಾಡಿದಾಗ, ಸಿ ಅಶ್ವಥ್ ಅವರು ತೀವ್ರ ಅಸಮಧಾನ ವ್ಯಕ್ತಪಡಿಸಿದ್ದರಂತೆ. ಅವರ ಹಾಡಿನಲ್ಲಿದ್ದ ಹಲವು ತಪ್ಪುಗಳನ್ನು ಹುಡುಕಿ, ತಿದ್ದಿ,…
  • December 29, 2009
    ಬರಹ: h.a.shastry
    (ಇದೀಗಷ್ಟೇ ಸಿ.ಅಶ್ವತ್ಥ್ ನಿಧನವಾರ್ತೆ ಕೇಳಿ ನನ್ನ ಮನ ಮಿಡಿದ ಬಗೆ ಹೀಗೆ. ಇದು ಕನ್ನಡದ ಆ ಮೇರು ಗಾಯಕನಿಗೆ ನನ್ನ ಅಶ್ರುತರ್ಪಣ) ಕನ್ನಡವೇ ಸತ್ಯಎಂದು ಹಾಡಿದನೀನೇ ಸತ್ತೆಯಾ!ಏನು ಮಾಡೋದು,ಸಾವೂ ಸತ್ಯ!ನೋವಿನ ನಡುವೆಯೂನೆಮ್ಮದಿಯೆಂದರೆ,ಕನ್ನಡವೂ…
  • December 29, 2009
    ಬರಹ: nag4pl
          ತಮ್ಮ ಕಂಚಿನ ಕಂಠದಿಂದ ಭಾವ ಪೂರ್ಣ ಗಾಯನದ ಸ್ವರದೂಟ ಉಣಬಡಿಸಿ ತಮ್ಮ ಜನುಮ ದಿನದಿಂದೆ ಮರೆಯಾದ ಸ್ವರಾತ್ಮ ಸಿ. ಅಶ್ವಥ್’ರವರಿಗಿದೊ ಭಾವಪೂರ್ಣ ಅಶ್ರುತರ್ಪಣ.. ಚಿತ್ರ: hindu.com
  • December 29, 2009
    ಬರಹ: BRS
    ಪಾಪಿಗುದ್ಧಾರಮಿಹುದೌ ಸೃಷ್ಟಿಯ ಮಹದ್‌ವ್ಯೂಹ ರಚನೆಯೊಳ್.-ಶ್ರೀ ಕುವೆಂಪು, ಶ್ರೀರಾಮಾಯಣ ದರ್ಶನಂ ಮಹಾಕಾವ್ಯ. ಪುಟ ೧೨೩; ಸಾಲು ೩೦೩-೦೪. ಸೂರ್ಯೋದಯಕ್ಕೂ ಮೊದಲೆ ಎದ್ದು, ನದಿಯೆಡೆಗೆ ಹೋಗಿ ನಿತ್ಯ ಕರ್ಮಾದಿಗಳನ್ನು ಮುಗಿಸಿ, ಸ್ನಾನಕ್ಕೆಂದು…
  • December 29, 2009
    ಬರಹ: h.a.shastry
      ’ಸಂಪದ’ದಲ್ಲಿ ಈಚೆಗೆ ನಾನು ಪ್ರಕಟಿಸಿರುವ ’ಗ್ರಹಚಾರ್ಯ’ ಮತ್ತು ’ತರಕಲಾಂಡಿ ಇತ್ಯಾದಿ’ ಬರಹಗಳಿಗೆ ಪ್ರತಿಕ್ರಿಯೆ ವ್ಯಕ್ತಪಡಿಸುತ್ತ ಕೆಲ ಮಿತ್ರರು ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ, ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಆ ಪ್ರಶ್ನೆಗಳಿಗೆ…
  • December 29, 2009
    ಬರಹ: h.a.shastry
      ಹಿಂದೆ ರಾಜಮಹಾರಾಜರ ಕಾಲದಲ್ಲಿ, ಆಸ್ಥಾನಕ್ಕೆ ರಾಜರು ಬರುವಾಗ ಅವರ ಪಕ್ಕದಲ್ಲಿ ಒಬ್ಬ ಸೇವಕ ಇರುತ್ತಿದ್ದ. ಅವನನ್ನು ’ಪಾದದೆಚ್ಚರದವನು’ ಎಂದು ಕರೆಯಲಾಗುತ್ತಿತ್ತು. ನಡೆದು ಬರುವಾಗ ದೊರೆಯು ಯಾವ ಕಾರಣಕ್ಕೂ ಕೆಳಗೆ ದೃಷ್ಟಿ ಹಾಯಿಸದೆ ನೇರ…
  • December 29, 2009
    ಬರಹ: bapuji
      ಈಗ್ಗೆ ಒಂದು ವಾರದ ಹಿಂದೆ, ಪತ್ರಿಕೆಯಲ್ಲಿ ತಮಿಳುನಾಡಿನ ಮುಖ್ಯಮಂತ್ರಿ ಹೇಳಿರುವ ಹೇಳಿಕೆ ವಿಚಿತ್ರವೆನಿಸಿತು. ಕಾವೇರಿಯ ವಿವಾದವನ್ನು ರಾಜಕೀಯ ಮಾಡುವ ಹುನ್ನಾರ. ಅದು ಆಗಲೆ ರಾಜಕೀಯದ ’ಕಪಿ’ಮುಷ್ಠಿಯಲ್ಲಿ ಸಿಕ್ಕಿ ದಶಕಗಳೆ ಕಳೆದೀವೆ. ಕಾವೇರಿ…
  • December 29, 2009
    ಬರಹ: hamsanandi
    ಸುಮ್ಮನಿದ್ದರೆ ಮೂಗ - ಮಾತಾಡುವನೋ? ಬಾಯಿಬಡುಕ;ಸೈರಣೆಯಿರುವನು ಪುಕ್ಕಲ; ಇಲ್ಲದವನ ಹುಟ್ಟೇ ಸರಿಯಿಲ್ಲ! ಬಳಿಯಲಿರುವನು ಕಾಲ್ತೊಡಕು; ದೂರದಲಿರುವನು ತಿಳಿಗೇಡಿ ಪರರ ಚಾಕರಿಯನಿತು ಕಠಿಣ! ಯೋಗಿಗಳಿಗೂ ನಿಲುಕೋದಿಲ್ಲ!ಸಂಸ್ಕೃತ ಮೂಲ: (ಭರ್ತೃಹರಿಯ…
  • December 29, 2009
    ಬರಹ: Chamaraj
    ಹಾಡಿನ ಮೋಡಿಯಲ್ಲಿ ನಾಡನ್ನೆಲ್ಲ ಸಿಲುಕಿಸಿದ್ದ ಸುಗಮ ಸಂಗೀತದ ದಿಗ್ಗಜ ಸಿ. ಅಶ್ವಥ್‌ ಮೃತರಾಗಿದ್ದಾರೆಯೆ? ಮಾಧ್ಯಮ ವಲಯದಲ್ಲಿ ಇಂಥದೊಂದು ಸುದ್ದಿ ಇವತ್ತು ತೀವ್ರವಾಗಿ ಕೇಳಿಬರತೊಡಗಿದೆ. ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಅಶ್ವಥ್‌ ಅವರನ್ನು…
  • December 28, 2009
    ಬರಹ: omshivaprakash
    ನೀರವ ರಾತ್ರಿಯ ಆ ದಿನ, ಸದ್ದೇ ಇಲ್ಲ. ಎಲ್ಲರೂ ನಿದ್ರಾದೇವಿಗೆ ಶರಣಾಗುತ್ತಾ ಶಾಂತರಾದಂತೆ ಕಾರು ಡ್ರೈ ಮಾಡಿ, ಕಾಡುಮೇಡು ಸುತ್ತಿ, ಬೆಟ್ಟ ಹತ್ತಿ ದಣಿದಿದ್ದ ನನ್ನ ದೇಹವೂ ಗೊತ್ತಿಲ್ಲದೇ ನಿಶ್ಚಲ ನಿದ್ರಾಸ್ಥಿತಿ ತಲುಪಿತ್ತು. ತಣ್ಣನೆ ಗಾಳಿ…
  • December 28, 2009
    ಬರಹ: bhalle
    ಒಂದೆರಡು  ಡೈಲಾಗುಗಳು , ನನ್ನನ್ನು  ಸಿಕ್ಕಾಪಟ್ಟೆ  ಗೊಂದಲದಲ್ಲಿ  ಸಿಲುಕಿಸಿತು :  ೧. "ಪಾಪ, ಇನ್ನೂ ಚಿಕ್ಕ ವಯಸ್ಸು. ನಲವತ್ತೈದು ಅಷ್ಟೇ! ತೀರಿಕೊಂಡು  ಬಿಟ್ರು " .... ೨. "ವಯಸ್ಸು  ನಲವತ್ತೈದು  ಆಯ್ತು  ... ಇನ್ನೂ  ಚಿಕ್ಕವರ  ಹಾಗೆ  …
  • December 28, 2009
    ಬರಹ: AVLRAO
    ಒಂದಾನೊಂದು ಊರಿನಲ್ಲಿ ಒಬ್ಬಾನೊಬ್ಬ ರಾಜನಿದ್ದ ರಾಜ ಅವನ ಹೆಸರು ಮಾತ್ರ ರಾಜ್ಯ ಸೊನ್ನೆಯೇ ಅವನು ಕುಡಿವ ನೀರ ಲೋಟ ಒಂದು ದೊನ್ನೆಯೇ!   ಆದಿ ಎಂಬ ಹುಡುಗಿಯನ್ನು ಅಂತ್ಯವಿರದೆ ಪ್ರೀತಿಸುತ್ತ ಹಂತಹಂತವಾಗಿ ಅವನು ತನ್ನ ಮರೆತನು ಸದಾ ಅವಳ ಚಿಂತೆಯಲ್ಲೆ…
  • December 28, 2009
    ಬರಹ: hsprabhakara
    ನಮ್ಮ ಸಿನಿಮಾಗಳು ರಚನೆಯಾಗುವುದರ ಹಿಂದಿನ ಏಕೈಕ ಮೂಲ ದ್ರವ್ಯ `ಲವ್'! ಅದೇ ರೀತಿ ಪತ್ರಿಕೆಗಳು ಪ್ರಧಾನ ವಿಷಯವಾಗಿ ಪ್ರಕಟಿಸುವುದು ರಾಜಕೀಯ ಮಾತ್ರ. ಭಾರತೀಯ ಸಿನಿಮಾಗಳು ರಚನೆಯಾಗಲು `ಲವ್' ಹೊರತು ಬೇರೆ ವಿಷಯಗಳೇ ಇಲ್ಲವೆ? ಅದೇ ರೀತಿ…
  • December 28, 2009
    ಬರಹ: vbamaranath
    (ಈ ಅನುಭವ ಡಿಸೆಂಬರ್-೧ ರಂದು ದಟ್ಸ್-ಕನ್ನಡದಲ್ಲಿ ಪ್ರಕಟಿತವಾಗಿತ್ತು...ಅದರ ಕೊಂಡಿ ಇಲ್ಲಿದೆ http://thatskannada.oneindia.in/response/2009/1201-bangalore-traffic-woes-letter-by-amarnath.html) ದಿನಾಂಕ 28 ನವೆಂಬರ್ 2009…
  • December 28, 2009
    ಬರಹ: kafir
    "ಗಾಂಧಿ ಜೀ  ಅಂದರೆ  ಆಯುರ್ವೇದ  , ನೇತಾಜಿ    ಅಂದರೆ   ಅಲೋಪತಿ , ಮೊದಲನೆಯದು  ಶಾಶ್ವತ ಪರಿಹಾರ  ಎರಡನೆಯದು  ತಾತ್ಕಾಲಿಕ ಶಮನ "  ನಿಮ್ಮ ಅಭಿಪ್ರಾಯ .
  • December 28, 2009
    ಬರಹ: omshivaprakash
    ಭಾನುವಾರ ಬೆಳಗ್ಗೆ ರವೀಂದ್ರ ಕಲಾಕ್ಷೇತ್ರ ತುಂಬಿತುಳುಕಿತ್ತು.. ತಲುಪುವ ವೇಳೆಗಾಗಲೆ ಇನ್ನೇನು ಖುರ್ಚಿಗಳೇ ಸಿಗುವುದಿಲ್ಲವೇನೋ ಎಂದು ಕೊರಗುತ್ತಲೇ ಒಳನೆಡೆದರೂ ಎಲ್ಲರಿಗೂ ಸುಲಭವಾಗಿ ಕೂಡಲು ಸಾಧ್ಯವಾಯಿತು. ಬಿ.ಸುರೇಶ್, ಮುಖ್ಯಮಂತ್ರಿ ಚಂದ್ರು…
  • December 28, 2009
    ಬರಹ: arshad
    ಚಾಣಕ್ಯ ಕ್ರಿಸ್ತಪೂರ್ವ ೩೫೦ ರಲ್ಲಿ ಉತ್ತರಭಾರತದ (ಈಗಿನ ಬಿಹಾರ) ಪಾಟಲಿಪುತ್ರ ನಗರದಲ್ಲಿ ಜೀವಿಸಿದ್ದ ಮಹಾನ್ ಮೇಧಾವಿ. ಆ ಕಾಲದಲ್ಲಿಯೇ ಹಲವು ಉಕ್ತಿಗಳನ್ನು ಆತ ಪ್ರಸ್ತುತಪಡಿಸಿದ್ದು ಇಂದಿಗೂ ಅವು ಪ್ರಸ್ತುತವಾಗಿವೆ. ಚಾಣಕ್ಯನ ಹಲವಾರು…
  • December 28, 2009
    ಬರಹ: venkatesh
    ನೃತ್ಯಕ್ಕೆ ಸಹಾಯಕರಾದ ಕಲಾವಿದರು,  ವಿದ್ವಾನ್, ಶ್ರೀ. ಶಂಕರನಾರಾಯಣ, ಶ್ರೀಮತಿ ಶಕುಂತಲಾ, ಶ್ರೀ ಶ್ರೀವತ್ಸ, ಮತ್ತು ಶ್ರೀಮತಿ. ಮಂಗಳಾ ವೈದ್ಯನಾಥನ್.  ’ಮೈಸೂರು ಅಸೋಸಿಯೇಷನ್, ಮುಂಬೈ’ ನಲ್ಲಿ, ಅಂತಾರಾಷ್ಟ್ರೀಯ ಖ್ಯಾತಿಯ, ನೃತ್ಯ ವಿಶಾರದ,  ’…
  • December 28, 2009
    ಬರಹ: ASHOKKUMAR
    ಬ್ಲಾಗನ್ನು ಮುದ್ರಿಸಿ
  • December 28, 2009
    ಬರಹ: hpn
    (ಈ ಚುಟುಕು ಬರಹ ಭಾನುವಾರ ಡಿಸೆಂಬರ್ ೨೭ ರ ವಿಜಯ ಕರ್ನಾಟಕದಲ್ಲಿ ಪ್ರಕಟವಾಗಿದೆ. "ಕನಸಿನ ಉದ್ಯೋಗ"ದ ಬಗ್ಗೆ ಬರೆಯಬೇಕೆಂದು ಕೇಳಿದ್ದರು. ನಾನು ಬರೆದದ್ದು ಇಗೋ ನಿಮ್ಮ ಮುಂದಿದೆ) ನನ್ನ ಕನಸಿನ ಉದ್ಯೋಗ ಕನಸು ಕಾಣುವುದು. ಅರೆ, ಇದೇನು?…