ಅಡಿಕೆ ಸಸ್ಯದ ಸುಳಿಯ ಭಾಗದ ಎಲೆಗಳು ಮುರುಟಿ ಬೆಳೆಯುವ ಸಮಸ್ಯೆಗೆ ಹಿಡಿಮುಂಡಿಗೆ, ಬಂದ್ ರೋಗ ಎಂಬ ನಾಮಕರಣ ಮಾಡಲಾಗಿದೆ. ಇದು ನಿಜವಾಗಿಯೂ ಹಿಡಿಮುಂಡಿಗೆಯೇ ಅಥವಾ ಬೇರೆಯೇ? ಇಲ್ಲಿದೆ ಸಮಸ್ಯೆ ನಿವಾರಣೆಯಾದ ಒಂದು ಪುಟ್ಟ ಯಶೋಗಾಥೆ.
ಬಹುತೇಕ ಅಡಿಕೆ…
ಏಕೀಕೃತ ಪಾವತಿ ವ್ಯವಸ್ಥೆ ( ಯುಪಿಐ- ಯೂನಿಫೈಡ್ ಪೇಮೆಂಟ್ ಇಂಟರ್ಫೇಸ್), ಡೆಬಿಟ್- ಕ್ರೆಡಿಟ್ ಕಾರ್ಡ್, ಮೊಬೈಲ್ ವಾಲೆಟ್, ಪ್ರಿಪೆಯ್ಡ್ ಕಾರ್ಡ್ ಮುಂತಾದ ಡಿಜಿಟಲ್ ಪಾವತಿಗಳ ಮೂಲಕ ಈ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ೩೮.೩ ಲಕ್ಷ ಕೋಟಿ…
ಸರ್ಕಾರದ ತೆರಿಗೆ ಆದಾಯದಲ್ಲಿ ಗಣನೀಯ ಏರಿಕೆ. ಕರ್ನಾಟಕದ ಜಿಎಸ್ಟಿ ಸಂಗ್ರಹ ದೇಶದಲ್ಲೇ ಅತಿಹೆಚ್ಚು. ಇದರ ಕಾರಣಗಳು ಮತ್ತು ಎರಡು ಮುಖಗಳು.
ಒಂದು ಮುಖ, ವ್ಯಾಪಾರ ವಹಿವಾಟುಗಳು ಹೆಚ್ಚಾಗುತ್ತಿರುವುದು, ಡಿಜಿಟಲೀಕರಣದ ಪರಿಣಾಮ ಸಾಕಷ್ಟು ಜನ ತೆರಿಗೆ…
"ವಂಶೀ ಸಂದೇಶ" ಎಂಬ ರಸಾನುಭೂತಿ - ಶತಾವಧಾನಿ ಡಾ. ಆರ್ ಗಣೇಶರ ಕಾವ್ಯಾನುಸಂಧಾನ(ಯಥಾಮತಿ)
ವಾಲ್ಮೀಕಿಯ ಶೋಕ ರಾಮಾಯಣ ಮಹಾಕಾವ್ಯಕ್ಕೆ ಕಾರಣವಾಯಿತು. ಆ ಶೋಕಭಾವ ವಿಶುದ್ದ ಕರುಣರಸಕ್ಕೇರಿ ಅತ್ಯಪೂರ್ವ ಆದಿಕಾವ್ಯವನ್ನು ಸೃಜಿಸುವಲ್ಲಿ ಆದಿಕವಿಯ…
ನಾನು ಎಂದರೆ ಯಾರು? ಅಂದ್ರೆ ನನ್ನ ಹೆಸರೋ, ನನ್ನ ಕೇಶರಾಶಿಯೋ? ನನ್ನ ದಂತಪಂಕ್ತಿಗಳೋ? ನನ್ನ ಕೆನ್ನೆಯ ಮೇಲಿನ ಗುಳಿಯೋ? ನಾ ನಡೆವ ನಡಿಗೆಯೋ? ನಾನು ಧರಿಸಿದ ಬಟ್ಟೆಯೋ? ನನ್ನ ಹೆತ್ತವರೋ? ಅಥವಾ ಬೆಳಗ್ಗೆ ಎದ್ದಾಗ ಗಡುಸಾಗಿರುವ ನನ್ನ ಧ್ವನಿ,…
ಮಾನವತಾವಾದಿ ಡಾ.ಬಿ.ಆರ್.ಅಂಬೇಡ್ಕರ್ ರವರಿಗೆ ಮಹಾ ಪರಿನಿರ್ವಾಣ ದಿನದಂದು ಗೌರವ ನುಡಿ ನಮನಗಳು.
ನಮ್ಮ ದೇಶದ ಬೃಹತ್ ಲಿಖಿತ ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರಾಗಿದ್ದ ಶ್ರೇಷ್ಠ ಮಾನವತಾವಾದಿಗಳು. ಭಾರತ ದೇಶದ ರಾಜಕೀಯ, ಸಾಮಾಜಿಕ, ಶೈಕ್ಷಣಿಕ,…
ಬೆಟ್ಟದೊಳಗೆ ಸಿಕ್ಕ ಬಿಲಕೆ
ಹಕ್ಕು ಪತ್ರ ಏತಕೆ
ಸುಟ್ಟ ಹೆಣದ ಹಾರು ಬೂದಿ
ಶೂನ್ಯವಾಯ್ತು ಏತಕೆ!
ಕೊಟ್ಟ ಮಾತು ಉಳಿಸಿ ಕೊಳಲು
ನಿಷ್ಠೆ ಕೊರತೆ ಏತಕೆ
ದಿಟ್ಟ ನಡೆಯ ಧರ್ಮ ನದಿಯ
ತಡೆಯ ಬೇಕು ಏತಕೆ!
ಬೇರಿನೊಳಗೆ ಜೀವ ಧಾತು
ಬಹಳ ಹಿಂದೆ ಧಾರಾನಗರದಲ್ಲಿ ಚಳಿಗಾಲದ ಒಂದು ರಾತ್ರಿ. ಯಾರೂ ಹೊರಗೆ ತಿರುಗಾಡುತ್ತಿರಲಿಲ್ಲ. ಪ್ರಜೆಗಳ ಕಷ್ಟಸುಖಗಳನ್ನು ಸ್ವತಃ ತಿಳಿದುಕೊಳ್ಳಲು ಹೊರಡುವ ಪದ್ಧತಿಯಂತೆ, ರಾಜನಾದ ಭೋಜರಾಜನು ವೇಷ ಬದಲಾಯಿಸಿಕೊಂಡು ಊರೊಳಗೆ ಹೊರಟನು.
ಹೋಗುತ್ತಾ ರೈತ…
ಹೆಳವರಿಗೆ ಜೀವ ವಿಮೆ, ಆರೋಗ್ಯ ವಿಮೆ ಮತ್ತು ಮಾಸಾಶನ ಕಡ್ಡಾಯ ಮಾಡಬೇಕು. ಈ ಬಾರಿಯ ಚುನಾವಣೆಯಲ್ಲಿ ಯಾವುದೇ ಪಕ್ಷದ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿ ಅದರ ಮೊದಲ ಕೆಲಸ ಹುಟ್ಟಿನಿಂದ ಅಥವಾ ಅಪಘಾತದಿಂದ ಹೆಳವರಿಗೆ ಮತ್ತು ತೀವ್ರ ಸ್ವರೂಪದ…
ಈ ಬದುಕು ಅರ್ಥವಾಗುತ್ತಿಲ್ಲ, ಅದೇನು ಸಮಸ್ಯೆಗಳನ್ನು ತಂದೊಡ್ಡುತ್ತಿದೆ, ಒಂದಷ್ಟು ಅಡೆತಡೆಗಳನ್ನು ಮತ್ತೆ ಮತ್ತೆ ಸೃಷ್ಟಿಸುತ್ತಿದೆ. ಗೆಳೆಯರು ಯಾರು, ಶತ್ರುಗಳು ಯಾರು? ಜೊತೆಗಾರರು ಯಾರು? ಮುನ್ನಡೆಸುವವರಾರು? ಎಲ್ಲವೂ ಬರಿಯ ಪ್ರಶ್ನೆಗಳು.…
ಹುಣ್ಣಿಮೆಯ ರಾತ್ರಿಯಂದು, ದೂರದರ್ಶಕವಿಲ್ಲದೆ, ಬರಿಗಣ್ಣಿನಿಂದ ಚಂದ್ರನನ್ನು ನೋಡಿದರೆ, ಅದರ ಮೇಲ್ಮೈಯಲ್ಲಿ ಕಪ್ಪು ಮತ್ತು ಬೆಳಕಿನ ಕಲೆಗಳು ಕಾಣಸಿಗುತ್ತದೆ. ಈ ಕಲೆಗಳನ್ನು "ಚಂದ್ರನ ಮುಖ್ಯ ಬಾಂಬುಕುಳಿಗಳು" (Impact Lunar Craters) ಎಂದು…
ಅನುಕಂಪದ ಜೊತೆ ಅವಕಾಶವನ್ನೂ ನೀಡಿ, ಸಹಾನುಭೂತಿಯ ಜೊತೆ ಸದಾಶಯವೂ ಇರಲಿ, ಕರುಣೆಯ ಜೊತೆ ಸಹಕಾರವೂ ಇರಲಿ. ವಿಶ್ವ ಅಂಗವಿಕಲರ ದಿನ, ಡಿಸೆಂಬರ್ 3.
ಅಂಗವಿಕಲರು, ವಿಕಲ ಚೇತನರು, ವಿಕಲಾಂಗ ಚೇತನರು, ದಿವ್ಯಾಂಗ ಚೇತನರು, ಕುರುಡರು, ಕುಂಟರು, ಕಿವುಡರು…
ತಾನು, ತನ್ನದು ಎಂಬುದು ಸರ್ವೇ ಸಾಮಾನ್ಯ. ಅನ್ಯ ಅಥವಾ ಬೇರೆ ಆಶ್ರಯಿಸಬಾರದೆಂದು ಅಲ್ಲ. ಅಷ್ಟೂ ಅನಿವಾರ್ಯತೆಗೆ ನಾವು ಇಳಿಯಬಾರದಷ್ಟೆ. ಆಸೆ -ಆಕಾಂಕ್ಷೆಗಳನ್ನು ಸ್ಥಿಮಿತದಲ್ಲಿಟ್ಟರೆ ಅನಿವಾರ್ಯತೆ ಹತ್ತಿರ ಬರಲೂ ಹೆದರಬಹುದು. ಇತರರ ಬಳಿ…
ಆಕೆಯ ಆಸ್ಪತ್ರೆ ಬಳಿಗೆ ಬಂದಳು , "ಏನಾಯ್ತು"
"ನಿಮ್ಮ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ"
"ಹೋ ಹೌದಾ ಇಷ್ಟು ಸಮಯ ಬೇಕಾಯಿತಾ, ಸರಿ ನೀವೆಲ್ಲಾದರೂ ಮಣ್ಣು ಮಾಡುವುದಾದರೆ ಮಾಡಿ ನನಗೆ ತುಂಬ ವರ್ಷದ ಹಿಂದೆಯೇ ಸತ್ತುಹೋಗಿದ್ದಾನೆ" ಹೀಗೊಂದು…
ಸುರೇಶ ದೇಸಾಯಿ ಅವರ ʼ ಬೇಸಾಯದ ಕಲೆ- ಸಮೃದ್ಧ ಕೃಷಿ ಪ್ರಯೋಗಗಳುʼ ಸಾಧಕನೊಬ್ಬ, ಪ್ರಯೋಗ- ಅನುಭವದ ಮೂಲಕ ಕಂಡುಕೊಂಡ ಕೃಷಿ ಆವಿಷ್ಕಾರಗಳ ದಾಖಲೆ. ದಶಕಗಳ ಆಳ ಆನುಭವ ಇಲ್ಲಿ ಫಲರೂಪಿಯಾಗಿ ಅನಾವರಣಗೊಂಡಿದೆ. ಕರ್ನಾಟಕದಲ್ಲಿ ನಾರಾಯಣ ರೆಡ್ಡಿ,…
ಗೋಪಾಲಯ್ಯ ಒಬ್ಬ ರಾಜಕಾರಣಿ. ಚುನಾವಣೆಗೆ ಸ್ಪರ್ಧಿಸಿದ್ದ ಆತ ತನ್ನ ಉಮೇದುವಾರಿಕೆಯ ಪ್ರಚಾರಕ್ಕಾಗಿ ಹಲವಾರು ಜನರನ್ನು ಭೇಟಿ ಮಾಡಬೇಕಾಗಿತ್ತು. ಒಂದು ಸಭೆಯಲ್ಲಿ ಒಬ್ಬ ವ್ಯಕ್ತಿ ಗೋಪಾಲಯ್ಯನನ್ನು ಸಾರ್ವಜನಿಕವಾಗಿ ನಿಂದಿಸುತ್ತಿದ್ದ. ಗೋಪಾಲಯ್ಯನ…
ತಬಲಾ ಕಲಿಕೆ !
ಗಾಂಪ: ಸೂರಿ, ನಾನು ತಬಲಾ ಕಲಿಯೋಕೆ ತಂಜಾವೂರಿಗೆ ಹೋಗ್ತಾ ಇದ್ದೇನೆ.
ಸೂರಿ: ಹೌದಾ ! ಅದು ತುಂಬಾ ದೂರವಿದೆಯಲ್ಲಾ? ಖರ್ಚು ತುಂಬಾ ಆಗುದಿಲ್ಲವಾ? ಅದಕ್ಕೇನು ಮಾಡ್ತೀಯಾ?
ಗಾಂಪ: ನಮ್ಮ ನೆರೆಮನೆಯವರೆಲ್ಲಾ ಸೇರಿ ದುಡ್ಡುಕೊಟ್ಟು ಈ…
“ಚಾಣಕ್ಯ ಒಬ್ಬ ಮಹಾನ್ ಕನಸುಗಾರ. ಒಂದು ರಾಜ್ಯ ಮತ್ತು ಸಂಸಾರದಲ್ಲಿ ಸನ್ಮಾರ್ಗ ಮತ್ತು ಸಂತೋಷದ ವಿಜಯವನ್ನು ನಿರೂಪಿಸುವ ಮಹಾಕಾವ್ಯ ಮಹಾಭಾರತ. ಒಂದು ಆಶ್ಚರ್ಯಕರ ಸೂತ್ರ ನೀಡುತ್ತದೆ. “ ಸಂತೋಷದ ಮೂಲ ಧರ್ಮ". ಚಾಣಕ್ಯ ಇದನ್ನೇ ಅನುಸರಿಸಿದ್ದಾನೆ.…