May 2024

 • May 28, 2024
  ಬರಹ: ಬರಹಗಾರರ ಬಳಗ
  ಊರ ಹೊರಗೆ ಅಜ್ಜ ದೇವರ ಬೇಡುತ್ತಿದ್ದರು, ನನ್ನ ಊರನ್ನ ನಾನು ಕಂಡ ನನ್ನ ಬಾಲ್ಯದ ತರಹ ಬದಲಾಯಿಸಿ ಬಿಡು ದೇವರೇ, ಈಗ ಜನ ಮೊಬೈಲ್, ಟಿವಿ ಎಂದು ಮುಳುಗಿ ಹೋಗಿದ್ದಾರೆ ಅಂತ ದೇವರಿಗೂ ಅವರ ಮಾತು ತಲುಪಿತೋ ಏನೋ ದೇವರು ಪುಟ್ಟ ಗುಬ್ಬಿ ಮರಿಯೊಂದರಿಂದ…
 • May 28, 2024
  ಬರಹ: ಬರಹಗಾರರ ಬಳಗ
  ಇಂದು ಪಾತಂಜಲ ಮಹರ್ಷಿಯ ಯೋಗ ಸೂತ್ರದ ಎರಡನೇ ಪಾದ, ಎರಡನೇ ಸೂತ್ರದಲ್ಲಿ ಕ್ಲೇಶದ ಬಗ್ಗೆ ಹೇಳುತ್ತಾನೆ. ಕ್ಲೇಶ ಎಂದರೇನು...? ಕ್ಲೇಶ ಎಂದರೆ ಮನಸ್ಸಿನ ಬಂಧನ. ದುಃಖಕ್ಕೆ ಯಾವುದು ಕಾರಣವೋ ಅದು ಕ್ಲೇಶ. ಇದು ಮನಸ್ಸಿನ ಹೊಲಸು, ಮಲಿನ. ಸೆರೆಮನೆ…
 • May 28, 2024
  ಬರಹ: ಬರಹಗಾರರ ಬಳಗ
  ಯಾವ ಶಿಲ್ಪಿಯೊ ಕೆತ್ತಿ ಶಿಲ್ಪವ ಭಾವ ತುಂಬಿದ ಮನದೊಳು ದೇವ ಕನ್ನಿಕೆಯಂಥ ಚೆಲುವಿಕೆ ಕಾವರಿಲ್ಲವೆ ನಾಡೊಳು   ಕೊರಳು ಬಳಸಿದ ದಾರ ಹೊಂದಿದೆ ಕರದಿ ನುಡಿಸುವ ಮದ್ದಳೆ ಕರವನೊಂದನು ಮೇಲಕೆತ್ತಿದೆ ಶಿರದ ಹಿಂಬದಿ ಹಿಡಿದಳೆ   ಹಸಿರು ಲತೆಗಳು…
 • May 28, 2024
  ಬರಹ: ಬರಹಗಾರರ ಬಳಗ
  ನಮ್ಮ ತಂಡ ಹಾಸ್ಟೆಲ್ ನಿಂದ ಹೋರಹೋಗುತ್ತಿರುವುದು ಜೇನು ಬಿಡಿಸಿ ತಿನ್ನಲಿಕ್ಕೆ ಎಂದು ವಾರ್ಡನ್ ಆದಿಯಾಗಿ ಎಲ್ಲರಿಗೂ ಗೊತ್ತಾಗಿತ್ತು. ಅನೇಕ ಹುಡುಗರು ನಮ್ಮ ತಂಡ ಎಲ್ಲಿಯಾದರೂ ಹೊರಟರೆಂದರೇ ಇವರು ಜೇನು ಹುಡುಕಲು, ಜೇನುಕೀಳಲೇ ಹೋಗುತ್ತಿದ್ದಾರೆಂದು…
 • May 27, 2024
  ಬರಹ: Ashwin Rao K P
  ಕಷ್ಟದ ಕೆಲಸ ಹೊಗೆನ್ ಎಂಬ ಸನ್ಯಾಸಿ ನಗರದ ಹೊರಗಿನ ಒಂದು ಸಣ್ಣ ಗುಡಿಯಲ್ಲಿ ವಾಸವಾಗಿದ್ದರು. ನಾಲ್ಕು ಜನ ಬೌದ್ಧ ಭಿಕ್ಷುಗಳ ತಂಡವೊಂದು ಅಲ್ಲಿಗೆ ಬಂತು. ಅಂದು ಸಂಜೆ ಅವರು ಅಲ್ಲೇ ಉಳಕೊಳ್ಳುವವರಿದ್ದರು. ರಾತ್ರಿ ಮಲಗುವ ಮುನ್ನ ಅವರು ನಾಲ್ಕೂ ಮಂದಿ…
 • May 27, 2024
  ಬರಹ: Ashwin Rao K P
  ‘ಮಲೆನಾಡಿನ ರೋಚಕ ಕಥೆಗಳು' ಎಂಬ ಸರಣಿಗಳ ಮೂಲಕ ಪ್ರಸಿದ್ಧಿಯನ್ನು ಪಡೆದಿರುವ ಕಾದಂಬರಿಕಾರರಾದ ಗಿರಿಮನೆ ಶ್ಯಾಮರಾವ್ ಅವರು ಬರೆದ ಮನೋವೈಜ್ಞಾನಿಕ ಕಾದಂಬರಿ ‘ಅನಾಥ ಹಕ್ಕಿಯ ಕೂಗು'. ಮಲೆನಾಡಿನ ರೋಚಕ ಕಥೆಗಳು ಬಹುತೇಕ ಪರಿಸರಕ್ಕೆ ಸಂಬಂಧಿಸಿದ…
 • May 27, 2024
  ಬರಹ: Shreerama Diwana
  ರಕ್ತ ಸಂಬಂಧಗಳನ್ನು ಹೊರತುಪಡಿಸಿ ಇತರ ಸಂಬಂಧಗಳ ಗಟ್ಟಿತನ ( ಗಾಡತೆ ) ಮತ್ತು ಪೊಳ್ಳು ( ಟೊಳ್ಳು - ಜೊಳ್ಳು ) ತನ. ರಕ್ತ ಸಂಬಂಧಗಳಾದ ತಂದೆ ತಾಯಿ ಅಜ್ಜ ಅಜ್ಜಿ ಮಕ್ಕಳು ಚಿಕ್ಕಪ್ಪ ದೊಡ್ಡಪ್ಪ ಮುಂತಾದವುಗಳು ಆಯ್ಕೆಗಳಲ್ಲ ಅನಿವಾರ್ಯಗಳು. ಭಾರತೀಯ…
 • May 27, 2024
  ಬರಹ: ಬರಹಗಾರರ ಬಳಗ
  ಕ್ಷಣವನ್ನು ಭಗವಂತ ಸೃಷ್ಟಿ ಮಾಡುತ್ತಾನೆ. ನಾನು ಆ ಕ್ಷಣದ ನಡುವೆ ದಾಟಿ ಹೋಗಬೇಕಷ್ಟೇ. ಎರಡು ತಂಡಗಳ ನಡುವೆ ಅದ್ಭುತವಾದ ಕ್ರಿಕೆಟ್ ಪಂದ್ಯಾಟವೊಂದು ನಡೀತಾ ಇತ್ತು. ಇಬ್ಬರಿಗೂ ಗೆಲುವು ಬೇಕಾಗಿದೆ. ಗೆಲುವು ತಮ್ಮದೆಂದು ಎಲ್ಲರ ಮುಂದೆ ಸಾರಿ…
 • May 27, 2024
  ಬರಹ: ಬರಹಗಾರರ ಬಳಗ
  ಆಸ್ಪತ್ರೆಯ ಹಾಸಿಗೆಯ ಮೇಲೆ ಮಲಗಿದ್ದು ಜಗತ್ತಿನ ಅಗರ್ಭ ಶ್ರೀಮಂತ. ಮೃತ್ಯು ಪಾಶಕ್ಕೆ ಕೊರಳೊಡ್ಡುವ ಮುನ್ನ ಮನದಾಳದ ಮಾತುಗಳು ಹೊರಹೊಮ್ಮುತ್ತಿವೆ. ವ್ಯಾಪಾರ ಜಗತ್ತಿನಲ್ಲಿ ಅತ್ಯುನ್ನತ ಸ್ಥಾನ ಗಿಟ್ಟಿಸಿ, ಗೆಲುವಿನ ಪ್ರತಿರೂಪ ಆತನಾಗಿದ್ದ. ಆತನಿಗೆ…
 • May 27, 2024
  ಬರಹ: ಬರಹಗಾರರ ಬಳಗ
  ಏಕೆ ಸಿಟ್ಟು ಮಳೆ ರಾಯ ಧರೆಯ ಮೇಲೆ ಉಳಿಯುವುದೇ ಪ್ರಾಣಿಗಳು ಭುವಿಯ ಮೇಲೆ ದಯೆತೋರಿಸಿ ಬಾ ನೀನು ಇಳೆಯ ಮೇಲೆ ಹಸಿರಾಗಿಸು ಒಮ್ಮೆ ನೆಲದ ಮೇಲೆ   ಬತ್ತಿ ಹೋಗುತಿವೆ ನದಿಗಳೆಲ್ಲಾ ಮತ್ತೆ ಬಾಗುತಿವೆ  ಮ಼ಗಗಳೆಲ್ಲಾ ಮೆತ್ತಗಾಗುತಿವೆ ಸಸಿ ಗಳೆಲ್ಲಾ…
 • May 26, 2024
  ಬರಹ: Kavitha Mahesh
  ತೆಂಗಿನ ಕಾಯಿ, ಮೆಣಸಿನ ಹುಡಿ, ಇಂಗು, ಹುರಿಗಡಲೆ, ಅರಶಿನ ಹಾಗೂ ಜೀರಿಗೆ ಸೇರಿಸಿ ತರಿತರಿಯಾಗಿ ರುಬ್ಬಿ ಬಾಣಲೆಯಲ್ಲಿ ಕಾದ ಎಣ್ಣೆಗೆ ಸಾಸಿವೆ ಒಗ್ಗರಣೆ ಮಾಡಿ. ಒಗ್ಗರಣೆಗೆ ಕತ್ತರಿಸಿದ ಈರುಳ್ಳಿ, ಟೊಮೆಟೋಗಳನ್ನು ಹಾಕಿ ಬಾಡಿಸಿ, ಸ್ವಲ್ಪ ನೀರು ,…
 • May 26, 2024
  ಬರಹ: Shreerama Diwana
  ಕೆಲವೇ ಕೆಲವು ನಟನಟಿಯರು, ನಿರ್ಮಾಪಕರು, ಪ್ರದರ್ಶಕರು ಮಾತ್ರವೇ ದೊಡ್ಡ ಮಟ್ಟದ ಯಶಸ್ಸು ಕಂಡು ಹಣ ಮಾಡುತ್ತಿದ್ದಾರೆ. ಬಹುತೇಕ ಶೇಕಡಾ 90% ಕ್ಕಿಂತ ಹೆಚ್ಚು ಆ ಕ್ಷೇತ್ರದ ಅವಲಂಬಿತರು ನಷ್ಟದಲ್ಲಿದ್ದಾರೆ ಅಥವಾ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ…
 • May 26, 2024
  ಬರಹ: ಬರಹಗಾರರ ಬಳಗ
  ಅವನು ಹಾಗೇ ಏಕ ದೃಷ್ಟಿಯಿಂದ ನೋಡುತ್ತಿದ್ದಾನೆ. ಎಲ್ಲವನ್ನೂ ಕಳೆದುಕೊಂಡ  ತರಹ. ಹಲವು ವರ್ಷದ ಕನಸು ಈಗ ಕೈಜಾರಿ ಹೋಗುತ್ತಿದೆ. ದಿನಗಳನ್ನ ಲೆಕ್ಕ ಹಾಕಿ ರಾತ್ರಿ ಹಗಲು ಬೆವರು ಸುರಿಸಿ ಕೂಡಿಟ್ಟ ಹಣದಲ್ಲಿ ತನ್ನದೊಂದಿಷ್ಟು  ಅಪ್ಪನದೊಂದಿಷ್ಟು ಅಂತ…
 • May 26, 2024
  ಬರಹ: ಬರಹಗಾರರ ಬಳಗ
  ನಮ್ಮ ಹಳ್ಳಿಗಾಡಿನ ಅಡವಿಯಲ್ಲಿ ಇಚ್ಛಾನುಸಾರ ತಿರುಗಿ ನನ್ನದೇ ತಿರುಗಾಟದ ಜಾಲವನ್ನು ಮಾಡಿಕೊಂಡಿದ್ದ ನಾನು ನನ್ನ ಎಂಟನೇ ತರಗತಿಗೆ ನನ್ನ ವ್ಯಾಪ್ತಿಯನ್ನು ಬಿಟ್ಟು ಹಾಸ್ಟೆಲ್ ಸೇರಬೇಕಾಯಿತು. ಸಹಜವಾಗಿ ಅಪರಿಚಿತ ನಗರ ಜೀವನ ಪದ್ದತಿ ನಮ್ಮ…
 • May 26, 2024
  ಬರಹ: ಬರಹಗಾರರ ಬಳಗ
  ಚಿಂದಿಯನಾರಿಸಿ ಬದುಕುವ ಬಾಲಕ ನೊಂದಿಹ ಕಂಬನಿ ಕಣ್ತುಂಬ ಬಂದನು ಕನ್ನಡಿ ಎದುರಲಿ ನಿಂದನು ಕಂಡನು ಕಲ್ಪಿತ ಪ್ರತಿಬಿಂಬ   ಬಣ್ಣದ ಕನಸಿಗೆ ರೆಕ್ಕೆಯು ಮೂಡಿದೆ ತನ್ನನೆ ಕಲ್ಪಿಸಿ ದರ್ಪಣದೆ ಸಣ್ಣನೆ ನೋವಿನ ನಡುಕವು ತನುವಲಿ ಬಣ್ಣನೆಗೆಟುಕದ ಮಿಡಿತವಿದೆ…
 • May 25, 2024
  ಬರಹ: Ashwin Rao K P
  ಶಾರ್ಟ್ ಹ್ಯಾಂಡ್ ! ನಾನು ಎಸ್ಸೆಸ್ಸೆಲ್ಸಿ ಓದುತ್ತಿದ್ದಾಗ ಪಾಂಡುರಂಗ ಎಂಬ ನನ್ನ ಸಹಪಾಠಿಯೊಬ್ಬನಿದ್ದ. ಅವನು ತುಂಬಾ ಹಾಸ್ಯ ಪ್ರವೃತ್ತಿಯವನು. ಎಸ್ಸೆಸ್ಸೆಲ್ಸಿ ಮುಗಿದ ಮೇಲೆ ಒಬ್ಬೊಬ್ಬರು ಒಂದೊಂದು ದಿಕ್ಕಿಗೆ ಚದುರಿಹೋಗಿದ್ದೆವು. ಬಳಿಕ,…
 • May 25, 2024
  ಬರಹ: Ashwin Rao K P
  ಮೈಸೂರಿನಲ್ಲಿ ಕಲುಷಿತ ನೀರು ಕುಡಿದು ಒಬ್ಬ ವ್ಯಕ್ತಿ ಮೃತಪಟ್ಟು, ಕೆಲವರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ ಘಟನೆಯ ಬೆನ್ನಲ್ಲೇ ಮುಖ್ಯಮಂತ್ರಿಗಳು ಈ ಬಗ್ಗೆ ಎಚ್ಚೆತ್ತುಕೊಂಡು ಪ್ರತಿನಿತ್ಯ ಸ್ಥಳೀಯಾಡಳಿತಗಳು ಕುಡಿಯುವ ನೀರಿನ ಪರೀಕ್ಷೆಯನ್ನು…
 • May 25, 2024
  ಬರಹ: Shreerama Diwana
  ಮೈಸೂರಿನಿಂದ ಪ್ರಕಟವಾಗುತ್ತಿದ್ದ ದ್ವಿಭಾಷಾ ಮಾಸಿಕ "ಗ್ರಾಹಕ ತರಂಗ" ಮೈಸೂರಿನಲ್ಲಿ 1986ರಲ್ಲಿ  ಸ್ಥಾಪನೆಗೊಂಡ "ಕರ್ನಾಟಕ ಗ್ರಾಹಕ ವೇದಿಕೆ" ಯ ಮುಖವಾಣಿ ಪತ್ರಿಕೆಯಾಗಿತ್ತು "ಗ್ರಾಹಕ ತರಂಗ". ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಯ…
 • May 25, 2024
  ಬರಹ: Shreerama Diwana
  ದೇವರೆಂದರೇ, ಅರಿಶಿಣ ಕುಂಕುಮ ಹೂವು, ದೇವಸ್ಥಾನ ಕೆತ್ತಿದ ಮೂರ್ತಿ, ಹೋಮ ಹವನ ಅಕ್ಷತೆ ಮಂತ್ರ, ದೀರ್ಘದಂಡ ನಮಸ್ಕಾರ, ನಿಂಬೆಹಣ್ಣು ಹಾಲುತುಪ್ಪಗಳ ಸಮರ್ಪಣೆ ಅಷ್ಟೇನೇ. ದೇವರೆಂದರೇ, ಮಂದಿರ ಮಸೀದಿ ಚರ್ಚು, ನಮಾಜು ಗಡ್ಡ ಟೋಪಿ ಕ್ರಾಸು, ಪ್ರಾರ್ಥನೆ…
 • May 25, 2024
  ಬರಹ: ಬರಹಗಾರರ ಬಳಗ
  ಹಾಗೆಯೇ ದಾರಿಯಲ್ಲಿ ಸಾಗುವಾಗ ಅನಾಮಿಕನಿಗೆ ಬರೆದ ಪತ್ರವೊಂದು ಕಣ್ಣಿಗೆ ಬಿತ್ತು. ಯಾರದೂ ಹೆಸರಿರಲಿಲ್ಲ, ವಿಳಾಸವೂ ಇರಲಿಲ್ಲ. ಪತ್ರವೂ ಅನಾಮಿಕನಿಗೆ ತಲುಪಬೇಕಿತ್ತೋ ಏನೋ? ‘ನೀನು ಸರಿಯಾಗಿದ್ದೀಯಾ? ನಿನ್ನಲ್ಲೇ ಏನು ತಪ್ಪೇ ಇಲ್ವಾ? ನೀನು…