ಖ್ಯಾತ ಪತ್ರಕರ್ತ ಲಕ್ಷ್ಮಣ ಕೊಡಸೆ ಅವರ ಆತ್ಮ ಕಥೆ ‘ಪತ್ರಕರ್ತನ ಪಯಣ’ ಇತ್ತೀಚೆಗೆ ಬಿಡುಗಡೆಯಾಗಿದೆ. ಪತ್ರಕರ್ತರಾಗಿ ತಾವು ಕಂಡ, ಅನುಭವಿಸಿದ ಘಟನೆಗಳನ್ನು ಬಹಳ ಸೊಗಸಾಗಿ ನಿರೂಪಿಸಿದ್ದಾರೆ. ಈ ಕೃತಿಯ ಬೆನ್ನುಡಿಯಲ್ಲಿ ಮಹನೀಯರಾದ ಪ್ರೊ. ಓಂಕಾರ ಕಾಕಡೆ ಮತ್ತು ಡಾ. ಬಿ.ಕೆ.ರವಿ ಅವರು ಲಕ್ಷ್ಮಣ ಕೊಡಸೆ ಅವರ ಬಗ್ಗೆ ಅಭಿಪ್ರಾಯಗಳನು ತಿಳಿಸಿದ್ದಾರೆ. “ನಾನು ಅದೆಷ್ಟೋ ಸಲ ನನ್ನಲ್ಲಿಯೇ ಅಂದುಕೊಂಡದ್ದಿದೆ. ಪ್ರತಿಭೆ ಮತ್ತು ಕಠಿಣ ಶ್ರಮ ಎರಡೂ ಒಟ್ಟಿಗೇ ಸೇರಿದರೆ ಏನಾಗಬಹುದು ಎಂಬುದಕ್ಕೆ ನೀವೊಂದು…
ಪುಸ್ತಕ ಪರಿಚಯ
ಲೇಖಕರು: Ashwin Rao K P
July 09, 2025

ದಾದಾಪೀರ್ ಜೈಮನ್ ಅವರ “ಜಂಕ್ಷನ್ ಪಾಯಿಂಟ್” ಎಂಬ ಅಂಕಣ ಬರಹಗಳ ಸಂಗ್ರಹವು ಒಂದು ಕಾಲದ ಚಿತ್ರಣವಷ್ಟೇ ಅಲ್ಲ, ಒಂದು ಸಮಾಜದ, ವ್ಯಕ್ತಿಗಳ, ಭಾವನೆಗಳ, ಕಷ್ಟ ಕೋಟಲೆಗಳ ಕನ್ನಡಿಯಾಗಿದೆ. ಕೋವಿಡ್ ಕಾಲದ ದುಗುಡ ದುಮ್ಮಾನಗಳು, ಅಕಾಲಿಕ ಮಳೆಯಿಂದ ಕವಿದ ಮೋಡದ ವಾತಾವರಣ, ಯುದ್ಧ, ದೌರ್ಜನ್ಯ, ಕೊಲೆ ಸರಣಿಗಳಂತಹ ಸುದ್ದಿಗಳ ನಡುವೆ, ಈ ಬರಹಗಳು ಓದುಗರ ಮನಸ್ಸಿನಲ್ಲಿ ಒಂದು ಭಾವನಾತ್ಮಕ ಜಂಕ್ಷನ್ ರಚಿಸುತ್ತವೆ. ಇದೊಂದು ಕೇವಲ ಕತೆಯ ಸಂಗ್ರಹವಲ್ಲ, ಬದುಕಿನ ಹಲವು ದಾರಿಗಳು ಕೂಡುವ, ಬೇರ್ಪಡುವ, ಒಡದು…
ಲೇಖಕರು: Ashwin Rao K P
July 07, 2025

ಮಕ್ಕಳಿಗಾಗಿ ಪುಸ್ತಕಗಳು ಬರುವುದು ಅಪರೂಪವೇ ಆಗಿರುವ ಸಮಯದಲ್ಲಿ ಡಾ. ಕೆ.ಶಿವಲಿಂಗಪ್ಪ ಹಂದಿಹಾಳು ಇವರು ಮಕ್ಕಳ ಕಥಾ ಸಂಕಲನ ‘ನೋಟ್ ಬುಕ್’ ಹೊರತಂದಿದ್ದಾರೆ. ಈ ಕಥಾ ಸಂಕಲನಕ್ಕೆ ತಮ್ಮ ಅನಿಸಿಕೆಗಳನ್ನು ಬರೆದ್ದಾರೆ ಕಿರಣ್ ಭಟ್. ಅವರು ತಮ್ಮ ಅನಿಸಿಕೆಯಲ್ಲಿ “ಬಹುಷ: ನಾವು ಎಂಟನೆಯ ತರಗತಿಯಲ್ಲಿ ಓದುತ್ತಿದ್ದ ಸಮಯ. ಸದಾನಂದನೆಂಬ ಕಿಲಾಡಿ ಹುಡುಗನೊಬ್ಬ ಒಂದು ದಿನ ವಿಶೇಷ ವಸ್ತುವೊಂದನ್ನು ತಂದ. ಗೋಲಾಕರದ ಸಣ್ಣ ವಿಕ್ಸ್ ಆಕಾರದ ಡಬ್ಬಿಯದು.ಅದಕ್ಕೆ ಮುಚ್ಚಲು ಮುಚ್ಚಿತ್ತು. ಗೆಳೆಯರಿಗೆ ತೋರಿಸಿಯೂ…
ಲೇಖಕರು: Ashwin Rao K P
July 04, 2025

ಜಗತ್ತಿನ ಅತ್ಯಂತ ಪ್ರಾಚೀನ ಕತೆಯಾದ 'ಗಿಲ್ಗಮೆಶ್ ಮಹಾಗಾಥೆ' ಹೊಸ ಗದ್ಯರೂಪದ ಅನುವಾದ ಪ್ರಕಾರದಲ್ಲಿ ಪ್ರಕಟವಾಗಿದೆ . ಮೆಸೊಪೊಟೇಮಿಯಾದ ಈ ಮಹಾಗಾಥೆ ಎಲ್ಲ ಕಾಲ, ದೇಶ, ಭಾಷೆಗಳನ್ನು ಮೀರಿದ ವಿಚಾರಗಳಾದ ಗೆಳೆತನ, ಹುಟ್ಟು ಸಾವಿನ ನಡುವಿನ ಬದುಕಿನ ಅರ್ಥ ಅರಸುವ ಹಂಬಲ, ಸಾವಿನ ಅಂಜಿಕೆ ಹಾಗೂ ಸಾವನ್ನು ಗೆಲ್ಲಬೇಕೆನ್ನುವ ನಿರಂತರ ಪ್ರಯತ್ನಗಳ ಸುಂದರ ಕಾವ್ಯಾತ್ಮಕ ನಿರೂಪಣೆಯಾಗಿದೆ. ಸಾವಿನ ಹೆದರಿಕೆ ಹಾಗೂ ಹೇಗಾದರೂ ಅದನ್ನು ಗೆಲ್ಲಬೇಕು, ಅಮರತ್ವ ಸಾಧಿಸಬೇಕೆಂದು ಹೊರಡುವ ಗಿಲ್ಗಮೆಶ್‌ನ ಚಡಪಡಿಕೆ…
ಲೇಖಕರು: Ashwin Rao K P
July 03, 2025

‘ಜೀವರತಿ’ ಎನ್ನುವ ಸುಮಾರು ೪೦೦ ಪುಟಗಳ ಬೃಹತ್ ಕಾದಂಬರಿಯನ್ನು ಬರೆದಿದ್ದಾರೆ ಜ ನಾ ತೇಜಶ್ರೀ. ಇವರು ತಾವು ಬರೆದ ಕಾದಂಬರಿಯ ಬಗ್ಗೆ, ಅದನ್ನು ಬರೆಯಲು ಸಿಕ್ಕ ಪ್ರೇರಣೆಯ ಬಗ್ಗೆ ತಮ್ಮ ಮಾಹಿತಿನಲ್ಲಿ ಬರೆದಿರುವುದು ಹೀಗೆ…
“ಇದೆಲ್ಲ ಎಲ್ಲಿಂದ ಶುರುವಾಯಿತು ಹೇಳುವುದು ಕಷ್ಟ. ಹಿಂತಿರುಗಿ ನೋಡಿದರೆ ಇದೊಂದು ಅನಂತಯಾನದ ಹಾಗೆ ಭಾಸವಾಗುತ್ತದೆ. ಹಳೆಯ ಕಸ ತೆಗೆಯುತ್ತಿದ್ದಾಗ ನನ್ನ ದಿನಚರಿಯೊಂದರಲ್ಲಿ ೧೯೯೬ನೇ ಇಸವಿಯಲ್ಲಿ ಬರೆದ ಮೂರು-ನಾಲ್ಕು ಪುಟಗಳ ಬರಹ ಸಿಕ್ಕಿತು. ಅದರಲ್ಲೇನೋ ಕತೆ ಇರುವಂತೆ…
ಲೇಖಕರು: addoor
July 02, 2025

ಕನ್ನಡದಲ್ಲಿ ಪೌರಾಣಿಕ ಕಾದಂಬರಿಗಳನ್ನು ರಚಿಸಿದ ಪ್ರತಿಭಾವಂತ ಸಾಹಿತಿ ದೇವುಡು ನರಸಿಂಹ ಶಾಸ್ತ್ರಿ. ತಮ್ಮ ಮೂರು ಬೃಹತ್ ಕಾದಂಬರಿಗಳಾದ “ಮಹಾ ಬ್ರಾಹ್ಮಣ”, “ಮಹಾ ಕ್ಷತ್ರಿಯ” ಮತ್ತು “ಮಹಾ ದರ್ಶನ”ಗಳಿಂದ ಮೇರು ಸದೃಶ ಸಾಹಿತಿಗಳಾಗಿ ಕನ್ನಡದ ಓದುಗರಿಗೆ ಪರಿಚಿತರು.
ಬಹುಮುಖ ಪ್ರತಿಭೆಯ ದೇವುಡು ಅವರು ಮಕ್ಕಳ ಸಾಹಿತ್ಯಕ್ಕೆ ಕೂಡ ಸುಮಾರು 85 ವರುಷಗಳ ಹಿಂದಿನಿಂದಲೂ ಕೊಡುಗೆ ಇತ್ತವರು. ಅವರು ಬರೆದ 49 ಮಕ್ಕಳ ನೀತಿಕತೆಗಳು ಈ ಸಂಕಲನದಲ್ಲಿವೆ. ತೆನಾಲಿ ರಾಮಕೃಷ್ಣನ ವಿಚಾರವಾಗಿ ಜನಜನಿತವಾಗಿರುವ ಒಂದು…