ಮಂಗಟ್ಟೆ ಹಕ್ಕಿಗಳ ವಿಸ್ಮಯ ಲೋಕ !
1 day 13 hours ago - ಬರಹಗಾರರ ಬಳಗಹಾರ್ನ್ ಬಿಲ್ ಹಕ್ಕಿಗಳು (ಮಂಗಟ್ಟೆ ಹಕ್ಕಿ) ಈ ಬಾರಿ ಬೇಸಿಗೆಯಲ್ಲಿ ತಮ್ಮ ಗೂಡು ಕಟ್ಟುವ ತಾಣಗಳ ಬಳಿ ಇನ್ನೂ ಬಂದಿಲ್ಲ ಗೂಡು ಕಟ್ಟಲು ಪ್ರಾರಂಭಿಸಿಲ್ಲ’ ಎಂಬ ವರದಿಯನ್ನು ಕೆಲವು ದಿನಗಳ ಹಿಂದೆ ಪತ್ರಿಕೆಯಲ್ಲಿ ಓದಿದೆ. ಹಾರ್ನ್ ಬಿಲ್ ಗೂಡು ಅಂದ ತಕ್ಷಣ ಕೆಲವು ವರ್ಷಗಳ ಹಿಂದೆ ಜೂನ್ ತಿಂಗಳಿನಲ್ಲಿ ಹಳಿಯಾಳದಲ್ಲಿ ಭಾಗವಹಿಸಿದ ತರಬೇತಿ ಒಂದು ನೆನಪಾಯಿತು. ಧಾರವಾಡದಿಂದ ದಾಂಡೇಲಿಗೆ ಹೋಗುವ ಮಾರ್ಗದಲ್ಲಿ ಸಿಗುವ ಹಳಿಯಾಳ ಎಂಬ ಸುಂದರವಾದ ಊರು. ಪಟ್ಟಣದಿಂದ ಹೊರಗೆ ಒಂದು ಕಡೆ ನಮ್ಮ ತರಬೇತಿ ಕಾರ್ಯಕ್ರಮ ಇತ್ತು. ಮೊದಲ ದಿನದ ತರಬೇತಿ ಮುಗಿಸಿ ಮಲಗಿದ ನಮಗೆ ಒಳ್ಳೆ ನಿದ್ದೆ. ಬೆಳಗ್ಗೆ ಬೇಗನೆ ಎಚ್ಚರವಾಯಿತು. ನಾನು ಸ್ವಲ್ಪ ದೂರ ವಾಕಿಂಗ್ ಹೋಗಿ ಬರೋಣ ಅಂತ ಹೊರಟೆ. ಹಳಿಯಾಳ ಧಾರವಾಡ ರಸ್ತೆಯಲ್ಲಿ ಇನ್ನೂ ಅಷ್ಟಾಗಿ ವಾಹನ ಸಂಚಾರ ಆರಂಭ ಆಗಿರಲಿಲ್ಲ. ನಡೆಯುತ್ತಾ ಹೋಗುವಾಗ ರಸ್ತೆಯ ಎರಡು ಬದಿಗಳಲ್ಲಿ ಸಾಲು ಸಾಲು ಮರಗಳು. ಅವುಗಳನ್ನ ನೋಡುವುದೇ ಬಹಳ ಚಂದ. ಹೀಗೆ ಬೆಳಗಿನ ಹವೆಯನ್ನು ಸವಿಯುತ್ತಾ ಮುಂದೆ ಹೋಗುತ್ತಿರುವಾಗ ಸುಮಾರು ದೂರದಲ್ಲಿ ಮರದ ಕೊಂಬೆಯಲ್ಲಿ ಕಪ್ಪು ಬಿಳುಪು ಬಣ್ಣದ ಹಕ್ಕಿಯೊಂದು ಹಾರಿ ಬಂದು ಕುಳಿತದ್ದು ಕಾಣಿಸಿತು.
ಗಿಡುಗ ನಿಗಿಂತ ಸ್ವಲ್ಪ ದೊಡ್ಡದಾದ ಹಕ್ಕಿ ಹಾರಿ ಬಂದು ದೊಡ್ಡದೊಂದು ಕೊಂಬೆಯ ಮೇಲೆ ಕುಳಿತು ಒಮ್ಮೆ ಆ ಕಡೆ ಈ ಕಡೆ ನೋಡಿತು. ಎರಡೆರಡು ಕೊಕ್ಕುಗಳು ಇರುವಂತೆ ಕಾಣುತ್ತಿದ್ದ ಹಕ್ಕಿ ಕೊಂಬೆಯಿಂದ ತುಸು ಕೆಳಗೆ ಒಂದು ಪೊಟರೆಯ ಒಳಗಡೆ ಕೊಕ್ಕು ಹಾಕಿ ಹೊರತೆಗೆಯಿತು. ಇದನ್ನು ನೋಡುತ್ತಾ ನಡೆಯುತ್ತಿದ್ದ ನಾನು ನನ್ನ ನಡಿಗೆಯನ್ನು ನಿಧಾನಗೊಳಿಸಿ ಒಂದೆಡೆ ಮರದ ಮರೆಯಲ್ಲಿ ನಿಂತುಕೊಂಡೆ. ಮರದ ಪೊಟರೆಯ ಒಳಗಡೆಯಿಂದ ಇನ್ನೊಂದು ಕೊಕ್ಕು ಹೊರಗಡೆ ಕಾಣಿಸಿತು. ಮೇಲೆ ಕೊಂಬೆಯಲ್ಲಿ ಕುಳಿತ… ಮುಂದೆ ಓದಿ...