ರೈಲಿನಲ್ಲಿ ನಾ ಕಂಡೆ ನಿನ್ನನು ಎದುರಿನ ಆಸನದಲಿ
ಕಿಟಕಿಯಲಿ ಪಕ್ಕದಲಿ ನೀ ಕುಳಿತು ಆಚೆ ನೋಡುತಿರಲು
ಹೊರಗಿನಿಂದ ಬೀಸುತ್ತಿದ್ದ ಗಾಳಿಗೆ ನೀ ನಿನ್ನ
ಕೂದಲನ್ನು ಬದಿಗೊತ್ತಿದಾಗ ಕಂಡೆ ನಾ ನಿನ್ನ ವದನವ
ಆ ನಿನ್ನ ಮುದ್ದು ಮುಖವ ಕಂಡ ನನ್ನೊಳಗೆ…
ಕಟ್ಟುವಾಟ
ಅಂದಿನಿಂದ ಇಂದಿನವರೆಗೂ ನಮ್ಮದು
ಕತ್ತಲೆಯ ಹಿಡಿದು ಕಟ್ಟುವ ಆಟ.
ಅಂಬೆಗಾಲಿಡುತ್ತಲೇ ಹಂಬಲಿಸಿದೆವು
ಬೇಕೇ ಬೇಕು ಬೆಳಕು ನಮಗೆ ಬೇಕು.
ಕತ್ತಲೆಯೋ ಮುಸುಕ ಮರೆಯಲ್ಲೇ ನಗುತ್ತಿದೆ.
ಭಾಸ್ಕರ ಬೆಳಕು ಬೀರುತ್ತಲೇ ತಸ್ಕರನಾದ.
ಎಣ್ಣೆ, ಬತ್ತಿ…
ಸುಮಾರು ೩೫ ವರುಷಗಳ ಹಿಂದೆ.......... ಜಿ.ಪಿ.ಎಸ್, ಮೋಬೈಲ್ ಫೋನ್, ಈ-ಮೈಲ್ ಇಲ್ಲದ ಕಾಲ. ಬೇಸಿಗೆಯ ರಜಾದಿನಗಳಲ್ಲೊಂದು ದಿನ. ಬಿಸಿಲಿನ ಝಳ ಸ್ವಲ್ಪ ಸ್ವಲ್ಪವಾಗೇ ಕಡಿಮೆಯಾಗುತ್ತಿತ್ತು. ಸಂಜೆಯು ನಿಧಾನವಾಗಿ ಆವರಿಸುತ್ತಿತ್ತು. ಶಾಲೆಗೆ ಬೇಸಿಗೆ…
ಒಂದು ರೀತಿ ನಿನಗೂ ಹಕ್ಕಿಗೂ ಸಂಬಂಧವಿಲ್ಲ. ಎಲ್ಲೋ ಸ್ವತಂತ್ರವಾಗಿ ಬದುಕುತ್ತಿರುವ ನೀನೆಲ್ಲಿ ಈ ಪಂಜರದೊಳಗೆ ನಾನುಣಿಸುವ ಕಾಳುಗಳು, ಇಡುವ ನೀರಿಗೆ ಕಾಯುತ್ತಿರುವ ಈ ಹಕ್ಕಿಯೆಲ್ಲಿ? ಆದರೂ ಈ ಹಕ್ಕಿಯನ್ನು ನೋಡಿದಾಗಲೆಲ್ಲಾ ನಿನ್ನ ನೆನಪಾಗುವುದು…
ಇನ್ನೇನು ಶಾಲೆ ಆರಂಭವಾಗುತ್ತದೆ. ಏನೆಲ್ಲಾ ತಯಾರಿ ಆಗ್ಬೇಕು ನೋಡಿ. ಹತ್ತು ಪುಟದಷ್ಟು ಕಾಪಿ ಬರೆದು ಕೊಂಡು ಬನ್ನಿ, ಮನೆ ಹಿತ್ತಿಲಲ್ಲಿ ಸಿಗುವ ಔಷಧೀಯ ಸಸ್ಯಗಳ ಎಲೆ ಸಂಗ್ರಹ ಮಾಡಿ ಆಲ್ಬಂ ಮಾಡಿ...ನೀವು ರಜೆಯಲ್ಲಿ ಏನೆಲ್ಲಾ ಮಾಡಿದ್ದೀರಿ?…
ಭಯ
ಎಲ್ಲರಿಗೂ ಇರುತ್ತವೆ ಭಯ
ಅದರ ಭಯ, ಇದರ ಭಯ
ಯಾವ್ಯಾವುದೋ ಭಯ.
ಅದರಲ್ಲಿ ಕೆಲವು ನಮ್ಮದೇ ವಿಶಿಷ್ಟ ಭಯ
ಭಯ ಕಾಡುತ್ತವೆಯೋ
ಕಾಡುವುದರಿಂದ ಭಯವೋ!
ಕಾಡುತ್ತಾ ಕಾಡುತ್ತಾ ಯಾರದೋ ಭಯ
ಇನ್ಯಾರದೋ ಭಯಗಳಾಗಿ
ಇದು ನಮ್ಮ ಭಯವೇ, ಇಲ್ಲ ನಿಮ್ಮ ಭಯವೇ
ಎಂಬ…
ಪೀಯೂಸೀ ಫಲಿತಾಂಶ ಬಂದು ನಮ್ಮ ಮಕ್ಕಳ ಕಳಪೆ ಪ್ರದರ್ಶನ ಮತ್ತು ಕಳಪೆ ಪ್ರದರ್ಶನದ ಕಾರಣ ಉಂಟಾದ ಆತ್ಮಹತ್ಯೆಗಳ ಕುರಿತು ಒಬ್ಬರು ಇದೇ ತಾಣವೊಂದರಲ್ಲಿ ಚರ್ಚೆ ಶುರುಮಾಡಿದ್ದರು. ಅದಕ್ಕೆ ಬಂದ ಪ್ರತಿಕ್ರಿಯೆಗಳ “ಪ್ರಮಾಣ” ನೋಡಿದಾಗ ನಮಗಿರುವ ಈ…
ಇದೇ ಶನಿವಾರ ಮಧ್ಯಾಹ್ನ ೨ ಗಂಟೆಗೆ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಜನಲೋಕಪಾಲ್ ಮಸೂದೆಯ ಸಾರ್ವಜನಿಕ ಸಭೆ ನಡೆಯುತ್ತಿದೆ. ಸಾಧ್ಯವಾದರೆ ಬನ್ನಿ ಭಾರತದಿಂದ ಲಂಚವನ್ನು ಹೊಡೆದೋಡಿಸುವ ಈ ಮಸೂದೆಯ ಸಭೆಯನ್ನು ಯಶಸ್ವಿಗೊಳಿಸೋಣ
ರಾಜು : ಇವತ್ತು ಅಮವಾಸ್ಯೆಯಂತೆ ನನಗೆ ಗೊತ್ತೆ ಇರಲಿಲ್ಲ. ಅದಕ್ಕೆ ಏನೋ ಬೆಳಗ್ಗೆಯಿಂದಲೇ ಮನಸೆಲ್ಲಾ ಕಸಿವಿಸಿಯಾಗುತ್ತಿತ್ತು. ಯಾವ ಕೆಲಸಕ್ಕೆ ಹೋದರೂ ಅಪೂರ್ಣ. ಯಾವತ್ತೂ ಹೀಗೆ ಆಗಿರಲಿಲ್ಲ ಕಣೇ ಎಂದು ರಾಜು ತನ್ನ ಹೆಂಡತಿ ಸೀಮಾಗೆ ಹೇಳ್ತಾ ಇದ್ದ.…
ಕಿಡಿಯೊಂದು ತಲೆಗೆ ತಾಗಲು
ಅಂತ್ಯದ ಆರಂಭ ಮೇಣಕ್ಕೆ
ಅಂಚುಗಳಲಿ ಅಂತರವಿರುವವರೆಗೆ
ಬೆಳಕಿನ ಕಾವು ಕತ್ತಲಿನ ಬುಡಕ್ಕೆ
ಬೆಳಕಿನ ಮೇಲೆ ಚಲಿಸುವ ಗಾಳಿ
ಎಡವಿ ಬೀಳಲು, ತಣ್ಣನೆ ಕತ್ತಲು
ಮೇಣದ ಸುತ್ತಲು:
ಜ್ಞಾನದ ಬಾಗಿಲಿಗೆ ಅಜ್ಞಾನದ ಕಾವಲು !
ಎಲ್ಲರಿಗೂ ಅಂಥಹ ಆಂಟಿ ಸಿಕ್ಕಿಬಿಡುತ್ತಾರೆನ್ನಲಾಗದು. ಆದರೂ ಸಿಕ್ಕಿವರೇ ಅದೃಷ್ಟವಂತರು. ಆಂಟಿಯೆಂದರೆ `ಚಿಕ್ಕಮ್ಮ' ಎಂದು ಆರ್ಥ. ಅಂದರೆ ಅಮ್ಮನಿಗೇ ಸಮಾನ. ಆದರೆ ಆಂಟಿ ನೀಡುವ ಪ್ರೀತಿ. ವಿಶ್ವಾಸ ವಿಭಿನ್ನ. ಆಂಟಿ ಎಂಬುದರ ಅರ್ಥ ಚಿಕ್ಕಮ್ಮನೇ…
ದೃಷ್ಟಿ ಹರಿಯುವುದು ಎಲ್ಲೆಡೆಗೆ
ಹೇಗೆಂದರೆ ಹಾಗೆ,
ಶಾಂತವಾಗಿ ಚಲಿಸುವನು ಬಾಗಿಲನು ತೆರೆದರೆ
ಒಡೆದು ನುಗ್ಗುವನು ತೆರೆಯದಿದ್ದರೆ
ಅವನ ಸ್ವಭಾವವೇ ಹಾಗೆ.
ನೀವು,
ಎಲ್ಲೆಂದರಲ್ಲಿ ಬಿಟ್ಟು ಹೋಗುತಿರುವ
ನಿಮ್ಮ ತನಗಳನು ಹೊತ್ತು ತಂದು…
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಎರಡು ರಾಷ್ಟ್ರಗಳ ನಡುವೆ ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿತ್ತು. ಹಲವಾರು ಜನರು ವೀಕ್ಷಿಸುತ್ತಿದ್ದರು. ಅಂತಹ ಸಂದರ್ಭದಲ್ಲಿ ಇಬ್ಬರು ಗೆಳತಿಯರು ಒಟ್ಟಿಗೆ ಕುಳಿತಿರುವಾಗ ಅವರತ್ತ ಕ್ಯಾಮೆರಾ ಹಿಡಿದ…
ಕಳೆದ ತಿಂಗಳು ಅಂದರೆ ಎಪ್ರಿಲ್ ನಲ್ಲಿ ಸಂಪದ ದಲ್ಲಿ ಬರಹಗಳ ಸಂಖ್ಯೆ ಕೇವಲ ೩೪೦. ಪಾರ್ಥಸಾರಥಿಯವರು ಎಪ್ರಿಲ್ ತಿಂಗಳಲ್ಲಿ ಸಂಪದ ಪಕ್ಷಿನೋಟ ಎಂಬ ಲೇಖನವನ್ನು ಬಹಳ ಚೆನ್ನಾಗಿ ಬರೆದು ಮೇ ತಿಂಗಳಲ್ಲಿ ಬರಹಗಳ ಸಂಖ್ಯೆ ಹೆಚ್ಚುವುದು ಎಂಬ ನಿರೀಕ್ಷೆ…
ಅತ್ತಿಗೆ ಕೋಡುಬಳೆ ಮಾಡ್ತಿದ್ದೀರಾ?ಅಡುಗೆ ಮನೆ ಹಿಂಬಾಗದ ಕಿಟಕಿಯಿಂದ ಬಂದ ದ್ವನಿಗೆ ನಮ್ಮ ಅಮ್ಮ ಬೆಚ್ಚಿ ಬಿದ್ದರು, ಮನೆಯ ಹಿಂಬಾಗ ಇಳಿಜಾರು ಹಳ್ಳ, ನೆಲದಿಂದ ಎಂಟು ಒಂಬತ್ತು ಅಡಿ ಮೇಲಿದ್ದ ಆ ಕಿಟಕಿಯಲ್ಲಿ ಯಾರು ಮುಖ ಕಾಣುವುದು ಅಸಂಭವವವೆ. ಆದರೆ…