September 2020

  • September 11, 2020
    ಬರಹ: Ashwin Rao K P
    ಮಾನವನ ಹತ್ತಿರದ ಪ್ರತಿರೂಪ ಮಂಗ. ಮಂಗನಿಂದ ಮಾನವ ಎಂಬುದು ಎಲ್ಲರೂ ಬಳಸುವ ಮಾತು. ಮಂಗಗಳಲ್ಲಿ ಎಷ್ಟೊಂದು ವಿಧಗಳಿವೆ. ಸಾಮಾನ್ಯ ಮಂಗ, ಉದ್ದ ಬಾಲದ ಮಂಗ, ಸಿಂಗಳೀಕ, ಗೋರಿಲ್ಲ, ಚಿಂಪಾಂಜಿ, ಒರಂಗುಟಾನ್, ಸಣ್ಣದಾದ ಮಂಗಗಳು. ದೊಡ್ಡದಾದ ಮುಜ್ಜಗಳು…
  • September 11, 2020
    ಬರಹ: shreekant.mishrikoti
      ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದಿಂದ ಹಿಂದೆ  ಇಳಿಸಿಕೊಂಡ ಒಂದು ಪುಸ್ತಕವನ್ನು ಓದುತ್ತಿದ್ದೆ.  ಒಂದು ಕಡೆ ಒಂದು ಪಾತ್ರವು ಮುಂದಿನ ಮಂತ್ರವನ್ನು ಹೇಳಿತು .  ಅಗ್ನೇ ನಯ ಸುಪಥಾರಾಯೇ ಅಸ್ಮಾನ್ ವಿಶ್ವಾನಿ ದೇವ  ಯುಯೋದ್ಧಸ್ಮಜ್ಜು ಹುರಾಣಮೇನೋ…
  • September 10, 2020
    ಬರಹ: Shreerama Diwana
    ಗಝಲ್ ೧   ಒಲವಿನಲಿ ಪ್ರೇಮರಾಗವ ಮೋಹದಲಿ ಹಾಡುತಿರಲು ನಾ ಬಂದೆ| ಚೆಲುವಿನ ಸಿರಿಯನು ನೋಡುತ್ತ ಕುಳಿತಿರಲು ನಾ ಬಂದೆ||   ಗಂಧರ್ವ ದಂಪತಿಯಾಗಿ ಗಗನದಲಿ ಬದುಕೋಣ ಸಾವಿಲ್ಲದಂತೆ| ನಂದಾದೀಪದ ಬೆಳಕು ಮಂದವಾಗಿ ಚೆಲ್ಲುತಿರಲು ನಾ ಬಂದೆ||   ಹರಿಯುವ…
  • September 08, 2020
    ಬರಹ: addoor
    ಎಂಬತ್ತು ವರುಷ ವಯಸ್ಸಿನ ಕನ್‌ಫ್ಯೂಷಿಯನ್ ಪಂಡಿತನೊಬ್ಬ, ತಾನೆಲ್ಲವನ್ನೂ ತಿಳಿದುಕೊಂಡಿದ್ದೇನೆ ಎಂದು ಭಾವಿಸಿದ್ದ. ದೂರದ ರಾಜ್ಯದಲ್ಲಿ ಝೆನ್ ಗುರುವೊಬ್ಬರ ಜನಪ್ರಿಯತೆ ಹೆಚ್ಚುತ್ತಲೇ ಇತ್ತು. ಈ ಸಂಗತಿ ತಿಳಿದಾಗ, ಆತನ ಜ್ನಾನ ತನ್ನದಕ್ಕಿಂತ…
  • September 08, 2020
    ಬರಹ: ರಘುರಾಮ ರಾವ್ ಬೈಕಂಪಾಡಿ
    ಬನ್ನಿ ಬನ್ನಿ ರಿ ಬನ್ನಿ ಚಿಣ್ಣರೆ    ಹಾಡಿ ಕುಣಿಯುವ ಬನ್ನಿರಿ ಸುಗ್ಗಿ ಬಂದಿದೆ ಹಿಗ್ಗು ತಂದಿದೆ    ನೋಡಿ ನಲಿಯುವ ಬನ್ನಿರಿ   ‌ಸುಗ್ಗಿ ಸಂಜೆಯ ಹೊನ್ನ ಹಬ್ಬಕೆ    ಜಗವೆ ನೆರೆದಿದೆ ಬಯಲ ಲಿ ಯಾರೂ ಕಾಣದ ‌ಸ್ವರ್ಗ ತೆರೆದಿದೆ    ಇಲ್ಲೆ ಕ್ಷಣ…
  • September 08, 2020
    ಬರಹ: Shreerama Diwana
    ಹುತಾತ್ಮ ಬೆಳಗಿನ ತಿಂಡಿಯ ಗಡಿಬಿಡಿಯಲ್ಲಿದ್ದ ವನಜಮ್ಮನ ಕಿವಿಗೆ ದೂರವಾಣಿಯ ಸದ್ದು ಎಚ್ಚರಿಸಿತು. ಸೆರಗಲ್ಲಿ ಕೈ ಒರೆಸುತ್ತಾ ಬಂದು, ಯಾರು ಎಂದು ಕೇಳಿದಾಗ, ಅತ್ತಕಡೆಯಿಂದ ಹೇಳಿದ ಸುದ್ಧಿ ಕೇಳಿ,ಹಾಗೆಯೇ ಕುಸಿದು ಬಿದ್ದುಬಿಟ್ಟರು. ಸ್ವಲ್ಪ…
  • September 08, 2020
    ಬರಹ: Ashwin Rao K P
    ಇದು ಕೆಲವು ವರ್ಷಗಳ ಹಿಂದಿನ ಕಥೆ. ನಮ್ಮ ಊರಿನಲ್ಲಿ ಸಾರ್ವಜನಿಕ ಗಣೇಶೋತ್ಸವ ಪ್ರತೀ ವರ್ಷ ನಡೆಯುತ್ತದೆ. ಆಯೋಜಕ ಸಮಿತಿಯು ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸುತ್ತದೆ. ಕಳೆದ ಹಲವಾರು ವರ್ಷಗಳಿಂದ ನಾನು ಸಾಂಸ್ಕೃತಿಕ ಸ್ಪರ್ಧೆಗಳನ್ನು…
  • September 07, 2020
    ಬರಹ: Ashwin Rao K P
    ಇದೇನು? ಬೆಂಕಿ ಇರುವೆಗಳು, ಇದರಿಂದ ಬೆಂಕಿ ಹುಟ್ಟಿಕೊಳ್ಳುತ್ತಾ ಅಥವಾ ಬೆಂಕಿಯನ್ನು ಉತ್ಪಾದಿಸುತ್ತಾ ಎಂಬೆಲ್ಲಾ ಪ್ರಶ್ನೆಗಳು ನಿಮ್ಮನ್ನು ಕಾಡುತ್ತಿರಬಹುದು. ಈ ಇರುವೆಗಳಿಂದ ಬೆಂಕಿ ಉತ್ಪಾದನೆಯಾಗುವುದಿಲ್ಲ ಆದರೆ ಕಚ್ಚಿದರೆ ಮಾತ್ರ ಜೀವಹಾನಿಯಾಗೋ…
  • September 07, 2020
    ಬರಹ: Shreerama Diwana
    ವಯೋವೃದ್ದನ ಸ್ವಗತ ನೋವಿನ ಅನುಭವ ನೋಡಿದೆ ಹೃದಯದಿ ಸಾವದು ಬರದೆಯೆ ಕಾಯುತಲಿ| ಬವಣೆಯ ಜೊತೆಯಲಿ ಬದುಕಿನ ಕಷ್ಟವ ಸವಿಯುತ ಉಂಡೆನು ಗುಡಿಸಲಲಿ||   ಹಡೆದಿಹ ಮಕ್ಕಳು ಹೊರಹಾಕುತ್ತಲಿ ನಡೆದಿಹ ಹೊರಗಡೆ ದುಃಖದಲಿ| ಮಡದಿಯು ತೀರಿದ ಬಳಿಕವೆ ಮನೆಯಲಿ…
  • September 05, 2020
    ಬರಹ: addoor
    ಚಂದಣ್ಣ ಮೊಸಳೆಯ ನಗು ಚಂದವೋ ಚಂದ. ಅದನ್ನು ಕಂಡ ವನ್ಯಮೃಗ ಫೋಟೋಗ್ರಾಫರರ ತಂಡದ ಸದಸ್ಯರು ಚಂದಣ್ಣ ಮೊಸಳೆಯ ನಗುವಿನ ಫೋಟೋ ತೆಗೆಯಲು ಬಂದರು. “ಎಲ್ಲಿ ನೋಡೋಣ, ಚೆನ್ನಾಗಿ ನಗು" ಎಂದ ತಂಡದ ಮುಂದಾಳು. ಚಂದಣ್ಣ ಮೊಸಳೆ ಚಂದವಾಗಿ ನಗುತ್ತಿದ್ದಂತೆ…
  • September 05, 2020
    ಬರಹ: Ashwin Rao K P
    ಅದಾಗಲೇ ಕತ್ತಲಾಗಿತ್ತು. ಮನೆಯ ಗೇಟಿನ ಹಿಂದೆ ಯಾರೋ ನಿಂತು ಕರೆದ ಹಾಗಾಯ್ತು. ಯಾರಿರಬಹುದು ಎಂದು ನೋಡಲು ಹೊರಗೆ ಬಂದೆ. ಓರ್ವ ವೃದ್ಧರು ಗೇಟಿನ ಹಿಂದೆ ನಿಂತಿದ್ದರು. ಅವರು ಧರಿಸಿದ್ದ ಬಟ್ಟೆಗಳು ಸುಕ್ಕಾಗಿದ್ದವು ಹಾಗೂ ಅವರು ಒಂದು ಸಣ್ಣ ಕೈಚೀಲ…
  • September 05, 2020
    ಬರಹ: Shreerama Diwana
    ಬದುಕ ದಾರಿಗೆ ಬೆಳಕ ದೇವನು ಪದವಿ ಗಳಿಸಲು ದಾರಿದಾತನು ಕದಕವನಳಿಸುತಲೀ ಜ್ಞಾನದ ದೀಪ ಹಚ್ಚುವನು ಕುಧರ ಹತ್ತುವ ಸಾಸ ಮಾಡುತ ಗುದುಕಿ ನಿಂತಿಹ ದೇವ ಮಂದಿರ ನದರು ಚೆಲ್ಲುತ ಬುದ್ಧಿ ಹೇಳುತ ಮಾರ್ಗ ತೋರುವನು||   ಬಾಳ ಬಂಡಿಗೆ ಹೂವ ಹಾಸದು ನಾಳೆ ಚಂದಿರ…
  • September 04, 2020
    ಬರಹ: addoor
    ೭.ಜಗತ್ತಿನ ಅಪ್ರತಿಮ ಧಾರ್ಮಿಕ ಸಮಾವೇಶ ಭಾರತದ ಕುಂಭಮೇಳ ಕುಂಭಮೇಳ ಜಗತ್ತಿನ ಅತ್ಯಂತ ಬೃಹತ್ ಧಾರ್ಮಿಕ ಸಮಾವೇಶ ಎಂದು ದಾಖಲಾಗಿದೆ. ಇದರಲ್ಲಿ ಲಕ್ಷಗಟ್ಟಲೆ ಹಿಂದೂಗಳೂ ಪ್ರವಾಸಿಗಳೂ ಭಾಗವಹಿಸುತ್ತಾರೆ. ಹಿಂದೂ ಧಾರ್ಮಿಕ ಪ್ರತೀತಿಯ ಪ್ರಕಾರ,…
  • September 04, 2020
    ಬರಹ: Ashwin Rao K P
    ೨೦೦೧ರಲ್ಲಿ ಚೆನ್ನೈನ ಕೊಡೈಕೆನಾಲ್ ನಲ್ಲಿ ನಡೆದ ಒಂದು ಕೊಲೆಯ ಸುತ್ತ ಈ ಪುಸ್ತಕದ ಕಥೆ ಸುತ್ತುತ್ತದೆ. ಕೋಟ್ಯಾಧೀಶ್ವರ, ಖ್ಯಾತ ಶರವಣ ಭವನದ ಮಾಲಕ ಅಣ್ಣಾಚ್ಚಿ ಪಿ. ರಾಜಗೋಪಾಲ್ ಮಾಡಿಸಿದ ಹೇಯ ಕೊಲೆಯ ಬಗ್ಗೆ ಈ ಪುಸ್ತಕ ಬಹಳ ಮಾಹಿತಿ ನೀಡುತ್ತದೆ.…
  • September 04, 2020
    ಬರಹ: Shreerama Diwana
    ಪ್ರೀತಿಯ ಅಕ್ಕ ಅಕ್ಕನ ಗುಡಿಯದು ಬಕ್ಕುಡಿ ಕಂಡೈತಿ ಪಕ್ಕದ ಮನೆಯ ಸೊಬಗು|ನೋಡುತ|| ಚಕ್ಕನೆ ಬಂದು ಹೋಗ್ಯಾಳಾ||   ತಂದಳು ಹೂವನು ಬಂದಳು ಕೇರಿಗೆ ಚಂದದ ಪುಷ್ಪ ಘಮಘಮ|ಬೀಸ್ಯಾವ| ಚಂದಿರ ಬಾನೊಳು ಹರಡ್ಯಾವ||   ಚೆಲುವಿನ ರೂಪಸಿ ಒಲವಿನ ಷೋಡಶಿ ಪಿಳಪಿಳ…
  • September 03, 2020
    ಬರಹ: Shreerama Diwana
    *ಶಾಯರಿ ೧* ನಿನ್ನ ನೆನಪನ್ಯಾಗ ಹಗಲು ರಾತ್ರಿ  ಆಗಿದ್ದ ಗೊತ್ತಾಗವಲ್ದು ಬಂಗಾರದಂತ ನಿನ್ನ ಮಾತ ಕೇಳಾಕತ್ರ  ನಾ ಎಲ್ಲಿ ಅದಿನೆಂತನ ತಿಳಿವಲ್ದು ನಿನ್ನ ಪ್ರೀತಿ ನಶಾ ಏರಿಸಿಕೊಂಡ ಕುಂತಿನಿ ಅದು ಇನ್ನು ಇಳಿವಲ್ದು..!! **** *ಶಾಯರಿ ೨* ನಾ ಹ್ವಾದ…
  • September 03, 2020
    ಬರಹ: Ashwin Rao K P
    ಗೆಳೆಯ ಮನೋಜ್ ಮೊನ್ನೆ ಭಾನುವಾರ (ಆಗಸ್ಟ್ ೩೦, ೨೦೨೦)  ಫೋನ್ ಮಾಡಿ ಪೌಲ್ ಮೊರಾಸ್ ನಿಧನ ಹೊಂದಿದ್ದಾರೆ ಎಂದು ತಿಳಿಸಿದಾಗ ತುಂಬಾನೇ ದುಃಖವಾಯಿತು. ೬೮ ತೀರಾ ಸಾಯುವ ವಯಸ್ಸೇನಲ್ಲ. ಅವರು ಕೊಂಕಣಿ ಸಾಹಿತ್ಯ ಲೋಕಕ್ಕೆ ನೀಡ ಬೇಕಾದ ಕೊಡುಗೆಗಳು ಇನ್ನೂ…
  • September 02, 2020
    ಬರಹ: Shreerama Diwana
    ಜಿಂಕೆಯ ಕಣ್ಣಿನ ಚಂದದ ಮೊಗದಲಿ ಕಂಕರಿ ವಾದ್ಯವು ಮೊಳಗುತಿದೆ ಕಂಕಣ ಕಟ್ಟಿದ ತೋಳಲಿ ಮಿಂಚಿದೆ ಕಿಂಕಿಣಿ ನಾದವು ಮಿಂಚುತಿದೆ..   ದೃಷ್ಠಿಯ ಬಟ್ಟದು ಕದಪಿನ ನಡುವೆಯೆ ವೃಷ್ಠಿಯು ಚೆಲುವನು ಸುರಿಸಿರಲು ಷಷ್ಠಿಯ ದಿನದಲಿ ನಾಟ್ಯದ ರಾಣಿಯು ಮುಷ್ಠಿಯ…
  • September 01, 2020
    ಬರಹ: addoor
    ಒಬ್ಬ ಝೆನ್ ಗುರುಗಳ ಬಳಿಗೆ ಕನ್‌ಫ್ಯೂಷಿಯನ್ ಪಂಡಿತನೊಬ್ಬ ಬಂದ. "ಕನ್‌ಫ್ಯೂಷಿಯನ್ ತತ್ವಗಳ ಅನುಸಾರ "ಮಾರ್ಗ" ಎಂದರೇನೆಂದು ತಿಳಿದುಕೊಂಡಿದ್ದೇನೆ. ಝೆನ್ ತತ್ವಗಳ ಅನುಸಾರ ಮಾರ್ಗ ಎಂದರೇನೆಂದು ತಿಳಿಯಲು ಬಂದಿದ್ದೇನೆ. ದಯವಿಟ್ಟು ತಿಳಿಸುವಿರಾ?"…
  • September 01, 2020
    ಬರಹ: ರಘುರಾಮ ರಾವ್ ಬೈಕಂಪಾಡಿ
    ಹೂ ಹಸಿರೆ  ಸಿರಿಯು ಇಲ್ಲಿ ನಿಲ್ಲು ನಿಲ್ಲೆಲೆ ಗೆಳೆಯ!   ಬಣ್ಣಬಣ್ಣದ ಕನಸ ತುಂಬಿ ಬಗೆ ಬಾನೊಳಗೆ         ಧಾವಿಸುವ ಜೀವ ಗೆಳೆಯ!         ಆಲಿಸಿದೊ ತೆರೆದು ಎದೆಯ!   ತಂದಿರುವೆನಿಂದು ನಿನಗೆ ಪಯಣಕೀ ಒಲುಮೆಯೊಸಗೆ!   ತಂದಿರುವೆ ನೋಡು ನಗು…