March 2022

  • March 20, 2022
    ಬರಹ: ಬರಹಗಾರರ ಬಳಗ
    ನಿಂತಾಗ ಬೆವರು ಆರಂಭವಾಗಿರಲಿಲ್ಲ. ಆಗ ಸೂರ್ಯನೇ ಮೂಡಿರಲಿಲ್ಲ. ನಿಂತಲ್ಲಿ ನಿಂತಿರಬೇಕು. ನಾಲ್ಕು ಹೆಜ್ಜೆಗಳನ್ನು ಅತ್ತ ಕಡೆಗೊಮ್ಮೆ ಇತ್ತ ಕಡೆಗೊಮ್ಮೆ ನಡೆಯಬಹುದು. ಪಾದಗಳನ್ನು ಬೂಟ್ಸ್ ಆವರಿಸಿದೆ. ಬಿಸಿಯು ಬೆರಳುಗಳೊಂದಿಗೆ ಮಾತನಾಡಿಸುತ್ತಾ…
  • March 19, 2022
    ಬರಹ: Ashwin Rao K P
    ಉತ್ತಮ ಸಲಹೆ ತಮ್ಮ ಊರಿನಲ್ಲಿ ಪದೇ ಪದೇ ಭೂಕಂಪ ಸಂಭವಿಸುತ್ತಿದ್ದರಿಂದ ಹೆದರಿದ ಗಾಂಪ, “ಭೂಕಂಪದ ಕಾರಣದಿಂದಾಗಿ ಕೆಲವು ದಿನಗಳ ಮಟ್ಟಿಗೆ ನನ್ನ ಮಗನನ್ನು ನಿನ್ನಲ್ಲಿಗೆ ಕಳುಹಿಸುತ್ತಿದ್ದೇನೆ" ಎಂಬ ಒಕ್ಕಣೆಯ ಪತ್ರದೊಂದಿಗೆ ತನ್ನ ಮಗನನ್ನು…
  • March 19, 2022
    ಬರಹ: Ashwin Rao K P
    ಜಾಗತಿಕವಾಗಿ ಕರೊನಾ ಸೋಂಕು ಮತ್ತೆ ಉಲ್ಬಣಗೊಂಡಿರುವುದು ಹೊಸ ತಲೆನೋವು ಸೃಷ್ಟಿಸಿದೆ. ಕಳೆದ ವಾರಕ್ಕೆ ಹೋಲಿಸಿದರೆ ಶೇಕಡ ೮ ರಷ್ಟು ಹೆಚ್ಚಳ ಕಂಡು ಬಂದಿದೆ. ಮಾರ್ಚ್ ೭ರಿಂದ ೧೩ರವರೆಗಿನ ಅವಧಿಯಲ್ಲಿ ೧.೧೦ ಕೋಟಿ ಹೊಸ ಪ್ರಕರಣಗಳು ಕಂಡುಬಂದಿರುವುದು…
  • March 19, 2022
    ಬರಹ: Shreerama Diwana
    ಮದರಸಾಗಳಲ್ಲಿ ಖುರಾನ್, ಶಾಲೆಗಳಲ್ಲಿ ಭಗವದ್ಗೀತೆ, ಮಿಷನರಿಗಳಲ್ಲಿ ಬೈಬಲ್, ಹಾಗಾದರೆ ಸಂವಿಧಾನ? ಮತ್ತೆ ಮಧ್ಯಕಾಲೀನ ರಕ್ತಸಿಕ್ತ ದಿನಗಳತ್ತ ನಾವುಗಳು… ಕೆಟ್ಟದ್ದನ್ನು ನಿಲ್ಲಿಸಬೇಕಾದ ಕಾಲದಲ್ಲಿ ಅದರ ಆಕರ್ಷಣೆಗೆ ಒಳಗಾಗುತ್ತಿರುವ ದುರಂತ…
  • March 19, 2022
    ಬರಹ: ಬರಹಗಾರರ ಬಳಗ
    ಯಾವಾತ ಮದಮತ್ಸರಗಳನ್ನು ಗೆದ್ದು ಜೀವನದಲ್ಲಿ ಯಶಸ್ಸನ್ನು ಸಾಧಿಸುವನೋ ಅವನು ಮರ್ಯಾದೆಯಲ್ಲಿ ಬದುಕಿಯಾನು. ಮದವೇ ಮುಖ್ಯ ಎನ್ನುವವ ಒಮ್ಮೆ ಜಯಿಸಿದರೂ ಹೊಂಡಕ್ಕೆ ಬಿದ್ದರೆ ಮತ್ತೆ ಏಳಲಾಗದು. ನಯ-ವಿನಯ ಮನುಜನ ಕಣ್ಣುಗಳಿದ್ದಂತೆ. ಎಲ್ಲಿ ಹೋದರೂ…
  • March 19, 2022
    ಬರಹ: ಬರಹಗಾರರ ಬಳಗ
    "ಆಗ್ತಾ ಇಲ್ಲಪ್ಪ ! ಈ ಕಷ್ಟಗಳು, ಎದುರಲ್ಲಿ ನಡೆಯುವ ಮೋಸದಾಟಗಳು, ನಯವಂಚನೆ, ಸೋಲು, ಇದೆಲ್ಲವನ್ನು ಎದುರಿಸಿ ಬಾಳೋಕಾಗಲ್ಲ. ಮನುಷ್ಯನಾಗಿ ಇರುವುದಕ್ಕಿಂತ ಕಲ್ಲಾಗಿ ಬದುಕಿದರೆ ಆರಾಮವಾಗಿರಬಹುದು. ಚಿಂತೆಯಿಲ್ಲದೆ". "ಮಗಾ ಕಲ್ಲಾಗಿರುವುದು ಸುಲಭ…
  • March 19, 2022
    ಬರಹ: ಬರಹಗಾರರ ಬಳಗ
    ೧. ಕುರ್ಚಿಯದು ಗಟ್ಟಿಯಿದ್ದರೆ ತಾನೆ ರಾಜಕಾರಣ ಮನೆಯೊಳಗೆ ಶಾಂತಿಯಿದ್ದರೆ ಕಾಣೆ ರಾಜಕಾರಣ   ಸತ್ಯವಂತರುಯಿಂದು ಸಮಾಜದಲ್ಲಿಹರೆ ಹುಡುಕು ತಪ್ಪುತ್ತಲಿಹರೆಂದು ಅವರಿಗೆ ಬಾನೆ ರಾಜಕಾರಣ   ಗೊಡ್ಡು ಸಂಪ್ರದಾಯದ ಪಾಂಡಿತ್ಯ ಕೆಲವರದಿಂದು ಮಾಳಿಗೆಯಲ್ಲಿ…
  • March 19, 2022
    ಬರಹ: ಬರಹಗಾರರ ಬಳಗ
    ದೇಹದ ಅಂಗಗಳ ನಡುವೆ ನಾನೇ ಹೆಚ್ಚೆಂದು ವಾದ ನಡೆಯಿತಂತೆ. ಅಂಗಗಳೆಲ್ಲಾ ಪ್ರತಿಭಟಿಸಿ ಕೆಲಸವನ್ನೇ ನಿಲ್ಲಿಸಿದವು. ಕಣ್ಣುಗಳು ರೆಪ್ಪೆ ಮುಚ್ಚಿಕೊಂಡವು. ಬಾಯಿಯ ಬಾಗಿಲು ತೆರೆಯಲೇಯಿಲ್ಲ. ಕಾಲು ಚಲಿಸಲಿಲ್ಲ. ಈ ಪ್ರತಿಭಟನೆಯಿಂದ ದೇಹ ನಿಧಾನವಾಗಿ…
  • March 19, 2022
    ಬರಹ: Shreerama Diwana
    ಅಶ್ವಿನ್ ಪದವಿನಂಗಡಿ ಅವರ "ಜಸ್ಟ್ ಟೈಂ ಪಾಸ್" ಮಂಗಳೂರಿನ ಪತ್ರಕರ್ತ, ಲೇಖಕ ಅಶ್ವಿನ್ ಪದವಿನಂಗಡಿ (ಕೆ ಪಿ ಅಶ್ವಿನ್ ರಾವ್) ಅವರು ಹೊರತರುತ್ತಿದ್ದ ಮಾಸಿಕ "ಜಸ್ಟ್ ಟೈಂ ಪಾಸ್". ೨೦೧೦ರ ನವೆಂಬರ್ ತಿಂಗಳ ಸಂಚಿಕೆಯೊಂದಿಗೆ ಆರಂಭಿಸಿದ " ಜಸ್ಟ್ ಟೈಂ…
  • March 19, 2022
    ಬರಹ: addoor
    ಶಾಮು ಮತ್ತು ಸೋಮು ಬುದ್ಧಿವಂತ ಸೋದರರು. ಆದರೆ ಶಾಮು ಸ್ವಾರ್ಥಿ. ತನ್ನ ಬುದ್ಧಿವಂತಿಕೆಯನ್ನು ತನ್ನ ಲಾಭಕ್ಕಾಗಿಯೇ ಬಳಸುತ್ತಿದ್ದ. ಅವನು ಹಲವು ಸ್ಪರ್ಧೆಗಳಲ್ಲಿ ಗೆದ್ದು ಬಹುಮಾನಗಳನ್ನು ಪಡೆದಿದ್ದ. ಸೋಮು ಪರೋಪಕಾರಿ. ತನ್ನ ಬುದ್ಧಿವಂತಿಕೆಯನ್ನು…
  • March 18, 2022
    ಬರಹ: Ashwin Rao K P
    ಹಳ್ಳಿಯ ಗದ್ದೆ, ಪೇಟೆಯ ಸ್ಟೇಜ್ ಮಳೆಗಾಲ ಕಳೆದು ನವರಾತ್ರಿಯೂ ಮುಗಿದು ಮತ್ತೆ ಶಾಲಾ ಕಾಲೇಜುಗಳು ಶುರುವಾಯ್ತು. ನನ್ನ ಮಗಳನ್ನು ಬಾಲವಾಡಿಗೆ ಸೇರಿಸಿದ್ದಾಯಿತು. ಅವಳಿಗೆಂದೇ ಸ್ಲೇಟು, ಕಡ್ಡಿ ಹಾಗೂ ಪೇಟೆಯಲ್ಲಿ ಮಕ್ಕಳು ಕೊಂಡು ಹೋಗುವ ಸಣ್ಣ ಸೈಜಿನ…
  • March 18, 2022
    ಬರಹ: Shreerama Diwana
    ಪ್ರೀತಿಯೆಂಬ ಬಣ್ಣ ತುಂಬಿ ಪ್ರೇಮವೆಂಬ ರಂಗು ಮೂಡಲಿ.   ಕರುಣೆಯೆಂಬ ಬಣ್ಣ ತುಂಬಿ ಮಮತೆಯೆಂಬ ರಂಗು ಮೂಡಲಿ.   ನಗುವೆಂಬ ಬಣ್ಣ ತುಂಬಿ ಸುಖವೆಂಬ ರಂಗು ಮೂಡಲಿ.   ಯೌವ್ವನವೆಂಬ ಬಣ್ಣ ತುಂಬಿ ಸೌಂದರ್ಯವೆಂಬ ರಂಗು ಮೂಡಲಿ.   ಜ್ಞಾನವೆಂಬ ಬಣ್ಣ ತುಂಬಿ
  • March 18, 2022
    ಬರಹ: ಬರಹಗಾರರ ಬಳಗ
    ನಾವೆಲ್ಲರೊಂದೇ ಒಪ್ಪಿಕೊಳ್ಳೋಣ. ಆದರೆ ಗುಣ ಸ್ವಭಾವ ಭಿನ್ನ. ಐದು ಬೆರಳುಗಳು ಒಂದೇ ಹಾಗಿಲ್ಲ. ದೇಹ, ಅಂಗಗಳು ಒಂದೇ ಆದರೂ, ಗಾತ್ರ, ಆಕಾರ, ಬಣ್ಣ ಎಲ್ಲ ಬೇರೆ ಬೇರೆ. ಯೋಚನೆಗಳಲ್ಲಿ ವೈವಿಧ್ಯತೆ. ಒಬ್ಬೊಬ್ಬರಿಗೆ ಒಂದೊಂದು ಇಷ್ಟ. ಒಬ್ಬರಿಗೆ…
  • March 18, 2022
    ಬರಹ: ಬರಹಗಾರರ ಬಳಗ
    ಒರೆಸು ಇನ್ನೂ ಬಿಗಿಯಾಗಿ. ಎಲ್ಲವನ್ನು ನನ್ನಲ್ಲೇ ಕಳಚಿಟ್ಟು ಮುಂದುವರೆ. ಒಳಗಿನ ನೆಲಕ್ಕೆ ಮತ್ತು ನಿನಗೆ ಒಳ್ಳೆಯದು. ನಾನು ಬಾಗಿಲ ಬಳಿ ಬಿದ್ದಿರುತ್ತೇನೆ. ನನಗೆ ವಿರಾಮದ ಕ್ಷಣಗಳು ಇದ್ದಾವೆ, ಬಿಡುವಿಲ್ಲದ ವೇಳೆಯೂ ಇದೆ. ಪಾದಗಳು ನನ್ನೊಂದಿಗೆ…
  • March 18, 2022
    ಬರಹ: ಬರಹಗಾರರ ಬಳಗ
    ಹೊರಟಿತೆಲ್ಲಿಗೆ ಮೇಘರಾಜನ ಮೆರವಣಿಗೆ ಸಾಲು ಮೋಡಗಳ ಜೊತೆ ಜೊತೆಗೆ   ಇರಬಹುದೇನೊ ಮಂಗಳನ ಅಂಗಳಕೆ ಅಥವಾ ತಿಂಗಳ ರಾಯನ ಭೇಟಿಗೆ   ಹೊರಟಿರುವಿರೇನು ಗುರು, ಶುಕ್ರರ ಕ್ಷೇಮ  ಸಮಾಚಾರಕ್ಕೆ ಬುಧ ಶನಿಯೊಡನೆ ಮೈತ್ರಿ ಸಂಧಾನಕೆ   ತಿಳಿಸುವೆಯ ನನ್ನದೊಂದು…
  • March 18, 2022
    ಬರಹ: ಬರಹಗಾರರ ಬಳಗ
    “What man-made machine will ever achieve the complete perfection of even the goose’s wing?” – Abbas Ibn Firnas, Inventor of Aeroplane. ರೈಟ್ ಸಹೋದರರು - ವಿಲ್ಬರ್ ಮತ್ತು ಒರ್ವಿಲ್ಲೆ - ಡಿ 17, 1903ರಂದು…
  • March 18, 2022
    ಬರಹ: Ashwin Rao K P
    ‘ಕಾನನ ಜನಾರ್ದನ' ಎಂಬುವುದು ಕೆ ಎನ್ ಗಣೇಶಯ್ಯ ಅವರ ಮತ್ತೊಂದು ರೋಚಕ ಕಾದಂಬರಿ. ಪುಸ್ತಕದ ಬೆನ್ನುಡಿಯಲ್ಲಿ “ ಮೇಘಾಲಯದ ಪರ್ವತಗಳ ಮೇಲೆ ಚರಿತ್ರೆಯ ವಿದ್ಯಾರ್ಥಿಗಳಿಗೆ ಶಿಲಾಯುಗದ ಮಾನವನ ಸಂಸ್ಕೃತಿಯ ಪಳೆಯುಳಿಕೆಯೊಂದನ್ನು ಪರಿಚಯಿಸುತ್ತಿದ್ದ…
  • March 17, 2022
    ಬರಹ: Ashwin Rao K P
    ಜೂನ್‌ 1990. ಅದಾಗಲೇ ಕಣಿವೆ ರಾಜ್ಯ ಕಾಶ್ಮೀರದಲ್ಲಿ ಭಯೋತ್ಪಾದನೆಯ ಅಟ್ಟಹಾಸ ಮೇರೆಮೀರಿತ್ತು. ಅಲ್ಲಿದ್ದರೆ ಜೀವ ಉಳಿಯಲಾರದೆಂಬ ಅಂಜಿಕೆಯಿಂದ, ಬಂಡಿಪೊರಾದ ಸರಕಾರಿ ಶಾಲೆಯೊಂದರ ಪ್ರಯೋಗಾಲಯದಲ್ಲಿ ಸಹಾಯಕಿಯಾಗಿದ್ದ ಶ್ರೀಮತಿ ಗಿರಿಜಾ ಟಿಕ್ಕೂ…
  • March 17, 2022
    ಬರಹ: Shreerama Diwana
    ಇದು ನಿಜವಾದ ಆಕ್ರೋಶವೋ, ರಾಜಕಾರಣಿಗಳ ಚುನಾವಣಾ ತಂತ್ರಗಾರಿಕೆಯೋ, ದೇಶದ ನಿಜವಾದ ಪ್ರಗತಿಯ ಬದಲಾವಣೆಯೋ, ವಿನಾಶ ಕಾಲದ ವಿಪರೀತ ಬುದ್ದಿಯೋ ಕಾಲ ನಿರ್ಧರಿಸುತ್ತದೆ. ಆದರೆ ಸಾಮಾನ್ಯ ಜನರೊಂದಿಗೆ ಸಾಕಷ್ಟು ಬುದ್ದಿವಂತರು, ವಿದ್ಯಾವಂತರು, ಪ್ರೊಫೆಸರ್…
  • March 17, 2022
    ಬರಹ: addoor
    ಕುಸುಮಾ ಶಾನಭಾಗ “ಉದಯವಾಣಿ" ದಿನಪತ್ರಿಕೆಯಲ್ಲಿ ೨೦೦೮-೨೦೦೯ರಲ್ಲಿ ಎಂಟು ತಿಂಗಳ ಅವಧಿಯಲ್ಲಿ ಬರೆದ ಲೇಖನಗಳ ಸಂಗ್ರಹ ಇದು. “ಪ್ರಜಾವಾಣಿ" ವಾರ್ತಾಪತ್ರಿಕೆಯಲ್ಲಿ ಪತ್ರಕರ್ತೆಯಾಗಿ ಸ್ವಯಂನಿವೃತ್ತಿಯ ನಂತರ ಬರೆದ ಬದುಕಿನ ಅನುಭವಗಳು ಮತ್ತು ನಿತ್ಯ…