ಜೇನು ತೆಗೆಯಲು ಅಪ್ಪ ಹೇಳಿಕೊಟ್ಟ ಟ್ರಿಕ್ (ಭಾಗ 1)
1 day 10 hours ago - ಬರಹಗಾರರ ಬಳಗಅಪ್ಪ ಕಟು ಸ್ವಾವಲಂಬಿ. ತನಗೆ ಗೊತ್ತಿಲ್ಲದ ಎಂಥಹ ಕೆಲಸವನ್ನಾದರೂ ತಾನು ನೋಡಿರುವ ಕೇಳಿರುವ ಜ್ಞಾನದಿಂದ ಜನ ನೋಡಿ ನಕ್ಕರೂ ಬಿಡದೇ ಅದನ್ನು ಮಾಡಲು ಹಿಂಜರಿಯದೇ ಮಾಡಿ ಸಾಧಿಸುತ್ತಿದ್ದರು. ಅದು ಸರಿಯಾದ ಲೆಕ್ಕಚಾರವಾಗಿಯೋ, ಶಾಸ್ತ್ರೀಯವಾಗಿಯೋ ಎನ್ನದೇ ತಮಗೆ ತೋಚಿದ ಐಡಿಯಾ ಮತ್ತು ಅವರದೇ Tools ಗಳಿಂದ ಮಾಡುತಿದ್ದರು. ನೋಡುಗರಿಗೆ ಅದು ನಗೆಪಾಟಲಿನಂತಿದ್ದರೂ, ಅಸಂಗತವೆನಿಸುವಂತೆ ತೋರುತಿದ್ದರೂ ಪಟ್ಟು ಬಿಡದೇ ಮಾಡುತ್ತಿದ್ದರು. ಇದಕ್ಕೆ ಒಂದು ಉದಾಹರಣೆ ಎಂದರೇ ಬೇಸಿಗೆ ಕಾಲದಲ್ಲಿ ಹೊಂಗೆಯ ಎಲೆಗಳನ್ನು ಗೋಣಿಚೀಲದಲ್ಲಿ ತರಿದು ತಂದು ತಿಪ್ಪೆಯಲ್ಲಿ ಗುಂಡಿತೋಡಿ ಮುಚ್ಚಬೇಕಿತ್ತು. ನಮ್ಮ ಸುತ್ತಮುತ್ತಲಿನ ಯಾರೊಬ್ಬರೂ ಈ ತರ ಕೆಲಸ ಮಾಡುತ್ತಿರಲಿಲ್ಲ. ನಾವು ಮಾತ್ರ ಈ ವಿಚಿತ್ರವಾದ ಕೆಲಸಗಳನ್ನು ಮಾಡುತ್ತಿದ್ದೇವೆಂಬಂತೆ ನಮಗೆ ಏನೋ ಸಂಕೋಚ... ಕೆಲವರು ನಾವು ಈ ಕೆಲಸ ಮಾಡುವುದನ್ನು ನೋಡಿದವರು ಹ್ಹ ಹ್ಹ ಎಂದು ನಕ್ಕವರೂ ಇದ್ದಾರೆ. ಹೀಯಾಳಿಸಿದವರೂ ಇದ್ದಾರೆ. ನಾನೂ ನನ್ನ ತಮ್ಮ ಈ ವಿಚಾರಕ್ಕೆ ಸೀಮೆಯಾಗೆ ಇಲ್ಲದ ಕೆಲಸ ನೀನೊಬ್ಬನೇ ಮಾಡಿಸುತ್ತಿದ್ದೀಯಾ ಎಂದು ಅಪ್ಪನನ್ನು ವಿರೋಧಿಸಿ ಮಾತಾಡಿದ್ದು ಇದೆ.
ತೊಂಬತ್ತನೆಯ ಇಸ್ವಿಯಲ್ಲಿ ನಮಗೆ ಮನೆ ಇರಲಿಲ್ಲ. ಗುಡಿಸಲೂ ಅಲ್ಲದ, ಜಂತಿಯ ಮನೆಯೂ ಅಲ್ಲದ, ಅತ್ತ ಪೂರಾ ತಗಡಿನ (SHEET) ಮನೆಯೂ ಅಲ್ಲದ ಸ್ವಲ್ಪ ಇಟ್ಟಿಗೆ, ಸ್ವಲ್ಪ ಕಲ್ಲಿನ, ಸ್ವಲ್ಪ ಜಂತಿಹಾಕಿದ ಎಲ್ಲಾ ಮಿಕ್ಸ್ ಮಾಡಿ ಕಟ್ಟಿದ ಒಂದು ಸಣ್ಣ ಕಚ್ಚಾಮನೆ. ಆರೆಂಟು ಜನಗಳಿಗೆ ಮನೆಯೊಳಗೆ ಜಾಗ ಆಗುತ್ತಿರಲಿಲ್ಲವಾದರೂ ಆಕಾಶವೇ ನಮಗೆ ಸೂರಾಗಿತ್ತು ಎಂದು ಹೇಳಿದರೆ ತಪ್ಪಾಗಲಿಕ್ಕಿಲ್ಲ. ಮಳೆ ಬಂದ ದಿನಗಳು ಮಾತ್ರ ನಾವು ಮಳೆ ಬಿಡುವವರೆಗೆ ಮನೆಯೊಳಗೆ ಆಸರೆ ಪಡೆದುಕೊಳ್ಳುತ್ತಿದ್ದೆವು. ಉಳಿದ ಎಲ್ಲಾ ದಿ… ಮುಂದೆ ಓದಿ...