August 2021

  • August 28, 2021
    ಬರಹ: Shreerama Diwana
    ಈ ಹಿನ್ನೆಲೆಯಲ್ಲಿ ಭಾರತೀಯ ಮಹಿಳೆಯರು, ಮಹಿಳೆಯರಿಗೆ ವಿಶ್ವದಲ್ಲಿ  ಅತ್ಯಂತ ಹೆಚ್ಚು ಗೌರವ ಕೊಡುವ ದೇಶ ಭಾರತ ನಿಜವೇ ? ಮಹಿಳೆಯರಿಗೆ ಭಾರತ ಸುರಕ್ಷಿತವೇ ? ಇಲ್ಲಿ ಆರೋಗ್ಯಕರ ವಾತಾವರಣ ಇದೆಯೇ? ಯಾವುದೋ ಯಾರದೋ ವರದಿಯನ್ನು ಕೇಳಿ ನಾವು…
  • August 28, 2021
    ಬರಹ: ಬರಹಗಾರರ ಬಳಗ
    ಧೈರ್ಯದ ಒಂದೇ ಒಂದು ನುಡಿ ಎಂಥ ಕಷ್ಟದಲ್ಲಿದ್ದರೂ ಮೇಲೆತ್ತಬಲ್ಲುದು. ಆತ್ಮೀಯತೆ, ಸ್ನೇಹ ಎನ್ನುವುದು ಸೇವಿಸುವ ಆಹಾರದಲ್ಲಿರುವ ಪೋಷಕಾಂಶಗಳಂತೆ. ಆತ್ಮಬಲವನ್ನು ಹೆಚ್ಚಿಸಬಹುದು. ನಾವು ಯಾವತ್ತೂ ಉತ್ತಮರ ಸ್ನೇಹ, ಒಡನಾಟ ಮಾಡಿದರೆ ಇದೆಲ್ಲ ಅದಾಗಿಯೇ…
  • August 28, 2021
    ಬರಹ: ಬರಹಗಾರರ ಬಳಗ
    ನಾನು , ನನ್ನದು , ಎಲ್ಲವೂ ನನ್ನದೇ ಸರಿ ದಾರಿಯ ಅರಿಯದವನಿಗೆ, ಯಾರದೋ ಹಾದಿಯಲಿ ಓಡುವ ಕಾರು ನನ್ನದು  ಪಬ್ಲಿಕ್' ಪಾಥ್ ನಲ್ಲಿ ನಡೆಯುವ ಕಾಲೂ ನನ್ನದು  ಮಿಕ್ಕಿದವರದಲ್ಲ.... ಬಡವರದಲ್ಲ....!   ಬದುಕಿಗೆ ತಪ್ಪು ದಾರಿ "ನಾನೆಂಬ ಸ್ವಾರ್ಥ",…
  • August 28, 2021
    ಬರಹ: addoor
    ಒಂದಾನೊಂದು ಕಾಲದಲ್ಲಿ ಒಬ್ಬ ಬಡ ಕುರಿಗಾಹಿ ಇದ್ದ. ಅವನಿಗೊಬ್ಬನೇ ಮಗ. ಮಗನ ಹೆಸರು ಡೇವಿಡ್. ಒಂದು ಪರ್ವತದ ಇಳಿಜಾರಿನಲ್ಲಿದ್ದ ಪುಟ್ಟ ಮನೆಯಲ್ಲಿ ಅವರ ವಾಸ. ಡೇವಿಡನಿಗೆ ಹದಿನಾರು ವರುಷ ವಯಸ್ಸಾದಾಗ, ಅವನ ತಂದೆ ಅವನನ್ನು ಕುರಿ ಕಾಯಲು ಕಳಿಸಿದ.…
  • August 27, 2021
    ಬರಹ: Ashwin Rao K P
    ಪ್ರಾಣಿಗಳ ಪ್ರಪಂಚ ಬಹಳ ರೋಚಕ ಹಾಗೂ ನಿಗೂಢ. ನಾವೆಷ್ಟೇ ಆಧುನಿಕತೆಯ ಭರಾಟೆಯಲ್ಲಿ ಹೊಸ ಹೊಸ ತಂತ್ರಜ್ಞಾನವನ್ನು ಕಂಡು ಹಿಡಿದು, ಅವುಗಳಿಂದ ನಮ್ಮ ಜೀವನವನ್ನು ಸುಲಭವಾಗಿಸಿದರೂ, ಪ್ರಾಣಿಗಳ ಸಹಜ ಜ್ಞಾನದ ಎದುರು ನಮ್ಮದೇನೂ ಇಲ್ಲ. ಪ್ರತಿಯೊಂದು…
  • August 27, 2021
    ಬರಹ: Kavitha Mahesh
    ನಿಮಗೆ ಆಶ್ಚರ್ಯ ಆಗಬಹುದು, ಒಂದು ಅತ್ಯಂತ ಫಲವತ್ತಾದ ಜಮೀನಿನ ಕೆಳಗೆ ಒಂದು ಚದರ ಭೂಮಿಯಲ್ಲಿ 16 ಎರೆಹುಳುಗಳು ಇರುತ್ತವೆ! ಮಣ್ಣಿನ ಅಡಿಯಲ್ಲಿ ಬಿಡುವಿಲ್ಲದೇ ದುಡಿಯುತ್ತಿರುತ್ತವೆ. ವಾರದ ರಜೆ, ಸಂಬಳ, ವಿಶೇಷ ಭತ್ಯೆ ಏನೂ ತಗೆದುಕೊಳ್ಳದೇ ನಮ್ಮ…
  • August 27, 2021
    ಬರಹ: Shreerama Diwana
    ಬೀದರಿನಿಂದ ಕೊಡಗು ದಾಟಿ ಹಾಸನದವರೆಗೆ, ವನಮಾರ್ಪಳ್ಳಿಯಿಂದ ಹೊಳೆನರಸೀಪುರದವರೆಗೆ, ಕಲ್ಯಾಣ ಕರ್ನಾಟಕದಿಂದ ಮುಂಬಯಿ ಕರ್ನಾಟಕ, ಕರಾವಳಿ ಕರ್ನಾಟಕ, ಮಲೆನಾಡು ಕರ್ನಾಟಕ, ಹಳೆ ಮೈಸೂರು ಕರ್ನಾಟಕದವರೆಗೆ... ಕಪ್ಪು ಮಣ್ಣಿನಿಂದ ಕೆಂಪು ಮಣ್ಣಿನವರೆಗೆ,…
  • August 27, 2021
    ಬರಹ: ಬರಹಗಾರರ ಬಳಗ
    ಉದರ ಪೋಷಣೆಗಾಗಿ ಬೆವರಿಳಿಸಿ ದುಡಿಯೋಣ. ಉದರ ತುಂಬಿದ ಮೇಲೂ ಕಾಲುಚಾಚಿ ಮಲಗದೆ ಕಷ್ಟಪಟ್ಟು ದುಡಿಯುವುದನ್ನು ನಿಲ್ಲಿಸಬಾರದು. ವಿಶ್ರಾಂತಿ ಎಷ್ಟು ಬೇಕೋ ಅಷ್ಟೇ ಪಡೆಯಬೇಕು. ಅತ್ಯಾಸೆ ಬೇಡ. ಗಳಿಸೋಣ-ಸ್ವಲ್ಪ ದಾನ ಮಾಡೋಣ. ನಾಳೆಗಾಗಿ ಕಟ್ಟಿಡುವ ಬದಲು…
  • August 27, 2021
    ಬರಹ: ಬರಹಗಾರರ ಬಳಗ
    ಈ   ಲೋಕದಲ್ಲಿ ಈ  ಜಗಧರ್ದ  ಜನರು ಕತ್ತಲೆಯ   ನೀರಿಕ್ಷೆಯಲ್ಲಿ  ಇರುವರು ಸೂರ್ಯ   ಮುಳುಗುವುದನ್ನೇ ಕಾಯುವರು   ಕತ್ತಲಾದೊಡನೇ  ಬಾರುಗಳ  ಕಾರುಬಾರು ನಡೆದಿದೆ   ಎಲ್ಲೆಲ್ಲೂ ಬಲು  ಜೋರು ವಿಸ್ಕಿ  ವ್ಯೆನು  ಬಿಯರು ಹಾಗೂ ಕುಡುಕರು ಕತ್ತಲೆ  …
  • August 26, 2021
    ಬರಹ: Ashwin Rao K P
    ಬೇಸಿಗೆ ರಜೆಯನ್ನು ಕಳೆಯಲು ವರುಣ್ ಅಜ್ಜಿ ಮನೆಗೆ ಹೋಗಿದ್ದ. ಮಡಿಕೇರಿಯ ಭಾಗಮಂಡಲ ಎಂಬ ಊರು ಅವನ ಅಜ್ಜಿಯ ಊರು. ಅವನೀಗ ಏಳನೇ ತರಗತಿಯಲ್ಲಿ ಕಲಿಯುವ ಹುಡುಗ. ಸಣ್ಣವನಿದ್ದಾಗ ಪ್ರತೀ ರಜೆಯಲ್ಲಿ ಅಜ್ಜಿ ಮನೆಗೆ ಬರುತ್ತಿದ್ದ ವರುಣ್, ಬರ ಬರುತ್ತಾ…
  • August 26, 2021
    ಬರಹ: Ashwin Rao K P
    “೧೯೮೦. ಇದು ನವಕರ್ನಾಟಕ ಪ್ರಕಾಶನ ಸಂಸ್ಥೆಯ ೨೦ನೇ ಹುಟ್ಟು ಹಬ್ಬದ ವರ್ಷ. ಈ ಸಂದರ್ಭದ ನೆನಪಿಗಾಗಿ ಕೆಲವು ಉತ್ಕೃಷ್ಟ ಸಾಹಿತ್ಯ ಕೃತಿಗಳನ್ನು ಪ್ರಕಟಿಸಬೇಕೆಂಬ ಹಂಬಲ ನಮ್ಮನ್ನು ಕಾಡಿತು. ಅದರ ಪರಿಣಾಮವಾಗಿ ವಿಶ್ವಕಥಾಕೋಶ ಯೋಜನೆ ರೂಪುಗೊಂಡಿತು.…
  • August 26, 2021
    ಬರಹ: Shreerama Diwana
    ಚಕ್ಕುಲಿ, ನಿಪ್ಪಟ್ಟು, ಕೋಡುಬಳೆ, ಸಂಡಿಗೆಗಳೇ, ಕಡುಬು, ಹೋಳಿಗೆ, ಕಜ್ಜಾಯ, ಕರ್ಜಿಕಾಯಿಗಳೇ, ಬೆಣ್ಣೆ, ತುಪ್ಪ, ಹಾಲು, ಮೊಸರುಗಳೇ, ಮುದ್ದೆ, ರೊಟ್ಟಿ, ಚಪಾತಿ, ಪೀಜಾ, ಬರ್ಗರ್ ಗಳೇ, ಚಿಕನ್, ಮಟನ್, ಫಿಶ್, ಪೋರ್ಕ್ ಗಳೇ, ಸೀರೆ, ಲಂಗ, ಬುರ್ಖಾ,…
  • August 26, 2021
    ಬರಹ: ಬರಹಗಾರರ ಬಳಗ
    ನಮ್ಮ ಉಸಿರು ಅಡಗಿರುವುದು ಪ್ರಕೃತಿಯಲ್ಲಿ. ಹಸಿರು ಗಿಡಮರಗಳಿದ್ದಷ್ಟೂ ಜೀವಿಗಳ ಉಸಿರಾಟಕ್ಕೆ ಬೇಕಾದ ಸ್ವಚ್ಛ, ಶುದ್ಧ ಗಾಳಿ ಸಿಗುವ ವಿಚಾರ ನಮಗೆಲ್ಲ ತಿಳಿದಿದೆ. ಜೀವಿಗಳಲ್ಲಿ ಇದರ ಹೊಣೆಗಾರಿಕೆ ಮಾನವನಾಗಿ ಶ್ರೇಷ್ಠ ಜನ್ಮ ಹೊಂದಿದ ನಮ್ಮದು ಮಾತ್ರ…
  • August 26, 2021
    ಬರಹ: ಬರಹಗಾರರ ಬಳಗ
    ದೇವರು ನೀಡಿದ ಶಿಕ್ಷೆ ಎನ್ನಲ್ಲೆ ದೇವನು ಮಾಡುವ ಪರೀಕ್ಷೆ ಎನ್ನಲ್ಲೆ   ಮಾತೆಯ ಮಮತೆ ಸಿಗಲಿಲ್ಲ ಪಿತನ ಪ್ರೇಮವೂ ಸಿಗಲಿಲ್ಲ ನಾನು ಕಣ್ತೆರೆಯುವ ಮುನ್ನ ಆ ದೇವ್ರು ನೀಡಿದ ನನಗೆ ಒಂಟಿತನ !!ದೇವರು ನೀಡಿದ ಶಿಕ್ಷೆ ಎನ್ನಲ್ಲೆ!!   ಹರೆಯದಲ್ಲಿ ನೀಡಿದ…
  • August 26, 2021
    ಬರಹ: addoor
    ೯೮.ಭಾರತೀಯ ಚಿತ್ರಕಲೆ - ವಿವಿಧತೆಯಲ್ಲಿ ಏಕತೆ ಸಾರುವ ಸಾಂಸ್ಕೃತಿಕ ಸಂಪತ್ತು               ಸೂಕ್ಷ್ಮತೆ ಮತ್ತು ವಿವಿಧತೆಗೆ ಹೆಸರಾದ ಭಾರತೀಯ ಚಿತ್ರಕಲೆಗೆ ಸಾವಿರಾರು ವರುಷಗಳ ಇತಿಹಾಸವಿದೆ. ಹಲವಾರು ಸ್ಥಳಗಳಲ್ಲಿ ಪ್ರಾಚೀನ ಜನರು ಗವಿಗಳಲ್ಲಿ…
  • August 25, 2021
    ಬರಹ: Ashwin Rao K P
    ಈ ವಾರ ನಾವು ‘ಸುವರ್ಣ ಸಂಪುಟ’ ಕೃತಿಯಿಂದ ಆಯ್ದ ಕವಿ, ಕಾದಂಬರಿಕಾರ, ಜ್ಞಾನಪೀಠ ಪುರಸ್ಕೃತರೂ ಆದ ವಿನಾಯಕ ಕೃಷ್ಣ ಗೋಕಾಕ (ವಿ.ಕೃ.ಗೋಕಾಕ). ಇವರು ರಚಿಸಿದ ೧೪ ಕವನಗಳು ಈ ಸಂಪುಟದಲ್ಲಿವೆ. ಕೆಲವು ಕವನಗಳು ಬಹು ದೀರ್ಘವಾಗಿವೆ. ಅವರ ಕವನಗಳ…
  • August 25, 2021
    ಬರಹ: Shreerama Diwana
    ಬಚ್ಚಿಟ್ಟುಕೊಂಡಿದೆ  ಪ್ರೀತಿ ಸ್ನೇಹ ವಿಶ್ವಾಸ ಆತ್ಮಸಾಕ್ಷಿಯ ಮರೆಯಲ್ಲಿ..   ಅವಿತುಕೊಂಡಿದೆ ಕರುಣೆ ಮಾನವೀಯತೆ ಸಮಾನತೆ ಆತ್ಮವಂಚಕ ಮನಸ್ಸಿನಲ್ಲಿ..   ಅಡಗಿ ಕುಳಿತಿದೆ ತ್ಯಾಗ ನಿಸ್ವಾರ್ಥ ಕ್ಷಮಾಗುಣ ಆತ್ಮಭ್ರಷ್ಟ ಮನದಾಳದಲ್ಲಿ..  …
  • August 25, 2021
    ಬರಹ: Kavitha Mahesh
    ಹೀಗೆ ಕೆಲವು ತಿಂಗಳು ಹಿಂದೆ, ನಾನು ಮತ್ತು ನನ್ನ ಹಿರಿಯ ಮಗ ಒಂದು ಪಾನಿಪೂರಿ ಬಂಡಿಯ ಹತ್ತಿರ ನಿಂತಿದ್ದೆವು. ನನ್ನ ಮಗನಿಗೆ ಪಾನಿಪೂರಿ ತಿನ್ನುವ ಆಸೆ ಆಯಿತು. ನಾನು ಬೇಡ, ಆ ನೀರು ಗಲೀಜು ಅಂತ ಹೇಳಿದರೂ ಅವನು ಕೇಳಲಿಲ್ಲ.. ಹಾಗಾದರೆ, ಅಲ್ಲಿ…
  • August 25, 2021
    ಬರಹ: ಬರಹಗಾರರ ಬಳಗ
    ಯತ್ರ ನರಯಸ್ತು ಪೂಜ್ಯಂತೇ ರಮಂತೇ ದೇವತಃ | ಯತ್ರೈತಸ್ತು ನಾ ಪೂಜ್ಯಂತೇ ಸರ್ವಸ್ತ್ರ ಫಲಃ ಕ್ರಿಯಃ ||೫೬||   ಸಮಯದ ಚಕ್ರವು ತಿರುಗುವುದು… ಮೊಂಬತ್ತಿಗಳು ಬೆಳಗುವುದು! ಪಂಜಿ ಮೆರವಣಿಗೆಗಳು, ಪ್ರತಿಭಟನೆಗಳು, ಫಲಕಗಳು ಪ್ರದರ್ಶಿಸಲಾಗುವುದು!…
  • August 24, 2021
    ಬರಹ: Ashwin Rao K P
    ಅನಾದಿ ಕಾಲದಿಂದಲೂ ಮಾನವನು ತನ್ನ ಜೀವನದ ಕ್ರಮದಲ್ಲಿ ನಿರಂತರವಾಗಿ ಬದಲಾವಣೆಗಳನ್ನು ನಡೆಸುತ್ತಾ ಬಂದಿದ್ದಾನೆ. ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಹೋಗುವ ಸಂದರ್ಭದಲ್ಲಿ ತನ್ನ ಸಾಮಾಗ್ರಿಗಳನ್ನು ಸಾಗಿಸಲು ಮೊದಲು ಮಾನವ ತನ್ನ ಕಾಲಿನ ಹಾಗೂ…