ನಮ್ಮ ಹೆಮ್ಮೆಯ ಭಾರತ (13 - 14)

Submitted by addoor on Thu, 09/24/2020 - 21:46

೧೩.ಭಾರತದ ಪಾರಂಪರಿಕ ಸ್ಥಳಗಳು ವಿಶ್ವವಿಖ್ಯಾತ
ಭಾರತದ ಸಂಪನ್ನ ಸಾಂಸ್ಕೃತಿಕ ಪರಂಪರೆ ಮತ್ತು ಪಾರಂಪರಿಕ ಸ್ಥಳಗಳು ನಮ್ಮ ಹೆಮ್ಮೆ. ಯುನೆಸ್ಕೋ ಸಂಸ್ಥೆಯ ೧೯೭೨ರ ಜಾಗತಿಕ ಪಾರಂಪರಿಕ ನಡಾವಳಿ ಅನುಸಾರ ಗುರುತಿಸಲಾದ ಸಾಂಸ್ಕೃತಿಕವಾಗಿ ಅಥವಾ ಪ್ರಾಕೃತಿಕವಾಗಿ ಪ್ರಾಮುಖ್ಯವಾದ ಸ್ಥಳಗಳೇ “ಪಾರಂಪರಿಕ ಸ್ಥಳಗಳು.”

ಭಾರತದಲ್ಲಿ ೩೦ ಜಾಗತಿಕ ಪಾರಂಪರಿಕ ಸ್ಥಳಗಳಿವೆ; ಇವುಗಳಲ್ಲಿ ೨೪ ಸಾಂಸ್ಕೃತಿಕ ಸ್ಥಳಗಳು, ಉಳಿದವು ಪಾಕೃತಿಕ ಸ್ಥಳಗಳು. ಅಜಂತಾ ಮತ್ತು ಎಲ್ಲೋರಾ ಗುಹೆಗಳು, ತಾಜಮಹಲ್, ಕೊನಾರ್ಕದ ಸೂರ್ಯ ದೇವಾಲಯ, ಎಲಿಫೆಂಟಾ ಗವಿಗಳು, ಬಿಹಾರದ ಬೋಧಗಯಾದ ಮಹಾಬೋಧಿ ದೇವಾಲಯ ಇವುಗಳಲ್ಲಿ ಕೆಲವು ಪ್ರಮುಖ ಸ್ಥಳಗಳು.

ಇವುಗಳಲ್ಲಿ ಕೆಲವು ಸ್ಥಳಗಳಿಗಾದರೂ ಭೇಟಿ ನೀಡಿದರೆ “ಭಾರತವೆಂಬ ಅದ್ಭುತ”ದ ಕಿರು ಪರಿಚಯ ನಮಗಾಗುತ್ತದೆ.

Image

ಗೀತಾಮೃತ

Submitted by Shreerama Diwana on Thu, 09/24/2020 - 14:42

ಯ ಏನಂ ವೇತ್ತಿ ಹಂತಾರಂ ಯಶ್ಚೈನಂ ಮನ್ಯತೇ ಹತಮ್/

ಉಭೌ ತೌ ನ ವಿಜಾನಿಂತೋ ನಾಯಂ ಹಂತಿ ನ ಹನ್ಯತೇ//೧೯//

     ಯಾರು ಈ ಆತ್ಮವನ್ನು ಕೊಲ್ಲುವವನೆಂದು ತಿಳಿಯುತ್ತಾನೋ , ಹಾಗೂ ಯಾರು ಇವನು ಸತ್ತವನೆಂದು ತಿಳಿಯುತ್ತಾನೋ ಅವರಿಬ್ಬರೂ ತಿಳಿದವರಲ್ಲ , ಏಕೆಂದರೆ ಈ ಆತ್ಮನು ವಾಸ್ತವವಾಗಿ ಯಾರನ್ನೂ  ಕೊಲ್ಲುವುದೂ ಇಲ್ಲ ಮತ್ತು ಯಾರಿಂದಲೂ ಕೊಲ್ಲಲ್ಪಡುವುದೂ ಇಲ್ಲ.

Image

“ನಮ್ಮ ಶಬ್ದಗಳು ಸಹ ನಮ್ಮ ಕರ್ಮಗಳಾಗಿರುತ್ತವೆ”

Submitted by Kavitha Mahesh on Thu, 09/24/2020 - 11:07

ಅದೇ ತಾನೇ ಮಹಾಭಾರತ ಯುದ್ಧ ಮುಗಿದಿತ್ತು. 18 ದಿನಗಳ ಯುದ್ಧ ದ್ರೌಪದಿಯನ್ನು 80 ನೇ ವಯಸ್ಸಿನ ಪ್ರಾಯದವರೆಗೂ ಕೊಂಡೊಯ್ದಿತ್ತು. ಮಾನಸಿಕ ಮತ್ತು ದೈಹಿಕ ರೂಪದಲ್ಲಿ. 

ಊರಲ್ಲಿ ಎಲ್ಲಿ ನೋಡಿದರಲ್ಲಿ ವಿಧವೆಯರೇ ಕಾಣಿಸುತ್ತಿದ್ದರು. ಕೈ ಕಾಲು ಮುರಿದುಕೊಂಡು ಅಂಗವೈಕಲ್ಯಗೊಂಡ ಪುರುಷರು. ಅನಾಥ ಮಕ್ಕಳು ಓಡಾಡುತ್ತಿದ್ದರು. ಸ್ಮಶಾನ ಮೌನಗೊಂಡಿತ್ತು ನಂದನವನದಂತಿದ್ದ ಹಸ್ತಿನಾಪುರ. 

Image

ಬಿಜೆಪಿ 25 + 1 ಕರ್ನಾಟಕದಲ್ಲಿ ಕಮಲ ಅರಳಿದ ಕತೆ

Submitted by Ashwin Rao K P on Thu, 09/24/2020 - 09:52
ಪುಸ್ತಕದ ಲೇಖಕ/ಕವಿಯ ಹೆಸರು
ರಮೇಶ್ ದೊಡ್ಡಪುರ
ಪ್ರಕಾಶಕರು
ಅಯೋಧ್ಯಾ, ಗಿರಿನಗರ, ಬೆಂಗಳೂರು
ಪುಸ್ತಕದ ಬೆಲೆ
ರೂ. ೧೯೯.೦೦ ಮೊದಲ ಮುದ್ರಣ : ಸೆಪ್ಟೆಂಬರ್ ೨೦೨೦

ಪತ್ರಕರ್ತ ರಮೇಶ್ ದೊಡ್ಡಪುರ ಇವರು ೨೦೧೯ರ ಲೋಕಸಭಾ ಚುನಾವಣೆಯನ್ನು ಹತ್ತಿರದಿಂದ ಕಂಡು ವರದಿ ಮಾಡಿದವರು. ಅವರು ಕಂಡ ಚುನಾವಣೆಯ ಸಾರ ಸಂಗ್ರಹವೇ ಬಿಜೆಪಿ ೨೫ + ೧ ಕರ್ನಾಟಕದಲ್ಲಿ ಕಮಲ ಅರಳಿದ ಕತೆ ಎಂಬ ಪುಸ್ತಕ. ಈ ಪುಸ್ತಕದ ಬೆನ್ನುಡಿಯಲ್ಲಿ ಬರೆದಂತೆ ‘೨೦೧೮ರ ವಿಧಾನ ಸಭೆ ಚುನಾವಣೆ ಹಾಗೂ ೨೦೧೯ ರ ಲೋಕಸಭಾ ಚುನಾವಣೆ ಅವಧಿಯೇ ದಾಖಲೆಗಳ ಕಾಲಮಾನ. ದೇಶದ ಇತಿಹಾಸದಲ್ಲೇ ಒಂದು ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರವನ್ನು ಪ್ರವಾಸ ಮಾಡಿದ ದಾಖಲೆ ನಿರ್ಮಾಣವಾದದ್ದು (ಬಿ.ಎಸ್. ಯಡಿಯೂರಪ್ಪ) ಇದೇ ಅವಧಿಯಲ್ಲಿ.

ನ್ಯಾನೋ ಕಥೆ - ತೊರೆದು ಹೋದವಳು

Submitted by Shreerama Diwana on Thu, 09/24/2020 - 08:57

ಅಮ್ಮ, ಮಗ, ಸೊಸೆ, ಮೊಮ್ಮಗನಿದ್ದ ಚಿಕ್ಕ ಚೊಕ್ಕ ಕುಟುಂಬ. ತನ್ನ ಕಛೇರಿಯಲ್ಲಿ ಕೆಲಸ  ಮಾಡುತ್ತಿದ್ದ ಗೆಳತಿಯ ಮಾತುಕೇಳಿ, ನಿತ್ಯವೂ ಸೊಸೆ ಬೇರೆ ಮನೆ ಮಾಡೋಣ ಎಂದು ಗಂಡನಲ್ಲಿ ಹೇಳುತ್ತಿದ್ದಳು. ಅತ್ತೆಯನ್ನು ಯಾವಾಗಲೂ ಕೂಲಿಯಾಳಿನಂತೆ ನೋಡುತ್ತಿದ್ದಳು. ಅತ್ತೆ ಸಾವಿತ್ರಮ್ಮ ಸೊಸೆ ರಮಾಳ ಎಲ್ಲಾ ದಿನನಿತ್ಯದ ಆಗುಹೋಗುಗಳನ್ನು ಗಮನಿಸುತ್ತಿದ್ದರು. ಅಗಲಿದ ತನ್ನ ಪತಿಯನ್ನು ನೆನೆದು ಕಣ್ಣೀರು ಹಾಕುತ್ತಿದ್ದರು.

Image

ಎರಡು ಮೋಹಕ ಕವನಗಳು

Submitted by Shreerama Diwana on Wed, 09/23/2020 - 16:31

ಹೆಣ್ಣು ಇವಳು ಕೋಟಿಗೊಬ್ಬಳು

ಹಂಸಿ ಇವಳು ಹೆಡಸುತದ ನೀರೆ

ಹೆಗಲಿಗೆ ಹೆಗಲುಕೊಟ್ಟು ನಡೆವ ಸೂರೆ

ಹಣಿವಿಲ್ಲದೆ ಮುನ್ನುಗ್ಗುವ ಧೀರೆ

ಹೊಮ್ಮನೊಳು ಮೆರೆವ ಶೂರೆ.!

 

ಹಿಮಾಲಯದ ಜುಟ್ಟಿನ ಹಕ್ಕಿ - ಬ್ಲಾಕ್ ಬಾಝಾ

Submitted by Ashwin Rao K P on Wed, 09/23/2020 - 15:58

ನಮ್ಮ ಸುತ್ತ ಮುತ್ತ ಇರುವ ಹಲವಾರು ಪಕ್ಷಿಗಳನ್ನು ನಾವು ದಿನಂಪ್ರತಿ ನೋಡುತ್ತಾ ಇರುತ್ತೇವೆ. ಕೆಲವೊಂದು ಹಕ್ಕಿಗಳನ್ನು ಟಿವಿಯಲ್ಲೂ, ಪುಸ್ತಕಗಳಲ್ಲೋ ನೋಡಿ ಆನಂದ ಪಡುತ್ತೇವೆ. ಪ್ರತಿಯೊಂದು ಹಕ್ಕಿಗೆ ಅದರದ್ದೇ ಆದ ವಿಶೇಷತೆ, ಬಣ್ಣ, ಆಕಾರ ಹಾಗೂ ಜೀವನ ಕ್ರಮ ಇದೆ. ಹಿಮಾಲಯದಲ್ಲಿ ಅಧಿಕವಾಗಿ ಕಂಡು ಬರುವ ಬ್ಲಾಕ್ ಬಾಝಾ ಅಥವಾ ಕಪ್ಪು ಬಾಝಾ ಹಕ್ಕಿಗಳೂ ತಮ್ಮ ತಲೆಯ ಮೇಲಿರುವ ವಿಶೇಷ ಜುಟ್ಟಿನ ಕಾರಣದಿಂದ ಖ್ಯಾತಿ ಪಡೆದಿದೆ. ಈ ಹಕ್ಕಿಗೆ ಕರಿಗ್ರದ್ಧ ಎಂದೂ ಕರೆಯುತ್ತಾರೆ. ಈ ಹಕ್ಕಿಯ ವೈಜ್ಞಾನಿಕ ಹೆಸರು ಅವಿಸೆಡಾ ಲಿಫೋಟೆಸ್ (Aviceda Liuphotes). 

Image

ಝೆನ್ ಪ್ರಸಂಗ: ಗುರುವಿನ ಹಸ್ತಸಂದೇಶ

Submitted by addoor on Tue, 09/22/2020 - 21:36

ಝೆನ್ ಗುರು ಮೊಕುಸೆನ್ ಬಳಿಗೆ ಅವನ ಅನುಯಾಯಿಯೊಬ್ಬ ಬಂದ. ತನ್ನ ಸಂಕಟಗಳನ್ನು ಹೇಳಿಕೊಂಡು, ಕೊನೆಗೆ ತನ್ನ ಮಡದಿಯ ಜಿಪುಣ ಬುದ್ಧಿಯ ಬಗ್ಗೆ ತಿಳಿಸಿದ.

ಮುಂದೊಂದು ದಿನ ಅವನ ಮನೆಗೆ ಗುರು ಮೊಕುಸೆನ್‌ನ ಆಗಮನ. ಅವನ ಪತ್ನಿಯೆದುರು ನಿಂತು, ತನ್ನ ಕೈಯನ್ನು ಅವಳ ಮುಖದೆದುರು ಎತ್ತಿ ಹಿಡಿದು ಮುಷ್ಟಿ  ಬಿಗಿ ಮಾಡಿದ.

ಅವಳಿಗೆ ಗೊಂದಲ. ಕೆಲವು ಕ್ಷಣಗಳ ನಂತರ ಇದೇನೆಂದು ಅವಳು ಕೇಳಿದಾಗ, ಮೊಕುಸೆನ್‌ನ ಪ್ರಶ್ನೆ: "ನಾನು ಯಾವಾಗಲೂ ಹೀಗೇ ಮುಷ್ಟಿ ಬಿಗಿ ಹಿಡಿದಿದ್ದರೆ, ನೀನು ಏನನ್ನುತ್ತಿ?” ಅವಳ ಉತ್ತರ, “ಅದೊಂದು ವಿಕಲತೆ ಅಂತೇನೆ.”

Image