ನಾನು ಕಣ್ರೀ, ನಿಮ್ಮ ದೇವರು, ಅಯ್ಯೋ, ಹೌದುರೀ, ನಾನೇ, ಅದೇ, ಪ್ರತಿದಿನ - ಪ್ರತಿಕ್ಷಣ ನೀವು ನೆನಪಿಸಿಕೊಳ್ಳೋದಿಲ್ವೇನ್ರೀ, ಪೂಜೆ ಮಾಡೋದಿಲ್ವೇನ್ರೀ, ಅದೇ, ಬ್ರಹ್ಮ - ವಿಷ್ಣು - ಮಹೇಶ್ವರ - ಅಲ್ಲಾ - ಜೀಸಸ್ - ಮಾರಮ್ಮ - ಬೀರಮ್ಮ - ಮಾಂಕಾಳಮ್ಮ…
ಸಿಟ್ಟು ಯಾವತ್ತೂ ಒಳ್ಳೆಯದಲ್ಲ ಸರಿ ಒಪ್ಪಿಕೊಳ್ಳೋಣ. ಆದರೆ ಎದುರಿದ್ದವನ ಮಾತಿನ ಓಘ ಬೇರೆಯೇ ರೀತಿಯಲಿ ಹರಿಯತೊಡಗಿದಾಗ ಹೇಗಿದ್ದವನಿಗೂ ಸಿಟ್ಟು ಬರಬಹುದು. ಕೇಳಿಯೂ ಕೇಳದ ಹಾಗಿದ್ದವನಿಗೆ, ದಪ್ಪ ಚರ್ಮ ಇದ್ದವನಿಗೆ ಸ್ವಯಂ ನಿಗ್ರಹಿಸಬಹುದೇನೋ.
ಈ…
ನಮ್ಮ ತಾಯಿ ಭಾರತಿ
ಅವಳೆ ನಮ್ಮ ಕೀರುತಿ
ಜಗಕೆ ಇವಳೆ ಮೂರುತಿ
ನಮ್ಮ ತಾಯಿ ಭಾರತಿ.
ಭರತ ಭುವಿಯ ಅಂಬೆ
ಚಾಚಿಹುದು ರಂಬೆ ಕೊಂಬೆ
ಸತ್ಯ ಧರ್ಮ ಶಾಂತಿಯಲ್ಲಿ
ಸಾರುತಿಹಳು ನೀತಿಯಲ್ಲಿ.
ಧರ್ಮ ಭೂಮಿ ನಮ್ಮದು
ಎಷ್ಟು ಅರಸಿದರೂ ಸಿಗುತ್ತಿಲ್ಲ. ನನ್ನ ತೊರೆದು ಚಲಿಸಿದವನನ್ನ ಕರೆದು ಕೇಳೋಣವೆಂದರೆ ಎಲ್ಲಿ ಅಂತ ಹುಡುಕುವುದು . ನಿಮಗೆ ಹೇಗೆ ಹೇಳುವುದು ? "ನನ್ನ ನೆರಳು ಕಾಣೆಯಾಗಿದೆ "
ನಿಜ ಸಾರ್ ನನ್ನ ಮಾತು! ನಿಮಗೆ ನಂಬಿಕೆನೇ ಬರುತ್ತಿಲ್ಲ ಅಲ್ವಾ ?
ಬೆಳಕಿನ…
೩೬.ಉತ್ತರ ಅಮೇರಿಕಾದ ಬಯಲುಗಳಲ್ಲಿ ಕಾಡುಕೋಣಗಳ ಹಿಂಡುಗಳು ಸ್ವಚ್ಛಂದವಾಗಿ ಓಡಾಡುತ್ತಿದ್ದ ಕಾಲದಲ್ಲಿ, ಥೋಮಸ್ ಫರ್ನ್-ಹಾಮ್ ಎಂಬಾತ ಬೃಹತ್ ಹಿಂಡು ಕಂಡದ್ದು ದಾಖಲಾಗಿದೆ. ಸಂಟಾ ಫೆ ಎಂಬಲ್ಲಿ ೧೮೩೯ರಲ್ಲಿ ಪ್ರಯಾಣಿಸುತ್ತಿದ್ದ ಆತ ಆ ಹಿಂಡನ್ನು…
ನಮಗೆ ಅನಾರೋಗ್ಯವಾದರೆ ನಾವು ವೈದ್ಯರ ಬಳಿ ಹೋಗುತ್ತೇವೆ. ಅನಾರೋಗ್ಯದ ಪ್ರಮಾಣ ಹೆಚ್ಚಿದ್ದರೆ ಆಸ್ಪತ್ರೆಗೆ ದಾಖಲಾಗುತ್ತೇವೆ. ಹಾಗೆಯೇ ನಾವು ಸಾಕುವ ಪ್ರಾಣಿಗಳಾದ ದನ, ನಾಯಿ, ಬೆಕ್ಕು ಮುಂತಾದುವುಗಳಿಗೆ ಆರೋಗ್ಯ ಸಮಸ್ಯೆಯಾದರೆ ನಾವು ಪಶು…
ದೊಡ್ಡ ಮೀನುಗಳು ಸಣ್ಣ ಮೀನುಗಳನ್ನು ತಿಂದು ಬದುಕುತ್ತವಂತೆ, ಏಡಿಗಳು ಮೇಲಕ್ಕೇರಲು ಪ್ರಯತ್ನಿಸುವ ಮತ್ತೊಂದು ಏಡಿಯ ಕಾಲು ಹಿಡಿದು ಕೆಳಕ್ಕೆ ಎಳೆಯುತ್ತವಂತೆ, ತಲೆತಗ್ಗಿಸಿ ನಡೆಯುವ ಕುರಿಗಳು ಮುಂದೆ ಸಾಗುತ್ತಿದ್ದ ಕುರಿಯೊಂದು ಹಳ್ಳಕ್ಕೆ ಬಿದ್ದರೆ…
ಪುಟ್ಟ ಮಗು ಅಂಬೆಗಾಲಿಕ್ಕುತ ಆಚೀಚೆ ಹೋಗುವಾಗ ಬೀಳುವುದು ಸಹಜ. ನಾವು ಮನೆಯ ಹಿರಿಯರು ಆ ಮಗುವನ್ನು ನೋಡಿಕೊಳ್ಳುತ್ತೇವೆ. ಆದರೆ ಸಮಾಜದಲ್ಲಿ ನಾವು ಅವಲೋಕಿಸಿದಾಗ ನಡೆಯುವವ ಎಲ್ಲಿಯಾದರೂ ಕಾಲಿಗೆ ತಾಗಿ ಬಿದ್ದರೂ ಸಾಕು 'ಅವನಿಗೆ ಹಾಗೆಯೇ…
ಗೂಡು ಭದ್ರವಾಗಿದೆ ಸೋರುವ ಭಯವಿಲ್ಲ, ಜಾರಿಹೋಗುವ ತೊಂದರೆ ಇಲ್ಲ, ಬದುಕಿಗೆ ಆಧಾರ ಸಾಕೆನ್ನುವಷ್ಟು ಗಟ್ಟಿಯಾಗಿದೆ. ಆದರೆ ಆ ಗೂಡಿನ ಹಕ್ಕಿಗೆ ಒಂಥರಾ ಕಸಿವಿಸಿ ಗೂಡಿನೊಳಗಿನ ಬದುಕು ಬಂದನವಾಗಿದೆ. ಉಳಿದ ಹಕ್ಕಿಗಳಂತೆ ಸ್ವಚ್ಛಂದದ ಹಾರಾಟಕ್ಕೆ…
ಸಾಹಿತ್ಯಲೋಕ ಪಬ್ಲಿಕೇಷನ್ಸ್ ಪ್ರಕಟಿಸುತ್ತಿರುವ ಆಶಾರಘು ಅವರ ಹೊಸ ಕಾದಂಬರಿ "ಮಾಯೆ ". ಪುಸ್ತಕಕ್ಕೆ ಖ್ಯಾತ ಕಾದಂಬರಿಕಾರರಾದ ಡಾ. ಕೆ.ಎನ್ ಗಣೇಶಯ್ಯ ಅವರು ಬೆನ್ನುಡಿ ಬರೆದಿದ್ದಾರೆ.
“ಸುಖ ಪಡೆಯಲೆಂದು ಹೆಣ್ಣು, ಹೊನ್ನು ಮತ್ತು ಮಣ್ಣುಗಳ…
ಕರ್ನಾಟಕದ ಏಕೀಕರಣಕ್ಕೆ ಹೋರಾಡಿದ ಮರಾಠಿ ಹೆಣ್ಣು ಮಗಳೇ ಜಯದೇವಿ ತಾಯಿ ಲಿಗಾಡೆ. ನಾವು ಈ ವಾರ ‘ಸುವರ್ಣ ಸಂಪುಟ' ಕೃತಿಯಿಂದ ಆಯ್ದ ಕವಯತ್ರಿ ಜಯದೇವಿ ತಾಯಿ ಲಿಗಾಡೆ ಇವರು. ಇವರ ಬಗ್ಗೆ ಈಗಾಗಲೇ ಸಂಪದದಲ್ಲಿ (ಜೂನ್ ೨೩, ೨೦೨೧) ವಿವರವಾಗಿ ಲೇಖನ…
ಪಟ್ಟಣ ಮತ್ತು ಗ್ರಾಮೀಣ ಭಾಗದಲ್ಲಿ ಬಸ್ ಸಂಚಾರ ಅತ್ಯಂತ ವಿರಳವಾಗಿತ್ತು. ಅದರಲ್ಲೂ ಖಾಸಗಿ ಬಸ್ಸುಗಳು ಮಾತ್ರ ಸಂಚರಿಸುತ್ತಿದ್ದವು. ವೆಂಕಟೇಶ್ವರ - ರೇವಣ ಸಿದ್ದೇಶ್ವರ - ಚನ್ನಬಸವೇಶ್ವರ - ಜನತಾ - ನಟರಾಜ - ಗಣೇಶ - ಬಸಪ್ಪ - ಮಾದೇಶ್ವರ -…
ಸತ್ಯ ಮತ್ತು ಸುಳ್ಳು ಎಂಬ ಪದಗಳಲ್ಲಿ ಎಷ್ಟೊಂದು ತತ್ವ, ಸಾರ ಅಡಗಿದೆ? ಓರ್ವ ಸುಳ್ಳನ್ನೇ ಸತ್ಯ ಎಂಬಂತೆ ಬಣ್ಣಿಸಿ ಹೇಳಿದರೆ, ನಾವು ಕೇಳುವವರು ಆಲೋಚಿಸಬೇಕು. ಅವನ ಮಾತಿನ ಧಾಟಿಯಲ್ಲಿಯೇ ಅದು ತಿಳಿಯಲು ಸಾಧ್ಯ. ಸ್ವಲ್ಪ ಆಳವಾಗಿ ಯೋಚಿಸಿದರೆ ಸತ್ಯ…
ವಿಸ್ತಾರಗೊಳ್ಳುವ ಬ್ರಹ್ಮಾಂಡದ ಬಗ್ಗೆ ‘ಬಿಗ್ ಬ್ಯಾಂಗ್' ಕುರಿತಾದ ಉಪನ್ಯಾಸದ ಎರಡನೇ ಭಾಗ ಮುಂದುವರಿಸಲಾಗುತ್ತಿದೆ. ಮೊದಲ ಪ್ಯಾರಾ ಆಂಗ್ಲಭಾಷೆಯಲ್ಲಿದೆ. ಅದರ ವಿವರಣೆಗಳು ನಂತರ ಕನ್ನಡದಲ್ಲಿ ನೀಡಲಾಗಿದೆ. ಇದರಿಂದಾಗಿ ಲೇಖನಕ್ಕೊಂಡು ಸ್ಪಷ್ಟತೆ…
ಆತ ನಮ್ಮಂತೆ ಇಲ್ಲ. ವಸ್ತ್ರ ವಿಕಾರ, ಜಡ್ಡುಗಟ್ಟಿದ ಕೇಶರಾಶಿ ಕಂಡು ಜನ "ಹುಚ್ಚಾ" ಅಂತಿದ್ದಾರೆ. ತೊಟ್ಟಿಲಲ್ಲಿ ಜೋಗುಳ ಹಾಡುತ್ತಾ ಅವನಮ್ಮ ಕೂಗಿದ ಹೆಸರ ನೆನಪಿಲ್ಲ. ಈಗ ಕರಿಯೋ ಹುಚ್ಚನೆಂಬ ನಾಮಧೇಯಕ್ಕೆ ಬೇಸರವೂ ಇಲ್ಲ .
ಅವನು ಸುರಿಯುವ ಮಳೆಗೆ…
ಕೆ.ವೆಂಕಟಕೃಷ್ಣಯ್ಯ, ವೈ.ಮಹಾಲಿಂಗ ಭಟ್ಟರ "ಕಾಸರಗೋಡು ಸಮಾಚಾರ"
ಅಚ್ಚ ಕನ್ನಡ ಪ್ರದೇಶವಾದ ಕಾಸರಗೋಡನ್ನು ಭಾಷಾವಾರು ಪ್ರಾಂತ್ಯಗಳ ವಿಂಗಡನೆಯ ಸಂದರ್ಭದಲ್ಲಿ ಅನ್ಯಾಯವಾಗಿ ಕೇರಳ ರಾಜ್ಯಕ್ಕೆ ಸೇರಿಸಿದಾಗ ಕಾಸರಗೋಡು ಕನ್ನಡಿಗರ ಹೋರಾಟವನ್ನು…
ಓಶಿನಾ ಧರ್ಮರಾಜ್- ಸಾಮಾಜಿಕ ಜಾಲತಾಣದಲ್ಲಿ ಪ್ರಚಲಿತ ಹೆಸರು. ವಯಸ್ಸು ಇನ್ನೂ ೨೧. ಫೇಸ್ಬುಕ್, ಇನ್ಸ್ಟಾಗ್ರಾಂ, ವಾಟ್ಸಾಪ್, ಟ್ವಿಟರ್ ಎಲ್ಲೆಡೆಯಲ್ಲಿ ಅವಳ ಬರಹಗಳು ಕಂಡು ಬರುತ್ತಿದ್ದವು. ಕವನ, ಕಥೆ ಎಲ್ಲವನ್ನೂ ಬರೆಯುತ್ತಿದ್ದಳು. ಎಲ್ಲದಕ್ಕೂ…
ವಸುಮತಿ ಉಡುಪ ಇವರು ಬರೆದ ಕಥೆಗಳ ಸಂಕಲನವೇ ‘ಬೊಗಸೆ ತುಂಬಾ ನಕ್ಷತ್ರಗಳು. ಕಳೆದ ಮೂರು ದಶಕಗಳಲ್ಲಿ ಸಾಪ್ತಾಹಿಕ, ವಾರ ಪತ್ರಿಕೆ, ಮಾಸಿಕ ವಿಶೇಷಾಂಕಗಳಲ್ಲಿ ಪದೇ ಪದೇ ಕಾಣಿಸುವ ಹೆಸರು ವಸುಮತಿ ಉಡುಪ ಅವರದು. ಯಾವುದೇ ಕ್ಲಿಷ್ಟತೆಯಿಲ್ಲದ ಸರಳ ಭಾಷೆ…