ಜನಪ್ರಿಯ ಔಷಧಿಗಳೇ ಕಳಪೆ : ಆಘಾತಕಾರಿ ವರದಿ
1 day 12 hours ago - Ashwin Rao K Pಜ್ವರಕ್ಕೆ ಬಳಸುವ ಪ್ಯಾರಸಿಟೆಮಾಲ್ ಸೇರಿದಂತೆ ದೇಶದಲ್ಲಿ ಮಾರಾಟವಾಗುತ್ತಿರುವ ೫೩ ಜನಪ್ರಿಯ ಔಷಧಗಳು ಕಳಪೆ ಗುಣಮಟ್ಟದ್ದಾಗಿವೆ ಎಂದು ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯ ವರದಿ ಹೇಳಿರುವುದು ಆಘಾತಕಾರಿಯಾಗಿದೆ. ಕಳಪೆ ಔಷಧ ಪಟ್ಟಿಯಲ್ಲಿ ಮಧುಮೇಹ, ರಕ್ತದೊತ್ತಡ, ವಿಟಮಿನ್ ಮಾತ್ರೆಗಳು, ಕ್ಯಾಲ್ಸಿಯಂ, ಅಸಿಡಿಟಿ ಮಾತ್ರೆಗಳೂ ಸೇರಿವೆ. ದೇಶದಲ್ಲಿ ಮಾರಾಟವಾಗುತ್ತಿರುವ ಔಷಧಗಳನ್ನು ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯು ಕಾಲಕಾಲಕ್ಕೆ ಪರೀಕ್ಷೆಗೆ ಒಳಪಡಿಸುತ್ತದೆ. ಹಾಗೆ ನಡೆಸಿದ ಪರೀಕ್ಷೆಯಲ್ಲಿ ಈ ಔಷಧಗಳು ಕಳಪೆ ಗುಣಮಟ್ಟದ್ದಾಗಿವೆ ಎಂಬ ಫಲಿತಾಂಶ ಬಂದಿದೆ. ಅಂದರೆ ಇವು ಕಲಬೆರಕೆಯಾಗಿರಬಹುದು ಅಥವಾ ಇವುಗಳನ್ನು ತಯಾರಿಸುವ ಫಾರ್ಮಾ ಕಂಪೆನಿಗಳು ಲಾಭದ ಆಸೆಯಿಂದ ಕಳಪೆ ಕಚ್ಚಾ ವಸ್ತುಗಳನ್ನು ಬಳಸಿರಬಹುದು. ಆದರೆ, ವರದಿಯಲ್ಲಿ ಹೇಳಲಾದ ಔಷಧಗಳನ್ನು ತಯಾರಿಸುವ ಬಹುತೇಕ ಅಷ್ಟೂ ಕಂಪೆನಿಗಳು ಈ ಔಷಧಗಳು ನಮ್ಮ ಬ್ರ್ಯಾಂಡ್ ನ ಹೆಸರು ಬಳಸಿಕೊಂಡು ತಯಾರಿಸಲಾದ ನಕಲಿ ಔಷಧಗಳು ಎಂದು ಹೇಳಿವೆ. ಅಂದರೆ ಲಾಭದಾಸೆಗೆ ನಕಲಿ ಔಷಧ ಉತ್ಪಾದಕರು ಇದನ್ನು ದಂಧೆ ಮಾಡಿಕೊಂಡು ಕಾಳಸಂತೆಯನ್ನು ಸೃಷ್ಟಿಸಿರುವ ಸಾಧ್ಯತೆಯಿದೆ.
ಔಷಧ ಅಥವಾ ಮಾತ್ರೆಗಳನ್ನು ಸೇವಿಸುವವರು ಅನಾರೋಗ್ಯಪೀಡಿತರು. ಅವರಲ್ಲಿ ಮೊದಲೇ ರೋಗನಿರೋಧಕ ಶಕ್ತಿ ದುರ್ಬಲವಾಗಿರುತ್ತದೆ. ಜೊತೆಗೆ, ಅನಾರೋಗ್ಯದಿಂದ ದೇಹದ ಸ್ಥಿತಿ ಹದಗೆಟ್ಟಿರುತ್ತದೆ. ಅಂತಹವರ ಆರೋಗ್ಯವನ್ನು ಕಾಪಾಡಬೇಕಾದ ಔಷಧಗಳೇ ಕಳಪೆಯಾಗಿದ್ದರೆ ಅವುಗಳಿಂದ ರೋಗಿಗಳ ಆರೋಗ್ಯ ಇನ್ನಷ್ಟು ಹದಗೆಡಬಹುದು ಅಥವಾ ಅಡ್ಡ ಪರಿಣಾಮಗಳು ಉಂಟಾಗಿ ಬೇರೆ ಬೇರೆ ಸಮಸ್ಯೆಗಳು ಎದುರಾಗಬಹುದು. ಪ್ರಾರಾಸಿಟಮಾಲ್ ನಂತಹ ಔಷಧಗಳನ್ನು ಮಕ್ಕಳಿಗೂ ವ್ಯಾಪಕವಾಗಿ ನೀಡಲಾಗುತ್ತದೆ. ಬೇರೆಲ್ಲಾ ಕಲಬೆರಕೆಗಳಿಗಿಂತ ಔಷಧಗಳ… ಮುಂದೆ ಓದಿ...