ವಿನಾಶದ ಅಂಚಿನಲ್ಲಿರುವ ಟಿಟ್ಟಿಭ ಹಕ್ಕಿ
1 day 5 hours ago - ಬರಹಗಾರರ ಬಳಗಸಾಮಾನ್ಯ ಕೆರೆ, ನದಿಗಳ ಹತ್ರ ಬಯಲು ಪ್ರದೇಶಗಳಲ್ಲಿ ಕಾಣಲಿಕ್ಕೆ ಸಿಗೋ ಈ ಹಕ್ಕೀನ ಬಹಳಷ್ಟುಜನ ನೋಡಿರ್ತೀರಿ. ಮಾರ್ಚ್ ನಿಂದ ಆಗಸ್ಟ್ ತಿಂಗಳ ಮಧ್ಯೆ ಇದರ ಸಂತಾನಾಭಿವೃದ್ಧಿ ಕಾಲ. ಈ ಸಮಯದಲ್ಲಿ ಇವುಗಳು ಕೂಗೋದು ಜಾಸ್ತಿ.. ಇವು ಗೂಡನ್ನೇ ಮಾಡೋದಿಲ್ಲ. ನೆಲದ ಮೇಲೆ ದುಂಡಗಿನ ಕಲ್ಲುಗಳ ಜೊತೆ ಮಬ್ಬು ಬಣ್ಣದ ತಕ್ಷಣ ಗುರುತಿಸಲು ಸಾಧ್ಯವಾಗದ 3-4 ಮೊಟ್ಟೆಗಳನ್ನು ಇಡ್ತದೆ. ಮೊಟ್ಟೆಗಳ ಗಾತ್ರ ಸುಮಾರು 4cm ಅಂದ್ರೆ ಕೋಳಿಮೊಟ್ಟೆಯ ಅರ್ಧಗಾತ್ರದ್ದು. ನೆಲದ ಮೇಲೆ ಮೊಟ್ಟೆಗಳು ಯಾವುದು ಕಲ್ಲು ಯಾವುದು ಅಂತ ಗುರುತುಹಿಡಿಯೋದು ಭಾರೀ ಕಷ್ಟದ ಕೆಲಸ. ಸಿಟಿಗಳಲ್ಲಿ ಕಟ್ಟಡದ ಮೇಲೆ ಟೆರೇಸ್ ಗಳಲ್ಲಿ ಮಾತ್ರ ಅಲ್ಲ ರೈಲ್ವೇ ಹಳಿಗಳ ಮಧ್ಯೆ ಮೊಟ್ಟೆ ಇಟ್ಟು ಮರಿಮಾಡಿದ ಉದಾಹರಣೆಗಳೂ ಇದೆ. ಮೊಟ್ಟೆ ಇಟ್ಟಮೇಲೂ ಏನಾದ್ರೂ ಅಪಾಯ ಅನ್ಸಿದ್ರೆ ನಿಧಾನವಾಗಿ ಮೊಟ್ಟೆಗಳನ್ನು ಉರುಳಿಸಿಕೊಂಡು ಹೋಗಿ ಗೂಡಿನ ಜಾಗ ಬದಲಾಯಿಸಿದ್ದೂ ಇದೆ ಅಂತ ಹೇಳ್ತಾರೆ.
ಗಂಡು ಹೆಣ್ಣು ಎರಡೂ ಹಕ್ಕಿಗಳು ಸರದಿ ಪ್ರಕಾರ ಮೊಟ್ಟೆಗಳಿಗೆ ಕಾವು ಕೊಡ್ತವೆ. ತಮ್ಮ ಗೂಡಿನ ಹತ್ರ ಯಾವುದಾದರೂ ಪ್ರಾಣಿ ಸುಳಿದರೂ ಸಾಕು ಜೋರಾಗಿ ಬೊಬ್ಬೆ ಹಾಕುತ್ತಾ ಅವುಗಳ ದಿಕ್ಕು ತಪ್ಪಿಸುತ್ತದೆ. ಏಲ್ಲಾದರೂ ಹಾವು,ಉಡ, ಮುಂಗುಸಿ ಹೇಗೋ ಗೂಡಿನ ಹತ್ರ ಬಂದ್ರೆ ಅರಚಾಡಿ ರೆಕ್ಕೆ ಎತ್ತಿ ಹೆದರಿಸಿ ಓಡಿಸಿಬಿಡ್ತವೆ. ಅಗತ್ಯ ಬಿದ್ರೆ ವೈರಿಗಳ ಮೇಲೆ ಆಕಾಶದಿಂದ ಮಿಸೈಲ್ ಥರ ಧಾಳಿ ಮಾಡಿ ಶತ್ರುಗಳನ್ನ ಓಡಿಸುತ್ತವೆ. ಸುಮಾರು 28- 30 ದಿನಗಳಲ್ಲಿ ಮೊಟ್ಟೆ ಒಡೆದು ಮರಿಗಳು ಹೊರಗಡೆ ಬರ್ತವೆ. ಹೊರಗಡೆ ಬಂದ ಕ್ಷಣದಿಂದಲೇ ನಡೆದಾಡುವ ಸಾಮರ್ಥ್ಯ ಈ ಮರಿಗಳಿಗೆ ಇರ್ತದೆ, ಅವಾಗಿಂದಲೇ ತಮ್ಮ ತಂದೆ ತಾಯಿಗಳನ್ನು ಇವು ಹಿಂಬಾಲಿಸುತ್ತವೆ. ಏನಾದರೂ ಆಪತ್ತಿನ ಸೂಚನೆ ಸಿಕ್ಕಿದ ತಕ್ಷಣ ನೆಲದಲ್ಲಿ ಅ… ಮುಂದೆ ಓದಿ...